Saturday, June 4, 2011

ಇವಳೇನ ತುಂಗೆ ಇವಳೇನ?

ಇವಳೇನ ತುಂಗೆ ಇವಳೇನ?
ಇವಳೇನ ತುಂಗೆ ಇವಳೇನ?
ಕಾಳಸರ್ಪದ ಹಾಗೆ ಬುಸುಗುಟ್ಟಿ ಹುಂಕರಿಸಿ
ಮಧಗಜದ ಹಾಗೆ ಎಲ್ಲವನು ಕಾಲಲ್ಲಿ ಹೊಸಗಿ
ನೆಲವನ್ನು ನದಿಯನ್ನು ಒಂದುಗೂಡಿಸಿ ಬೆದರಿಸಿ
ಹರಿಯುತ್ತಿದ್ದ
ತುಂಗೆ ಇವಳೇನ?

ಇವಳೇನ ತುಂಗೆ ಇವಳೇನ?
ಗುರುವಿನ ಪಾದ ತೊಳೆಯೆ ತುಂಬಿ ಬಂದ ಭಕ್ತಿಯಂತೆ
ಜನರ ಪಾಪಶೇಷ ಕಳೆಯೆ ಹರಿದು ಬಂದ ಶಕ್ತಿಯಂತೆ
ಹಳೆಯದೆಲ್ಲ ಕೆಡವಿ ಹೊಸದು ಕಟ್ಟುವ ಪ್ರಸಕ್ತಿಯಂತೆ
ಹರಿಯುತ್ತಿದ್ದ
ತುಂಗೆ ಇವಳೇನ?

ಇವಳೇನ ತುಂಗೆ ಇವಳೇನ?
ರೋಷಾವೇಶದಿ ಅಬ್ಬರಿಸಿ ಹಸುಗರುವ ಎಳೆದೊಯ್ದ
ರಣಕಾಳಿಯ ರೂಪವ ಧರಿಸಿ ಆರ್ಭಟಿಸಿ ಮೆರೆಯುತಲಿ
ಎರಡು ಕೈಯನು ಚಾಚಿ ಎದೆಗೆ ಅಪ್ಪುತಲಿ
ನೂರಾರು ಜೀವವ ಸುಡುಗಾಡಿಗೆ
ಎಳೆದೋಯ್ದ
ತುಂಗೆ ಇವಳೇನ?....


ಇವಳೇನ ತುಂಗೆ ಇವಳೇನ?
ತೊಟ್ಟಲಲ್ಲಿ ಮಲಗಿದ ಹಸುಕಂದನ ಹಾಗೆ
ಅಮ್ಮನ ಹಿಂದೆ ಹೊರಟ ಪುಟ್ಟ ಕರುವಿನ ಹಾಗೆ
ಗೆಜ್ಜೆಯ ಹೆಜ್ಜೆಗಳನ್ನಿಡುತ್ತ ಪುಟ್ಟಗೌರಿಯ ಹಾಗೆ
ಹರಿಯುತಿಹ
ತುಂಗೆ ಇವಳೇನ?

(ಮೊನ್ನೆ ಶನಿವಾರ ೨೧/೫/೨೦೧೧ ರಂದು ಮಂತ್ರಾಲಯಕ್ಕೆ ಹೋಗಿದ್ದೆವು , ಹಸುಗೂಸಿನ ಹಾಗೆ ಹರಿಯುತ್ತಿರುವ ತುಂಗೆಯನ್ನು ಕಂಡಾಗ ಅನ್ನಿಸಿದ್ದು)

2 comments:

  1. ಪಾರ್ಥ ಸಾರಥಿ ಅವ್ರೆ ನಿಮ್ಮ ಈ ಬ್ಲಾಗಿನ ಬಗ್ಗೆ ತೀರ ಈಚೆಗೆ ತಿಳಿಯಿತು.. ಹೀಗಾಗಿ ತಡ ಪ್ರತಿಕ್ರಿಯೆ... ನೀವು ತುಂಗಾ ಭದ್ರೆ ಬಗ್ಗೆ ಬರೆದದ್ದು ಹಿಡಿಸಿತು ನನಗೆ ತೆರೆ ಈಚೆಗೆ ನೆನಪಿರುವಂತೆ ಇದುವರೆಗೂ ತುಂಗೆಯ ದೆಸೆಯಿಂದ ನಮಗೆಲ್ಲ ಹಿತ ವಾಗಿದೆಯೆ ಹೊರತು ಕೆಡುಕು(ನೆರೆ) ಆಗಿಲ್ಲ... ಅಲ್ಲದೆ ಮಂತ್ರಾಲಯ ಶ್ರೀ ರಾಘವೇಂದ್ರರ ಆಯ್ದ ಕ್ಚೆತ್ರ ಅಲ್ಲವೇ ಅದು?

    ReplyDelete
  2. ನಿಜ ಅಲ್ಲಿ ಯಾರಿಗು ಕೆಡಕಾಗದು
    ನಾನು ಬರೆದಿರುವುದು ತುಂಗೆ
    ಎರಡು ಮುಖ ರುದ್ರಕಾಳಿಯಂತ ಭದ್ರೆಯದು ಮತ್ತು ಮುಗ್ದ ಮಗುವಿನಂತ ಏನು ತಿಳಿಯದ ಮುಖ ಎರಡರ ಹೋಲಿಕೆಗಾಗಿ ಅಷ್ಟೆ

    ReplyDelete

enter your comments please