Friday, February 7, 2014

ಆಕಳಿಕೆ

ಆಕಳಿಕೆ

ಆ....ಆ.....
ಅದೇನೊ ಬೆಳಗಿನಿಂದ ಕುಳಿತಲ್ಲಿಯೇ ಆಕಳಿಕೆ ತಡೆಯಲಾಗುತ್ತಿಲ್ಲ.

ಆಕಳಿಕೆ ಎಂಬ ಪದ ಈ ಆ .. ನಿಂದಲೇ ಹುಟ್ಟಿತೋ ಎನೋ. ಅಗಲವಾಗಿ ಬಾಯಿ ತೆಗೆದು ಆ... ಎಂದು ಆಕಳಿಸುವದನ್ನು ಕಾಣುವಾಗಲೆ ಎದುರಿಗಿರುವರೂ ಸಹಿತ , ಅನಿವಾರ್ಯವಾಗಿ ಆಕಳಿಸುವ ಈ ಕ್ರಿಯೆ ಅಂಟುಜಾಡ್ಯವಂತೂ ಹೌದು.

ತುಂಬಾ ನಿದ್ದೆಗೆಟ್ಟಾಗ, ನಿದ್ದೆಗೆ ಮುಂಚೆ ನಿದ್ದೆಯ ನಂತರ ಹೀಗೆ ಕಾಡುವ ಆಕಳಿಕೆ ಬರುವದಾದರು ಏತಕ್ಕೆ ಎಂಬುದು ಯಾರಿಗು ತಿಳಿಯದು. ಹಿಂದಿನ ದಿನ ಅತಿಯಾದ ಶ್ರಮಪಟ್ಟಿದ್ದರೆ, ನಿದ್ದೆಗೆಟ್ಟಿದ್ದರೆ ಹೀಗೆ ಕೆಲವೊಮ್ಮೆ ಆಕಳಿಕೆ ಬರುವುದು ಉಂಟು. ನಿದ್ದೆ ಜಾಸ್ತಿಮಾಡಿದ ನಂತರವೂ ಈ ಆಕಳಿಕೆ ಕಾಡುವುದುಂಟು!  ಅತಿಯಾದ ಮೈಕೈ ನೋವಿನಿಂದ ದೇಹವನ್ನು ಸಡಿಲಗೊಳಿಸಲು ಸಹ ಆಕಳಿಕೆ ಬರುವುದು ಉಂಟು.

ಮನುಷ್ಯನಷ್ಟೆ ಅಲ್ಲ ಹಲವು ಪ್ರಾಣಿಗಳು ಸಹ ಆಕಳಿಸುವದನ್ನು ನಾನು ಕಾಣಬಹುದು.

ವಿಚಿತ್ರ ಎಂದರೆ ಮಗು ಹುಟ್ಟುವ ಮುಂಚೆ , ತಾಯಿಯ ಗರ್ಭದಲ್ಲಿದ್ದಾಗಲೆ ಆಕಳಿಸುತ್ತ ಇರುತ್ತದೆ.

ಇದರಲ್ಲಿರುವ ವೀಡಿಯೋ ನೋಡಿ http://en.wikipedia.org/wiki/Yawn

ಇಂತಹ ಅಂಟುಜಾಡ್ಯ ಆಕಳಿಕೆ ಕಾರಣಗಳು ಏನು !

ಮನುಷ್ಯನ ದೇಹದ ರಕ್ತದಲ್ಲಿ ಇಂಗಾಲದ ಡೈ ಆಕ್ಸೈಡ್ ಪ್ರಮಾಣ ಜಾಸ್ತಿಯಾದಾಗ ಆಕಳಿಕೆ ಬರುತ್ತದೆ ಎನ್ನುತ್ತದೆ ಒಂದು ಪ್ರಯೋಗ. ಹಾಗೆಂದು, ಅದನ್ನು ಪೂರ್ತಿ ಪ್ರಮಾಣಿಕರಿಸಲು ಸಾದ್ಯವಾಗಿಲ್ಲ. ದೇಹಕ್ಕೆ ಆಮ್ಲಜನಕ ಒದಗಿಸಿದಾಗಲು ಆಕಳಿಕೆ ನಿಂತಿಲ್ಲ.ಪ್ರಾಣಿಗಳಲ್ಲಿ ಆಕಳಿಕೆಯನು ಇತರ ಪ್ರಾಣಿಗಳಿಗೆ ರವಾನಿಸುವ ಎಚ್ಚರಿಕೆ ಎಂದು ಭಾವಿಸಲಾಗುತ್ತದೆ, ಆದರೆ ಆಕಳಿಕೆಗೆ ಇಂತದೇ ಎಂದು ನಿಶ್ಚಿತ ಕಾರಣವನ್ನು ಊಹಿಸಲಾಗಿಲ್ಲ.
ಮತ್ತೊಂದು ಕಾರಣ ಮೆದುಳಿನಲ್ಲಿ ಹೆಚ್ಚಾಗುವ ಸೆರೋಟಿನಿನ್ , ಡಿಪೋಮೈನ್ ನಂತಹ ರಸಾಯನಿಕಗಳು ಇರಬಹುದು ಎನ್ನುತ್ತದೆ ಅನ್ವೇಷಣೆ.ಏಂಡೋರ್ಫಿನ್ಸ್ ನಂತಹ ರಸಾಯಿನಿಕಗಳು ಆಕಳಿಕೆಯನ್ನು ತಡೆಗಟ್ಟುತ್ತದೆ ಎನ್ನಲಾಗುತ್ತದೆ.

