Friday, December 23, 2011

ಶ್ರೀಗಂಧದ ಧೂಪ


 ಶ್ರೀಗಂಧದ ದೂಪ - ( ದತ್ತ )


ಬೆಳಗಿನ ಕಾಫಿ ಎಡಗೈಲಿ ಹಿಡಿದು ಮುಂದಿದ್ದ ದಿನಪತ್ರಿಕೆ ತಿರುವುತ್ತಿದ್ದ ದತ್ತ.  ಮಹಡಿಯ ಮೇಲಿಂದ ಇಳಿಜಾರು ಮೆಟ್ಟಿಲನಿಂದ ಪತ್ನಿ ಧಾಮಿನಿ ಕೆಳಗೆ ಬರುತ್ತಿರುವಂತೆ ಕೇಳಿದ
"ಇದೇನು ಇಷ್ಟುಬೇಗ ಹೊರಟಿದ್ದಿ , ಟೂರ?".  ಬೆಂಗಳೂರು ಗ್ರಾಮಾಂತರ ಜಿಲ್ಲೆಯ ವಿಶೇಷ ಜಿಲ್ಲಾದಿಕಾರಿ ಆಕೆ.
"ದತ್ತ, ಆಗಲೆ ಮರೆತು ಹೋಯಿತ?, ನೆನ್ನೆಯೆ ಹೇಳಿದ್ದೆನಲ್ಲ, ಗ್ರಾಮೀಣ ಜಿಲ್ಲೆಯಲ್ಲಿ ಉಪ ಚುನಾವಣೆ ಘೋಷಿಸಲಾಗಿದೆ, ಬರಿ ಧಾವಂತ, ಇವರದು ಇದೇ ಆಗಿಹೋಯ್ತು, ಬೇಗ ಹೋಗಬೇಕು" ಅಂದಳು,
ಅದಕ್ಕೆ ದತ್ತ  "ಸರಿ ನಾನು ಮರೆತ್ತಿದ್ದೆ " ಎಂದ.
ಅವಳು ಪುನಃ ಹೊರಬಾಗಿಲಿನತ್ತ ನಡೆಯುತ್ತಿದ್ದಂತೆ , ಗಮನಿಸಿದ, ಎಡಕಾಲು ಸ್ವಲ್ಪ ಎಳೆದು ಹಾಕುತ್ತಿದ್ದಳು, ಎಳೆಯ ವಯಸಿನಲ್ಲಿ ಕಾಡಿದ ಪೋಲಿಯೊ ಪರಿಣಾಮ,  ನಡೆಯುವಾಗ ಸ್ವಲ್ಪ ಎಳೆಯುತ್ತಾಳಾದರು ಮಾತು, ಮನಸ್ಸು ಎಲ್ಲ ನೇರ ಅನ್ನಿಸಿ ನಗು ಬಂತು, ಅವನಿಗೆ ಅರಿವಿಲ್ಲದೆ ಮುಖದಲ್ಲಿ ನಗುವು ಹರಡಿತು. ಅವಳು ಅದನ್ನು ಗಮನಿಸಿ ಪುನಃ ನಿ೦ತಳು.
"ಏನು ರಾಯರು ಬೆಳಗ್ಗೆ ಬೆಳಗ್ಗೆ ಹಸನ್ಮುಖರಾಗಿದ್ದೀರಿ, ಸಂತೋಷಕ್ಕೆ ಕಾರಣ ನಾನು ತಿಳಿದುಕೊಳ್ಳಬಹುದೆ? ಅಂದಹಾಗೆ ಏನು ನೀವು ಇನ್ನು ವಿರಾಮವಾಗಿ ಕುಳಿತ್ತಿದ್ದೀರಿ, ಆಫೀಸ್ ಕಡೆ ಹೋಗುವ ಚಿಂತೆಯಿಲ್ಲವ. ನಗರದಲ್ಲಿ ಎಲ್ಲ ಕ್ರೈಮ್ ಗಳು ಇಲ್ಲವಾಗಿ ಒಮ್ಮೆಲೆ ಶಾಂತಿ ನೆಲಸಿದಂತೆ ಕಾಣುತ್ತೆ "  ಕೆಣಕಿದಳು,
ಅವನು ಸಂಕೋಚದಿಂದ ಹೇಳಿದ "ಇಲ್ಲ ಈ ದಿನ ಆಫೀಸ್ ಗೆ ಹೋಗುತ್ತಿಲ್ಲ, ನಾನು ಕಳೆದವಾರ ತಿಳಿಸಿದ್ದೆನಲ್ಲ, ನಾನು ಓದಿದ ತುಮಕೂರಿನ ಸರ್ಕಾರಿ ಕಾಲೇಜಿನಲ್ಲಿ , ಈದಿನ ಹಳೆಯ ವಿಧ್ಯಾರ್ಥಿಗಳ ಸಮ್ಮಿಲನ ಅಂತ ಮಾಡ್ತೀದ್ದಾರೆ, ಕಾಲೇಜಿನ ಪ್ರಿನ್ಸಿಪಾಲ್ ಏತಕ್ಕೊ ಬಂದವರು, ನಮ್ಮ ಆಫೀಸಿನವರೆಗು ಬಂದು ಅಹ್ವಾನಿಸಿದರು, ಬರಲ್ಲ ಅಂತ ಹೇಳಲಾಗಲಿಲ್ಲ ಒಪ್ಪಿಬಿಟ್ಟೆ" . ಆಕೆ ನಕ್ಕಳು
"ಸರಿ ರಾಯರೆ ಅದಕ್ಕೇಕೆ ಅಷ್ಟು ಸಂಕೋಚ, ಪಾಠ ಹೇಳಿದ ಮಾಸ್ಟರೆ ಬಂದು ಕರೆಯುವಾಗ ಆಗಲ್ಲ ಅನ್ನಲ್ಲಿಕಾಗುತ್ಯೆ, ತಿಳಿಯಿತು ಬಿಡಿ ನಿಮ್ಮ ಸಂತೋಷಕ್ಕೆ ಕಾರಣ, ಯಾರೊ ನಿಮ್ಮ ಕಾಲೇಜಿನ ಹಳೆ ಸ್ನೇಹಿತೆಯರು ಬರುತ್ತಿದ್ದಾರೆ ಅನ್ನಿಸುತ್ತೆ, ಎಷ್ಟಾದರು ಟೀನ್ ಏಜಿನಲ್ಲಿದ್ದಾಗ ಮನಸೋತ ಲವರ್ಸ್ ಅಲ್ಲವೆ, ಅದಕ್ಕೆ ನಿಮ್ಮ ಮನ ಸಂತೋಷದಿಂದ ತುಂಬಿ ಮುಖವೆಲ್ಲ ನಗುವಿನಿಂದ ತುಂಬಿದೆ" ಎನ್ನುತ್ತ , ನಾಚಿಕೆಯಿಂದ ಕೆಂಪಾದ ಇವನ ಮುಖ ನೋಡಿ ಜೋರಾಗಿ ನಗುತ್ತ , ಇವನ ಉತ್ತರಕ್ಕು ಕಾಯದೆ, ಆಲ್ ದ ಬೆಷ್ಟ್ ಹೇಳುತ್ತ, ನಿಮ್ಮ ಹಳೆ ಲವರ್ ಯಾರದರು ಇದ್ದರೆ ಸಿಗಲಿ ಎಂದು ಹಾರೈಸಿ ಹೊರಹೋದಳು. ಸ್ವಲ ಸಮಯದಲ್ಲಿಯೆ ಅವಳು ಕುಳಿತ ಕಾರು ಹೊರಟ ಶಬ್ದ ಕೇಳಿಸಿತು.

........
...

 ದತ್ತರಾಜ ಅದು ತಂದೆ ತಾಯಿ ಇಟ್ಟ ಹೆಸರಲ್ಲ, ಅಸಲಿಗೆ ಅವನಿಗೆ ತಾಯಿ ತಂದೆ ಯಾರೊ ತಿಳಿದೆ ಇಲ್ಲ. ಅವನಿಗೆ ಸ್ವಲ್ಪ ಸುತ್ತ ಮುತ್ತಲಿನದು ಅರ್ಥವಾಗುವ ವಯಸ್ಸು ಬರುವಾಗಲೆ ಅವನು ಅನಾಥಾಶ್ರಮದಲ್ಲಿದ್ದ. ಯಾರೊ ರಸ್ತೆಯ ಬದಿಯಲ್ಲಿ ತೊರೆದು ಹೋಗಿ, ಮತ್ಯಾರದೊ ಮೂಲಕ ಅನಾಥಾಶ್ರಮ ಸೇರಿದ ಹುಡುಗ ಅವನು. ದತ್ತರಾಜ ಎಂದು ಅವನಿಗೆ ಹೆಸರಿಟ್ಟವರು ಅನಾಥಾಶ್ರಮದ ಮುಖ್ಯಸ್ಥ ರಘುರವರು. ಅವನು ಎಸ್ ಎಸ್ ಎಲ್ ಸಿ ಗೆ ಬರುವ ಹೊತ್ತಿಗೆ ನೀನು ಬೇರೆ ಆಶ್ರಯ ಹುಡುಕು ಎಂದರು ಅನಾಥಶ್ರಮದವರು, ಅಲ್ಲಿಯ ಕಾನೂನೆ ಹಾಗಿತ್ತು, ಅದು ಹದಿನೈದು ವರುಷಕ್ಕಿಂತ ಚಿಕ್ಕಮಕ್ಕಳಿಗೆ ಇದ್ದ ಆಶ್ರಯಧಾಮ. ದಾರಿ ತೋರದೆ ನಿಂತ ಅವನಿಗೆ ಸಹಾಯಮಾಡಿದವರು ಅಲ್ಲಿನ ಮುಖ್ಯಸ್ಥ ರಘುರವರೆ. ಅವರು ಹೇಳಿದರು
"ದತ್ತ , ನನಗೆ ನಿನ್ನನ್ನು ಕಂಡರೆ ಮಗನನ್ನು ಕಂಡಂತೆ , ಆದರೆ ನನ್ನ ಪರಿಸ್ಥಿಥಿ ಬೇರೆ, ನಿನ್ನನ್ನು ಮನೆಯಲ್ಲಿ ಇಟ್ಟುಕೊಳ್ಳೂವ ಅನುಕೂಲವಿಲ್ಲ, ಆದರೆ ನಿನಗೆ ಬೇರೆ ಸಹಾಯ ಮಾಡುತ್ತೇನೆ. ನಿನ್ನ ಊಟ ಆಶ್ರಯ, ಓದಿಗೆ ನನ್ನ ಕೆಲವು ಮಿತ್ರರ ದೊಡ್ಡವರ ಸಹಾಯ ಕೋರಿದ್ದೇನೆ, ನೀನು  ಈ ಬೆಂಗಳೂರಿನಿಂದ  ತುಮಕೂರಿಗೆ ಹೊರಡು ಎಲ್ಲ ಅನುಕೂಲವಾಗುತ್ತದೆ" ಎಂದು ಕಳಿಸಿದರು.

