Saturday, December 24, 2011

ನನ್ನ ಬಾಲ್ಯದ ನೆನೆಪುಗಳು : ಭಯವೆಂಬ ಭ್ರಮೆ


ನನ್ನ ಬಾಲ್ಯದ ನೆನೆಪುಗಳು : ಭಯವೆಂಬ ಭ್ರಮೆ

ನನ್ನ ಬಾಲ್ಯದ ನೆನೆಪುಗಳು ಭಯವೆಂಬ ಭ್ರಮೆ
ನಾನಾಗ ಪದವಿಪೂರ್ವ ತರಗತಿಗೆ ಸೇರಿದ್ದ ಸಮಯ ತುಮಕೂರಿನ ಸಿದ್ದಗಂಗ ಕಾಲೇಜಿನಲ್ಲಿ ಓದುಅಲ್ಲಿಯ ಸೋಮೇಶ್ವರ ಬಡಾವಣೆಯಲ್ಲಿ ಒಬ್ಬನೇ ರೂಮಿನಲ್ಲಿ ವಾಸ.ಹಾಗಾಗಿ ಕಾಲೇಜ್ ಸಮಯದ ನಂತರ ಸ್ವಲ್ಪ ಬೇಸರವೆಶನಿವಾರ,ಬಾನುವಾರಗಳು ಬಂದರೆ ಬಸ್ಸು ಹತ್ತಿ ತುಮಕೂರಿನ ಸಮೀಪವೇ ಇದ್ದ ಹಳ್ಳಿ ದೊಡ್ಡನಾರುವಂಗಲಕ್ಕೆ ಹೊರಟುಬಿಡುತ್ತಿದ್ದೆಅಲ್ಲಿ ನಮ್ಮ ಚಿಕ್ಕಪ್ಪನ ಮನೆ ಇತ್ತುಅವರಿಗು ನಮ್ಮ ಒಡನಾಟ ಜಾಸ್ತಿ ಹಾಗಾಗಿ ಶನಿವಾರದ ಮದ್ಯಾನದ ನಂತರ ಅಲ್ಲಿಗೆ ಪ್ರಯಾಣಆಗ ಊರಿಗೆ ನೇರವಾಗಿ ಬಸ್ಸಿನ ವ್ಯವಸ್ಥೆಯಿರಲ್ಲಿಲ್ಲತುಮಕೂರು ಗುಬ್ಬಿ ಮಧ್ಯದ ನಾರುವಂಗಲ ಗೇಟ್ನಲ್ಲಿ ಇಳಿದು ಸುಮಾರು ೩ ಕಿ.ಮಿ ನಷ್ಟು ನಡೆದು ಊರು ಸೇರಬೇಕಿತ್ತು.
ಹೀಗೆ ಒಂದು ಶನಿವಾರ ಸ್ವಲ್ಪ ತಡವಾಗೆ ತುಮಕೂರು ಬಿಟ್ಟೆ ಬಸ್ಸಿನಿಂದ ಇಳಿದಾಗ ಸಂಜೆ ೬ ಗಂಟೆ ದಾಟಿತ್ತು.ಡಿಸೆಂಬರ್ ತಿಂಗಳಿರಬೇಕು ಆಗಲೆ ಕತ್ತಲಾಗುತ್ತಿತ್ತುಬೇಗ ಬೇಗ ನಡೆಯುತ್ತ ಹೊರಟೆಬೇಸರ ಕಳೆಯಲು ಬಾಯಲ್ಲಿ ಯಾವುದೋ ಹಾಡುಗಳುಮದ್ಯೆ ಸಿಕ್ಕ ಕೆರೆಯ ಕೋಡಿಯನ್ನು ದಾಟಿ ಹೊಲಗಳ ನಡುವೆ ಕಾಲುದಾರಿಯಲ್ಲಿ ಹೋಗುತ್ತಿದ್ದೆ.ಮತ್ತೆ ಹತ್ತು ಹದಿನೈದು ನಿಮಿಷ ನಡೆದರೆ ಮನೆ. ಆಗ ದೂರದಲ್ಲಿ ಕಾಣಿಸಿತು ದೊಡ್ಡ ಆಲದಮರಅದನ್ನು ಮುಸುಕು ಬೆಳಕಿನಲ್ಲಿ ನೋಡುತ್ತಿರುವಂತೆ ಎದೆಯಲ್ಲೇನೊ ಝಲ್ ಎಂದಿತುಮನಸ್ಸು ಕಳೆದ ತಿಂಗಳಿಗೆ ಜಿಗಿಯಿತು.
