Wednesday, April 16, 2014

ಸ್ವತಂತ್ರದ ಹೆಜ್ಜೆಗಳು 13 - ಭಾರತದ ಮಹಾಚುನಾವಣ ಸಂಗ್ರಾಮ (1999)

ಸ್ವತಂತ್ರದ ಹೆಜ್ಜೆಗಳು 13 -  ಭಾರತದ ಮಹಾಚುನಾವಣ ಸಂಗ್ರಾಮ (1999)

 
1998 ರಲ್ಲಿ ಚುನಾವಣೆ ನಡೆದು , ಅನುಭವಿ ನಾಯಕ ಅಟಲ್ ಬಿಹಾರಿ ವಾಜಪೇಯಿರವರು ಎನ್ ಡಿ ಏ  ನಾಯಕರಾಗಿ  ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದದರು, ಮತ್ತು ಹನ್ನೆರಡನೆ ಲೋಕಸಭೆಗೆ ಪ್ರಾರಂಬವಾಗಿತ್ತು.
ಆದರೆ ಇದು ಅತಿ ಕಡಿಮೆ ಅವಧಿಯ ಸರ್ಕಾರವಾಗಿದ್ದು ಕೇವಲ 413 ದಿನಗಳಲ್ಲಿ ಮತ್ತೆ ವಿಸರ್ಜನೆಗೊಂಡಿತು.

ಭಾರತೀಯ ಜನತಾ ಪಕ್ಷದ ನೇತೃತ್ವದ ಒಕ್ಕೂಟದ ಪಾಲುದಾರರಲ್ಲಿ ಒಂದಾದ ಜಯಲಲಿತಾ ನೇತೃತ್ವದ  AIADMK ಪಕ್ಷವು ಬೆಂಬಲ ಹಿಂತೆಗೆದುಕೊಂಡ ಕಾರಣದಿಂದ, ಬಿಜೆಪಿಗೆ ಏಕೈಕ ಮತದ ಕೊರತೆ ಕಂಡುಬಂತು.


ಒಂದು ವೇಳೆ ತಮ್ಮ ನಿಶ್ಚಿತ ಬೇಡಿಕೆಗಳು ಈಡೇರದಿದ್ದ ಪಕ್ಷದಲ್ಲಿ, ಪ್ರೀತಿಪಾತ್ರವಾಗಿದ್ದ ಹಾಗೂ ಆಡಳಿತ ನಡೆಸುತ್ತಿದ್ದ ಒಕ್ಕೂಟಕ್ಕೆ ನೀಡಿದ ಬೆಂಬಲವನ್ನು ಹಿಂತೆಗೆದುಕೊಳ್ಳುವುದಾಗಿ ಜಯಲಲಿತಾ  ಬೆದರಿಕೆ ಹಾಕಿದ್ದರು.

ಅದರಲ್ಲೂ ನಿರ್ದಿಷ್ಟವಾಗಿ, ಮೂರು ವರ್ಷಗಳ ಹಿಂದೆಯೇ ತಮ್ಮ ನಿಯಂತ್ರಣದಿಂದ ಕೈಬಿಟ್ಟು ಹೋಗಿದ್ದ ತಮಿಳುನಾಡು   ಕರುಣಾನಿದಿಯವರ ಡಿಎಂಕೆ ಸರ್ಕಾರವನ್ನು ತೆಗೆದುಹಾಕಬೇಕು,ರಾಷ್ಟ್ರಪತಿ ಆಡಳಿತವನ್ನು ತಮಿಳುನಾಡಿನಲ್ಲಿ ಹೇರಬೇಕು ಎಂಬುದು ಅವರ ಬೇಡಿಕೆಯಾಗಿತ್ತು.