 ದತ್ತನಿಗೆ ಅಲ್ಲಿ ರಷುರವರ ಮಿತ್ರರಿಂದ ಎಲ್ಲ ಸಹಕಾರವು ದೊರೆತಿತು. ಇರಲು ಬಾಡಿಗೆ ಇಲ್ಲದ ರೂಮು ಸಿಕ್ಕಿತ್ತು, ಓದು ಮುಂದುವರೆದು ಆ ಸಮಸ್ಯೆ ಪರಿಹಾರವಾಗಿತ್ತು. ರೂಮಿನಲ್ಲಿ ಅಡುಗೆ ಮಾಡಿಕೊಳ್ಳುತ್ತಿದ್ದ, ರೂಮನ್ನು ಕೊಟ್ಟಿದ್ದ ಮನೆಯಾಕೆ ಒಳ್ಳೆಯವಳು ಹಾಗಾಗಿ ಕೆಲವೊಮ್ಮೆ ಅವರ ಮನೆಯ ಊಟವು ಸಿಗುತ್ತಿದ್ದು, ಎಲ್ಲ ಅನುಕೂಲವಾಗಿದ್ದು, ಡಿಗ್ರಿವರೆಗು ಬಂದಿದ್ದ. ಅವನಿಗೆ ಚಿಕ್ಕ ವಯಸಿನಿಂದಲು ಇದ್ದ ಆಸೆಯೆಂದರೆ ಏನಾದರು ಮಾಡಿ I.P.S ಮಾಡಿ ಪೋಲಿಸ ಅಧಿಕಾರಿಯಾಗಬೇಕು ಎಂಬುದು , ಆ ಉದ್ದೇಶಕ್ಕಾಗಿ ತನ್ನ ಗಮನವನ್ನೆಲ್ಲ ಹರಿಸಿದ್ದ.
    ಓದಿನ ಜೊತೆಜೊತೆಗೆ ತನ ಖರ್ಚಿಗೆ ಸಾಲುವಷ್ಟು ದುಡಿಮೆಯು ಇತ್ತು, ಸುತ್ತ ಮುತ್ತಲ ಎಸ್ ಎಸ್ ಎಲ್ ಸಿ ಹಾಗು ಪಿಯುಸಿ ವಿಧ್ಯಾರ್ಥಿಗಳಿಗೆ  ಮನೆ ಪಾಠ ಹೇಳುವದರಲ್ಲಿ ಅವನ ಹೆಸರು ಸಾಕಷ್ಟು ಮಿಂಚಿತ್ತು.  ಆದರೆ ಸಮಯಾವಕಾಶವಿಲ್ಲದ ಅವನು ಎಲ್ಲವನ್ನು ಒಪ್ಪಿಕೊಳ್ಳುತ್ತಿರಲಿಲ್ಲ.  ಕಾಲೇಜಿನಲ್ಲಿ ಇವನು ಹಲವರಿಗೆ ಅಚ್ಚುಮೆಚ್ಚು. ಪ್ರಾಧ್ಯಾಪಕರೆಲ್ಲ ಇವನನ್ನು ಗೌರವ ಹಾಗು ಪ್ರೀತಿಯಿಂದ ಕಾಣುತ್ತಿದ್ದರು. ಆದರೆ ಕಾಲೇಜಿನ ವಿಧ್ಯಾರ್ಥಿಗಳ ಗುಂಪಿನಲ್ಲಿ ಹಲವು ಒಳಸುಳಿಗಳಿದ್ದವು. ಪ್ರತಿಷ್ಟಿತ ಕುಟುಂಬದ ಕೆಲವು ಸಹಪಾಠಿಗಳಿಗೆ ಇವನನ್ನು ಕಂಡರೆ ಅಸೂಯೆ. ಅದಕ್ಕೆ ಕಾರಣ ಇವನ ಪ್ರಖ್ಯಾತಿ ಹಾಗು ಕಾಲೇಜಿನ ಹುಡುಗಿಯರೆಲ್ಲ ಇವನೊಡನೆ ಬೆರೆಯುತ್ತಿದ್ದ ರೀತಿ.
"ರೀ ದತ್ತ " ಎಂದು ಕೂಗುತ್ತ ಬರುತ್ತಿದ್ದ ಅವರೆಲ್ಲ , ತಮ್ಮ ಪಾಠ ಪ್ರವಚನಗಳಲ್ಲಿನ ಸಮಸ್ಯೆಗಳನ್ನು ವಿಷಯಗಳನ್ನು ಇವನೊಡನೆ ಚರ್ಚಿಸುವ ಮಟ್ಟಿಗೆ ಇವನೊಡನೆ ಎಲ್ಲರ ಸಲುಗೆ. ಹಿನ್ನಲೆಯಲ್ಲಿ 'ಪಾಪ ಅನಾಥ' ಎನ್ನುವ ಭಾವವು ಇತ್ತೇನೊ ಎಂದು ದತ್ತ ಕೆಲವೊಮ್ಮೆ ಯೋಚಿಸುತ್ತಿದ್ದ.
  ಕಾಲೇಜಿನಲ್ಲಿ ಹುಡುಗಿಯರು ಸಾಮಾನ್ಯವಾಗಿ ತಮ್ಮದೆ ಆದ ಗುಂಪುಗಳನ್ನು ಮಾಡಿಕೊಂಡು ಇರುತ್ತಿದ್ದರು, ಅದರಲ್ಲಿ ಪ್ರಸಿದ್ದ ಹುಡುಗರೆಲ್ಲ 'ಪಂಚ ಕನ್ಯೆಯರು' ಎಂದು ಹೆಸರಿಟ್ಟಿದ್ದ ಜಾನಕಿ ನಾಯಕತ್ವದ ಗುಂಪು, ಉಳಿದ ಸದಸ್ಯರು ಭಾರತಿ, ಕಲ್ಪನ, ಸರೋಜ ಹಾಗು ಅರುಣ. ಓದುವದರಲ್ಲಿ ಸದಾ ಮುಂದಿದ್ದ ಗುಂಪು, ಇವರನ್ನು ನೇರವಾಗಿ ರೇಗಿಸಲು ಹುಡುಗರು ಭಯ ಪಡುತ್ತಿದ್ದ ಕಾರಣ ಅವರಲ್ಲಿದ್ದ ಗಂಭೀರ ನಡೆ ನುಡಿ. ದತ್ತನನ್ನು ಕಂಡರೆ ಅವರಿಗೆ ಅಚ್ಚುಮೆಚ್ಚು ಅನ್ನಲು ಕಾರಣ ಇವನು ಅವರಿಗೆ ಕಷ್ಟವಾಗಿದ್ದ , ಕ್ಲಾಸ್ ರೂಮಿನಲ್ಲು ಅರ್ಥವಾಗದ ಕೆಲವು ಗಣಿತದ ವಿಜ್ಞಾನದ ಸಮಸ್ಯೆಗಳು ಇವನು ಅರ್ಥವಾಗುವಂತೆ ವಿವರಿಸುತ್ತಿದ್ದ ರೀತಿ. ಹಲವು ಹುಡುಗರು ಇವನ ಮೂಲಕ ಈ ಹುಡುಗಿಯರಿಗೆ ಹತ್ತಿರವಾಗಲು ಪ್ರಯತ್ನ ಪಟ್ಟರು, ಆದರೆ ಅದು ದತ್ತನ ನೇರ ಸ್ವಭಾವದಿಂದ ಸಾದ್ಯವಾಗುತ್ತಿರಲಿಲ್ಲ ಹಾಗಾಗಿ ಸದಾ ಅವನನ್ನು ಕಣ್ಣ ಅಂಚಿನಲ್ಲೆ ಕಾಯುತ್ತಿದ್ದರು ಹೇಗಾದರು ಸರಿ ಇವನನ್ನು ಮಟ್ಟಹಾಕಲು.

     ಹೊರಗಿನ ಮಾತು ನಡೆ ನುಡಿ ಎಷ್ಟೆ ಗಂಭೀರವಾಗಿದ್ದರು, ದತ್ತ ಹಾಗು ಅರುಣರ ನಡುವಿನ ಭಾಂದವ್ಯ ಸ್ನೇಹವನ್ನು ಮೀರಿ ಪ್ರೇಮಕ್ಕೆ ತಿರುಗುತ್ತಿರಬಹುದೆಂದು ಮೊದಲು ಅರ್ಥಮಾಡಿಕೊಂಡವರು ಆಕೆಯ ನಾಲ್ವರು ಸ್ನೇಹಿತೆಯರು. ಜಾನಕಿ ಒಂದೆರಡು ಬಾರಿ ಅರುಣಳನ್ನು ವಿಚಾರಿಸಿದಳು ಆದರೆ ಅರುಣ ಹಾರಿಕೆಯ ಉತ್ತರ ಕೊಟ್ಟರು ಸಹ ಅವಳ ಕಣ್ಣ ಕೊನೆಯ ಮಿಂಚು ಮಾತಿನಲ್ಲಿಯ ದ್ವನಿಯ ಏರಿಳತದಲ್ಲೆ ಅರ್ಥಮಾಡಿಕೊಂಡು ಎಚ್ಚರಿಸಿದಳು. ಆದರೆ ವಯಸಿನ ಸಹಜ ಆಕರ್ಷಣೆ, ಅವರಿಬ್ಬರ ನಡುವಿನ ಸಹಜ ಸ್ವಭಾವಗಳು ಎಲ್ಲ ಪರಿಸ್ಥಿಥಿಯನ್ನು ಮೀರಿ ಅವರ ಮನಗಳನ್ನು ಒಂದುಗೂಡಿಸಿತ್ತು. ಆದರೆ ವಿಚಿತ್ರವೆಂದರೆ ಒಮ್ಮೆಯಾದರು ಇಬ್ಬರು ಒಬ್ಬರಿಗೊಬ್ಬರು ಹೇಳಲಿಲ್ಲ ತಮ್ಮ ಪರಸ್ಪರ ಪ್ರೀತಿಯನ್ನು.
  ಎಲ್ಲಕ್ಕಿಂತ ಹೆಚ್ಚಾಗಿ ದತ್ತನಲ್ಲಿದ್ದ ಓದುವ ಗುರಿ ಮತ್ತು ಅವನಲ್ಲಿ ಬೆಳೆದು ಬಂದ ಸುಸಂಸ್ಕೃತ ಸ್ವಭಾವ ಎಂದು ಅವನ ನಡತೆಯನ್ನು ಮೇರೆ ಮೀರಲು ಬಿಡಲಿಲ್ಲ. ಅವನ ಗುರಿ ಒಂದೆ ಇತ್ತು ತಾನು ಹೇಗಾದರು ಸರಿಯೆ I.P.S ಪರೀಕ್ಷೆ ತೆಗೆದುಕೊಂಡು ಪೋಲಿಸ್ ಅಧಿಕಾರಿಯಾಗಬೇಕು. ಅಲ್ಲದೆ ಅರುಣ ನಗರದಲ್ಲಿಯೆ ಪ್ರತಿಷ್ಟಿತ ಕುಟುಂಬಕ್ಕೆ ಸೇರಿದವಳು. ದತ್ತನ ನಡೆನುಡಿಯಲ್ಲು ಸ್ವಲ್ಪ ವೆತ್ಯಾಸವಾದರು ಕಾಲೇಜಿನಲ್ಲಿ ಅರುಣಳ ಹೆಸರಿಗೆ ಕಳಂಕ ಬರುವದೆಂದು ಅವನು ಅರಿತ್ತಿದ್ದನು. ಅಲ್ಲದೆ ಅದು ಯಾವ ರೀತಿಯೊ ತಿರುಗಿ ತನ್ನ ಓದಿಗೆ ಅಡ್ಡಬರಬಾರೆದೆಂದೆ ಅವನ ಇಚ್ಚೆ.  ಅರುಣ ಸಹ ಇದನ್ನೆಲ್ಲ ಸರಿಯಾಗಿಯೆ ಅರ್ಥಮಾಡಿಕೊಂಡಿದ್ದಳು.
   ಪದವಿಯ ಕಡೆಯ ವರ್ಷಕ್ಕೆ ಬಂದಂತೆ ಪರೀಕ್ಷೆಯ ಮುಂಚಿನ ದಿನಗಳಲ್ಲಿ ಹೇಗೊ ಒಮ್ಮೆ ಇಬ್ಬರೆ ಇದ್ದಾಗ ಅವರಿಬ್ಬರ ನಡುವೆ ಎಲ್ಲ ಭಾವವನ್ನು ಮೀರಿ ಈ ಪ್ರೀತಿಯ ಮಾತುಗಳು ಹೊರಟವು. ದತ್ತನು ವಿಹ್ವಲನಾದ ಅವನಿಗೆ ಅಸಹಾಯಕತೆ ತನ್ನವರು ಅನ್ನುವರು ಯಾರು ಇಲ್ಲ ಅವನಿಗೆ ಸಹಾಯ ಮಾಡಲು. ತಾನೊಮ್ಮೆ ಈ ಬಲೆಯಲ್ಲಿ ಸಿಕ್ಕಿದರೆ ತನ್ನನ್ನು ಚಿಕ್ಕವಯಸಿನಿಂದ ಬೆಳೆಸಿದ್ದ ರಘುರವರಿಗೆ ಏನೆಂದು ಹೇಳುವುದು. ಅವರಲ್ಲಿ ಈ ವಿಷಯ ಸದ್ಯಕ್ಕೆ ಪ್ರಸ್ತಾಪ ಮಾಡಲು ಸಾದ್ಯವೆ ಇಲ್ಲ. ತನ್ನ ಓದು ಮುಗಿದು, ತನ್ನ ಗುರಿಯನ್ನು ಸೇರುವ ಮುಂಚೆ ಈ ಪ್ರೀತಿಯ ವಿಷಯ ತಿಳಿದರೆ ತಾನು ಎಲ್ಲರಿಂದಲು ಅಪಹಾಸ್ಯಕ್ಕೆ ಒಳಗಾಗುವೆ.