ಕಳೆದ ತಿಂಗಳು ಬಂದಿದ್ದಾಗ ಹೀಗೆ ಮನೆಯಲ್ಲಿ ಮದ್ಯಾನ ಊಟಕ್ಕೆ ಕುಳಿತ್ತಿದ್ದೆ ಹೊರಗೆ ಚಿಕ್ಕಪ್ಪನ ಹತ್ತಿರ ಮಾತನಾಡುತ್ತಿರುವುದು ಕೇಳಿಸಿತುದ್ವನಿಯೇನು ಸಣ್ಣದಾಗಿರಲ್ಲಿಲ್ಲ.ವಿಷಯವಿಷ್ಟೆ ಯಾರೋ ಹಳ್ಳಿಯ ಹೆಂಗಸೊಬ್ಬಳು ಆತ್ಮಹತ್ಯೆ ಮಾಡಿಕೊಂದಿದ್ದಾಳೆ ಅದೇ ಊರ ಮುಂದಿನ ಆಲದಮರಕ್ಕೆ ನೇಣು ಬಿಗಿದುಕೊಂಡು ಸತ್ತಿದ್ದಾಳಂತೆ,ಅಲ್ಲದೆ ಆಕೆ ಗರ್ಬಿಣೀ ಬೇರೆಚಿಕ್ಕಪ್ಪ ಅವನಿಗೆ ಹೇಳುತ್ತಿದ್ದರು ತಾನು ಜೊತೆಗೆ ಬರುತ್ತೇನೆ ಎಂದುನಾನು ಕೂಗಿದೆ 'ನಾನು ಬರುತ್ತಿದ್ದೇನೆಅಂತಅವರು ಬೇಡವೆಂದರು ನಂತರ ಒಪ್ಪಿಕೊಂಡರುಅವರ ಜೊತೆಯಲ್ಲಿ ಹೋಗಿ ದೂರದಿಂದಲೆ ನೋಡಿ ಬಂದಿದ್ದೆನಂತರ ಚಿಕ್ಕಮ್ಮನ ಆಕ್ಷೇಪಣೆಯನ್ನು ಕೇಳಬೇಕಾಯಿತು ಚಿಕ್ಕಪ್ಪ ಈ ಹುಡಗನನ್ನು ಏಕೆ ಕರೆದೊಯ್ಯಬೇಕಾಗಿತ್ತು ಅಂತನನಗೆ ನಾನಗಲೆ ದೊಡ್ಡವನಾಗಿಲ್ವೆ ಅಂತ ಉಡಾಫೆ.
ವೇಗವಾಗಿ ನಡೆಯುತ್ತಿದ್ದ ನನ್ನ ನಡೆ ಇದ್ದಕ್ಕಿದಂತೆ ನಿಧಾನವಾಯಿತುದೂರದಲ್ಲಿ ಕಾಣುತ್ತಿದ್ದ ಆ ಮರ ಈಗ ಹತ್ತಿರ ಹತ್ತಿರವಾಗುತ್ತಿದೆಕಾಲುದಾರಿ ಆ ಮರದಕೆಳಗೆ ಹೋಗುವದರಿಂದ ನಾನಂತು ಆ ಮರದ ಕೆಳಗೆ ಸಾಗಬೇಕು.ಈಗ ಮರದ ಎದುರಿಗೆ ನಿಂತಿದ್ದೆ ಕತ್ತಲೆಯಲ್ಲಿ ನನ್ನನ್ನು ನುಂಗುವ ದೈತ್ಯನಂತೆ ಕಾಣುತ್ತಿತ್ತು ಮರತಲೆಯೆತ್ತಿ ಕೊಂಬೆಗಳ ಸಂದಿಗಳಲ್ಲಿ ದಿಟ್ಟಿಸಿದೆಕಳೆದತಿಂಗಳು ಯಾರೋ ಹಳ್ಳಿಯಾಕೆ ನೇತಾಡುತ್ತಿದ್ದ ಕೊಂಬೆಗಳಡೆ ಕಣ್ಣು ಕೀಲಿಸಿ ನೋಡಿದೆಏಕೋ ಪುನಃ ನೇತಾಡುತ್ತಿರುವ ಆ ಶವ ಕಾಣಿಸತೊಡಗಿತು ಎಲ್ಲವು ಅಸ್ವಷ್ಟ ಆದರು ನಿಜವೆಂಬಂತೆ ಆಕೆಯ ನೇತಾಡುವ ಶವವನ್ನು ನೋಡಲಾರದೆ ಕಣ್ಣು ಮುಚ್ಚಿದೆನನ್ನ ಎದೆಯ ಬಡಿತ ನನಗೆ ಕೇಳಿಸುವಷ್ಟು ಜೋರಾಗಿತ್ತುತೊಡೆಗಳಲ್ಲಿ ನಡುಕ ನಿಲ್ಲಲಾರದಷ್ಟು ಸುಸ್ತುಈಗೇನು ಕುಸಿದು ಬೀಳುತ್ತೇನನಿದಾನವಾಗಿ ನನ್ನಲ್ಲಿದ್ದ ವಿವೇಕ ಎಚ್ಚರಗೊಂಡಿತುಈಗ ಕಾಣಿಸುತ್ತಿರುವ ನೇತಾಡುವ ಶವ ನನ್ನ ಭ್ರಮೆಯಷ್ಟೆ ನನ್ನಲ್ಲಿರುವ ಹೆದರಿಕೆ ನನ್ನ ಮುಂದೆ ನಿಂತಿದೆಈ ಸನ್ನಿವೇಶವನ್ನು ದಾಟಲೇಬೇಕು ಅಂತ ನಿಶ್ಚಯಿಸಿದೆತಲೆ ತಗ್ಗಿಸಿ ವೇಗವಾಗಿ ನಡೆಯುತ್ತ ಮರದಕೆಳಗಿನಿಂದ ಕಾಲುದಾರಿಯಲ್ಲಿ ಸಾಗಿ ಸ್ವಲ್ಪದೂರ ಹೋದೆನಂತರ ಪುನಃ ಹಿಂದೆ ತಿರುಗಿ ನೋಡಿದೆ ಅದೇ ಮರದ ಅದೇ ಕೊಂಬೆ ಈಗ ಅಲ್ಲಿ ಏನು ಇಲ್ಲಕತ್ತಲೆಯಲ್ಲಿ ನಿಶ್ಚಲವಾಗಿ ನಿಂತಿರುವ ಮರವಷ್ಟೆಮತ್ತೆ ನಿದಾನವಾಗಿ ನಡೆಯುತ್ತ ಮನೆ ತಲುಪಿದೆ.
----------------------------------------------------------------------------------------------
ಇಂದ್ರೀಯಗಳಿಗೆ ಒಡೆಯನಾದ ಮನಸ್ಸೆ ನೀನೇಕೆ ಸದಾ ಭಯ ಮಾಯೆಯ ಅದೀನದಲ್ಲಿರುತ್ತಿ ???
-----------------------------------------------------------------------------------------------
  

No comments:

Post a Comment

enter your comments please