Thursday, February 11, 2016

ಬಂದೂಕು ಕೆಳಗಿಳಿಯಬೇಕು


ಬಂದೂಕು ಕೆಳಗಿಳಿಯಬೇಕು 
-------------------------------------

ಒಂದು ಸಾವು ಮತ್ತೊಂದು ಸಾವಿಗೆ
ಮೆಟ್ಟಲಾಗುತ್ತಿದೆ!
ಸತ್ತ ಸೈನಿಕರ ಮನೆಯವರ  ಆಕ್ರಂದನಗಳು
ಎದೆಯ ತಟ್ಟುತ್ತಿದೆ!!

ಈ ಭೂಮಿಯಲ್ಲಿ ಸದಾ 
ರಾಜಕೀಯ, ಧರ್ಮಗಳ ಮೇಲಾಟ! 
ಕವಿ  ಮಾತಿಗಷ್ಟೆ ಇಲ್ಲಿ
ಸರ್ವಜನಾಂಗದ ಶಾಂತಿಯ ತೋಟ!!

ನಿಮ್ಮ ಸಾವು ಇರುವವರಿಗೆ 
ಪಾಠವಾಗಬೇಕು !
ಗಡಿಯ ಅತ್ತ ಇತ್ತ ನಿಂತವರ ಬಂದೂಕು 
ಕೆಳಗಿಳಿಯಬೇಕು!! No comments:

Post a Comment

enter your comments please