  ಅರುಣ ತನ್ನ ವಯಸಿಗೆ ಮೀರಿ ಪ್ರೌಡವಾಗಿ ಚಿಂತಿಸಿದಳು ಅವಳು ಎಂದಳು 'ದತ್ತ ನಾನು ನಿನ್ನನ್ನು ಪ್ರೀತಿಸುತ್ತಿದ್ದೇನೆ ಅನುವದಂತು ಸತ್ಯ, ಆದರೆ ಈಗ ವಿಷಯ ಮನೆಯಲ್ಲಿ ಪ್ರಸ್ತಾಪ ಮಾಡಿದರೆ ಖಂಡೀತ ಯಾರು ಅರ್ಥ ಮಾಡಿಕೊಳ್ಳಲ್ಲ ಬದಲಿಗೆ ಮಾನಸಿಕ ಹಿಂಸೆಗಳು, ಅಪನಂಭಿಕೆ, ಅಪಹಾಸ್ಯ ಎಲ್ಲವು ಎದುರು ನಿಲ್ಲುತ್ತದೆ. ಎಲ್ಲಕ್ಕಿಂತ ಮುಖ್ಯವಾಗಿ ನಿಮ್ಮ ಭವಿಷ್ಯ ತೊಂದರೆಗೆ ಸಿಕ್ಕುತ್ತದೆ, ಒಮ್ಮೆ ನಾವು ಎಲ್ಲರನ್ನು ಎದುರಿಸಿ ಓಡಿಹೋದರು ಅಷ್ಟೆ, ಬದಲಿಗೆ ನಾವು ಸಹನೆಯಿಂದ ಕಾಯೋಣ. ನೀವು ನಿಮ್ಮ ಡಿಗ್ರಿ ಮುಗಿಸಿ ಮುಂದಿನ ನಿಮ್ಮ ಗುರಿಯತ್ತ ಗಮನ ನೀಡಿ. ನಿಮ್ಮ ಬದುಕು ನೀವು ರೂಪಿಸಿಕೊಂಡನಂತರ ನಾವು ನಮ್ಮ ಪ್ರೀತಿಯ ಬಗ್ಗೆ ಯೋಚಿಸೋಣ. ಹಾಗೆಂದು ನಾನು ನಿಮ್ಮನ್ನು ಪ್ರೀತಿಸುತ್ತಿಲ್ಲ ಅಂತ ಅರ್ಥವಲ್ಲ ನನ್ನ ಮನಸ್ಸು ನಿಮಗೆ ತೋರಿಸಲಾರೆ. ಆದರೆ ಹಾಗೆ ನಾನು ನಿಮ್ಮ ಬದುಕಿನ ಹಾದಿಗೆ ವಿಷವಾಗಲಾರೆ. ನಾನು ನಿಮ್ಮನ್ನು ಕಾಯುತ್ತೇನೆ , ನೀವು ಬರುವವರೆಗು ಕಾಯುತ್ತೇನೆ. ಹಾಗೆಂದು ನೀವೇನು ನಿಮ್ಮ ಬದುಕು ನನಗಾಗಿ ಮುಡುಪಿಡಬೇಕಿಲ್ಲ, ನೀವು I.PS ಮಾಡುವ ಆಸೆಗಾಗಿ ಶ್ರಮಿಸಿ, ಹಾದಿಯಲ್ಲಿ ನಿಮಗೆ ಮತ್ಯಾರದರು ಹುಡುಗಿ ಸಿಕ್ಕಲ್ಲಿ ನೀವು ಅತ್ತ ವಾಲಿದರು ನನಗೇನು ಬೇಸರವಿಲ್ಲ. ನಾವು ಪರಸ್ಪರ ಕಾಯುವ ಅಗತ್ಯವು ಇಲ್ಲ. ಬದುಕೆ ಹಾಗೆ ಅಲ್ಲವೆ. ಆದರೆ ನನಗಾಗಿ ನಿಮ್ಮ ಹೆಸರು ಬದುಕು ಹಾಳಾಗುವುದು ನನಗೆ ಇಷ್ಟವಿಲ್ಲ"

  ಅರುಣಳ ಸ್ನೇಹಿತೆಯರಿಗು ಇವರಿಬ್ಬರ ಪ್ರೀತಿಯ ಸುಳಿವಿತ್ತು, ಹಾಗೆಯೆ ನಡೆತ ಮೀರದ ಇವರಿಬ್ಬರ ಬಗ್ಗೆ ನಂಬಿಕೆ ಸಹ ಇದ್ದು ಕಾಲೇಜಿನಲ್ಲಿ ಎಲ್ಲಿಯು ಈ ವಿಷಯದ ಬಗ್ಗೆ ಸುಳಿವು ದೊರೆಯದಂತೆ ಎಚ್ಚರ ವಹಿಸಿದರು. ಪದವಿಯ ಕಡೆಯ ವರ್ಷವು ಮುಗಿದು ಅವರರವರ ಹಾದಿಗಳಲ್ಲಿ ಚದುರಿದರು. ಹಾಗೆ ದತ್ತ ಪುನಃ ಬೆಂಗಳೂರಿಗೆ ಬಂದು ರಘು ರವರ ಸಹಾಯದಿಂದೆ ಕೆಲಸವೊಂದನ್ನು ದೊರಕಿಸಿಕೊಂಡ. ಅವನು ಕಾಯುತ್ತಿರುವಂತೆ U.P.S.C ಪ್ರಕಟಿಸಿದ ಪರೀಕ್ಷೆಯನ್ನು ಬರೆದು.ಮೌಕಿಕ ಪರೀಕ್ಷೆಯನ್ನು ಪಾಸುಮಾಡಿ, ಅವನ ಜೀವನದ ಗುರಿಯಾದ I.P.S ಗೆ ಆಯ್ಕುಯಾಗಿ ಹೈದರಾಭಾದನಲ್ಲಿಯ ಟ್ರೈನಿಂಗ್ ಸೆಂಟರ್ ಗೆ ಸೇರಲು ಹೊರಟು ನಿಂತು ರಘುರವರಿಗೆ ನಮಸ್ಕರಿಸಿ ಆಶೀರ್ವಾದ ಕೋರಿದಾಗ ಅವರು ಸಂತೋಷದಿಂದ ಅತ್ತುಬಿಟ್ಟರು.

   ದತ್ತ ಟ್ರೈನಿಂಗ್ ಮುಗಿಸಿ ಕರ್ನಾಟಕಕ್ಕೆ ಬಂದು ಬೆಂಗಳೂರಿಗೆ ಬಂದು , ಅಧಿಕಾರ ವಹಿಸಿಕೊಂಡಾಗ ತಮ್ಮ ಮಗನೆ ಇವನು ಎಂಬಂತೆ ಸಂತೋಷಪಟ್ಟರು. ಉಗ್ರಗಾಮಿಗಳ ಹಾವಳಿ ವಿಪರೀತ ವೆನಿಸಿ, ಸೈಭರ್ ಅಪರಾದಗಳು ವಿಪರೀತವಾದಗ ಪೋಲಿಸ ಇಲಾಖೆಯಲ್ಲಿ ಅದಕ್ಕೆ ಕೆಲವರನ್ನು ಪ್ರತೇಕವಾಗಿ ತರಬೇತಿಗೊಳಿಸಬೇಕೆಂದಾಗ ಆಗಿನ್ನು ಇಲಾಖೆಯನ್ನು ಸೇರಿ ಕಿರಿಯನಾದ ತನ್ನ ಸಾಧನೆ ಮೂಲಕ ಗಮನ ಸೆಳೆದಿದ್ದ ದತ್ತನ ಹೆಸರು ಸಹಜವಾಗಿ ಸೂಚಿಸಲ್ಪಟ್ಟಿತ್ತು.  ಒಂದು ತಿಂಗಳು ಅದಕ್ಕಾಗಿ ಅಮೇರಿಕಾಗೆ ಹಾರಿದ ಅವನು ಮತ್ತೆ ಆರು ತಿಂಗಳು ದೆಹಲಿಯಲ್ಲಿ ಇರುವ ಪ್ರತ್ಯೇಕ ತರಬೇತಿಗೆ ನೇಮಿಸಲ್ಪಟ್ಟ. ಆ ಸಮಯದಲ್ಲಿ ಅಲ್ಲಿಯೆ ಇಲಾಖೆ ತರಬೇತಿಯಲ್ಲಿದ್ದ ಧಾಮಿನಿಯನ್ನು ಇವನು ಬೇಟಿ ಮಾಡಬೇಕಾಯಿತು, ಅದು ಸಹ ರಘುರವರ ಸೂಚನೆಯಂತೆ.

