Tuesday, April 15, 2014

ಸ್ವತಂತ್ರದ ಹೆಜ್ಜೆಗಳು 12 - ಭಾರತದ ಮಹಾಚುನಾವಣ ಸಂಗ್ರಾಮ (1998)

ಸ್ವತಂತ್ರದ ಹೆಜ್ಜೆಗಳು 12 -  ಭಾರತದ ಮಹಾಚುನಾವಣ ಸಂಗ್ರಾಮ (1998)


ಭಾರತದ ಸಂಸತ್ತಿನಲ್ಲಿ ನಾಟಕೀಯ ಬೆಳವಣಿಗೆಗಳು 1996-1998 ರ ಅವದಿಯಲ್ಲಿ ಕಾಣಿಸಿತು.
11ನೇ ಲೋಕಸಭಾ ಚುನಾವಣೆಗಳು ಒಂದು ತೂಗುಯ್ಯಾಲೆಯ ಸಂಸತ್ತನ್ನು ಉಂಟುಮಾಡಿದವು ಹಾಗೂ ಎರಡು ವರ್ಷಗಳ ಅವಧಿಯ ರಾಜಕೀಯ ಅಸ್ಥಿರತೆಗೂ ಇವು ಕಾರಣವಾದವು. ಈ ಅಸ್ಥಿರ-ಅವಧಿಯಲ್ಲೇ ದೇಶವು ಮೂವರು ಪ್ರಧಾನಮಂತ್ರಿಗಳನ್ನು ಕಾಣಬೇಕಾಗಿ ಬಂತು.
1996ರ ಚುನಾವಣೆಯಲ್ಲಿ ಬಾಜಪವು   161 ಸ್ಥಾನಗಳನ್ನು ಗೆದ್ದುಕೊಂಡರೆ, ಕಾಂಗ್ರೆಸ್‌ ಪಕ್ಷವು 140 ಸ್ಥಾನಗಳನ್ನು ಗೆದ್ದುಕೊಂಡಿತು; ಸಂಸತ್ತಿನಲ್ಲಿನ  ಸರ್ಕಾರ ರಚನೆಗೆ-  ಅವಶ್ಯಕತೆ 271 ಸ್ಥಾನಗಳಾಗಿದ್ದವು.


ಬಾಜಪದ  ನಾಯಕ  ವಾಜಪೇಯಿಯವರು ಸಂಸತ್ತಿನಲ್ಲಿನ ಏಕೈಕ ಅತಿದೊಡ್ಡ ಪಕ್ಷದ ಮುಖ್ಯಸ್ಥರಾಗಿದ್ದರಿಂದ, ಸರ್ಕಾರವನ್ನು ರಚಿಸಲು ಅವರನ್ನು ರಾಷ್ಟ್ರಪತಿಯವರು ಶಂಕರದಯಾಳ ಶರ್ಮರು ಆಹ್ವಾನಿಸಿದರು.


Devegowda Prime minister from Karnataka(1996)

Many Prime ministers 

I K GUJRAL prime minister (1997)


 
 
ಮೇ 16 1996ರಂದು ಪ್ರಧಾನಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ವಾಜಪೇಯಿಯವರು, ಸಂಸತ್ತಿನಲ್ಲಿರುವ ಪ್ರಾದೇಶಿಕ ಪಕ್ಷಗಳಿಂದ ಬೆಂಬಲವನ್ನು ಪಡೆಯಲು ಪ್ರಯತ್ನಿಸಿದರು.  ಆದರೆ  ಅವರಿಗೆ 200 ಸಂಖ್ಯೆಗಿಂತ ಹೆಚ್ಚಿನ ಸದಸ್ಯ ಬೆಂಬಲವನ್ನು ಹೊಂದಿಸಲಾಗಲಿಲ್ಲ.  ಮೇ  31 ದಂದು ತನ್ನ ಸದಸ್ಯಬಲವನ್ನು ತೋರಿಸಬೇಕಾಗಿತ್ತು , ಯಾವುದೇ ಪಕ್ಷಗಳು ಅವರಿಗೆ ಬೆಂಬಲ ನೀಡಲು ನಿರಾಕರಿಸಿದವು, ಹಾಗಾಗಿ  ತಮ್ಮ ಪ್ರಯತ್ನದಲ್ಲಿ ಅವರು ವಿಫಲಗೊಂಡರು   
ಕೇವಲ 13 ದಿನಗಳ ನಂತರ ವಾಜಪೇಯಿರವರು ಪ್ರಧಾನಿ ಸ್ಥಾನಕ್ಕೆ  ರಾಜೀನಾಮೆ ನೀಡಿದರು.


