Monday, April 14, 2014

ಸ್ವತಂತ್ರದ ಹೆಜ್ಜೆಗಳು 11 - ಭಾರತದ ಮಹಾಚುನಾವಣ ಸಂಗ್ರಾಮ (1996)


ಸ್ವತಂತ್ರದ ಹೆಜ್ಜೆಗಳು 11 -  ಭಾರತದ ಮಹಾಚುನಾವಣ ಸಂಗ್ರಾಮ (1996)

1990 ರಿಂದ 1996 ರವವರೆಗೂ ಪಿ ವಿ ನರಸಿಂಹರಾವ್ ರವರು ಒಂದು ಸುಭದ್ರ ಸರ್ಕಾರವನ್ನು ಜನರಿಗೆ ಕೊಟ್ಟರು.


20 ಜೂನ್ 1990 ರಂದು ಪ್ರಧಾನಮಂತ್ರಿ ಸ್ಥಾನಕ್ಕೇರಿದ  ನರಸಿಂಹ ರಾವ್‌ರವರ ಕಾಂಗ್ರೆಸ್‌ (I) ಸರ್ಕಾರವು ಸುಧಾರಣೆಗಳ ಒಂದು ಸರಣಿಯನ್ನೇ ಅನುಷ್ಠಾನಗೊಳಿಸಿತ್ತು.   ದೇಶದ ಆರ್ಥಿಕತೆಯು ವಿದೇಶಿ ಹೂಡಿಕೆದಾರರಿಗೆ ಮುಕ್ತವಾಗಿ ತೆರೆದುಕೊಳ್ಳುವಂತಾಯಿತು. ದೇಶದ ಆರ್ಥಿಕತೆಯನ್ನು ಉಳಿಸಿದ ಮತ್ತು ದೇಶದ ವಿದೇಶಿ ಕಾರ್ಯನೀತಿಯನ್ನು ಚೈತನ್ಯಗೊಳಿಸಿದ ಕೀರ್ತಿಯನ್ನು ನರಸಿಂಹ ರಾವ್‌ರವರಿಗೆ ಅವರ ಬೆಂಬಲಿಗರು ನೀಡಿದರು .
ಭಾರತದ ಸ್ವಾತಂತ್ರ್ಯ ಚಳುವಳಿಯಲ್ಲಿ ತಮ್ಮ ರಾಜಕೀಯ ಜೀವನವನ್ನು ಆರಂಭಿಸಿದ ನರಸಿಂಹರಾವ್, ಸ್ವಾತಂತ್ರ್ಯಾನಂತರ  ಆಂದ್ರ ರಾಜ್ಯ ಸರ್ಕಾರದ ಕೆಲವು ಖಾತೆಗಳನ್ನು ನಿರ್ವಹಿಸಿ ನಂತರ ಮುಖ್ಯಮಂತ್ರಿ ಸ್ಥಾನಕ್ಕೇರಿದರು. ಇದರ ನಂತರ ರಾಷ್ಟ್ರೀಯ ಮಟ್ಟಕ್ಕೇರಿದ ನರಸಿಂಹರಾವ್ ಕೇಂದ್ರ ಸರ್ಕಾರದ ಕೆಲ ಖಾತೆಗಳನ್ನು ನಿರ್ವಹಿಸಿದರು ಮುಖ್ಯವಾಗಿ  ಇಂದಿರಾ ಮತ್ತು ರಾಜೀವ್ ಅವರ ಸರ್ಕಾರಗಳಲ್ಲಿ ವಿದೇಶ ವ್ಯವಹಾರಗಳ ಖಾತೆ.
1990 ರಲ್ಲಿ ರಾಜೀವ್   ಮರಣಾನಂತರ ನಡೆದ ಚುನಾವಣೆಯಲ್ಲಿ ಪ್ರಧಾನ ಮಂತ್ರಿಯಾಗಿ ಆಯ್ಕೆಯಾದರು. ನೆಹರು  ಮನೆತನಕ್ಕೆ ಸೇರಿದವರಲ್ಲದಿದ್ದರೂ ಪೂರ್ಣ ಐದು ವರ್ಷಗಳ ಕಾಲ ಪ್ರಧಾನಿ ಸ್ಥಾನದಲ್ಲಿದ್ದ ಮೊದಲ ವ್ಯಕ್ತಿ ನರಸಿಂಹರಾಯರೇ.

