ಪೀಳಿಗೆಯ ಅಂತರ (ಜನರೇಶನ್ ಗ್ಯಾಪ್)
ಹುಟ್ಟಿ ಬೆಳೆವಾಗ ಇರುವ ಅಪ್ಪ ಅಮ್ಮನ ಪ್ರೀತಿಯ ಹಿತ
ಹುಟ್ಟಿ ಬೆಳೆದಾಗ ಬಂದನವೆನಿಸುವುದು ಏಕೆ ?
ಜೊತೆಯಾಗಿ ಆಡಿ ತಿಂದು ಒಂದೆ ಹಾಸಿಗೆಯಲ್ಲಿ ಮಲಗಿ
ಪ್ರೀತಿಯಲ್ಲಿ ಬೆಳೆದ ಅಣ್ಣ ತಮ್ಮರು ಕೊನೆಯಲ್ಲಿ ದಾಯದಿಗಳು ಏಕೆ ?
ಪ್ರೀತಿಯಲೆ ಸಾಕಿ ಸಲಹಿ ಬೆಳೆಸಿದ ತಂದೆ ತಾಯಿಯರು
ಮದುವೆ ಸಂಸಾರ ಬೆಳೆದೊಡೆ ಮಕ್ಕಳಿಗೆ ಬಾರವಾಗುವುದು ಏಕೆ ?
ಹುಟ್ಟುವಾಗಲೆ ಬೀಜರೂಪದಿ ಹುಟ್ಟಿ
ಮನುಜನ ಮನವೆಂಬ ತಿಪ್ಪೆಯಲಿ ಬೆಳೆವ
ಸ್ವಾರ್ಥರೂಪದ ಅಣಬೆಗೆ
ಅಧುನಿಕರು ಕೊಡುವ ಹೆಸರು ’ಪೀಳಿಗೆಯ ಅಂತರ’
ಮನಸ್ಸಿಗೆ ನಾಟುವ ಕವನ ಸಾರ್,
ReplyDeleteಸ್ವಾರ್ಥ ಮನುಜ ಮಾಡುವನು ಮನಸ್ಸನ್ನೇ ತಿಪ್ಪೆ!
ಮನೆಯವರೇ ಅವನಿಗೆ ತೊಪ್ಪೆ!!
http://badari-poems.blogspot.in