  ಧಾಮಿನಿ ಸಾಕಷ್ಟು ಸ್ಥಿಥಿವಂತಳಾದರು ತಂದೆ ತಾಯಿಯಿಲ್ಲದೆ ಸೋದರ ಮಾವ ಶಂಕರಮೂರ್ತಿ ,  , ಸೋದರ ಅತ್ತೆ ಕಮಲಮ್ಮ ಆಶ್ರಯದಲ್ಲಿಯೆ ಬೆಳೆದವಳು, ಚಿಕ್ಕಂದಿನಲ್ಲಿ ಕಾಡಿದ ಪೋಲಿಯೊದಿಂದ ತನ್ನ ಎಡಗಾಲನ್ನು ಎಳೆದು ಹಾಕುತ್ತಿದ್ದ ಅವಳು ಓದಿನಲ್ಲಿ ತನ್ನ ಗುರಿ ಸಾದಿಸುವದರಲ್ಲಿ ಎಂದಿಗೂ ಮುಂದೆ.  ಛಲವೆ ತಾನೆಂಬಂತೆ ಬೆಳೆದ ಅವಳು ಸೋದರ ಮಾವನ ಆಸೆಯಂತೆ I.A.S ನಲ್ಲಿ ಆಯ್ಕೆಯಾಗಿ, ಮಸೂರಿಯಲ್ಲಿ ತರಬೇತಿಯಲ್ಲಿದ್ದವಳು ಕೆಲವು ವಿಷೇಶ ಅಧ್ಯಯನಕ್ಕಾಗಿ ದೆಹಲಿಗೆ ಬಂದು ಇದ್ದವಳು. ಧಾಮಿನಿಯ ಸೋದರ ಮಾವ ಶಂಕರಮೂರ್ತಿ  ಹಾಗು ರಘು ಇಬ್ಬರು ಗಳಸ್ಯ ಕಂಠಸ್ಯ. ಅವರಿಬ್ಬರಿಗು ಧಾಮಿನಿ ಹಾಗು ದತ್ತ ಮದುವೆಯಾದರೆ ಉತ್ತಮ ಜೊತೆ ಎಂಬ ಭಾವವಿತ್ತು.
   ಧಾಮಿನಿ ಬೇಟಿಯಾದ ನಂತರ ಅವಳ ಅಭಿಪ್ರಾಯ ತಿಳಿದ  ದತ್ತ ಯಾವ ಉತ್ತರ ಕೊಡಲು ಹಿಂದೇಟು ಹಾಕಿದ, ಅವನ ಮನಸಿನಲ್ಲಿ ಕಾಲೇಜು ದಿನಗಳಲ್ಲಿ ಪ್ರೀತಿರೂಪದಲ್ಲಿದ್ದ ಅರುಣ ಕಾಡಿದಳು, ತುಮಕೂರಿನ ಕೆಲವು ಗೆಳೆಯರನ್ನು ಸಂಪರ್ಕಿಸಲು ಪ್ರಯತ್ನಿಸಿದ. ಎಂಟು ವರ್ಷಗಳಿದಂದಲು ಅಲ್ಲಿನ ಸಂಪರ್ಕವಿಲ್ಲ ಅರುಣ ಈಗ ಎಲ್ಲಿದ್ದಾಳೊ ಹೇಗಿದ್ದಾಳೊ ಅಥವ ಮದುವೆ ಆಗಿದೆಯೊ ಏನು ತಿಳಿದಿಲ್ಲ. ಅಲ್ಲದೆ ತನ್ನ ಜೀವನವನ್ನು ರೂಪಿಸಿದ ರಘುರವರ ಮಾತು ವಿರೋದಿಸಲು ಅವನಲ್ಲಿನ್ನ ಆತ್ಮಸಾಕ್ಷಿ ಅವನನ್ನು ಬಿಡಲಿಲ್ಲ. ಅಲ್ಲದೆ ಧಾಮಿನಿಯನ್ನು ನಿರಾಕರಿಸಲು ಅವನಿಗೆ ಯಾವ ಕಾರಣಗಳು ಇರಲಿಲ್ಲ. ಹಾಗಾಗಿ ಅವರ ಮದುವೆ ನಡೆದು ಹೋಯಿತು. ಮದುವೆಯ ನಂತರವು ಅವರಿಬ್ಬರ ಸಂಭಂದ ಸುಮದುರವಾಗಿತ್ತು. ಪೋಲಿಸ್ ಕೆಲಸದಲ್ಲಿಯೆ ಇದ್ದ ಅವನಿಗೆ ಅರುಣಳ ಪತ್ತೆ ಹಚ್ಚುವದೇನೊ ಸುಲುಭದ ಕೆಲಸವಾಗಿಯೆ ಇತ್ತು ಆದರೆ ಅವನಲ್ಲಿದ್ದ ಸಂಸ್ಕಾರ ಅವನನ್ನು ಎಚ್ಚರಿಸಿತು. ತನ್ನ ಮದುವೆ ಆಗಿ ಹೋಗಿದೆ ಈಗ ಅರುಣಳನ್ನು ಹುಡುಕುವದರಲ್ಲಿ ಸಂಪರ್ಕಿಸುವದರಲ್ಲಿ ಯಾವ ಅರ್ಥವು ಇಲ್ಲ , ಅದು ಅಪಾರ್ಥಕ್ಕೆ ಅನರ್ಥಕ್ಕೆ ದಾರಿ ಮಾಡಬಹುದಷ್ಟೆ. ಹೀಗಾಗಿ ಸುಮ್ಮನಾದ.
 
    ತುಮಕೂರಿನ ಕಾಲೇಜಿನಲ್ಲಿ ನಡೆಯುತ್ತಿರುವ ಹಳೆಯ ವಿಧಾರ್ಥಿಗಳ ಸಮ್ಮಿಲನ ಕಾರ್ಯಕ್ರಮಕ್ಕೆ ಬರುತ್ತೇನೆ ಎಂದು ಪ್ರಿನ್ಸಿಪಾಲ್ ಬಳಿ ಒಪ್ಪಿಕೊಳ್ಳುವಾಗ ಅವನಿಗೆ ಅದೊಂದು ದೂರದ ಆಸೆಯು ಇತ್ತು. ಒಮ್ಮೆ ಕಾರ್ಯಕ್ರಮದಲ್ಲಿ ಅರುಣಳನ್ನು ನೋಡಲು ಸಾದ್ಯವಾದರೆ....ಅವನು ಅವರ ಬಳಿ ಒಪ್ಪಿಕೊಳ್ಳುವಾಗ ಹೇಳಿದ ನಾನು ಅಲ್ಲಿಗೆ ಬರುತ್ತೇನೆ, ಕಾರ್ಯಕ್ರಮದಲ್ಲಿ ಬಾಗವಹಿಸುತ್ತೇನೆ, ಆದರೆ  ಸ್ಟೇಜ್ ಮೇಲೆ ಅತಿಥಿಯಾಗಿ ಅಥವ ಬೇರೆ ರೂಪದಲ್ಲಿ ಬರಲಾರೆ ಎಂದು. ಅದಕ್ಕೆ ಪ್ರಿನ್ಸಿಪಾಲರು ಸಹ ನಗುತ್ತ ಒಪ್ಪಿಕೊ೦ಡಿದ್ದರು.
....
ಮುಕ್ತಾಯ - ಮುಂದಿನ ಬಾಗದಲ್ಲಿ.

   ಶ್ರೀಗಂಧದ ಧೂಪ - ( ಅರುಣ )

    ಡ್ರೈವರನ್ನು ಬರಬೇಡವೆಂದು ತಿಳಿಸಿ ತಾನೆ ಕಾರನ್ನು ಡ್ರೈವ್ ಮಾಡುತ್ತ ಹೊರಟು, ತುಮಕೂರು ತಲಪುವಾಗ  ಒಂಬತ್ತು ಗಂಟೆಯ ಆಸುಪಾಸು. ಈಗ ರಸ್ತೆ ಮೊದಲಿನಂತಿಲ್ಲ ಎಲ್ಲವು ಬದಲಾಗಿದೆ ಎನ್ನುಕೊಳ್ಳುತ್ತ, ಊರು ಪ್ರವೇಶಿಸುವಾಗಲೆ ನೆನಪಿಗೆ ಬಂದಿತು, ಕಾಲೇಜು ದೂರವೇನಿಲ್ಲ, ಇದೆ ಮುಖ್ಯರಸ್ತೆಯ ಬಲಬದಿಯಲ್ಲಿ, ಮೊದಲು ಸರ್ಕಾರಿ ಪಾಲಿಟೆಕ್ನಿಕ್ ನಂತರ ತಾನು ಓದಿದ ಸೈನ್ಸ್ ಕಾಲೇಜು.  ಕಾಲೇಜಿನ ಹತ್ತಿರ ಬಂದು ಗೇಟಿನ ಹತ್ತಿರ ತಿರುಗಿಸುವಾಗಲೆ ಮುಖ್ಯದ್ವಾರಕ್ಕೆ ಮಾಡಿದ್ದ ಅಲಂಕಾರಗಳು, ಕಟ್ಟಿದ್ದ ಸ್ವಾಗತದ ಬ್ಯಾನರುಗಳು ಎಲ್ಲ ಕಾಣಿಸಿದವು. ಇರುವುದು ಪೋಲಿಸ್ ಇಲಾಖೆಯಾದರು ಅವನ ಹೃದಯದಲ್ಲಿ ಎಂತದೊ ಸಣ್ಣ ಕಂಪನ ಎನಿಸಿತು. ಇಷ್ಟು ವರ್ಷಗಳ ನಂತರ ತಾನು ಓದಿದ ಕಾಲೇಜಿನೊಳಗೆ ಪ್ರವೇಶಿಸುತ್ತಿರುವೆ.....
  ... ನಿಂತಿರುವ ಕೆಲವು ವಿದ್ಯಾರ್ಥಿ ಸ್ವಯಂ ಸೇವಕರು ಕಾರನ್ನು ನಿಲ್ಲಿಸಬೇಕಾದ ಜಾಗದತ್ತ ಕೈಮಾಡಿದರು. ದತ್ತ ಬಂದಿದ್ದನ್ನು ಗಮನಿಸಿದ ಪ್ರಿನ್ಸಿಪಾಲ್ ನಗುತ್ತ ಕಾರಿನತ್ತಲೆ ನಡೆದು ಬಂದಾಗ ಇವನಿಗೆ ಸಂಕೋಚವೆನಿಸಿತು. ಇವರು ಎಷ್ಟಾದರು ತನ್ನ ಗುರುಗಳು ಎಂಬ ಭಾವ ತುಂಬಿ ಕಣ್ಣು ತುಂಬಿತು. ತಾನು ಅವರತ್ತ ನಡೆದ.  ಅವರು ಇವನ ಕೈಕುಲುಕಿ ಸ್ವಾಗತಿಸಿದರು. ಅವರ ಜೊತೆಯಿದ್ದ ಪ್ರಾಧ್ಯಾಕಪರು, ವಿದ್ಯಾರ್ಥಿ ಸಂಘದ ಸದಸ್ಯರು ಇವನಿಗೆ ಕರಲಾಘವ ಇತ್ತು, ಕರೆದೋಯ್ದು ಬೇಡವೆಂದರು ಕೇಳದೆ ಬಲವಂತ ಮಾಡಿ ಉಪಹಾರ ಮಾಡಿಸಿದರು. ನಂತರ ಇವನು ಕಾರ್ಯಕ್ರಮ ನಡೆಯಬೇಕಾಗಿದ್ದ ಜಾಗದತ್ತ ಬಂದು ಅಲ್ಲಿ ಡಯಾಸ್  ಎದುರಿಗೆ ಹಾಕಿದ್ದ ಕುರ್ಚಿಗಳತ್ತ ನಡೆದ. ಅಲ್ಲಿ ನೋಡುವಾಗ ಅನೇಕ ಪರಿಚಯದ ಮುಖಗಳು ಕಾಣಿಸಿ ಎಲ್ಲರತ್ತ ಕೈಬೀಸುತ್ತ ಹೋಗಿ ಕುಳಿತ. ಕಾರ್ಯಕ್ರಮದ ಉದ್ಘಾಟನೆಗೆ ತುಮಕೂರಿನ ಯುವ ಸಂಸದ ಬರಲಿದ್ದು ಅವರು ಇವನ ಜೊತೆ ಓದುತ್ತಿದ್ದ ಇವನ ಸೀನಿಯರ್ ಹಾಗು ಪರಿಚಿತರೆ. ಅತಿಥಿಗಳಾಗಿ ಹಿಂದೆ ಕಾಲೇಜಿನಲ್ಲಿ ಸೇವೆ ಸಲ್ಲಿಸಿದ್ದ ಹಿರಿಯ ನಿವೃತ್ತ ಪ್ರಾಧ್ಯಾಪಕರನ್ನು ಕರೆಸಲಾಗಿತ್ತು.  ಪ್ರಾರಂಬಕ್ಕೆ ಇನ್ನು ಅರ್ದ ಗಂಟೆ ಇದೆಯೆಂದು ತಿಳಿಸಿದರು.