ಅವರು ಪ್ರಧಾನಿಯಾಗಿ ಅಧಿಕಾರವಹಿಸಿಕೊಂಡಾಗ  ಭಾರತ ಸರ್ಕಾರ ತೀವ್ರವಾದ ಆರ್ಥಿಕ ತೊಂದರೆಯಲ್ಲಿತ್ತು.   ಡಾ. ಮನಮೋಹನಸಿಂಗ್ ಅವರನ್ನು ವಿತ್ತ ಮಂತ್ರಿ ಸ್ಥಾನಕ್ಕೆ ಮತ್ತು ಮಾಂಟೇಕ್ ಸಿಂಗ್ ಅಹ್ಲುವಾಲಿಯಾ ಅವರನ್ನು ವಿತ್ತ ಕಾರ್ಯದರ್ಶಿ ಸ್ಥಾನಕ್ಕೆ ನೇಮಿಸಿದ ರಾವ್, ಆರ್ಥಿಕ ಸ್ವತಂತ್ರೀಕರಣ ನೀತಿಗಳನ್ನು  ಪ್ರಾರಂಭಿಸಿದರು.   ಸುಧಾರಿಸಲಾರಂಭಿಸಿದ ಭಾರತೀಯ ಆರ್ಥಿಕ ವ್ಯವಸ್ಥೆ, ಶೇ.  5.5ರ ಪ್ರಮಾಣದಲ್ಲಿ ಮೇಲೇರಲಾರಂಭಿಸಿತು.  


P V Narasimha Rao Prime Minister (1990-1996)


Demolition of Ayodya Babri mazidDemolition of Ayodhya Babri mazid


 ಭಕ್ತರ ಉನ್ಮಾದಮತೀಯ ಗಲಭೆಗಳು 


ಮುಂಬೈ ಸರಣಿ ಬಾಂಬ್ ಸ್ಪೋಟ


ಆದರೆ ತಮ್ಮ ಅವಧಿ ಮುಗಿದ ನಂತರ ಅನೇಕ ಲಂಚ ಪ್ರಕರಣಗಳಲ್ಲಿ ನರಸಿಂಹರಾವ್ ಆಪಾದಿತರಾಗಿದ್ದರು. ನ್ಯಾಯಾಲಯದಲ್ಲಿ ಇವರ ವಿರುದ್ಧ ತೀರ್ಪು ನೀಡಿ ಜೈಲುವಾಸದ ಶಿಕ್ಷೆಯನ್ನು ವಿಧಿಸಿತ್ತು,  ಅಂತಿಮವಾಗಿ ಸರ್ವೋಚ್ಚ ನ್ಯಾಯಾಲಯ ಅವರನ್ನು ಎಲ್ಲ ಆಪಾದನೆಗಳಿಂದ ಮುಕ್ತಗೊಳಿಸಿತು.
17ಭಾಷೆಗಳನ್ನು ಮಾತನಾಡಬಲ್ಲವರಾಗಿದ್ದ ರಾವ್,  ಜ್ಞಾನಪೀಠ  ಪಡೆದಿದ್ದ  ತೆಲುಗು ಲೇಖಕ ವಿಶ್ವನಾಥ ಸತ್ಯನಾರಾಯಣರ ಕಾದಂಬರಿ "ವೇಯಿ ಪದಗಾಲು" ಅನ್ನು ಹಿಂದೀ ಭಾಷೆಗೆ ಸಹಸ್ರ ಫಣ್  ಹೆಸರಿನಲ್ಲಿ ಭಾಷಾಂತರಿಸಿದ್ದಾರೆ
ಇವರ ಅವದಿಯಲ್ಲಿ  1990 ರ 24 ಜೂನ್ -  ಜಯಲಲಿತರವರು ತಮಿಳುನಾಡಿಗೆ ಪ್ರಥಮಬಾರಿ ಮುಖ್ಯಮಂತ್ರಿಯಾಗಿ ಆಯ್ಕೆಯಾದರು
ಬಾಬರಿ ಮಸೀದಿ ವಿವಾದ:
1992 ರ 6  ನೇ ಡಿಸೆಂಬರ್ ದೇಶದ ಅತ್ಯಂತ ದುರ್ಧಿನವಾಗಿತ್ತು. ವಿಶ್ವಹಿಂದೂ ಪರಿಷತ್ ನ ಸಹಸ್ರ ಸಹಸ್ರ ಸಂಖ್ಯೆಯ ಪ್ರತಿನಿದಿಗಳು ಉತ್ತರ ಭಾರತದ ಅಯೋದ್ಯೆಯಲ್ಲಿ ಸೇರಿದರು, ಆಗ ಸೇರಿದ ಗುಂಪು ಅಯೋಧ್ಯೆಯಲ್ಲಿ  ಪುರಾಣಪುರುಷ ರಾಮನ ಜನ್ಮಸ್ಥಳದಲ್ಲಿದ್ದ ದೇವಾಲಯ ಕೆಡವಿ ಕಟ್ಟಲಾಗಿದೆ ಎಂದು ನಂಬಲಾಗಿದ್ದ, 16 ನೇ ಶತಮಾನದ ಬಾಬ್ರಿ ಮಸೀದಿ ಎಂಬ ಹೆಸರಿನ ಸ್ಮಾರಕವನ್ನು ನೆಲಸಮಗೊಳಿಸಿತು.  ನರಸಿಂಹರಾವ್ ಪ್ರಧಾನಿಯಾಗಿದ್ದು ,  ಕಲ್ಯಾಣ್ ಸಿಂಗ್ ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿದ್ದು, ಅಧ್ವಾಣಿ ವಾಜಪೇಯಿರವರಂತವರು ಬಾಜಪದ ನಾಯಕರಾಗಿದ್ದು ನಡೆದ ಈ ಕೃತ್ಯ ಭಾರತೀಯರನ್ನು ದಿಗ್ಭ್ರಮೆ ಗೊಳಿಸಿತು

