Friday, March 16, 2012

ಗೂಳಿಯೊಂದು ಓಡುತಿದೆ ಪಿಂಗಾಣಿಯ ಜಾತ್ರೆಯಲಿ

ಗೂಳಿಯೊಂದು ಓಡುತಿದೆ ಪಿಂಗಾಣಿಯ ಜಾತ್ರೆಯಲಿ


ಬಾಲ ಎತ್ತಿ ತಲೆಯ ಒತ್ತಿ ಮಸ್ತಿಹಿಡಿದ ರೀತಿಯಲಿ
ಬಾಲ ಹಿಡಿಯಬಂದ ಜನರ ಕಣ್ಣ ದೂಳ ತುಂಬುತಲಿ
ಗೂಳಿಯೊಂದು ಓಡುತಿದೆ ಪಿಂಗಾಣಿಯ ಜಾತ್ರೆಯಲಿ

ಹಿಂದೆಮುಂದೆ ತಿರುಗುತಲಿ ಅತ್ತ ಇತ್ತ ನೋಡುತಲಿ
ಎಲ್ಲಿ ಏನು ಉಳಿಸೆನೆಂಬ ಮದವು ತುಂಬಿ ಮನದಲ್ಲಿ 
ಗೂಳಿಯೊಂದು ಓಡುತಿದೆ ಪಿಂಗಾಣಿಯ ಜಾತ್ರೆಯಲಿ

ಮುಂದೆ ಮೂಗುದಾರವಿಲ್ಲ ಕುತ್ತಿಗೆಯಲ್ಲಿ ಹಗ್ಗವಿಲ್ಲ
ಹಿಡಿಯ ಬಂದ ಜನರ ತಾನು ತಲೆಯಬೀಸಿ ನೂಕುತಲಿ
ಗೂಳಿಯೊಂದು ಓಡಿತಿದೆ ಪಿಂಗಾಣಿಯ ಜಾತ್ರೆಯಲಿ

ತನ್ನತನ ಅದಕಿಲ್ಲ ಇನ್ನು ಬೇರೆ ಭಾವ ಲೆಕ್ಕಕಿಲ್ಲ  
ಹಮ್ಮು ತುಂಬಿ ಮನದಲ್ಲಿ ಪರಚಿಂತೆ ಅದಕಿಲ್ಲ  
ಗೂಳಿಯೊಂದು ಓಡುತಿದೆ ಪಿಂಗಾಣಿಯ ಜಾತ್ರೆಯಲಿ

ಎಲ್ಲಿ ಏನು ಗೊಂದಲದಲಿ ಜನರ ಕೂಗಾಟದಲಿ
ಗೂಳಿಯನ್ನು ಮನದಿ ಶಪಿಸೆ ತಾನು ಮಾತ್ರ ಹರುಷದಲಿ
ಗೂಳಿಯೊಂದು ಓಡುತಿದೆ ಪಿಂಗಾಣಿಯ ಜಾತ್ರೆಯಲಿ

[published in SAMPADA in 14 mar 2011]

No comments:

Post a Comment

enter your comments please