ಎರಡನೆ ದೊಡ್ಡ ಪಕ್ಷ ಕಾಂಗ್ರೆಸ್  ತಾನು ಸರ್ಕಾರ ರಚಿಸಲು ನಿರಾಕರಿಸಿ, ಸಂಯುಕ್ತರಂಗ ಒಕ್ಕೂಟಕ್ಕೆ ( ಯೂನೈಟೆಡ್ ಫ್ರೆಂಟ್) ಹೊರಗಿನಿಂದ ಶರತ್ತುಬದ್ದ ಬೆಂಬಲ ನೀಡಿತು, ಹೀಗಾಗಿ ಯೂನೈಟೆಡ್ ಫ್ರೆಂಟ್ ನ ಸದಸ್ಯ ಪಕ್ಷವಾಗಿದ್ದ ಜನತಾದಳದ ನಾಯಕ ಕರ್ನಾಟಕದ ದೇವೆಗೌಡರು ಜೂನ್ 1  1996 ರಂದು ಸರ್ಕಾರ ರಚಿಸಲು ಸಿದ್ದರಾಗಿ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದರು.
ಜನತಾದಳದ ನಾಯಕರಾದ ದೇವೇಗೌಡರು ಜೂನ್‌ 1ರಂದು ಸಂಯುಕ್ತರಂಗದ ಒಕ್ಕೂಟ ಸರ್ಕಾರವೊಂದನ್ನು ರಚಿಸಿದರು.  ಕನ್ನಡಿಗರೊಬ್ಬರು ಪ್ರಧಾನಿಯಾದಾಗ ಕರ್ನಾಟಕದ ಜನತೆ ಸಹಜವಾಗಿ ಸಂಭ್ರಮಪಟ್ಟರು ಆದರೆ ಆ ಸಂಭ್ರಮ ಬಹಳ ಕಾಲ ಉಳಿಯಲಿಲ್ಲ   ವಿವಿಧ ಯೋಚನೆಗಳ , ಭಿನ್ನ ಮನದ ಮನಸ್ಕರನ್ನು ಜೋಡಿಸಿ ಹೆಚ್ಚು ದಿನ ಸರ್ಕಾರ ನಡೆಸಲು ದೇವೆಗೌಡರಿಗೆ ಸಾದ್ಯವಾಗಲಿಲ್ಲ.  ದೇವೆಗೌಡರು ರಾಜಿನಾಮೆ ನೀಡಬೇಕಾಯಿತು.



  ಸಂಯುಕ್ತರಂಗದ ಹೊಸ ಸರ್ಕಾರವೊಂದಕ್ಕೆ ಹೊಸ ಪ್ರಧಾನಿಗೆ  ಹೊರಗಿನಿಂದ ಬೆಂಬಲಿಸಲು ಕಾಂಗ್ರೆಸ್‌ ಸಮ್ಮತಿಸಿದ ನಂತರ, ಗೌಡರ ಸಂಪುಟದಲ್ಲಿ ವಿದೇಶಾಂಗ ಸಚಿವರಾಗಿದ್ದ I.K. ಗುಜ್ರಾಲ್‌ 1997 ಏಪ್ರಿಲ್ 27 ರಂದು   ಪ್ರಧಾನಮಂತ್ರಿಯಾಗಿ ಅಧಿಕಾರ ವಹಿಸಿಕೊಂಡರು. ಆದರೆ ಗುಜ್ರಾಲ್‌ರ ಅಧಿಕಾರ ಸ್ವೀಕಾರವು ಒಂದು ಹಂಗಾಮಿ ವ್ಯವಸ್ಥೆಯಾಗಿತ್ತು.
1996 ರಲ್ಲಿ ಡಕಾಯಿತರ ರಾಣಿ ಎಂದು ಕರೆಯಲ್ಪಡುತ್ತಿದ್ದ ಪೂಲಂ ದೇವಿ ಸಂಸತ್ತಿಗೆ ಆರಿಸಿ ಬಂದಳು. ಸ್ವತಂತ್ರ ಬಂದ ನಂತರ ಪ್ರಥಮ ಬಾರಿಗೆ ಕಮ್ಯೂನಿಷ್ಟ್ ಪಾರ್ಟಿಗಳು ಸರ್ಕಾರದಲ್ಲಿ ಬಾಗಿಯಾದವು.
25  JUL 1997 ಆರ್ ಕೆ ನಾರಯಣ್ ರವವರು ರಾಷ್ಟ್ರಪತಿಯಾಗಿ  ಅಧಿಕಾರ ಸ್ವೀಕರಿಸಿದರು, ಅವರ ವಿರುದ್ದ ಸ್ಪರ್ಧಿಸಿದ್ದ ಚುನಾವಣ ಕಮೀಷನರ ಆಗಿದ್ದ ಟಿ ಎನ್ ಶೇಷನ್ ಸೋತಿದ್ದರು.  
 ಲಾಲುಪ್ರಸಾದ್ ವರರು ಭ್ರಷ್ಟಾಚಾರ ಅರೋಪದಲ್ಲಿ ಜೈಲು ಸೇರಿದರು ಆದರೆ ಅವರು ತಮ್ಮ ಪತ್ನಿ ರಾಬ್ಡಿದೇವಿಯವರನ್ನು ಬಿಹಾರದ ಮುಖ್ಯಮಂತ್ರಿ ಎಂದು ನೇಮಕ ಮಾಡಿದರು