ಆಗ ದೇಶದಲ್ಲಿ ಉಂಟಾದ ಕೋಮು ದಳ್ಳುರಿಗೆ 3000 ಕ್ಕೂ ಅಧಿಕ ಮಂದಿ ಬಲಿಯಾದರು .  ಅದರ ಪರಿಣಾಮ ನೆರೆಯ ಪಾಕಿಸ್ತಾನ , ಬಾಂಗ್ಲ ದೇಶದಲ್ಲಿಯೂ ಕಾಣಿಸಿತು

   
ಹಾಗೆ 1993 ರ ಮಾರ್ಚಿ 12 ರಂದು ಸಂಭವಿಸಿದ ಸರಣಿ ಬಾಂಬ್ ಸ್ಪೋಟದಲ್ಲಿ ಮುಂಬಯಿ ನಗರದಲ್ಲಿ 260 ಕ್ಕಿಂತ ಹೆಚ್ಚು ಜನ ಬಲಿಯಾದರು
1995 ರ ಅಗಷ್ಟ್ 30 ರಂದು ಪಂಜಾಬಿನ ಮುಖ್ಯಮಂತ್ರಿ ಭೀಯಾಂತ್ ಸಿಂಗ್ ಕೊಲೆಯಾದರು
ಕಾಂಗ್ರೆಸ್ ನಾಯಕರಾದ ಅರ್ಜುನ್‌ ಸಿಂಗ್‌ ಮತ್ತು ನಾರಾಯಣ್‌ ದತ್‌ ತಿವಾರಿಯವರು  ಪಕ್ಷವನ್ನು ತ್ಯಜಿಸಿ, ತಮ್ಮದೇ ಆದ ಪಕ್ಷವನ್ನು ರಚಿಸಿದರು. ಹರ್ಷದ್‌ ಮೆಹ್ತಾ ಹಗರಣ, ರಾಜಕಾರಣದ ಅಪರಾಧೀಕರಣದ ಕುರಿತಾದ ವೋರಾ ವರದಿ, ಜೈನ್‌ ಹವಾಲಾ ಹಗರಣ ಮತ್ತು 'ತಂದೂರ್‌ ಕೊಲೆ' ಪ್ರಕರಣ ಇವೇ ಮೊದಲಾದವುಗಳು ರಾವ್‌ ಸರ್ಕಾರದ ವಿಶ್ವಾಸಾರ್ಹತೆಗೆ ಹಾನಿಯುಂಟುಮಾಡಿದ್ದವು.