     ಇವನ ಜೋತೆ ಓದುತ್ತಿದ್ದ ಗಂಗಾದರ, ಗೋಪಾಲ ನಾಯಕ್,  ಸತೀಶ್ , ನಂಜುಂಡ ಶೆಟ್ಟಿ , ನರಸಿಂಹ ಮೂರ್ತಿ , ಹುಸೇನ್, ನಾರಯಣಸ್ವಾಮಿ ..ಎಷ್ಟೊಂದು ಜನ ಗೆಳೆಯರು ಅವನ ಸುತ್ತುವರೆದು ಕುಳಿತರು. ಯಾರು ಎಲ್ಲೆಲ್ಲಿ ಇರುವರು, ಏನು ಕೆಲಸ, ಮದುವೆ ಆಯಿತ ಮಕ್ಕಳು ಇಂತವೆಲ್ಲ ಮಾತು , ಹೋ ಎಂಬ ಕೂಗು ಎಲ್ಲರಲ್ಲು ಸಂಭ್ರಮ. ತಾವು ಕೆಲಸ ಮಾಡುತ್ತಿದ್ದ  ಜವಾಬ್ದಾರಿ, ಗಾಂಭೀರ್ಯ ಎಲ್ಲವನ್ನು ತೊರೆದು ಹಗುರ ಮನಸಿನಲ್ಲಿ ಮತ್ತೆ ಎಲ್ಲರು ವಿದ್ಯಾರ್ಥಿಗಳಂತೆ ವರ್ತಿಸುತ್ತಿದ್ದರು. ದತ್ತನನ್ನು ಕಂಡು , ಅವನ ಈಗಿನ ಸ್ಥಾನ ಎಲ್ಲ ವಿಚಾರಿಸುತ್ತ ಅವರಿಗೆಲ್ಲ ಇವನ ಬಗ್ಗೆ ಮೆಚ್ಚುಗೆ, ಗೌರವ. ಹಾಗೆ 'ಏನಪ್ಪ ನಾವೇನಾದರು ಅಂದರೆ ನಮ್ಮನ್ನು ಒದ್ದು ಒಳಗೆ ಹಾಕಲ್ಲ ತಾನೆ " ಅಂತ ಕಿಚಾಯಿಸಿದರು. ದತ್ತನಿಗೆ ಎಲ್ಲ ಹಾಸ್ಯಗಳು ಪ್ರಿಯವಾಗಿದ್ದವು, ನಗುತ್ತ ಎಲ್ಲರನ್ನು ಮಾತನಾಡಿಸುತ್ತಿದ್ದ. ದೂರದಿಂದ ಇವರನ್ನೆಲ್ಲ ಗಮನಿಸುತ್ತಿದ್ದ ಪ್ರಿನ್ಸಿಪಾಲರಿಗೆ ಒಳಗೆ ನಗು. ಒಂದು ಕಾಲದಲ್ಲಿ ನಾನು ಪ್ರಾಧ್ಯಾಪಕನಾಗಿದ್ದಾಗಲೆ ಇವರೆಲ್ಲ ನನಗೆ ಹೆದರಿ ನಿಲ್ಲುತ್ತಿದ್ದರು, ಈಗ ಇವರೆಲ್ಲ ಎಷ್ಟು ಎತ್ತರದ ಸ್ಥಾನ ಏರಿದ್ದಾರೆ, ನನಗೆ ಇದು ಗರ್ವದ ವಿಷಯ ಎಂದುಕೊಳ್ಳುತ್ತಿದ್ದರು.

   ದೂರದಲ್ಲಿ ಎಲ್ಲಿಯೋ ಹರಟುತ್ತ ಕುಳಿತ್ತಿದ್ದ, ನರಹರಿ ಇವನನ್ನು ಕಂಡು ಎದ್ದು ಕೈಬೀಸುತ್ತ ಬಂದ. ಮೊದಲಿನಿಂದ ಅವನ ಸ್ವಭಾವವೆ ಬೇರೆ ಅವನಿಗೆ ತನ್ನನ್ನು ಎತ್ತರಕ್ಕೆ ಪ್ರೊಜೆಕ್ಟ್ ಮಾಡಿಕೊಳ್ಳುವದೆಂದರೆ, ಎಂತದೊ ಖುಷಿ. ಅಲ್ಲದೆ ಮೊದಲಿನಿಂದ ಕಣ್ಣು ಸ್ವಲ್ಪ ಐಬು ಹಾಗಾಗಿ ದಪ್ಪ ಗಾಜಿನ ಕನ್ನಡಕ. ಕಿವಿಯು ಸ್ವಲ್ಪ ಮಂದ ಆದರೆ ಅದನ್ನು ತೋರಗೊಡುತ್ತಿರಲಿಲ್ಲ. ಓದುವದರಲ್ಲಿ ಜಾಣನಾದರು ಗೆಳೆಯರ ಮದ್ಯೆ ಪದೆ ಪದೆ ಅಪಹಾಸ್ಯಕ್ಕೆ ಒಳಗಾಗುತ್ತಿದ್ದ ಎಡವಟ್ಟುರಾಯ. ದತ್ತನ ಪಕ್ಕ ಬಂದು ಕುಳಿತವನೆ
 "ಏನಪ್ಪ ದತ್ತ , ಅಂತು ಹೇಗೊ ನೀನು ಓದು ಮುಗಿಸಿದೆಯಲ್ಲ, ಈಗ ಏನು ಮಾಡ್ತೀದ್ದಿ" ಎಂದ, ಅವನಿಗೆ ಏಕೊ ದತ್ತನ ವಿಷಯ ತಿಳಿದಿಲ್ಲ. ದತ್ತ ಅವನಿಗೆ ಉತ್ತರಿಸುವ ಬದಲು
 "ನನ್ನದಿರಲಿ ನೀನು ಏನು ಮಾಡ್ತಿದ್ದಿ ನಿನ್ನ ಸಮಾಚಾರವೇನು,ಮದುವೆಮಕ್ಕಳು, ಕೆಲಸ " ಎಂದು ಪ್ರಶ್ನಿಸಿದ. ನರಹರಿಗೆ ಅಷ್ಟು ಸಾಕಾಯ್ತು
" ನನ್ನದೇನಪ್ಪ ಎಲ್ಲ ಸಕ್ಕತ್,  ಡಿಗ್ರಿ ಮುಗಿಸಿ ನಂತರ ಕಂಪ್ಯೂಟರ್ ಕೋರ್ಸ್ ಗಳನ್ನು ಸೇರಿದೆ. ಕೆಲಸ ಹುಡುಕುವುದು ಕಷ್ಟವೆ ಆಗಲಿಲ್ಲ, ಇನ್ ಫ್ಯಾಕ್ಟ್ ಅವರೆ ನನಗೆ ಕರೆದು ಕೆಲಸ ಕೊಟ್ಟರು ಅಂತ ಇಟ್ಕೊ, ರಾಯ್ಲ್ ಫ್ಯಾಮಿಲಿನಪ್ಪ ನನ್ನ ಮನೆಯವರು, ಚಿಕ್ಕಮಂಗಳೂರಿನ ಕಡೆ ಕಾಫಿ ಪ್ಲಾಂಟರ್ ಅವರಪ್ಪ, ಕೋಟಿ ಕೋಟಿ ಆಸ್ತಿ ಕೊಳೆಯುತ್ತ ಬಿದ್ದಿದ್ದೆ. ಹಾಗಂತ ನನಗೇನು ಕಡಿಮೆ ಇಲ್ಲ. ತಿಂಗಳಿಗೆ ಎಂಬತ್ತು ಸಾವಿರ ದಾಟಿದೆ ಈಗ, ಕಂಪನಿಯಿ೦ದಲೆ ಕಾರು ಕೊಟ್ಟಿದ್ದಾರೆ. ಇಲ್ಲಿ ಇರುವ ಯಾರಿಗಾದರು ಇದೆಯ ಕೇಳು ನನ್ನಷ್ಟು ಇನ್ ಕಮ್ "  
 ಜೋರಾದ ದ್ವನಿಯಲ್ಲಿ ನರಹರಿ ಮಾತನಾಡುತ್ತಿದ್ದರೆ ಸುತ್ತ ಕುಳಿತವರು ಮುಸಿಮುಸಿ ನಗುತ್ತಿದ್ದರು.  ಅವನು ಮಾತ್ರ ಅದರ ಪರಿವಿಲ್ಲದೆ ಮಾತನಾಡುತ್ತಿದ್ದ
 " ಅದರಲ್ಲಿ ಅಷ್ಟೆ ರಿಸ್ಕ್ ಇದೆಯಪ್ಪ, ಏನು ಮಾಡುವುದು ಕೆಲವು ಕಾನೂನಿಗೆ ಮರೆಮಾಚುವ ಕೆಲಸವು ಮಾಡಬೇಕಾಗುತ್ತೆ, ಕಂಪನಿಗೋಸ್ಕರ. ನಿನಗೆ ತಿಳಿದರೆ ಪರವಾಗಿಲ್ಲ ಬಿಡು, ಪೋಲಿಸರಿಗೆ,  ಅದರಲ್ಲು  ಸೈಬರ್ ವಿಭಾಗಕ್ಕೆ ತಿಳಿದರೆ ತೊಂದರೆ ಅಂತಿಟ್ಕೊ, ತೊಂದರೆ ಏನು ಬಂತು ಹಣ ಚೆಲ್ಲಬೇಕಾಗುತ್ತೆ ಅಷ್ಟೆ. ಸಂಬಳ ಬೇಕು ಅಂದ್ರೆ ಅದೆಲ್ಲ ಮಾಡಬೇಕಲ್ವಾ? . ಈಗ ನಿನ್ನ ತಗೊ ನೀನು ಅಷ್ಟು ದುಡಿಯಲು ಸಾದ್ಯವಾ?" .
ಹೀಗೆ ಅವನ ಕಂಪನಿಯ ವ್ಯವಹಾರದ ಬಗ್ಗೆ ಏನೆಲ್ಲ ಹೇಳುತ್ತ ಕಡೆಗೆ  
"ಅದು ಸರಿ ನೀನು ಎಲ್ಲಪ್ಪ ಕೆಲಸ ಮಾಡುವುದು? ನೀನು ಬಿಡು ಬುದ್ದಿವಂತ ಯಾವೊದೋ ಕಾಲೇಜಿನಲ್ಲಿ ಕೊರೆಯೊ ಕೆಲಸ ಶುರುಮಾಡಿರುತ್ತಿ" ಅಂತ ಗಹಗಹಿಸಿ ನಕ್ಕ.
 ಸುತ್ತ ಅವನ ಮಾತು ಕೇಳುತ್ತಿದ್ದವರು, ದತ್ತನ ಬಗ್ಗೆ ಗೊತ್ತಿದ್ದವರು ನಗುತ್ತ ಕುಳಿತ್ತಿದ್ದರು.