ಹಿಂದಿನ ಪ್ರಧಾನಿ ದೇವೆಗೌಡರು ಹಾಗು ಕಾಂಗ್ರೆಸ್ ನಡುವೆ ಸಮನ್ವಯ ಸಾಧಿಸುವಲ್ಲಿ  ಪ್ರಧಾನಿ ಗುಜ್ರಾಲ್ ಕಷ್ಟಪಡುತ್ತಿದ್ದರು, ಆದರೆ ಅವರಿಗೆ ಕಷ್ಟ ಹೊರಗಿನ ಕಾಂಗ್ರೆಸ್  ಕಡೆಯಿಂದ ಬರಲಿಲ್ಲ ಬದಲಿಗೆ ಪಕ್ಷದೊಳಗೆ ಕಾಣಿಸಿತು, ಯೂನೈಟೆಡ್ ಫ್ರೆಂಟ್ ಸದ್ಯಸ್ಯರಾಗಿದ್ದ ಬಿಹಾರದ ಲಾಲು ಪ್ರಸಾದ್ ಯಾದವರನ್ನು ಮೇವು ಹಗರಣದಲ್ಲಿ ಬಂದಿಸಲು ಸಿಬಿಐ ಬಿಹಾರದ ರಾಜ್ಯಪಾಲರನ್ನು ಕೇಳಿತು, ರಾಜ್ಯಪಾಲ ಕಿದ್ವಾಯ್ ರವರು ಸಿಬಿಐ ಗೆ ಲಾಲುರವರನ್ನು ಬಂದಿಸಲು ಒಪ್ಪಿಗೆ ಕೊಡುವದಲ್ಲದೆ, ತಕ್ಷಣ ರಾಜಿನಾಮೆ ನೀಡುವಂತೆ ತಿಳಿಸಿದರು.  ಆದರೆ ಲಾಲು ರಾಜಿನಾಮೆ ಕೊಡಲು ನಿರಾಕರಿಸಿದರು. ಈ ನಡುವೆ ಗುಜ್ರಾಲ್ ರವರು ಲಾಲು ಮೇವು ಕೇಸಿನ ವಿಚಾರಣೆ ನಡೆಸುತ್ತಿದ್ದ ಸಿಬಿಐ ಅಧಿಕಾರಿ ಜೋಗಿಂದರ್ ಸಿಂಗರವರನ್ನು ಅಲ್ಲಿಂದ ವರ್ಗಾಯಿಸಿದರು. ಇದು ಗುಜ್ರಾಲ್ ರವರು ಲಾಲು ಪ್ರಸಾದ್ ಯಾದವರನ್ನು ರಕ್ಷಿಸುತ್ತ ಇದ್ದಾರೆಂದು ವಿರೋದ ಪಕ್ಷಗಳು ಪ್ರತಿಭಟಿಸುವಾಂತಾಯಿತು.
ಲಾಲು ಹೆಚ್ಚು ದಿನ ಜನತಾದಳದಲ್ಲಿ ಇರಲಾಗಲಿಲ್ಲ ಅವರು ತಮ್ಮದೆ ಪಕ್ಷ  ಆರ್ ಜೇ ಡಿ (ರಾಷ್ಟ್ರೀಯ ಜನತಾದಳ) ಕಟ್ಟಿಕೊಂಡರು.
ಲಾಲುಪ್ರಸಾದ್ ವರರು ಭ್ರಷ್ಟಾಚಾರ ಅರೋಪದಲ್ಲಿ ಜೈಲು ಸೇರಿದರು ಆದರೆ ಅವರು ತಮ್ಮ ಪತ್ನಿ ರಾಬ್ಡಿದೇವಿಯವರನ್ನು ಬಿಹಾರದ ಮುಖ್ಯಮಂತ್ರಿ ಎಂದು ನೇಮಕ ಮಾಡಿದರು


