Monday, April 7, 2014

ಸ್ವತಂತ್ರದ ಹೆಜ್ಜೆಗಳು 4 - ಭಾರತದ ಮಹಾಚುನಾವಣ ಸಂಗ್ರಾಮ (1967)

ಸ್ವತಂತ್ರದ ಹೆಜ್ಜೆಗಳು 4 - ಭಾರತದ ಮಹಾಚುನಾವಣ ಸಂಗ್ರಾಮ (1967)


ಭಾರತದ ಹಿತದೃಷ್ಟಿಯಿಂದ ಮೂರನೇ ಲೋಕ ಸಭಾ ಅವದಿ ಸಂತಸ ತರುವಂತಿರಲಿಲ್ಲ.  ಹಾಗೆ ಪ್ರಧಾನಿ ನೆಹರೂರವರಿಗೂ ಹಾಗು ಕಾಂಗ್ರೆಸ್ಸಿಗೂ ಸಹ ಆಶಾದಾಯಕವಾಗಿರಲಿಲ್ಲ.  

1962 - 1967 ರ ಅವದಿಯಲ್ಲಿ ದೇಶ ಎರಡು ಗಡಿಯುದ್ದಗಳನ್ನು ಎದುರಿಸಬೇಕಾಯಿತು. ಹಾಗೆ ಇಬ್ಬರು ನೆಚ್ಚಿನ ಪ್ರಧಾನಿಗಳನ್ನು ಕಳೆದುಕೊಳ್ಳಬೇಕಾಯಿತು.

1962 ರಲ್ಲಿ  ಭಾರತ ಹಾಗು ಚೀನ ನಡುವೆ ಗಡಿಯ ಕಾರಣವಾಗಿ ಯುದ್ದ ನಡೆಯಿತು. ಯುದ್ದಕ್ಕೆ ಗಡಿಯೊಂದೆ ಕಾರಣವಾಗಿರಲಿಲ್ಲ.  
  1959ರಲ್ಲಿ ಟಿಬೆಟ್ಟಿನ ದಂಗೆಯ ನಂತರ ಭಾರತವು  ದಲೈಲಾಮ  ಅವರಿಗೆ ಆಶ್ರಯ ನೀಡಿತ್ತು. ಇದರಿಂದ ಚೀನಿಯರು ಕೆರಳಿದ್ದರು. ಅಲ್ಲದೆ  ಭಾರತವು ಚೀನಾದ ಪ್ರಧಾನಿ ಚೌ ಎನ್ ಲಾಯ್ ೧೯೫೯ ರಲ್ಲಿ ಘೋಷಿಸಿದ ಗಡಿರೇಖಯ ಪೂರ್ವಕ್ಕೆ ಮೆಕ್ ಮೋಹನ್ ರೇಖೆಯ ಉತ್ತರದಿಕ್ಕಿನಲ್ಲಿಯೂ ಸೇರಿದಂತೆ ಅನೇಕ ಠಾಣೆಗಳನ್ನು  ಸ್ಥಾಪಿಸಿತು.
ಚೀನೀಯರು 20 ಅಕ್ಟೋಬರ್ 1962 ರಂದು  ಲಡಾಖ್ ನಲ್ಲಿ ಮತ್ತು ಮೆಕ್ ಮೋಹನ್ ಗಡಿಯಲ್ಲಿ  ದಾಳಿಗಳನ್ನು ಆರಂಭಿಸಿದರು. ಎರಡೂ ರಂಗಗಳಲ್ಲಿ ಚೀನೀ ಸೈನ್ಯಗಳು ಭಾರತೀಯ ಸೈನ್ಯಗಳನ್ನು ಮೀರಿ ಮುಂದುವರೆದು ಪಶ್ಚಿಮದ ಚುಶೂಲ್ ರೇಸಾಂಗ್   ಪೂರ್ವದಲ್ಲಿ ತವಾಂಗ್ ಅನ್ನೂ ಕೈವಶ ಮಾಡಿಕೊಂಡವು. ಭಾರತ ಚೀನಾದ ಸುಸಜ್ಜಿತಪಡೆಯನ್ನು ಎದುರಿಸಲು ಸೋತಿತು. ಚೀನಿಯರು ತಾವಾಗೆ 20 ನವೆಂಬರ್ 1962 ರಂದು ಕದನವಿರಾಮ ಘೋಶಿಸಿದರು, ತಾವು ಗೆದ್ದ ಸ್ಥಳಗಳನ್ನು ಬಿಟ್ಟು ಹಿಂದೆ ಸರಿದರು. ಅತೀ ಪ್ರತೀಕೂಲ ಪರಿಸ್ಥಿತಿಯಲ್ಲಿ ನಡೆದ ಈ ಯುದ್ದ ಭಾರತದ ಆತ್ಮಬಲವನ್ನು ಕುಗ್ಗಿಸಿತು.
ಅಸಮರ್ಪಕ ಯುದ್ದ ನಿರ್ವಹಣೆಗಾಗಿ ನೆಹರು ಟೀಕೆಗೆ ಒಳಪಟ್ಟರು ಹಾಗು ರಕ್ಷಣಾ ಸಚೀವ ಮೆನನ್ ರವರನ್ನು ಕೈಬಿಡಬೇಕಾಯಿತು.  
ಈ ಯುದ್ದ ನೆಹರೂ ರವರ ಆತ್ಮಬಲ ಕುಗ್ಗಿಸಿತು. 1963 ರ ಉದ್ದಕ್ಕು ಅನಾರೋಗ್ಯದ ಕಾರಣ ಕಾಶ್ಮೀರದಲ್ಲಿ ಉಳಿದರು. ಮತ್ತೆ ದೆಹಲಿಗೆ ಬರುವಾಗಲೆ ಅವರಿಗೆ ಅನಾರೋಗ್ಯ ಅಧಿಕವಾಗಿ ಪಾರ್ಶವಾಯು ಪೀಡಿತರಾದರು ಕಡೆಗೊಮ್ಮೆ 1964 ರ ಮೇ 27 ರಂದು ಹೃದಯಘಾತಕ್ಕೆ ಒಳಗಾಗಿ ಮರಣಹೊಂದಿದರು. ಚೀನದ ಯುದ್ದ ಪಾಕಿಸ್ತಾನದ ದ್ವೇಷ ಕಡೆಯಲ್ಲಿ ಅವರನ್ನು ಹಣ್ಣು ಮಾಡಿದವು. ಭಾರತದ ವಾಣಿಜ್ಯ, ಹಣಕಾಸಿನ ಸ್ಥಿತಿ, ಅರ್ಥಿಕ ಬೆಳವಣಿಗೆಗಳು ಕುಸಿದಿದ್ದವು.  

