Monday, January 9, 2012

ನಾಗರಾಜನ ದ್ವೇಷ


ನಾಗರಾಜನ ದ್ವೇಷ
ಒಂದು ಸಣ್ಣ ಕಾರಣ,ಅರ್ಥವಿಲ್ಲದ ದ್ವೇಷ ಒಂದು ಕೊಲೆಗೆ ಕಾರಣವಾಗಬಹುದೆಮತ್ತು ಯಾರ ಕಣ್ಣಿಗೂ ಬೀಳದೆ ಹಾಗೆ ಮುಚ್ಚಿ ಹೋಗ ಬಲ್ಲದೆ?
1990ರ ನವಂಬರ್ ನ ಒಂದು ದಿನ...

ಅವನ ಹೆಸರು ನಾಗರಾಜ ಬೆಂಗಳೂರಿನ ಜಯನಗರದ ಎಂಟನೆ ಬ್ಲಾಕಿನಲ್ಲಿ ಪತ್ನಿಯೊಂದಿಗೆ ಒಂದು ಚಿಕ್ಕ ಮನೆಯಲ್ಲಿ ಈಚೆಗೆ ಬಂದು ನೆಲೆಸಿದ್ದವಿಧಾನಸೌಧದ ಹತ್ತಿರದ ಬಹುಮಹಡಿ ಕಟ್ಟಡದಲ್ಲಿ ಸರ್ಕಾರಿ ಉದ್ಯೋಗದಿನಾ ಬೆಳಗ್ಗೆ ಗಂಟೆಗೆ ಹೊರಡುವ 12 ನೇ ನಂಬರಿನ ಬಸ್ಸಿನಲ್ಲಿ ಹೊರಟು ಸಂಜೆ ಹಿಂದಿರುಗುತ್ತಿದ್ದಮನೆಯ ಹಿಂಭಾಗದಲ್ಲಿಯೆ ಬಸ್ಸು ನಿಲ್ಲುತ್ತಿದ್ದರುಸೀಟು ಸಿಗುತ್ತದೆ ಎಂಬ ಕಾರಣಕ್ಕೆ ಬನಶಂಕರಿಗೆ ಹೋಗಿ ಬಸ್ಸು ಹತ್ತುತ್ತಿದ್ದಆ ದಿನ ಹಿಂದಿನ ಬಾಗಿಲಿನ ಹತ್ತಿರವೆ ಇರುವ ಸೀಟ್ ಸಿಕ್ಕಿತುಹೊರಡುವಾಗಲೆ ಬಸ್ಸಿನಲ್ಲಿ ಬಾಗಿಲ ಹತ್ತಿರ ನೇತಾಡುತ್ತಿರುವ ಜನಮೊದಲ ಸ್ಟಾಪ್ ಅಂದರೆ ಅದೆ ತನ್ನ ಮನೆಯ ಹಿಂಬಾಗಕ್ಕೆ ಇರುವ ಸಂಗಮ್ ಸರ್ಕಲ್ ಸ್ಟಾಪ್ಮತ್ತಷ್ಟು ಜನ ಒಳನುಗ್ಗಿದರುಬಾಗಿಲಲ್ಲಿ ಯಥಾಪ್ರಕಾರ ನೇತಾಡುತ್ತಿರುವ ಜನಕ್ಕೆ ಮತ್ತಷ್ಟು ಕೈಗಳು ಸೇರಿದವುಆಗ ಅವನು ಶಿವಶಂಕರನನ್ನು ಗಮನಿಸಿದ.