ಅವರ ವಿರುದ್ದ ಭ್ರಷ್ಟಾಚಾರದ ಆರೋಪಗಳಗಳ ವಿಚಾರಣೆಯನ್ನು ತಪ್ಪಿಸುವ ಸಲುವಾಗಿ ಜಯಲಲಿತಾ ಈ ರೀತಿಯ ಬೇಡಿಕೆಗಳು ಮುಂದಿಡುತ್ತಿದ್ದಾರೆ ಎಂಬುದಾಗಿ BJP ಆಪಾದಿಸಿತು

ಪಕ್ಷಗಳ ನಡುವೆ ಯಾವುದೇ ತೆರನಾದ ಒಪ್ಪಂದವು ಮೂಡಲಿಲ್ಲವಾದ್ದರಿಂದ, ಅದು ಸರ್ಕಾರದ ಪತನಕ್ಕೆ ಕಾರಣವಾಯಿತು.


ಏಪ್ರಿಲ್ 17 1999  ರಂದು ನಡೆದ ವಿಶ್ವಾಸಮತ ಯಾಚನೆಯ ಸಂದರ್ಭದಲ್ಲಿ 13 ತಿಂಗಳಿನ ಬಿಜೇಪಿ ನೇತೃತ್ವದ ಸರ್ಕಾರ    ಒಂದೇ ಒಂದು ಮತದ ಕೊರತೆಯಿಂದ ಕುಸಿಯಿತು.  ಮತ್ತೆ ಚುನಾವಣೆ ಘೋಷಣೆಯಾಯಿತು

1999ರ ಚುನಾವಣೆಗಳು 40 ತಿಂಗಳುಗಳ ಅವಧಿಯಲ್ಲಿ ನಡೆದ ಮೂರನೇ ಮಧ್ಯಾವದಿ ಚುನಾವಣೆಗಳು ಎನಿಸಿಕೊಂಡವು. 45 ಪಕ್ಷಗಳು ಸ್ಪರ್ಧಿಸಿದ್ದು ವಿಶೇಷವೆನಿಸಿತ್ತು.

ಒಂದು ವರ್ಷದಷ್ಟು ಕಡಿಮೆ ಅವಧಿಯಲ್ಲಿ ವಾಜಪೇಯಿ ತಮ್ಮ ಸರ್ಕಾರವನ್ನು ಉತ್ತಮವಾಗಿ ನಿಭಾಯಿಸಿದ್ದರು
11 ಮತ್ತು 13 ಮೇ 1998   ಭಾರತದ ಪೋಕ್ರಾನ್ ನಲ್ಲಿ ಅಣುಪರೀಕ್ಷೆ ನಡೆದು ಎಲ್ಲರ ಗಮನ ಸೆಳೆದಿತ್ತುಪಾಕಿಸ್ತಾನದೊಂದಿಗಿನ ಕಾಶ್ಮೀರ ಗಡಿ ಬಿಕ್ಕಟ್ಟಿನ ನಿಭಾಯಿಸುವಿಕೆಯನ್ನೂ ಒಳಗೊಂಡಂತೆ, ಆರ್ಥಿಕ ಮತ್ತು ವಿದೇಶಿ ಕಾರ್ಯನೀತಿಯ ವಿವಾದಾಂಶಗಳ ಕುರಿತಾಗಿ ಬೀಜೆಪಿ ಮತ್ತು ಕಾಂಗ್ರೆಸ್‌ ಪಕ್ಷಗಳು ಚುನಾವಣೆಯ ಸುದೀರ್ಘ ಪ್ರಚಾರಾಂದೋಲನದ ಸಮಯದಲ್ಲಿ ಚರ್ಚಿಸಿದವು .

