Wednesday, January 25, 2012

ನೀವೇನ್ ಹೇಳ್ತಿರಾ?? ತೃಪ್ತಿಯ ಅಳತೆ


ತೃಪ್ತಿಯ ಅಳತೆ
ಬಸ್ಸಿನಲ್ಲಿ ಕುಳಿತಿದ್ದೆ. ಪಕ್ಕದ ಸೀಟಿನಲ್ಲಿ ತಾಯಿ ಹಾಗು ಚಿಕ್ಕಮಗು ಕುಳಿತ್ತಿದ್ದರು. ಹೊರಗೆ ಇಳಿದು ಹೋಗಿದ್ದ ಆ ಮಗುವಿನ ತಂದೆ, ಬಸ್ಸಿನೊಳಗೆ ಬಂದು ಮಗುವಿಗೆ ತಂದಿದ್ದ ಬಿಸ್ಕತ್ತಿನ ಪೊಟ್ಟಣವನ್ನು ಅದರ ಕೈಗೆ ಕೊಟ್ಟ
"ಅಪ್ಪ ಬಿಸ್ಕತ್ತಿನ ಪಟ್ಣ ನನಗೇನಾ??" ಮಗುವಿನ ಪ್ರಶ್ನೆ.
"ಹೌದು, ಕೂತ್ಕೋ" ಎಂದ ಅಪ್ಪ.
"ಪೂರ್ತಿ ಪಟ್ಟಣ ನನಗೊಬ್ಬನಿಗೇನ??" ಪುನಃ ಮಗು
"ಹೌದಪ್ಪ ಪೂರ್ತಿ ನಿನಗೇನೆ" ಎಂದ ತಂದೆ ನಗುತ್ತ.
ಈಗ ಮಗುವಿನ ಮುಖ ತೃಪ್ತಿ ಸಂತೋಷದಿಂದ ಅರಳಿತು. ಮುಖದಲ್ಲಿ ನೆಮ್ಮದಿ.
ಈಗ ನನಗೊಂದೆ ಪ್ರಶ್ನೆ , ಆ ಮಗು ಅನುಭವಿಸಿದಷ್ಟೆ ಸಂತೋಷ ತೃಪ್ತಿ ದೊಡ್ಡವರಾದ ನಮಗೆ ಬೇಕು ಅನ್ನಿಸಿದಲ್ಲಿ ಅದನ್ನು ಹಣದ ಮೂಲಕ ಅಳೆಯಬೇಕಾದಲ್ಲಿ ಗೆಳೆಯರೆ ಬಹುಷಃ ಎಷ್ಟು ಖರ್ಚಾಗ ಬಹುದು?? ಎಷ್ಟು ಹಣ ಬೇಕಾಗಬಹುದು??...

2 comments:

  1. ಒಂದು ಬಂಗ್ಲೋ, ಇಂಡಿಯನ್ ರಸ್ತೆಗಳಲ್ಲಿ ಬಿಡಲಾಗದಿರುವುದರಿಂದ ಫೆರ್ರಾರಿ, ಲ್ಯಾಂಬೊರ್ಗಿನಿ, ಬುಗಾಟಿ ವೇರಾನ್ ಬೇಡ, ಸಿಂಪಲ್ಲಾಗಿ ಬಿಎಂಡಬ್ಲು, ಕೋಪಿಸ್ಕೊಂಡ್ರೆ ಅದೂ ಬೇಡ. ಶೆವ್ರೊಲೆ ಕ್ರೂಜ಼್ ಸಾಕು. ಅದನ್ನು ಸಾಕಲು ಒಂದಿಷ್ಟು ಡೆಪಾಸಿಟ್, ಬಂಗ್ಲೋ ನೋಡಿಕೊಳ್ಳಲು ಒಂದಿಷ್ಟು ಡೆಪಾಸಿಟ್ ಮತ್ತೆ ಉಳಿದದ್ದನ್ನೆಲ್ಲಾ ನಾನೇ ಕೊಂಡುಕೊಳ್ಳಬಲ್ಲೆ. ಇಷ್ಟು ಸಿಕ್ರೆ ’ಇಷ್ಟು ಪೂರ್ತಿ ನಂಗೇನಾ?’ ಎಂದು ಬಾಯರಳಿಸಿ ನಿಲ್ಲದಿದ್ರೆ ಹೇಳಿ.. :)
    ಒಟ್ಟಾರೆ ಒಂದು ಐವತ್ತು ಕೋಟಿ ಸಾಕು, ಮೈಂಟೆನನ್ಸ್ ಖರ್ಚು ಹೆಚ್ಚು ನೋಡಿ!! :)

    ReplyDelete
  2. ಎಂದು ಬಾಯರಳಿಸಿ ನಿಲ್ಲದಿದ್ರೆ ಹೇಳಿ.. :)
    ಅದು ಸರಿಯೆ ಆಮೇಲೆ ಬಾಯರಿಳಿಸಿ ನಿಂತ ಸಂತೋಷರ ಬಾಯಿ ಮುಚ್ಚಲು ಮತ್ತೆ ಐವತ್ತು ಕೋಟಿ ಬೇಕೇನೊ ಅಂತ ಅನುಮಾನ!

    ReplyDelete

enter your comments please