   ಮೂರು ದಿನದಿಂದ ಇದೆ ಬಸ್ಸು ಹತ್ತುತ್ತಿದ್ದಾನೆ ಅಂದರೆ ಅವನು ಇಲ್ಲಿಯೆ ಹತ್ತಿರದಲ್ಲಿ ಎಲ್ಲಿಯೊ ನೆಲೆಸಿದ್ದಾನೆಶಿವಶಂಕರ ಹಾಗು ನಾಗರಾಜ ಒಂದೆ ಊರಿನವರು ಬಾಲ್ಯ ಗೆಳೆಯರುಮತ್ತು ಕಾಲೇಜಿನಲ್ಲಿ ಓದುವಾಗ ಒಂದೇ ರೂಮಿನಲ್ಲಿ ವಾಸವಾಗಿದ್ದವರುಆದರೆ ನಡೆದ ಒಂದು ಚಿಕ್ಕ ಘಟನೆಯಿಂದ ಇಬ್ಬರು ಬಾಲ್ಯ ಸ್ನೇಹಿತರು ಶತ್ರುಗಳಾದರುನಾಗರಾಜನ ಆಣ್ಣ ನಾಗೇಂದ್ರನು ಶಿವಶಂಕರನ ಅಣ್ಣ ಗಿರೀಶನ ಬಳಿ ಏತಕ್ಕೋ ಸಾಲ ಪಡೆದಹಾಗು ಅದನ್ನು ಹಿಂದಿರುಗಿಸುವಾಗ ಅರ್ದ ಮಾತ್ರ ನೀಡಿ ಉಳಿದುದ್ದನ್ನು ಯಾವುದೋ ಲೆಕ್ಕ ತೋರಿಸಿ ಅದಕ್ಕೆ ಸರಿಯಾಯಿತು ಎನಿಸಿಬಿಟ್ಟತನಗೆ ಇನ್ನು ಐವತ್ತು ಸಾವಿರ ಬರಬೇಕೆಂದು ಗಿರೀಶನ ವಾದಅದು ಅವರಿಬ್ಬರ ದ್ವೇಷಕ್ಕೆ ಕಾರಣವಾಯಿತುಅವರಿಬ್ಬರ ನಡುವಿನ ಮಾತುಗಳು ನಿಂತು ಹೋದವುಆದರೆ ಆ ದ್ವೇಷ ನಾಗರಾಜ ಹಾಗು ಶಿವಶಂಕರರ ಸ್ನೇಹಕ್ಕೆ ಯಾವ ಅಡಚಣೆಯು ಆಗಲಿಲ್ಲ ಹಾಗೆ ಮುಂದುವರೆದಿತ್ತು.
   ಇವರಿಬ್ಬರ ಓದು ಮುಗಿದು ಕೆಲಸಕ್ಕೂ ಸೇರಿದರುಒಂದು ಸಂದರ್ಪದಲ್ಲಿ ಶಿವಶಂಕರನು ನಾಗರಾಜನ ಹತ್ತಿರ ಒಂದು ಲಕ್ಷದಷ್ಟು ಸಾಲ ಪಡೆದಗೆಳೆಯನಿಗೆ ಇಲ್ಲ ಎಂದು ಹೇಗೆ ಹೇಳುವುದುಹೇಗೊ ಹೊಂದಿಸಿಕೊಟ್ಟ ನಾಗರಾಜಆದರೆ ಮೋಸವಾಗಿತ್ತುಹಿಂದಿರುಗಿ ಕೊಡುವಾಗ ಶಿವಶಂಕರನು ಅರ್ದಮಾತ್ರ ಕೊಟ್ಟು ಉಳಿದುದ್ದಕ್ಕೆ ತಾರಮಯ್ಯ ಆಡಿಸಿಬಿಟ್ಟ.ನಾಗರಾಜನು ಇದೆಂತಹ ಲೆಕ್ಕ ಅಂತ ಕೇಳಿದರೆ ಅವನು ನಿಮ್ಮ ಅಣ್ಣನು ಮಾಡಿದ ತರವೆ ಲೆಕ್ಕ ಅಂತ ಕೊಂಕು ನಗೆ ನಕ್ಕಇವನೆಷ್ಟೊ ವಾದಿಸಿದ ನಮ್ಮ ಅಣ್ಣಂದಿರ ವ್ಯವಹಾರವನ್ನು ನಮ್ಮ ನಡುವಿನ ಸ್ನೇಹಕ್ಕೆ ಮದ್ಯ ತರಬೇಡವೆಂದುಆದರೆ ಅದು ಮೊದಲೆ ನಿರ್ದರಿಸಿ ಮಾಡಿದ ಮೋಸವಾಗಿತ್ತುಪ್ರಾಣ ಸ್ನೇಹಿತನ ಈ ಮೋಸ ನಾಗರಾಜನನ್ನು ಕೆರಳಿಸಿತ್ತುಅವನು ಎಚ್ಚರಿಸಿದ ಇಷ್ಟು ಸುಲುಬವಲ್ಲ ನನ್ನನ್ನು ಮೋಸ ಮಾಡಿ ಉಳಿಯೋದು ನೀನು ನನ್ನ ಸ್ವಾಬಿಮಾನಕ್ಕೆ ಬರೆ ಹಾಕಿದ್ದೀಯ ಇದರ ಪರಿಣಾಮ ಎದುರಿಸೋದು ನಿನಗೆ ಕಷ್ಟ ಅಂತ.ಅಲಕ್ಷ್ಯದ ನಗೆ ನಕ್ಕ ಶಿವಶಂಕರ ನಂತರ ಅವರಿಬ್ಬರ ನಡುವಿನ ಎಲ್ಲ ವ್ಯವಹಾರ ಮಾತುಕತೆಗಳು ನಿಂತು ಹೋದವುನಾಗರಾಜನಿಗೆ ಬೆಂಗಳೂರಿಗೆ ವರ್ಗವಾಯಿತು.ಮದುವೆಯಾಯಿತುಇಷ್ಟು ವರ್ಷಗಳ ನಂತರ ಹೀಗೆ ಕಾಣಿಸುತ್ತಿದ್ದಾನೆ ತನ್ನ ಶತ್ರು ಅಂದುಕೊಂಡ ನಾಗರಾಜ.
   ಬಸ್ಸು ಆಗಲೆ ಲಾಲ್ ಬಾಗಿನ ಗೇಟನ್ನು ದಾಟಿ ಜೆ.ಸಿರಸ್ತೆಗೆ ತಲುಪಿ ಮುಂದುವರೆದಿತ್ತುಶಿವಶಂಕರನತ್ತ ನೋಡಿದ ನಾಗರಾಜ ಕಿಟಕಿಯಿಂದ ತನ್ನನ್ನೆ ನೋಡುತ್ತಿದ್ದ ಅವನು ಕಣ್ಣು ತಪ್ಪಿಸಿ ಬೇರೆ ಕಡೆ ದೃಷ್ಟಿ ಹಾಯಿಸಿದಅಲ್ಲಿಗೆ ಅವನು ತನ್ನನ್ನು ಗಮನಿಸಿದ್ದಾನೆ ಅಂದುಕೊಂಡಸೂಕ್ಷ್ಮವಾಗಿ ಗಮನಿಸಿದ ನಾಗರಾಜ, ಶಿವಶಂಕರನು ತನ್ನ ಎಡಕೈಯಿಂದ ಬಾಗಿಲಿನ ಹತ್ತಿರ ಬರುವ ಒಳಗಿನ ಕಂಬಿಯನ್ನು ಹಿಡಿದುಒಂದು ಕಾಲನ್ನು ಮಾತ್ರ ಫುಟ್ ಬೋರ್ಡ್ ಮೇಲಿಟ್ಟು ದೇಹವೆಲ್ಲ ಬಸ್ಸಿನಿಂದ ಹೊರಗೆ ಇರುವಂತೆ ನೇತಾಡುತ್ತಿದ್ದಾನೆಬೆಳಗಿನ ಹುಚ್ಚು ಟ್ರಾಫಿಕ್ ,ಎಲ್ಲ ಡ್ರೈವರ್ ಗಳಿಗು ಬಸ್ಸನ್ನು ಬೇಗ ಕೊಂಡೊಯ್ಯುವ ಧಾವಂತತನ್ನ ಬಸ್ಸು ಮುಂದೆ ಹೋಗುತ್ತಿರುವ ಬಸ್ಸನ್ನು ಒವರ್ ಟೇಕ್ ಮಾಡಲು ಪ್ರಯತ್ನ ಪಡುತ್ತಿದೆ.ಬುದ್ದಿವಂತನಾದ ನಾಗರಾಜ ತಕ್ಷಣ ಸಿದ್ದನಾಗಿ ಬಿಟ್ಟತನ್ನ ತೊಡೆಯಮೇಲಿದ್ದ ಲೆದರ್ ಬ್ಯಾಗಿನಲ್ಲಿ ಕೈಆಡಿಸಿ ಸಣ್ಣ ಗುಂಡುಪಿನ್ನನ್ನು ಅರಿಸಿ ಕೈಯಲ್ಲಿ ಹಿಡಿದಶಿವಶಂಕರನ ಕಂಬಿಹಿಡಿದಿರುವ ಕೈಸರಿಯಾಗಿ ತನ್ನ ತೊಡೆಯಮೇಲಿರುವ ಬ್ಯಾಗಿನ ಮೇಲೆ ಇದೆ.