 ದತ್ತ ಸಣ್ಣದಾಗಿ ನಗುತ್ತ "ನಾನು ಪೋಲಿಸ್ ಇಲಾಖೆಯಲ್ಲಿರುವೆ " ಎಂದು ತಿಳಿಸಿದ,
 ನರಹರಿ ಆಶ್ಚರ್ಯದಿಂದ
 "ಏನು ಪೋಲಿಸ್ ಕೆಲಸವೆ, ಎಂತದು, ಅಲ್ಲಿಯ ಗುಮಾಸ್ತ ಕೆಲಸವ ಅಥವ ಏನು "  ಎಂದ ಕುತೂಹಲದಿಂದ
 "ಅಲ್ಲಪ್ಪ , ಸೈಬರ್ ಕ್ರೈ ವಿಭಾಗದ ಚೀಫ್ , ಡಿ.ಐ.ಜಿ. ಸೈಬರ್ ಕ್ರೈಮ್ " ನಗುತ್ತ ಹೇಳಿದ ದತ್ತ.
ನಿದಾನವಾಗಿ ಅರ್ಥವಾದಂತೆ ನರಹರಿಯ ಮುಖ ಬಣ್ಣ ಕಳೆದು ಕೊಂಡಿತು. ಅವನು ನಿಜವಾಗಿ ಸೈಬರ್ ಡಿ.ಐ.ಜಿ ದತ್ತನ ಹೆಸರು ಕೇಳಿದ್ದ ಆದರೆ ಕನಸಿನಲ್ಲು ಅವನು ತನ್ನ ಕ್ಲಾಸ್ ಮೆಟ್ ಅಂತ ಕಲ್ಪನೆಯು ಮಾಡಿರಲಿಲ್ಲ  ಗಾಭರಿ ಅವನಲ್ಲಿ ತುಂಬಿತು. ಯಾರಲ್ಲು ಹೇಳಬಾರದ ಕೆಲವು ವಿಷಯ ಅವನಲ್ಲಿ ಬಾಯಿಬಿಟ್ಟಿದ್ದ, ಅದು ಯಾವುದೋ ಜೋಶ್ ನಲ್ಲಿ. ಅವನಿಗೆ ಈಗ ಅಲ್ಲಿಂದ ಹೇಗಾದರು ಪಾರದರೆ ಸಾಕು ಅನ್ನಿಸಿತು.
ತಕ್ಷಣ "ಸರಿಯಪ್ಪ ಬೇರೆ ಯಾರ್ಯಾರು ಬಂದಿದ್ದಾರೆ ಅಂತ ನೋಡ್ತೀನಿ " ಎಂದು ದಡ ದಡ ಹೊರಟ. ಸುತ್ತಲ್ಲಿದ್ದವರು ಜೋರಾಗಿ ನಗುತ್ತಿದ್ದರು.

  ಅವನು ಮರೆಯಾದ ಸ್ವಲ್ಪ  ಸ್ವಲ್ಪ ಹೊತ್ತಿಗೆ, ಎಡಬಾಗದಲ್ಲಿ ಕುಳಿತಿದ್ದ, ಹೆಣ್ಣುಮಕ್ಕಳ ಕಡೆಯಿಂದ ಮೂರು ನಾಲಕ್ಕು ಜನರ ಗುಂಪು ನಿದಾನವಾಗಿ ಇತ್ತ ಬರುವುದು ಕಾಣಿಸಿತು. ಇವನು ತಕ್ಷಣ ಗುರುತಿಸಿದ. ಅನುಮಾನವೆ ಇಲ್ಲ ಇದು ಜಾನಕಿಯ ಗುಂಪೆ. ಅಂದರೆ ಅರುಣ ಸಹ ಬಂದಿದ್ದಾಳೆ. ಅವನ ಕಣ್ಣಿನಲ್ಲಿಯ ಹೊಳಪು ಜಾಸ್ತಿಯಾಯಿತು. ಅವರು ಹತ್ತಿರ ಬಂದಂತೆ ನಾಲ್ವರು ಕಾಣಿಸಿದರು,
ನಗುತ್ತ ಇವನತ್ತ ನೋಡಿದ ಜಾನಕಿ
"ನಮಸ್ಕಾರ ದತ್ತ ಅವರಿಗೆ, ನಮ್ಮ ನೆನಪು ಇದ್ದೀತಾ? " ಎಂದಳು ಅದಕ್ಕೆ ದತ್ತ
"ಇರದೆ ಉಂಟೆ, ನಿಮ್ಮನೆಲ್ಲ ಹೇಗೆ ಮರೆಯಲು ಸಾದ್ಯ? . ನೀವೀಗ ಏನು ಮಾಡುತ್ತಿದ್ದೀರಿ " ಅಂತೆಲ್ಲ ವಿವರ ವಿಚಾರಿಸಿದ,