 ವಾಜಪೇಯಿಯವರು ಕಾರ್ಗಿಲ್‌ ಯುದ್ಧವನ್ನು ನಿಭಾಯಿಸಿದ್ದು ಬಿಜೆಪಿಯ ಪರವಾಗಿ  ಮತ್ತೊಂದು ಚರ್ಚಾವಿಷಯವಾಗಿತ್ತು; ಚುನಾವಣೆಗಳಿಗೆ ಕೆಲವೇ ತಿಂಗಳುಗಳು ಮುಂಚಿತವಾಗಿ ಕಾರ್ಗಿಲ್‌ ಯುದ್ಧ ಮುಗಿದಿತ್ತು ಹಾಗೂ ಕಾಶ್ಮೀರದಲ್ಲಿನ ಭಾರತದ ಸ್ಥಾನವನ್ನು ಅದು ದೃಢೀಕರಿಸಿತ್ತು ಹಾಗೂ ಬಲಗೊಳಿಸಿತ್ತು.


1998ರಲ್ಲಿ ಕಾಂಗ್ರೆಸ್ ಪಕ್ಷದ  ಅಧ್ಯಕ್ಷಗಿರಿಗೆ ಚುನಾಯಿಸಲ್ಪಟ್ಟಿದ್ದ ಸೋನಿಯಾ ಗಾಂಧಿಯವರ ಪ್ರವೇಶವನ್ನು ಮಹಾರಾಷ್ಟ್ರದ ಆಗಿನ ಕಾಂಗ್ರೆಸ್‌ ನಾಯಕ ಶರದ್‌ ಪವಾರ್‌ ಪ್ರಶ್ನಿಸಿ ಸವಾಲೆಸೆದಿದ್ದರ. ಸೋನಿಯಾ ಇಟಲಿ-ಸಂಜಾತರಾಗಿದ್ದುದೇ ಇದಕ್ಕೆ ಕಾರಣವಾಗಿತ್ತು. ಕಾಂಗ್ರೆಸ್‌ನೊಳಗಡೆ ಒಂದು ಬಿಕ್ಕಟ್ಟು ಸೃಷ್ಟಿಯಾಗಲು ಇದು ಕಾರಣವಾಯಿತು ಮತ್ತು  ಬಿಜೆಪಿಯು ಇದನ್ನು ಒಂದು ಚುನಾವಣಾ ಚರ್ಚಾವಿಷಯವಾಗಿ ಪರಿಣಾಮಕಾರಿಯಾಗಿ ಬಳಸಿಕೊಂಡಿತು.

ಸೋನಿಯಾರವರನ್ನು ವಿದೇಶಿ ಎನ್ನುವ ವಿಷಯವನ್ನು  ಬಿಜೇಪಿ ಪ್ರಧಾನವಾಗಿ ಚುನಾವಣೆಯಲ್ಲಿ ಚರ್ಚಿಸಿತು. ಇದೊಂದು ಸೋನಿಯಾ ಹಾಗು ವಾಜಪೇಯಿ ನಡುವಿನ ಹೋಲಿಕೆಯ ಚುನಾವಣೆಯಂತೆ ಭಾಸವಾಗಿತ್ತು.

ಅಷ್ಟೇ ಅಲ್ಲ, ಹಿಂದಿನ ಎರಡು ವರ್ಷಗಳಲ್ಲಿ ಆರ್ಥಿಕ ಉದಾರೀಕರಣ ಮತ್ತು ಹಣಕಾಸಿನ ಸುಧಾರಣೆಗಳ ಆಧಾರದ ಮೇಲೆ ಭಾರತವು ಒಂದು ಬಲವಾದ ಆರ್ಥಿಕ ಬೆಳವಣಿಗೆಯನ್ನು ದಾಖಲಿಸಿತ್ತು. ಹಣದುಬ್ಬರವು ಕಡಿಮೆ ಪ್ರಮಾಣದಲ್ಲಿದ್ದುದು ಹಾಗೂ ಕೈಗಾರಿಕಾ ವಿಸ್ತರಣೆಯು ಹೆಚ್ಚಿನ ಪ್ರಮಾಣದಲ್ಲಿದ್ದುದೂ ಸಹ ಈ ಅವಧಿಯಲ್ಲೇ ದಾಖಲಿಸಲ್ಪಟ್ಟಿತ್ತು.

ಅಕ್ಟೋಬರ್‌ 6 1999  ಫಲಿತಾಂಶವು  ಬೀಜೆಪಿ ಒಳಗೊಂಡ ಎನ್ ಡಿ ಎ  298 ಸ್ಥಾನಗಳನ್ನು, ಕಾಂಗ್ರೆಸ್‌ ಮತ್ತು ಅದರ ಮಿತ್ರಪಕ್ಷಗಳಿಗೆ 136 ಸ್ಥಾನಗಳನ್ನು ನೀಡಿತು. ಅಕ್ಟೋಬರ್‌ 13ರಂದು ವಾಜಪೇಯಿಯವರು ಪ್ರಧಾನಮಂತ್ರಿಯಾಗಿ  ಮತ್ತೆ ಮೂರನೇ ಬಾರಿ ಪ್ರಮಾಣವಚನ ಸ್ವೀಕರಿಸಿದರು. 
  Summary of the September–October 1999 Lok Sabha Election
Parties and AlliancesVotes%ChangeSeatsChange
  National Democratic Alliance (NDA) 135,103,344
86,562,209
11,282,084
5,672,412
6,298,832
4,378,536
9,363,785
2,377,741
2,002,700
1,620,527
454,481
2,502,949
1,364,030
40,997
1,182,061
37.06
23.75
3.10
1.56
1.73
1.20
2.57
0.65
0.55
0.44
0.12
0.69
0.37
0.01
0.32
-0.15
–1.84
*
-0.21
+0.29
+0.20
+0.15
+0.23
*

-0.09
-0.12
*
-0.68
-0.03
270
180
21
15
12
10
8
5
5
4
4
2
2
0
0
+16

*
+9
+6
+1
+1

*
+1
+1
-6
*
-3
  Other BJP Affiliated Parties
13,297,370

3.65

+0.88

29

+12
  Indian National Congress103,120,33028.30+2.48114−27
  Other INC Affiliated Parties
18,753,722
7,046,953
10,150,492

365,313
357,402
833,562
5.15
1.93
2.79

0.10
0.10
0.23
+4.83
+0.10
+0.01

+0.01

+0.01
21
10
7

1
1
2
+18
-8
-7

+1

  Communist Party of India (Marxist)19,695,7675.40+0.2433+1
  Samajwadi Party (Socialist Party)13,717,0213.76−1.1726+6
  Bahujan Samaj Party (Majority Society Party)15,175,8454.16−0.5114+9
  Other Seated Parties
24,826,373
8,260,311
5,395,119
1,500,817
1,288,060
818,713
3,332,702
1,220,698
692,559

448,165
396,216
298,846
297,337
282,583
264,002
222,417
107,828
6.79
2.27
1.48
0.41
0.35
0.22
0.91
0.33
0.19
0.12
0.11
0.08
0.08
0.08

0.07
0.06
0.03
*
*
-0.27
-0.14
+0.02
*
*
+0.08
*
-0.01
+0.03
+0.01
-0.24
+0.01

+0.05
+0.01
30
8
4
3
2
2
1
1
1
1
1
1
1
1
1
1
1
*
*
-5
-2

*
*
+1
*

+1
+1


+1

  Unseated Parties10,751,1762.990
  Independents9,996,3862.74+0.376
  Nominated Anglo-Indians2
Total364,437,294100%545

Reference :

http://en.wikipedia.org/wiki/Indian_general_election,_19991 comment:

  1. ಜಯಲಲಿತಾ ಕೈಕೋಟ್ಟ ಕಾರಣ ಗದ್ದುಗೆ ಇಳಿದ ವಾಜಪೇಯಿಯವರ ಸರ್ಕಾರ ಮತ್ತು UPA -1 ರ ಒಳ್ಳೆಯ ವಿಶ್ಲೇಷನೆ.

    ReplyDelete

enter your comments please