Friday, August 16, 2013

ಮೌನ ಮಾತನಾಡುವದಿಲ್ಲ !

ಮೌನ ಮಾತನಾಡುವದಿಲ್ಲ !
===============


ಕನ್ನಡದಲ್ಲಿ ಅಕ್ಷರಕ್ಕಿಂತ ಮೊದಲು ಏನಿತ್ತು ಎಂದೆ
ಅಕ್ಷರಗಳಿಲ್ಲದಾಗಲೂ ನಾನಿರಲಿಲ್ಲವೇ
ಎಂದವು ಕನ್ನಡ ಪದಗಳು

ಪದಗಳಿಗಿಂತ ಮೊದಲು ಏನಿತ್ತು ಹೇಳು ಎಂದೆ
'ಅಂಭಾ' ಎನ್ನುವ ದ್ವನಿ ಕೇಳಿಸಿತು
ಪದಗಳಿಲ್ಲದಾಗಲೂ ಭಾವವಿತ್ತು ಎಂದಿತು ದ್ವನಿ

ಮನ ಮತ್ತೆ ಕೇಳಿತು ಹಾಗಿದ್ದಲ್ಲಿ ಭಾವಕ್ಕಿಂತ ಮೊದಲು ?
ಭಾವವೇಕೊ ಕೆರಳಿತ್ತು
ಭಾವಕ್ಕಿಂತ ಮೊದಲು ಮೌನವಿತ್ತು ... ಮೌನ
ಎಂದು ನುಡಿದಿತ್ತು ಭಾವ

ಪ್ರಶ್ನೆಗೆ ಕೊನೆಯಿಲ್ಲಿ , ಅಹಂಗೆ ಮಿತಿಯೆಲ್ಲಿ
ಮತ್ತೆ ಕೇಳಿದೆ
ಹಾಗಿದ್ದಲ್ಲಿ ಮೌನ...ಕ್ಕೆ ಮೊದಲು ಏನಿತ್ತು

....
.......
ಏನು ಉತ್ತರ ಬರಲಿಲ್ಲ
ಮೌನ ಮಾತನಾಡುವದಿಲ್ಲ !

2 comments:

  1. ಅಂತೆಯೇ ಈ ಕವನವೂ ಸಹ!
    ನಿಮ್ಮ ಆಳ ಆದ್ಯಯನಕ್ಕೆ ಕುರುಹು ಈ ಕವನ.
    http://badari-poems.blogspot.in/

    ReplyDelete
  2. ಎಲ್ಲವು ತಮ್ಮಂತವರೆ ಕಲಿಸುವುದು ಅಲ್ಲವೆ ಸಾರ್

    ReplyDelete

enter your comments please