Sunday, July 21, 2013

ಪ್ರಕೃತಿಯ ವಿಜ್ಞಾನ ತತ್ವಗಳೆಲ್ಲ ನಿಗೂಡ(2)



ನಲ್ಲೆ ಇಡುವ ಹೆಜ್ಜೆ ನೆಲದ ಮೇಲಾದರು
ಪ್ರೇಮಿಯ ಹೃದಯದಲ್ಲಿ ಕಂಪನವೇಕೊ!

ಮುಂಗಾರಿನ ಗುಡುಗು ನಭದಲ್ಲಾದರು
ನವಿಲನ ನಾಟ್ಯವದು ವನದಲ್ಲೇಕೊ!

ಕೋಗಿಲೆಯ ಕೂಗು ಮಾವಿನ ಮರದಲ್ಲಾದರು
ಕೂಗುವ ಮಾದುರ್ಯವದು ವಸಂತದಲ್ಲೇಕೊ!

ಪ್ರಕೃತಿಯ ವಿಜ್ಞಾನ ತತ್ವಗಳೆಲ್ಲ ನಿಗೂಡ
ಕ್ರಿಯೆ ಎಲ್ಲೊ ಪ್ರತಿಕ್ರಿಯೆ ಇನ್ನೆಲ್ಲೊ!!

No comments:

Post a Comment

enter your comments please