ಆಕಳಿಕೆಯ ವೈಚಿತ್ರ್ಯ ಎಂದರೆ ಇದರ ಸಾಂಕ್ರಾಮಿಕತೆ, ಎದುರಿಗೆ ಇರುವ ವ್ಯಕ್ತಿ ಸತತವಾಗಿ ಆಕಳಿಸುತ್ತ ಇದ್ದಲಿ, ನಮಗೂ ಅದೂ ಕಾಡುತ್ತದೆ.
ಆಕಳಿಕೆಯ ಬಗ್ಗೆ ಹಲವು ಸಂಶೋಧನೆಗಳು ನಡೆದಿವೆ. ಮನುಷ್ಯನಲ್ಲದೆ ಹಲವು ಸಾಕು ಪ್ರಾಣಿಗಳು, ಪಕ್ಷಿಗಳು, ಕಡೆಗೆ ಮೀನು ಸಹ ಆಕಳಿಸುತ್ತದೆ ಎನ್ನುತ್ತದೆ ಕೆಲವು ಪ್ರಯೋಗಗಳು.! ಮನಸಿಗೆ ಹೆಚ್ಚು ಆಕರ್ಷಕವಲ್ಲದ ವಿಷಯಗಳನ್ನು ತುರುಕಹೊರಟಾಗ ಆಕಳಿಕೆ ಬರುತ್ತದೆ,  ಹೆಚ್ಚು ಗಹನವಾದ ವಿಷಯಗಳನ್ನು ಕೇಳುತ್ತಿರುವಾಗ ನಮಗೆ ಏಕಾಗ್ರತೆ ಇಲ್ಲದಾಗಲು ಆಕಳಿಕೆ ಬರುತ್ತದೆ,
ಹೀಗಾಗೆ ವಿಧ್ಯಾರ್ಥಿಗಳಿಗೆ ಕ್ಲಾಸ್ ರೂಮಿನಲ್ಲಿ ಹೆಚ್ಚು ಹೆಚ್ಚು ಆಕಳಿಕೆ!












ಸತತವಾಗ ಆಕಳಿಸುವ ಚಿತ್ರಗಳನ್ನು ವಿಡಿಯೋಗಳನ್ನು ತೋರಿಸಿದರೆ  ಆಗಲೂ ಸಹ ಆಕಳಿಕೆ ಬರುತ್ತದೆ ಎಂದು ಪ್ರಯೋಗಸಿದ್ದವಾಗಿದೆ.
ಕೊಂಚ ಕುತೂಹಲದ ವಿಷಯ ನಮ್ಮ ಪೌರಾಣಿಕ ಕತೆಗಳ ಪ್ರಕಾರ ಬ್ರಹ್ಮ ಆಕಳಿಸಿದಾಗ ನಾಲಕ್ಕು ವೇಧಗಳು ಕಳೆದುಹೋದವು ಅದನ್ನು ಹಿಂದೆ ತರಲು ವಿಷ್ಣು ಸಾಹಸಪಡಬೇಕಾಯಿತು.
ಆಕಳಿಕೆಯ ಬಗ್ಗೆ ಕೆಲವು ಮೂಡನಂಭಿಕೆಗಳು ಸಹ ಇವೆ. ಆಕಳಿಸುವಾಗ ಆತ್ಮ ಅಥವ ಒಳ್ಳೆಯ ಶಕ್ತಿಗಳು ಹೊರಹೋಗುವದಾಗಿ, ಕೆಟ್ಟ ಶಕ್ತಿಗಳು ದೇಹದ ಒಳ ಪ್ರವೇಶಮಾಡುವದಾಗಿ ಕೆಲವು ಕಡೆ ನಂಬುವರಂತೆ.
ಹಾಗೆ ಮಂತ್ರೋಚ್ಚಾರಣೆ , ಕೆಟ್ಟ ಶಕ್ತಿಗಳನ್ನು ಉಚ್ಚಾಟಿಸುವಾಗ ಸಹ ಆಕಳಿಕೆ ಬಂದರೆ ಅದು ಮಂತ್ರದ ಪ್ರಭಾವವೆ ಎಂದು ನಂಬುತ್ತಾರೆ.
ಏನು ಈ ಬರಹವನ್ನು ಓದುತ್ತ ಓದುತ್ತ ನೀವು ಸಹ....
ಆ.........
ಛೇ ! ಸಾಕು ಬಿಡಿ!   ಇಲ್ಲಿಗೆ ನಿಲ್ಲಿಸುವೆ !


1 comment:

  1. ಅರೆರೆ ಪೂರ್ತಿ ಓದಿದ ಮೇಲೆಯೇ ನಾನೂ ಆಕಳಿಸಿದೆ ಅಣ್ಣಾವ್ರೇ.
    ಒಳ್ಳೆಯ ಮಾಹಿತಿಯ ಸಚಿತ್ರ ಲೇಖನ.

    ReplyDelete

enter your comments please