Tuesday, April 8, 2014

ಸ್ವತಂತ್ರದ ಹೆಜ್ಜೆಗಳು 5 - ಭಾರತದ ಮಹಾಚುನಾವಣ ಸಂಗ್ರಾಮ (1971)


ಸ್ವತಂತ್ರದ ಹೆಜ್ಜೆಗಳು 5 - ಭಾರತದ ಮಹಾಚುನಾವಣ ಸಂಗ್ರಾಮ (1971)

1967 ರ ಚುನಾವಣೆಯಲ್ಲಿ ಇಂದಿರಾಗಾಂದಿಯವರು ಗೆಲುವು ಸಾಧಿಸಿದರು ಸಹ ಪಕ್ಷದೊಳಗಿನ ಬಿಕ್ಕಟ್ಟು  ಅವರನ್ನು ಗೊಂದಲದಲ್ಲಿ ಕೆಡವಿತ್ತು.  ಬಿಹಾರ ಕೇರಳ ಮದ್ರಾಸ್ ಒರಿಸ್ಸ ಪಂಜಾಬ್ ಪಶ್ಚಿಮಬಂಗಾಲದಲ್ಲಿ ಕಾಂಗ್ರೇಸೇತರ ಪಕ್ಷಗಳು ರಾಜ್ಯಸರ್ಕಾರದ ಅಧಿಕಾರ ಸ್ಥಾಪಿಸಿದ್ದವು.  ಸತತ ಯುದ್ದದ ಪರಿಣಾಮಗಳು ದೇಶದ ಆರ್ಥಿಕಸ್ಥಿಥಿಯನ್ನು ದುಸ್ಥಿತಿಯಡೆಗೆ ಕೊಂಡೊಯ್ಯುತ್ತಿದ್ದವು.  

ಚುನಾವಣೆಯಲ್ಲಿನ ನಿರಾಶಾದಾಯಕ ಪ್ರದರ್ಶನದಿಂದಾಗಿ ಪಕ್ಷದಲ್ಲಿ  ಇಂದಿರಾರವರ ವರ್ಚಸಿಗೆ ಕುಂದು ಬಂದಿತ್ತು. ಪಕ್ಷದೊಳಗೆ ಸಹ ಬಿನ್ನಾಭಿಪ್ರಾಯಗಳು ಹೆಚ್ಚುತ್ತ ಹೋದವು.  
ಈ ಕಾರಣಗಳಿಂದ 1969 ರ ನವಂಬರ್ 12 ರಂದು ಪ್ರಧಾನಿಯಾಗಿದ್ದ ಇಂದಿರಾರವರನ್ನು ಆಕೆಯ ಪಕ್ಷವೇ ಉಚ್ಚಾಟಿಸಿತು. ಹೀಗಾಗಿ ಪಕ್ಷ ಎರಡು ಬಾಗಗಳಾಗಿ ಒಡೆಯಿತು. ಮೊರಾರ್ಜಿದೇಸಾಯಿ ಕಾಂಗ್ರೆಸ್ (O) ಬಣಕ್ಕೆ ನಾಯಕರಾದರೆ, ಇಂದಿರಾ ತನ್ನ ಬಣವನ್ನು ಕಾಂಗ್ರೆಸ್(I) ಎಂದು ಕರೆದರು. ಸಿಪಿಐ ಬೆಂಬಲದೊಡನೆ 1970 ರವರೆಗೂ ಆಕೆಯ ಸರ್ಕಾರ ಮುಂದುವರೆಯಿತು.


ರಾಷ್ಟ್ರಪತಿಯಾಗಿ  ಝಾಕೀರ್ ಹುಸೇನ್ ರವರು 1967 ಮೇ 6 ರಂದು ಅಧಿಕಾರ ಸ್ವೀಕರಿಸಿದರು.
ಆದರೆ ಅವರು ಅಧಿಕಾರದಲ್ಲಿದಾಗಲೆ ಮರಣಹೊಂದಿದರು, ನಂತರ  1969 ರಲ್ಲಿ ವಿ.ವಿ.ಗಿರಿಯವರು ಅಧಿಕಾರ ಸ್ವೀಕರಿಸಿದರು. ನಡುವೆ ಹಿದಾಯತ್ ಉಲ್ಲರವರು ಅಲ್ಪಕಾಲಕ್ಕೆ ಅಧಿಕಾರದಲ್ಲಿದ್ದರು.

ನಿಗದಿನ ಅವದಿಗಿಂತ ಒಂದು ವರ್ಷ ಮೊದಲೇ ಇಂದಿರಾಗಾಂದವರು ಚುನಾವಣೆ ಘೋಷಿಸಿದರು.  
ಐದನೇ ಸಾರ್ವತ್ರಿಕ ಚುನಾವಣೆಗಳಿಗಾಗಿ ದೇಶವು ಸಜ್ಜುಗೊಳ್ಳತೊಡಗಿತು.
27 ರಾಜ್ಯಗಳು ಹಾಗು ಯೂನಿಯನ್ ಟೇರಿಟೆರಿಗಳು ಸೇರಿ ಒಟ್ಟು  518 ಕ್ಷೇತ್ರಗಳಿಗೆ ಚುನಾವಣೆ ನಡೆಯಿತು.
1971 ರ ಮಾರ್ಚಿ 1 ರಿಂದ 10  ರವರೆಗೂ ನಡೆದ ಮಹಾಚುನಾವಣೆಯಲ್ಲಿ  
ತಮ್ಮ ಪ್ರಸಿದ್ದ ’ಗರೀಭಿ ಹಠಾವೋ’ ಘೋಷಣೆಯೊಡನೆ ಚುನಾವಣೆಯಲ್ಲಿ ಬಾಗವಹಿಸಿದ ಇಂದಿರಾ 352 ಸ್ಥಾನಗಳನ್ನು ಗೆಲ್ಲುವ ಮೂಲಕ , ಪ್ರಚಂಡ ವಿಜಯ ಸಾಧಿಸಿ ತಮ್ಮ ವಿರೋಧಿಗಳನ್ನು ಮಣಿಸಿದ್ದರು. ಮೊರಾರ್ಜಿದೇಸಾಯಿ ಹಾಗು ಅವರ ಗುಂಪು 51  ಸ್ಥಾನಗಳನ್ನು ಗೆದ್ದು  ಎರಡನೆ ಸ್ಥಾನದಲ್ಲಿತ್ತು.

Results by alliance[edit]

Alliances
Party
Seats won
Change
Popular Votes %
Seats: 350
Seat Change: +93
Popular Vote %: 43.68
352
+93
43.68
Seats: 51
Seat Change: -65
Popular Vote %: 24.34
16
−17
10.43

22
-22
7.37

8
-15
3.07

3
-10
2.43

2
-17
1.04
Left Parties
Seats: 48
Popular Vote %: 9.86
25
-6
5.13

23
4.73
Others
Seats: 66
Popular Vote %: 22.14
Others
67
-12
22.16

References:

http://eci.nic.in/eci_main/statisticalreports/LS_1971/Vol_I_LS71.pdf

1 comment:

  1. ಭಾಗ - 6ಕ್ಕಾಗಿ ಧನ್ಯವಾದಗಳು,
    ’ಗರೀಭಿ ಹಠಾವೋ’ ಈಗಲೂ ಕಾಂಗ್ರೆಸ್ ಐ ಮೂಲಮಂತ್ರವೇ ಸರೀ.

    ReplyDelete

enter your comments please