 ಜಾನಕಿ ಖಾಸಗಿ ಕಂಪನಿಯೊಂದರಲ್ಲಿ ಸ್ಟೆನೋ ಆಗಿ ದುಡಿಯುತ್ತಿದ್ದಳು, ಉಳಿದ ಮೂವರಲ್ಲಿ ಸರೋಜ ಮಾತ್ರ ಮದುವೆಯಾಗಿ ಗಂಡನ ಜೊತೆ ಮನೆ ಮಡದಿಯಾಗಿದ್ದಳು, ಉಳಿದ ಇಬ್ಬರು ಕಲ್ಪನ ಹಾಗು ಭಾರತಿ ಕೆಲಸ ಮಾಡುವವರೆ. ಎಲ್ಲರಿಗು ಮದುವೆಗಳಾಗಿ ಆಗಲೆ ಒಂದು ಎರಡು ಮಕ್ಕಳು. ಓಡುವ ಸಮಯದ ವೇಗವನ್ನು ನೆನೆದು ಅವನು ಆಶ್ಚರ್ಯ ಪಡುತ್ತಿದ್ದ.
ಹೊರಗೆ ನಗುತ್ತ ಮಾತನಾಡುತ್ತಿದ್ದರು ಅವನಲ್ಲಿ ಕೊರೆಯುತ್ತ ಇದೆ  "ಅರುಣ ಎಲ್ಲಿ ಕಾಣುತ್ತಿಲ್ಲ"  ಮಾತನಾಡುತ್ತ ಕಡೆಗೆ ಕೇಳಿಯೆ ಬಿಟ್ಟ
"ಅಂದ ಹಾಗೆ ಎಲ್ಲಿ ನಿಮ್ಮ ಐದು ಜನರ ಗುಂಪಿನಲ್ಲಿ ಒಬ್ಬರು ಮಿಸಿಂಗ್, ಏಕೆ ಬಂದಿಲ್ಲ "
ಜಾನಕಿ ಈಗ ನಗುತ್ತಿದ್ದಳು,
"ಕಡೆಗು ನೆನಪಿಸಿಕೊಂಡು ಕೇಳಿದಿರಲ್ಲ ಬಿಡಿ " ಎನ್ನುತ್ತ,
ಎಡಬಾಗದಲ್ಲಿ ಕುಳಿತ್ತಿದ್ದ ಹೆಂಗೆಳೆಯರತ್ತ ತಿರುಗಿ, ದೂರದಲ್ಲಿ ಕುಳಿತಿದ್ದವರತ್ತ ಕೈಮಾಡಿ ಕರೆದಳು. ಈಗ ದೂರದಿಂದಲು ದತ್ತ ಗುರುತಿಸಿದ. ಅವಳೆ ಅರುಣ , ಕುಳಿತ್ತಿದ್ದವಳು ಎದ್ದು ಬರುತ್ತಿದ್ದಾಳೆ. ತಿಳಿ ನೀಲಿ ಬಣ್ಣದ ಸೀರೆಯಲ್ಲಿ, ಹಗುರವಾಗಿ ಕೂದಲನ್ನು ಹಿಂದೆ ಕಟ್ಟಿ ಬರುತ್ತಿದ ಅವಳ ನಿಲುವು ಅವನನ್ನು ಕದಲಿಸಿದು. ಅವನ ಹೃದಯದ ಬಡಿತ ಅವನಿಗೆ ಕೇಳುತ್ತಿತ್ತು, ಅವಳನ್ನು ನೋಡಲು, ಮಾತನಾಡಲು ಕಾತುರನಾಗಿದ್ದ. ಅರುಣ ಹತ್ತಿರ ಬಂದು ನಗುತ್ತ ನುಡಿದಳು
"ಹೇಗಿದ್ದೀರಿ "
ದತ್ತ ಸಂತೋಷದಿಂದ ನುಡಿದ ,
"ಚೆನ್ನಾಗಿಯೆ ಇದ್ದೇನೆ, ಅದೇನು ನಿಮ್ಮ ಗುಂಪು ಬಿಟ್ಟು , ನೀವೊಬ್ಬರೆ ಬೇರೆಯಾಗಿ ಬರುತ್ತಿದ್ದೀರಿ " ಎಂದು ಕೇಳಿಯೆ ಬಿಟ್ಟ ಕುತೂಹಲದಿಂದ.
ಈಗ ನಗುವ , ಸರದಿ ಜಾನಕಿಯದು, ಅರುಣ ಬೇಡವೆಂದು ಸನ್ನೆ ಮಾಡುತ್ತಿದ್ದರು ಅವಳು ಚಿತಾವಣೆಯ ದ್ವನಿಯಲ್ಲಿ ಅಂದಳು
"ಅದೇನೊ ಅಪ್ಪ, ಈ ಅರುಣ ನಾವು ಕರೆದರು ಜೊತೆಗೆ ಬರಲಿಲ್ಲ, ಅವಳು ನೀವಾಗಿ ನೆನೆದು ಕೇಳಿದರೆ ಮಾತ್ರ ನಿಮ್ಮ ಎದುರಿಗೆ ಬರುವದಾಗಿ ಕುಳಿತಿದ್ದಳು "
ದತ್ತನಿಗೆ ಹೇಗೆ ಹೇಗೊ ಆಯಿತು. ಅರುಣಳಿಗೆ ಈಗಲು ಅವಳ ಮನಸಿನಲ್ಲಿ ನನಗೆ ಜಾಗವಿರಬಹುದು ಇಲ್ಲದಿದ್ದರೆ ಹೀಗೇಕೆ  ವರ್ತಿಸುತ್ತಿದ್ದಳು.  ನಗುತ್ತಲೆ ಮಾತನಾಡಿಸಿದ. ಏನು ಮಾಡಿಕೊಂಡಿದ್ದೀರಿ ಎಂದೆಲ್ಲ. ಅವಳು  ಸ್ಟೇಟ್ ಬ್ಯಾಂಕ್ ಆಫ್ ಮೈಸೂರಿನಲ್ಲಿ  ಈಗ ಅಸಿಸ್ಟೆಂಟ್  ಮ್ಯಾನೇಜರ್ ಆಗಿದ್ದಳು.
"ಯಾವ ಬ್ರಾಂಚ್" ಎಂದು ಕೇಳಿದ, ಅದಕ್ಕೆ ಉತ್ತರವಾಗಿ ಜಾನಕಿ
" ಇಲ್ಲೆ ಕುಳಿತು ಏನು ಮಾತು ಬನ್ನಿ , ಒಮ್ಮೆ ನಾವು ಓದಿದ್ದ ಕಾಲೇಜಿನಲ್ಲೆಲ್ಲ ಒಂದು ಸುತ್ತು ಹಾಕಿಬರೋಣ, ನಮ್ಮ ಕ್ಲಾಸ್ ರೂಮ್ ನೋಡಿ ಬರೋಣ"  ಎಂದು ಕರೆದಳು.
 ಸರಿ ಎಂದು ಅವನು ಎದ್ದು ಹೊರಟ. ಹುಡುಗಿಯರು ಸೂಕ್ಷ್ಮವಾಗಿಯೆ ಗಮನಿಸಿದರು. ಈಗ ಅವನ ನಡುಗೆಯೆ ಬದಲಾಗಿದೆ, ಆತ್ಮ ವಿಶ್ವಾಸ ತುಂಬಿದಂತಿದೆ, ಮೊದಲಿನಂತೆ ಎಂತದೋ ಒಂದು ಕೀಳಿರಿಮೆ ಸಂಕೋಚ ಇಲ್ಲ.  ಅವರೆಲ್ಲರ ನಡುವೆ ಅವನ ಮನವು ಏನೊ ಹಗುರವಾಗಿತ್ತು. ತನ್ನ ಅಧಿಕಾರ ಸ್ಥಾನ, ಮಾನಸಿಕ ಒತ್ತಡ ಎಲ್ಲವನ್ನು ಮರೆತಿದ್ದ. ಆ ಒಂದು ಸಂದರ್ಭಕ್ಕೆ ಏಕೊ ಹಳೆಯ ದತ್ತನೆ ಆಗಿಹೋಗಿದ್ದ. ಎಲ್ಲಡೆಯು ಸುತ್ತಾಡಿದರು. ಮೂರು ಪ್ಲೋರ್ ಗಳಲ್ಲಿ ಹರಡಿದ್ದ ಅಂಗ್ಲದ M ಆಕಾರದಲ್ಲಿದ್ದ ಕಲ್ಲು ಕಟ್ಟಡವದು. ತುಂಬ ಬದಲಾವಣೆ ಏನಿರಲಿಲ್ಲ. ಬಾಟನಿ ವಿಭಾಗದ ಮುಂಬಾಗದಲ್ಲಿದ್ದ ಚಿಕ್ಕಕೈತೋಟದಲ್ಲಿ ಸಂಪಿಗೆ ಗಿಡ ದೊಡ್ಡ ಮರದಂತಾಗಿತ್ತು. ಅದೇ ರೂಮುಗಳು ಅದೇ ಕಾರಿಡಾರ್. ಹೊರಗೆ ನಡೆಯುತ್ತಿದ್ದ ಕಾರ್ಯಕ್ರಮದಲ್ಲಿ ಎಲ್ಲರು ಸೇರಿದ್ದರಿಂದ. ಒಳಗೆ ಜನರಿರಲಿಲ್ಲ. ಆರು ಜನರು ಮಾತನಾಡುತ್ತ, ಕಡೆಯ ವರ್ಷ ಅವರ ತರಗತಿ ನಡೆಯುತ್ತಿದ್ದ ರೂಮಿನಲ್ಲಿ ಪ್ರವೇಶಿಸಿದರು. ದತ್ತ ಸದಾ ತಾನು ಕೂಡುತ್ತಿದ್ದ ಮುಂದಿನ ಬೆಂಚಿನಲ್ಲಿ ಹೋಗಿ ಕುಳಿತ, ಅವನ ಎದುರಿಗೆ ಐದು ಜನರು ನಿಂತಿದ್ದರು. ಎಲ್ಲರಿಗು ಏನೆಲ್ಲ ಸಂತಸ. ಹಳೆಯ ನೆನಪುಗಳೆಲ್ಲ ಒಮ್ಮೆಲೆ ಮುಗಿಬಿದ್ದು ಅವರನ್ನು ಕಾಡಿದವು. ಅಲ್ಲಿ ನಡೆದಿದ್ದ ಎಷ್ಟೊ ವಿಷಯಗಳನ್ನು ನೆನಪಿಸಿಕೊಂಡರು. ಸಮಯ ನೋಡಿಕೊಂಡರೆ ಆಗಲೆ ಹತ್ತು ವರೆ ದಾಟಿತ್ತು,  ಆಗ ಜಾನಕಿ,
"ಸರಿ ಇನ್ನೇನು ಈಗ ಕಾರ್ಯಕ್ರಮ ಪ್ರಾರಂಬವಾಗಬಹುದೇನೊ , ಕೆಳಗೆ ಹೋಗಬಹುದು" ಎನ್ನುತ ಎದ್ದು , ಅರುಣಳ ಮುಖವನ್ನು ಒಂದು ರೀತಿ ನೋಡಿ ನಿದಾನವಾಗಿ ಹೊರನಡೆದಳು ಅವಳ ಉಳಿದ ಗೆಳತಿಯರೆಲ್ಲ ಅವಳ ಹಿಂದೆ ಹೊರಟಂತೆ, ಅರುಣ ಮಾತ್ರ ಅಲ್ಲೆ ಉಳಿದಳು. ಅವರೆಲ್ಲ ಅಲ್ಲಿಂದ ಹೊರಹೋಗಿ  ಕಾರಿಡಾರ್ ನಲ್ಲಿ ದೂರದಲ್ಲಿ ಮಾತನಾಡುತ್ತ ನಿಂತರು, ಈಗ ರೂಮಿನಲ್ಲಿ ಇವರಿಬ್ಬರೆ. ದತ್ತ ಸ್ವಲ್ಪ ಸಂಕೋಚದಿಂದ ಕೇಳಿದ
"ಅರುಣ ಹೇಗಿದ್ದೀರಿ, ನಿಮ್ಮನ್ನು  ಕಾಣಲು ತುಂಬ ಪ್ರಯತ್ನ ಪಟ್ಟೆ ಆಗಲೆ ಇಲ್ಲ "
 ಅರುಣ ಮಾತ್ರ ನಕ್ಕಳು,
"ನಾನು ಎಲ್ಲಿ ಹೋಗಲಿ ದತ್ತ,  ತುಮಕೂರಿನಲ್ಲಿಯೆ ಇದ್ದೆ, ಹುಡುಕುವದೇನು ಬಂತು, ಅದೆಲ್ಲ ಆಯಿತಲ್ಲ ಈಗ ನೀವು ಹೇಗಿದ್ದೀರಿ, ನಿಮ್ಮ ಮನೆಯವರು ತುಂಬಾ ರೂಪವತಿ ಅಂತ ಕೇಳಿದ್ದೀನಿ, ಅಷ್ಟೆ ಬುದ್ದಿವಂತರು ಅಂತೆ, ನನ್ನ ಹಾಗೆ ದಡ್ಡಿಯಲ್ಲ" ಎಂದು ನಕ್ಕಳು. ಅಲ್ಲಿಗೆ ಅವಳಿಗೆ ಎಲ್ಲವು ಗೊತ್ತಿದೆ.
"ಅರುಣ, ನಾನು ನಿಮ್ಮನ್ನು ತುಂಬ ನೆನೆಸಿದ್ದೆ, ಮದುವೆ ಮೊದಲು ಹುಡುಕಲು ಪ್ರಯತ್ನಿಸಿದೆ, ಆದರೆ ಸಂದರ್ಭ ಬೇರೆಯೆ ಇತ್ತು, ಏನೆಲ್ಲ ನಡೆದು ಹೋಯಿತು"   ಎಂದ
"ಹಳೆಯದೆಲ್ಲ ಈಗ ಏಕೆ ನೆನೆಸಬೇಕು ಬಿಡಿ, ಎಲ್ಲವು ಚೆನ್ನಾಗಿಯೆ ಇದೆಯಲ್ಲ. ನನಗೆ ಈಗಲು ನಮ್ಮ ಕಾಲೇಜಿನ ದಿನಗಳ ನೆನಪೆ ಪ್ರಿಯ" ಎಂದಳು , ಹೀಗೆ ನಾಲ್ಕು ಐದು ನಿಮಿಶವೆನ್ನುವಾಗ ಹೊರಗಿನಿಂದ ಜಾನಕಿ ಕೂಗಿದಳು, ಅರುಣ ಬರುತ್ತೀಯ ಹೋಗೋಣ ಎನ್ನುತ್ತ ಅವರೆಲ್ಲ ನಿದಾನವಾಗಿ ನಡೆಯುತ್ತಿದ್ದರು. ಅರುಣ ಒಮ್ಮೆ ಹೊರಗೆ ನೋಡಿದಳು ಎಲ್ಲರು ಇವರಿಗೆ ಬೆನ್ನು ಮಾಡಿದ್ದರು, ದತ್ತ ಬೆಂಚಿನಲ್ಲಿ ಕುಳಿತು ಅವಳನ್ನೆ ನೋಡುತ್ತಿದ್ದ, ಅವನ ಕಣ್ಣನಲ್ಲಿ ದೃಷ್ಟಿ ಇಟ್ಟು ನೋಡಿದ  ಅವಳು,
"ಸರಿ ಇನ್ನು ಹೊರಡೋಣ, ಕೆಳಗೆ ಕಾರ್ಯಕ್ರಮ ಪ್ರಾರಂಬವಾಗಬಹುದು  ಬನ್ನಿ"
ಎನ್ನುತ್ತ  ಎದ್ದು ನಿಂತಳು
"ಮತ್ತೆ ಯಾವಗ ನಮ್ಮ ಬೇಟಿ " ಎಂದ ದತ್ತ ತುಸು ಅಸಹಾಯಕ ದ್ವನಿಯಲ್ಲಿ.
 ಎಂತದೊ ನಗು ಅವಳ ತುಟಿಗಳಲ್ಲಿ.
"ನಮ್ಮ ಬೇಟುಯ, ಹೀಗೆ ಯಾವುದೊ ಅನಿರೀಕ್ಷಿತ ಸಂದರ್ಭದಲ್ಲಿ ಆಗಬಹುದು, ಎಂದು ಆಗದೆಯು ಇರಬಹುದು"  ಎಂದವಳು, ಹೊರಡುವ ಮುಂಚೆ  ನಿದಾನವಾಗಿ ಬಗ್ಗಿ  ಅವನ ಹಣೆಯ ಮೇಲಿನ ಮುಂಗುರಳನ್ನು  ಎಡಕೈಲಿ ಹಿಂದೆ ತಳ್ಳುತ್ತ, ನಿದಾನವಾಗಿ ತನ್ನ ತುಟಿಯನ್ನು ಅವನ ಹಣೆಯ ಮೇಲೆ ಒತ್ತಿದಳು  ಅವಳ ಕಣ್ಣುಗಳೇಕೊ ತುಂಬುತ್ತಿದ್ದವು,
"ಇದು ನಮ್ಮಿಬ್ಬರ ಬೇಟಿಯ ನೆನಪಿಗಾಗಿ " ಎಂದು ಸಣ್ಣ ದ್ವನಿಯಲ್ಲಿ ನುಡಿದು, ತಲೆ ತಗ್ಗಿಸಿ ಹೆಜ್ಜೆ ಹಾಕುತ್ತ ಗೆಳತಿಯರನ್ನು ಸೇರಲು ಹೊರಟಳು.
ದತ್ತನಿಗೆ ಒಂದು ಕ್ಷಣ ಎಲ್ಲವು ಅಯೋಮಯವಾಯಿತು, ಪ್ರಥಮ ಬಾರಿಗೆ ಅವನು ಅರುಣಳಲ್ಲಿ ಉದ್ವೇಗದ ನಡತೆಯನ್ನು ಕಂಡಿದ್ದ. ಇದು ಅವಳು ಕೊಟ್ಟ ಪ್ರಥಮ ಚುಂಬನ, ಅದು ಇಷ್ಟು ವರ್ಷಗಳ ನಂತರ ಇಂತಹ ಪರಿಸ್ಥಿಥಿಯಲ್ಲಿ.
ಎಲ್ಲರು ಎದ್ದು ಹೊರಟ ಮೇಲೆ ಅವನು ನಿದಾನವಾಗಿ ಎದ್ದು ನಡೆಯುತ್ತ ಹೊರಟ, ಅವನ ಮನವೇಕೊ ಗಾಳಿಯಲ್ಲಿ ಹಾರಾಡುತ್ತಿತ್ತು, ಮೈಮನೆವೆಲ್ಲ ಹಗುರವಾದಂತೆ.
ಮುಂದೆ  ನಡೆದ ಕಾರ್ಯಕ್ರಮವೆಲ್ಲ ಅವನಿಗೆ ಎಲ್ಲೊ ಕನಸಿನಲ್ಲಿ ನಡೆಯುತ್ತಿದ್ದಂತೆ ಅನ್ನಿಸಿತು, ಪ್ರಿನ್ಸಿಪಾಲರು ಅವನನ್ನು ಸ್ಟೇಜಿಗೆ ಕರೆದು ಹೊಗಳಿ ತಮ್ಮ ಕಾಲೇಜಿಗೆ ಗೌರವವೆನ್ನುತ್ತ, ಹೂಗುಚ್ಚವನ್ನು ಕೊಡಿಸಿದರು.
     ಎಲ್ಲ ಕಾರ್ಯಕ್ರಮ ಮುಗಿಸಿ, ಎಲ್ಲರಿಗು ಹೇಳಿ, ಬೆಂಗಳೂರಿನತ್ತ ಹೊರಟಾಗ, ಮದ್ಯಾನ  ೩ ಗಂಟೆಯ ಹತ್ತಿರ. ಕಾರನ್ನು ಡ್ರೈವ್ ಮಾಡುತ್ತಿದ್ದರು , ದತ್ತನ ಮನ ಎಂತದೋ ಸಂಭ್ರಮದಲ್ಲಿ ತುಂಬಿತ್ತು. ತಾನು ಅರುಣಳನ್ನು ಬಿಟ್ಟು ಬೇರೆಯೆ ಆದ ಮದುವೆಯಾದರು , ಅವಳು ಹಾಗು ಅವಳ ಸ್ನೇಹಿತೆಯರು ತನ್ನ ಬಗ್ಗೆ ನಡೆದುಕೊಂಡ ಸನ್ನಡತೆ ಅವನ ಮನಸನ್ನು ಹಗುರಗೊಳಿಸಿತ್ತು. ಇಷ್ಟು ವರ್ಷಗಳ ನಂತರವು, ಮದುವೆಯ ನಂತರವು ಅರುಣ ಅವಳ ಮನಸಿನಲ್ಲಿ ತನ್ನ ಬಗ್ಗೆ ಕೊಟ್ಟಿರುವ ಸ್ಥಾನ ಇಟ್ಟಿರುವ ಪ್ರೀತಿ ಅವನಿಗೆ ಆಶ್ಚರ್ಯವೆನಿಸಿತು. ಅವಳು ಎಲ್ಲಿದ್ದಾಳೊ, ಅವಳ ಗಂಡ ಮಕ್ಕಳು ಎಲ್ಲಿದ್ದಾರೆ ತಿಳಿಸಲೆ ಇಲ್ಲ , ಅದು ಅವಳಿಗೆ ಇಷ್ಟವಿಲ್ಲ ಅನ್ನಿಸುತ್ತೆ. ಆದರೆ ಗೆಳತಿಯರ ಬೆನ್ನಿಗೆ ನನ್ನ ಹಣೆಗೆ ಮುತ್ತಿಡುವಷ್ಟು ಪ್ರೀತಿಯನ್ನು ಅವಳು ಇನ್ನು ತನ್ನ ಹೃದಯದಲ್ಲಿ ಕಾಪಾಡಿಕೊಂಡಿದ್ದಾಳೆ, ಚಿಪ್ಪಿನೊಳಗೆ ಮುಚ್ಚಿಟ್ಟಿರುವ ಮುತ್ತಿನಂತೆ.  ನಿದಾನಕ್ಕೆ ತನ್ನ ಬಲಕೈ ಅನ್ನು ಹಣೆಯ ಮೇಲೆ ಆಡಿಸಿಕೊಂಡ . ಹಣೆಯ ಮೇಲೆ ಅವಳು ತುಟಿಯೊತ್ತಿದ ತಂಪು ಇನ್ನು ಉಳಿದಿದೆಯೋನೊ ಅನ್ನಿಸಿ ಎಂತದೊ ಸುಖವೆನಿಸಿತು. ಮುಖದ ಹತ್ತಿರ ಅವಳ ಮುಖ ತಂದಾಗ ತನ್ನ ಸುತ್ತ ಅಡರಿದ ಆ ಸುವಾಸನೆ ಇನ್ನು ತನ್ನ ಸುತ್ತ ಉಳಿದಿದೆ ಎನ್ನುವ ಭಾವ ಅವನನ್ನು ಆವರಿಸಿತು. ಕಾರಿನಲ್ಲೆಲ್ಲ ಎಂತದೋ ಶ್ರೀಗಂಧದ ಧೂಪ  ಹರಡಿದಂತ ಸುವಾಸನೆ ತುಂಬಿತ್ತು. ಕಾರು ನಿದಾನವಾಗಿ ಬೆಂಗಳೂರಿನತ್ತ ಓಡುತ್ತಿತ್ತು.