ಈ ನಡುವೆ ರಾಜೀವಗಾಂಧಿ ಕೊಲೆಗೆ ಸಂಬಂದಿಸಿದಂತೆ ಡಿ ಎಂ ಕೆ ಪಕ್ಷವನ್ನು ಸರ್ಕಾರದಿಂದ ತೆಗೆದುಹಾಕುವಂತೆ ಪ್ರಧಾನಿ ಗುಜ್ರಾಲ್ ಮೇಲೆ ಕಾಂಗ್ರೆಸ್ ಒತ್ತಡ ಹಾಕಿತು. ಹೀಗಾಗಿ ಗುಜ್ರಾಲ್ ಸರ್ಕಾರ ಬಿದ್ದು ಹೋಗಿ ಮತ್ತೆ 1998 ರ ಚುನಾವಣೆ ಘೋಷಿಸಲ್ಪಟ್ಟಿತು
ಈ ಬಾರಿ ಸೋನಿಯ ನೇರವಾಗಿ ಚುನಾವಣೆಗಳಿಗೆ  ದುಮುಕಿದ್ದರು  ಅವರು ತಮ್ಮ ಪತಿ ರಾಜೀವಗಾಂದಿಯವರು ಸತ್ತಿದ್ದ ಸ್ಥಳ ಶ್ರೀ ಪೆರಂಬದೂರ್ ನಿಂದಲೆ ತಮ್ಮ ಚುನಾವಣೆ ಪ್ರಚಾರ ಪ್ರಾರಂಭಿಸಿದರು.


1998 ಫೆಬ್ರುವರಿ  16 ರಿಂದ 28 ರ ವರೆಗೂ ಚುನಾವಣೆಗಳು ನಡೆದವು. ಎನ್ ಡಿ ಎ 254 ಸೀಟುಗಳನ್ನು ಗೆದ್ದರೆ,  ಕಾಂಗ್ರೆಸ್ 144 ಸ್ಥಾನಗಳನ್ನು ಗೆಲ್ಲಲು ಸಾದ್ಯವಾಗಿತ್ತು. ಚುನಾವಣೆಯ ನಂತರ ಕಾಂಗ್ರೆಸ್ ಅಧ್ಯಕ್ಷ ಸೀತರಾಮಕೇಸರಿ ರಾಜಿನಾಮೆ ನೀಡಿದರೆ, ಸೋನಿಯಾರವರೆ ಕಾಂಗ್ರೆಸ್ ಪಕ್ಷದ ಅಧ್ಯಕ್ಷತೆ ವಹಿಸಿಕೊಂಡರು


ರಾಷ್ಟ್ರಪತಿ ಅರ್ ಕೆ ನಾರಯಣ್ ರವರ ಅಹ್ವಾನದ ಮೇರೆಗೆ,  14 ಪಕ್ಷಗಳನ್ನು ಸೇರಿಸಿ ರಚಿಸಿದ್ದ ಒಕ್ಕೂಟ ಎನ್ ಡಿ ಎ
ನಾಯಕ ಬಿಜೇಪಿಯ ನಾಯಕ ವಾಜಪೇಯಿ , ಮೊದಲ ಬಾರಿ ಕೇವಲ 13 ದಿನ ಪ್ರಧಾನಿಯಾಗಿ ಬಹುಮತ ಸಾಬೀತು ಮಾಡಲು ವಿಫಲರಾಗಿ ನಿರ್ಗಮಿಸಿದ್ದ ವಾಜಪೇಯಿ  ಮತ್ತೊಮ್ಮೆ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದರು.



Party
Acronym
Alliance
Seats
BJP
182
INC
141
CPI(M)
32
SP

20
AIADMK
18
RJD
17
TDP

12
SAP
12
CPI
9
BJD
9
SAD
8
WBTMC
7
JD
6
-

6
SS
6
DMK
6
BSP
5
RSP
5
HLD(R)

4
PMK
4
RPI

4
TMC(M)
3
LS
3
MDMK
3
NC

3
AIFB
2
MUL
2
AC

2
-

2
AIRJP
1
SJP(R)
1
HVP
1
AIMIM

1
AIIC(S)
1
JP
1
KC
1
UMFA

1
PWPI

1
ASDC

1
MSCP

1
SDF

1
JMM
0
AGP
0
HPDP

0
NTRTDP(LP)
0
KC
0
UDP

0
UGDP

0
MPP

0
MGP

0
MNF
0
Total


545







SRI  DEVEGOWDA P M  MINISTRY
http://en.wikipedia.org/wiki/H._D._Deve_Gowda_Ministry

1 comment:

  1. ವಾಯಪೇಯಿಯವರ ’ದಿನಗಳ ಲೆಕ್ಕದ ಸರ್ಕಾರ’
    ಮತ್ತು
    ದೇವೇಗೌಡರು ಪ್ರಧಾನಿಯಾದ ಲೆಕ್ಕಾಚಾರದ ಸಮರ್ಥ ಚಿತ್ರಣ.

    ReplyDelete

enter your comments please