ನೆಹರೂ ಮರಣದ ನಂತರ ಎರಡುವಾರ ಕಾಲ ಕಾಂಗ್ರೆಸ್ ನಾಯಕ ಹಿರಿಯ ಗುಲ್ಜಾರಿಲಾಲ್ ನಂದ ಪ್ರಧಾನಿಯಾಗಿ ಕಾರ್ಯ ನಿರ್ವಹಿಸಿದರು ನಂತರ ಲಾಲ್ ಬಹುದ್ದೂರ್ ಶಾಸ್ತ್ರೀಯವರು ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡರು.  ಶಾಸ್ತ್ರಿಯವರು ಅಸಂಭವ ಆಯ್ಕೆ ಅನ್ನಿಸುವಾಗಲು ಉತ್ತಮವಾಗಿ ಕಾರ್ಯ ನಿರ್ವಹಿಸಿದರು.
1965 ರಲ್ಲಿ ಭಾರತ ಮತ್ತೆ ಗಡಿ ಯುದ್ದ ಎದುರಿಸಬೇಕಾಯಿತು. ಪಾಕಿಸ್ತಾನ ಗಡಿಯುದ್ದಕ್ಕು ಕಾಲು ಕೆರೆದು ನಿಂತು ಯುದ್ದ ಪ್ರಾರಂಭಿಸಿತು. ಭಾರತ ಪಾಕೀಸ್ತಾನದ ಎರಡನೇ ಗಡಿಯುದ್ದವನ್ನು ಕಾಶ್ಮೀರ ಯುದ್ದವೆಂಗೆ ಬಣ್ಣಿಸಲಾಗುತ್ತೆ. ಭಾರತದಲ್ಲಿ ಸರ್ವಪಲ್ಲಿ ರಾಧಕೃಷ್ಣನ್ ಅದ್ಯಕ್ಷರು ಹಾಗು ಶಾಸ್ತ್ರಿಯವರು ಪ್ರದಾನಿಯವರು ನಿರ್ವಹಿಸಿದ ಪಾಕಿಸ್ತಾನದ ಆಯೂಭ ಖಾನ್ ಹೂಡಿದ್ದ ಈ ಯುದ್ದದಲ್ಲಿ ಭಾರತದ ಕೈ ಮೇಲಾಗಿ ಕಡೆಗೊಮ್ಮೆ ಅಮೇರಿಕದ ಮಧ್ಯಸ್ತಿಕೆಯಿಂದಾಗ ಯುದ್ದ ನಿಂತಿತು , ತಾಷ್ಕೆಂಟ್ ಒಪ್ಪಂದಕ್ಕೆ ಸಹಿಹಾಕಲಾಯಿತು (10 ಜನವರಿ 1966 )  ಆದರೆ ಭಾರತಕ್ಕೊಂದು ಅಘಾತ ಕಾದಿತ್ತು. ತಾಷ್ಕೆಂಟ್ ಒಪ್ಪಂದಕ್ಕೆ ಸಹಿ ಹಾಕಲು ಹೋದ ಬಾರತದ ಪ್ರಧಾನಿ ಶಾಸ್ತ್ರಿಯವರು  ಅನುಮಾನಾಸ್ಪದವಾಗಿ ಮರಣಹೊಂದಿದರು.