  ಕಥೆಯ ಕೊನೆ :

    ಓದುಗರೆ ಪ್ರೇಮ ಕಥೆಗೆ ಒಂದು ಮುಕ್ತಾಯವೇನೊ ಕೊಟ್ಟಾಯಿತು. ಎಲ್ಲವು ಸುಖಾಂತವೆ. ಪ್ರೀತಿ ಪ್ರೇಮವೆಂದರೆ ಇದೆ ಸುಖ ಸಂತೋಷ ಅಲ್ಲವೆ. ಹಾಗೇನು ಭಾವಿಸಬೇಡಿ. ಈ ಕಥೆಯ ಕೊನೆಯಲ್ಲಿ ದತ್ತನಿಗು ಗೊತ್ತಾಗದಿದ್ದ ಸತ್ಯವೊಂದು ಇದೆ.  ದತ್ತನಿಗೆ ಎಂದು ಅರ್ತವಾಗದ ಹೆಣ್ಣು ಹೃದಯದ ಮನದ ನೋವೊಂದು ಇದೆ. ದತ್ತನನ್ನ ಕಳಿಸಿದ್ದ ಅರುಣ ಎಂದು ಅವನನ್ನು ಮರೆತೆ ಇರಲಿಲ್ಲ. ತನ್ನ ಗುರಿಯನ್ನು ತಲುಪಿ, I.P.S. ಅಧಿಕಾರಿಯಾಗಿ ಪುನಃ ತನ್ನನ್ನು ಹುಡುಕಿ ಬರುವನೆಂದೆ ತನ್ನನ್ನು ಎಂದಿಗೂ ತೊರೆಯನೆಂದು ನಿಷ್ಕಲ್ಮಶವಾಗಿ ನಂಬಿದ್ದಳು ಅರುಣ. ಆದರೆ ಅವಳ ಮುಗ್ದ ಮನಸ್ಸು ಅಘಾತಕ್ಕೆ ಒಳಗಾಗಿತ್ತು, ಪತ್ರಿಕೆಗಳಿಂದ ದತ್ತನ ಮದುವೆಯ ವಿವರಗಳನ್ನು ತಿಳಿದು. ಆದರೇನು ಅವಳ ಮನಸಿನಲ್ಲಿದ್ದ ಅವನ ಮೇಲಿನ ಪ್ರೀತಿ ಎಂದು ಕಡಿಮೆಯಾಗಲೆ ಇಲ್ಲ. ಅವಳ ಮನ ವೈರಾಗ್ಯ ಭಾವ ತಾಳಿತು. ಕೃಷ್ಣನನ್ನು ನಂಬಿದ ರಾದೆಯಂತೆಯೆ ಅವಳು ಸದಾ ಕಾಲ ಕಳೆಯುತ್ತಿದ್ದಳು. ಅವಳ ತಂದೆ ತಾಯಿಗಳು ಎಂದೊ ಮರಣ ಹೊಂದಿದ್ದರು. ಈಗ ಅವಳಿಗೆ ತನ್ನವರು ಅಂತ ಯಾರು ಇರಲಿಲ್ಲ, ಅನಾಥೆಯಂತೆ ಬದುಕಿದ್ದಳು, ಅವಳ ಗೆಳತಿಯರು ಅವಳನ್ನು ಮದುವೆಗೆ ಒಪ್ಪಿಸಲು ತುಂಬಾ ಪ್ರಯತ್ನ ಪಟ್ಟರು. ಆದರೆ ಮನಸನ್ನು ಒಮ್ಮೆ ದತ್ತನಿಗೆ ಒಪ್ಪಿಸಿ ಈಗ ತಾನು ಬೇರೆಯವರನ್ನು ಮದುವೆಯಾಗುವುದು ಅಸಾದ್ಯವೆಂದು ನಿರ್ದರಿಸಿದ ಅವಳು ಅವಿವಾಹಿತಳಾಗಿಯೆ ಉಳಿದಿದ್ದಳು,ತಾನು ಅವಿವಾಹಿತೆಯಾಗಿ ಉಳಿಯಲು ಕಾರಣವನ್ನು ಬೇರೆಯವರಿಗೆ ಕೊಡಲು ಅಶಕ್ತಳು ಅವಳು.   ಕಾಲೇಜಿನ ಕಾರ್ಯಕ್ರಮದಲ್ಲಿ ದತ್ತ ಬಂದಿದ್ದಾಗ ಈ ವಿಷಯಗಳನ್ನು ಏನೆ ಆದರು ಅವನಿಗೆ ಹೇಳಬಾರದೆಂದು ಗೆಳತಿಯರನ್ನೆಲ್ಲ ಒಪ್ಪಿಸಿದ್ದಳು. ಈಗ ನಿಮಗೇನು ಅನ್ನಿಸುತ್ತಿದೆ. ಪ್ರೀತಿ ಅನ್ನುವುದು ಮದುರ ಭಾವವೆ.

No comments:

Post a Comment

enter your comments please