Thursday, June 27, 2013

ಪೀಳಿಗೆಯ ಅಂತರ (ಜನರೇಶನ್ ಗ್ಯಾಪ್)

ಪೀಳಿಗೆಯ ಅಂತರ (ಜನರೇಶನ್ ಗ್ಯಾಪ್)
 

ಹುಟ್ಟಿ ಬೆಳೆವಾಗ ಇರುವ ಅಪ್ಪ ಅಮ್ಮನ ಪ್ರೀತಿಯ ಹಿತ
ಹುಟ್ಟಿ ಬೆಳೆದಾಗ ಬಂದನವೆನಿಸುವುದು ಏಕೆ ?

ಜೊತೆಯಾಗಿ ಆಡಿ ತಿಂದು ಒಂದೆ ಹಾಸಿಗೆಯಲ್ಲಿ ಮಲಗಿ
ಪ್ರೀತಿಯಲ್ಲಿ ಬೆಳೆದ ಅಣ್ಣ ತಮ್ಮರು ಕೊನೆಯಲ್ಲಿ ದಾಯದಿಗಳು ಏಕೆ ?

ಪ್ರೀತಿಯಲೆ ಸಾಕಿ ಸಲಹಿ ಬೆಳೆಸಿದ ತಂದೆ ತಾಯಿಯರು
ಮದುವೆ ಸಂಸಾರ ಬೆಳೆದೊಡೆ ಮಕ್ಕಳಿಗೆ ಬಾರವಾಗುವುದು ಏಕೆ ?

ಹುಟ್ಟುವಾಗಲೆ ಬೀಜರೂಪದಿ ಹುಟ್ಟಿ
ಮನುಜನ ಮನವೆಂಬ ತಿಪ್ಪೆಯಲಿ ಬೆಳೆವ
ಸ್ವಾರ್ಥರೂಪದ ಅಣಬೆಗೆ
ಅಧುನಿಕರು ಕೊಡುವ ಹೆಸರು ’ಪೀಳಿಗೆಯ ಅಂತರ’ 

1 comment:

  1. ಮನಸ್ಸಿಗೆ ನಾಟುವ ಕವನ ಸಾರ್,
    ಸ್ವಾರ್ಥ ಮನುಜ ಮಾಡುವನು ಮನಸ್ಸನ್ನೇ ತಿಪ್ಪೆ!
    ಮನೆಯವರೇ ಅವನಿಗೆ ತೊಪ್ಪೆ!!
    http://badari-poems.blogspot.in

    ReplyDelete

enter your comments please