ಭಾರತದಲ್ಲಿ ಮತ್ತೆ ಗೊಂದಲ ಮೂಡಿತ್ತು, ಮತ್ತೆ ಗುಲ್ಜಾರಿನಂದರು ಎರಡನೆ ಬಾರಿ ತಾತ್ಕಾಲಿಕ ಪ್ರಧಾನಿಹುದ್ದೆ ನಿರ್ವಹಿಸಿದರು.
ಮತ್ತೆ ಆಗ ಮಾಹಿತಿ ಪ್ರಚಾರಖಾತೆ ಸಚಿವರಾಗಿದ್ದ ಇಂದಿರಗಾಂದಿಯವರು ಪ್ರದಾನಿಯಾಗಿ ಅಧಿಕಾರ ವಹಿಸಿಕೊಂಡರು. ಕಾಂಗ್ರೆಸ್ ನಾಯಕರಾಗಿದ್ದ ಮೋರಾರ್ಜಿ ದೇಸಾಯಿವರು ಇದನ್ನು ಪ್ರಭಲವಾಗಿ ವಿರೋಧಿಸಿದರು. ಆದರೆ ಕಾಮರಾಜ್ ರವರು ನಿರ್ವಹಿಸಿದ ಪಾತ್ರದಿಂದ ಇಂದಿರರವರು ಪ್ರಧಾನಿಯಾದರು.
ಕಾಂಗ್ರೆಸ್ ಪಕ್ಷದೊಳಗೆ ತೋರಿದ ಬಿಕ್ಕಟ್ಟು. ಎರಡು ಯುದ್ದಗಳನ್ನು ನಿರ್ವಹಿಸಿದ ಪರಿಣಾಮ , ಆರ್ಥಿಕ ಕುಸಿತ, ಮಿಜೋರಾಂ ದಂಗೆಗಳು. ಜೊತೆ ಜೊತೆಗೆ 1965 ರಲ್ಲಿ ಕಾಣಿಸಿಕೊಂಡ ಬೀಕರ ಬರಪರಿಸ್ಥಿತಿ, ದೇಶದ ಬೆಳವಣಿಗೆಯನ್ನು ಕುಂಟುವಂತೆ ಮಾಡಿದವು. ಹಣದ ಅಪಮೌಲ್ಯ  , ಭಾಷ ಹಾಗು ದಾರ್ಮಿಕ ದಂಗೆಗಳು ದೇಶದ ಆತ್ಮಸ್ಥೈರ್ಯವನ್ನು ಕುಗ್ಗಿಸಿದವು.
ಇಂತಹ ಪರಿಸ್ಥಿತಿಯ ನಡುವೆ ದೇಶ ನಾಲ್ಕನೇ ಚುನಾವಣೆಗೆ ಸಜ್ಜಾಗಿತ್ತು.