   ಈಗ ಪೂರ್ಣವೇಗ ಪಡೆದ ಬಸ್ಸು ಮುಂದಿನ ಬಸ್ಸನ್ನು ಹಿಂದೆ ಹಾಕುತ್ತಿದೆಎರಡು ಬಸ್ಸುಗಳು ಸಮಾನಂತರವಾಗಿ ಚಲಿಸುತ್ತಿವೆ ದ್ವೇಷವೆಂಬ ಅಗ್ನಿ ಮನಸ್ಸನ್ನು ತೀವ್ರವಾಗಿಆವರಿಸಿತು.ನಾಗರಾಜ ವೇಗವಾಗಿ ಯೋಚಿಸಿ ನಿರ್ದರಿಸಿದಹೊರಗೆ ನೇತಾಡುತಿದ್ದ ಶಿವಶಂಕರ ನಾಗರಾಜನನ್ನು ದಿಟ್ಟಿಸಿದನಾಗರಾಜನ ತುಟಿಯಲ್ಲಿ ವ್ಯಂಗ್ಯದ ನಗುವೊಂದು ಹಾದುಹೋಯಿತುಇವನ ಕಣ್ಣುಗಳನ್ನು ದಿಟ್ಟಿಸಿದ ಶಿವಶಂಕರ ಗಾಭರಿಯಾದಏನೋ ನಡೆಯುತ್ತಿದೆ ಆದರೆ ಏನೆಂದು ಅವನ ತಲೆಗೆ ಬರಲಿಲ್ಲ. ಶಿವಶಂಕರನ ಕಣ್ಣಿನಲ್ಲಿಯ ಭಯನಾಗರಾಜನಿಗೆ ಸ್ವಷ್ಟವಾಗಿ ಗೋಚರಿಸಿತು. ಶಿವಶಂಕರನಿಗೆ ಹೊರಗಿನಿಂದ ನಾಗರಾಜನ ಮುಖ ಕಾಣಿಸುತ್ತಿದೆಯೆ ಹೊರತು ಕೈಗಳು ಕಾಣಿಸುತ್ತಿಲ್ಲಬಸ್ಸಿನಲ್ಲಿಯು ನಾಗರಾಜನನ್ನು ಯಾರು ಗಮನಿಸುತ್ತಿಲ್ಲಎರಡು ಬಸ್ಸುಗಳು ಕೇವಲ ನಾಲ್ಕು ಅಡಿ ಅಂತರದಲ್ಲಿ ಚಲಿಸುತ್ತಿವೆ ತನ್ನ ಬಸ್ಸು ಪಕ್ಕದ ಬಸ್ಸನ್ನು ಹಿಂದೆ ಹಾಕುತ್ತಿರುವಂತೆಯೆ ನಾಗರಾಜ ತನ್ನ ಬಲವನ್ನೆಲ್ಲ ಉಪಯೋಗಿಸಿ ಶಿವಶಂಕರನ ಕೈಬೆರಳ ಉಗುರಿನ ಮೇಲೆ ಗುಂಡುಪಿನ್ನಿನಿಂದ ಚುಚ್ಚಿದನೋವಿನಿಂದ ತಕ್ಷಣ ಕೈಯಿತ್ತಿದ ಶಿವಶಂಕರ ಏನಾಯಿತೆಂದು ಅರ್ಥಮಾಡಿಕೊಂಡು ಬಲಕೈಯಿಂದ ಕಿಟಕಿಹಿಡಿಯುವ ಮುನ್ನವೆ ಆಸರೆ ತಪ್ಪಿ ಕಿರುಚಿಕೊಳ್ಳುತ್ತ ರಸ್ತೆಗೆ ಬಿದ್ದಹಿಂದಿನಿಂದ ಬರುತ್ತಿದ ಬಸ್ಸಿನ ಡ್ರೈವರ್ ಗಮನಿಸುವ ಮುಂಚೆಯೆ ಆ ಬಸ್ಸಿನ ಮುಂದಿನ ಚಕ್ರವು ನೆಲಕ್ಕೆ ಬಿದ್ದ ಇವನ ಎದೆಯ ಮೇಲೆ ಹರಿದಿತ್ತುಡ್ರೈವರ್ ಆತುರದಲ್ಲಿ ಬ್ರೇಕ ಅದುಮಿದ ಅಷ್ಟರಲ್ಲಿ ಹಿಂದಿನ ಚಕ್ರವು ಹರಿದುಬಂದು ನಿದಾನವಾಗಿ ಅವನ ಮೇಲೆ ಹತ್ತಿ ನಿಂತಿತ್ತುಸ್ಥಳದಲ್ಲೆ ಅವನ ಪ್ರಾಣಹೊರಟು ಹೋಗಿತ್ತುಕಿಟಕಿಯಿಂದಲೆ ನಾಗರಾಜ ಇದನ್ನು ಗಮನಿಸಿದ.
ಜನರ ಗಲಾಟೆ ಕೇಳಿ ಡ್ರೈವರ್ ಬಸ್ಸು ನಿಲ್ಲಿಸುವ ಹೊತ್ತಿಗಾಗಲೆ ನಾಗರಾಜನಿರುವ ಬಸ್ಸು ಮುವತ್ತು ನಲವತ್ತು ಅಡಿಯಷ್ಟು ಮುಂದೆ ಬಂದಾಗಿತ್ತುಎಲ್ಲರು ಇಳಿದು ಹಿಂದಕ್ಕೆ ಓಡಿದರು.ಕಂಡೆಕ್ಟರ ಡ್ರೈವರ್ ಸಹ ಹಿಂದೆ ಓಡಿದರುನಾಗರಾಜ ಯಾವ ಅತಂಕವು ಇಲ್ಲದೆ ನಿದಾನವಾಗಿ ಕೆಳಗೆ ಇಳಿದಹಿಂದೆ ಒಮ್ಮೆ ತಿರುಗಿನೋಡಿ ಮುಂದೆ ನಡೆಯಲು ಪ್ರಾರಂಬಿಸಿದ.ಕೈಯಲ್ಲಿದ್ದ ಗುಂಡುಪಿನ್ನನ್ನ ಪಕ್ಕಕ್ಕೆ ಎಸೆದಜೋಭಿನಲ್ಲಿ ಕೈಆಡಿಸಿ ಬಸ್ಸಿನ ಟಿಕೇಟ್ ತೆಗೆದು ಅದನ್ನು ಒಮ್ಮೆ ದೃಷ್ಟಿಸಿ ಎಡಕೈಯಿಂದ ಅದನ್ನು ಮುದುರಿ ಪಕ್ಕಕ್ಕೆ ಎಸೆದನಿದಾನವಾಗಿ ಟೌನ್ ಹಾಲಿನತ್ತ ನಡೆದು ಹೊರಟಇನ್ನೊಂದು ಬಸ್ಸನು ಹಿಡಿದು ಆಫೀಸನ್ನು ತಲುಪಲು.

No comments:

Post a Comment

enter your comments please