ಈ ಎಲ್ಲ ಹಿನ್ನಲೆಯಲ್ಲಿ  1996 ರಲ್ಲಿ ನಡೆದ ಮಹಾಚುನಾವಣೆಯಲ್ಲಿ ಕಾಂಗ್ರೆಸ್ ನರಸಿಂಹರಾವ ರವರ ಸಾಧನೆಯ ಹಿನ್ನಲೆಯಲ್ಲಿ ಮತ ಹಾಕುವಂತೆ ಕೇಳಿತು. ಬಿಜೆಪಿ ಅಧ್ವಾಣಿ ಹಾಗು ವಾಜಪೇಯಿರವರ ನಾಯಕತ್ವದಲ್ಲಿ ಚುನಾವಣೆ ಎದುರಿಸಿ ಮತ ಯಾಚಿಸಿತು
ಆದರೆ ಮತದಾರರು ಗೊಂದಲದಲ್ಲಿದ್ದರು  ಮತ್ತೆ ಯಾರಿಗು ಬಹುಮತ ಒಲಿಯಲಿಲ್ಲ, ಬಾಜಪವು 160 ಸ್ಥಾನಗಳಿಸಿದ್ದರೆ ಕಾಂಗ್ರೆಸ್ 140 ಜಾಗಗಳಲ್ಲಿ ಗೆದ್ದಿತ್ತು.   ಶಂಕರದಯಾಳ್ ಶರ್ಮ , ರಾಷ್ಟ್ರಪತಿಯವರು,  ಹೆಚ್ಚು ಸ್ಥಾನಗಳಿಸಿದ ವಾಜಪೇಯಿರವರನ್ನು ಸರ್ಕಾರ ರಚಿಸಲು ಅಹ್ವಾನಿಸಿದರು. ವಾಜಪೇಯಿ ಪ್ರಧಾನಿಯಾದರು ಆದರೆ ಅದು ಕೇವಲ 13 ದಿನಗಳಿಗೆ ಮಾತ್ರ ಆ ನಾಟಕ ಮುಂದಿನ ಹೆಜ್ಜೆಯಲ್ಲಿ  ವಿವರಿಸಿದೆ.
Votes
Seats
67,950,851
161
BJP Affiliated Parties
13,402,402
7,256,086
4,989,994
1,156,322
26
8
15
3
96,455,493
140
National Front
47,991,407
27,070,340
10,989,241
9,931,826
79
46
17
16
Left Front
30,464,034
20,496,810
6,582,263
2,105,469
1,279,492
52
32
12
5
3
7,339,982
20
7,151,381
17
13,453,235
11
Other Seated Parties
14,227,635
2,534,979
2,560,506
4,903,070
757,316
340,070
180,112
337,539
124,218
109,346
382,319
1,287,072
581,868
129,220
28
8
5
4
2
1
1
1
1
1
1
1
1
1
Unseated Parties
15,395,309
0
Independents
21,041,557
9
Nominated Anglo-Indians
2

334,873,286
545

References:


http://eci.nic.in/eci_main/statisticalreports/LS_1996/Vol_I_LS_96.pdfp v Narasimharao

corruption cases against p v narasimha rao

http://www.ebc-india.com/lawyer/articles/9808a1.htm

baabri mazid


mubai blast
1 comment:

  1. Best of best:
    '17ಭಾಷೆಗಳನ್ನು ಮಾತನಾಡಬಲ್ಲವರಾಗಿದ್ದ ರಾವ್, ಜ್ಞಾನಪೀಠ ಪಡೆದಿದ್ದ ತೆಲುಗು ಲೇಖಕ ವಿಶ್ವನಾಥ ಸತ್ಯನಾರಾಯಣರ ಕಾದಂಬರಿ "ವೇಯಿ ಪದಗಾಲು" ಅನ್ನು ಹಿಂದೀ ಭಾಷೆಗೆ ಸಹಸ್ರ ಫಣ್ ಹೆಸರಿನಲ್ಲಿ ಭಾಷಾಂತರಿಸಿದ್ದಾರೆ'.

    ನರಸಿಂಹರಾವ್ ಅವರಿಂದ ಮೊದಲುಗೊಂಡು ವಾಜಪೇಯಿ ಅವರವರೆಗಿನ ನಿಮ್ಮ 11ನೇ ಕಂತು ನಮಗೆ ಮಾಹಿತಿಪೂರ್ಣ.

    ReplyDelete

enter your comments please