ಇಂದಿರಾಗಾಂದಿಯವರ ನಾಯಕತ್ವದಲ್ಲಿ ಕಾಂಗ್ರೆಸ್ ಚುನಾವಣೆ ಎದುರಿಸಿತು.
1967ರ ಏಪ್ರಿಲ್‌ನಲ್ಲಿ, ಸ್ವಾತಂತ್ರ್ಯಾನಂತರದ ಚುನಾವಣಾ ವೇದಿಕೆಯಲ್ಲಿನ ತನ್ನ ನಾಲ್ಕನೇ ಬಯಲುಸ್ಪರ್ಧೆಗೆ ದೇಶವು ಸಾಕ್ಷಿಯಾಯಿತು. ಅದುವರೆಗೂ ಸಂಸತ್ತಿನಲ್ಲಿನ ಸ್ಥಾನಗಳ ಪೈಕಿ 73 ಪ್ರತಿಶತಕ್ಕಿಂತಲೂ ಕಡಿಮೆ ಸ್ಥಾನಗಳನ್ನು ಎಂದಿಗೂ ಗೆದ್ದಿರದಿದ್ದ ಕಾಂಗ್ರೆಸ್‌ ಪಕ್ಷಕ್ಕೆ ಭಾರೀ ಕೆಟ್ಟ ಸುದ್ದಿಯು ಕಾದಿತ್ತು. ಚುನಾವಣೆಗಳ ಫಲಿತಾಂಶಗಳಲ್ಲಿ ಕಾಂಗ್ರೆಸ್‌ನ ಆಂತರಿಕ ಬಿಕ್ಕಟ್ಟು ಮುಖಕ್ಕೆ ರಾಚುವಂತಿತ್ತು. ಮೊಟ್ಟಮೊದಲ ಬಾರಿಗೆ ಪಕ್ಷವು ಕೆಳಮನೆಯಲ್ಲಿ ಸರಿಸುಮಾರು 60 ಸ್ಥಾನಗಳನ್ನು ಸೋತಿತು ಹಾಗೂ 283 ಸ್ಥಾನಗಳನ್ನಷ್ಟೇ ಗೆಲ್ಲಲು ಅದಕ್ಕೆ ಸಾಧ್ಯವಾಯಿತು.ರಾಯ್‌ಬರೇಲಿ ಚುನಾವಣಾ ಕ್ಷೇತ್ರದಿಂದ ಲೋಕಸಭೆಗೆ ಚುನಾಯಿತರಾಗಿದ್ದ ಇಂದಿರಾ ಗಾಂಧಿಯವರು ಮಾರ್ಚ್‌ 13ರಂದು ಪ್ರಧಾನಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದರು. ಭಿನ್ನಮತೀಯ ಧ್ವನಿಗಳನ್ನು ನಿರುಪಾಯದ ಸ್ಥಿತಿಯಲ್ಲಿ ಇರಿಸುವ ದೃಷ್ಟಿಯಿಂದ, ಮೊರಾರ್ಜಿ ದೇಸಾಯಿಯವರನ್ನು ಆಕೆ ಭಾರತದ ಉಪಪ್ರಧಾನಿ ಮತ್ತು ಭಾರತದ ಹಣಕಾಸು ಸಚಿವರಾಗಿ ನೇಮಿಸಿದರು
ಸ್ವಂತಂತ್ರಪಾರ್ಟಿ  ಹೆಸರಿನಲ್ಲಿ ರಾಜಗೋಪಲಾಚಾರಿಯವರು 44 ಸೀಟುಗಳೊಡನೆ ಎರಡನೇ ಸ್ಥಾನ ಗಳಿಸಿದರು.
ಭಾರತ ನಾಲ್ಕನೆ ಲೋಕಸಭೆ ತನ್ನ ಶಾಸನಸಭೆಯನ್ನು ಇಂದಿರಾರವರ ನೇತೃತ್ವದಲ್ಲಿ.ನಿರ್ವಹಿಸಲು ಸಿದ್ದವಾಯಿತು



ಮುಂದುವರೆಯುವುದು.



Results by Party[edit]

Lok Sabha elections 1967
Electoral participation: 61.04%
Code
%
Won
(total 520)
BJS
9,31
35
CPI
5,11
23
CPI(M)
4,28
19
INC
40,78
283
PSP
3,06
13
SSP
4,92
23
SP
8,67
44
ADM
0,13
0
ADS
0,66
3
AIFB
0,43
2
BC
0,83
5
DMK
3,79
25
DNC
0,02
0
IUML
0,28
2
KC
0,22
0
NNO
0,00
0
PWPI
0,71
2
RPI
2,47
1
UG(F)
0,00
0
UG(S)
0,07
1
JKD
0,13
1
NC
0,14
1
Independents
-
13,78
35
Nominated Anglo-Indians
-
-
2

References:
http://en.wikipedia.org/wiki/Sino-Indian_War

1 comment:

  1. ನಾಲ್ಕನೇ ಭಾಗವೂ ಸಂಗ್ರಹಯೋಗ್ಯವಾಗಿದೆ.
    ಅಂದು ಪಟ್ಟಕ್ಕೇರಿದ ಮಾತಾಜೀ ಇಂದಿಗೂ ಸದರೀ ಪಕ್ಷಕ್ಕೆ ಆದರ್ಶಪ್ರಾಯರೇ.

    ReplyDelete

enter your comments please