Saturday, June 22, 2013

ಕ್ಲೌಡ್ ಬರ್ಷ್ಟ್...ನಲುಗಿದ ಉತ್ತರಭಾರತ


ಮೋಡಸ್ಪೋಟ

=========
ಬೆಂಗಳೂರಿನಲ್ಲಿ ರಾತ್ರಿಯೆಲ್ಲ ಸತತವಾಗಿ ಮಳೆ ಸುರಿದು , ದಿನದಲ್ಲಿ ಸುಮಾರು ೧೦ ಸೆಂ.ಮಿ (೧೦೦ ಮಿ.ಮಿ.) ಮಳೆ ಬಿತ್ತು ಅಂದುಕೊಳ್ಳೋಣ, ಆಗ ಅದರ ಪರಿಣಾಮ ಬೆಂಗಳೂರಿನ ಮೇಲೆ ಘೋರವಾಗಿರುತ್ತದೆ.

ಈಗ ಅದೆ ಮಳೆ ರಾತ್ರಿಯೆಲ್ಲ ಬೀಳುವ ಬದಲಿಗೆ ಆ ೧೦ ಸೆಂ.ಮಿ ಮಳೆಯು, ಕೆಲವೆ ನಿಮಿಶಗಳಲ್ಲಿ ಅಂದರೆ ಬರಿ ಐದು ನಿಮಿಷದಲ್ಲಿ ಬೆಂಗಳೂರಿನ ಮೇಲೆ ಸುರಿದರೆ, ಅದರ ಪರಿಣಾಮ ನಮಗೆ ಉಹಿಸಲು ಸಾದ್ಯವಿಲ್ಲ. 

ಆ ರೀತಿ ಇದ್ದಕ್ಕಿದಂತೆ ಸುರಿಯುವ ಕುಂಭದ್ರೋಣ ಮಳೆಯನ್ನು ಅಂಗ್ಲದಲ್ಲಿ 'ಕ್ಲೌಡ್ ಬರ್ಷ್ಟ್' ಅನ್ನುತ್ತಾರೆ, ಅದಕ್ಕೆ ಕನ್ನಡ ಪದ 'ಮೋಡಸ್ಪೋಟ' ಅಂದುಕೊಳ್ಳಬಹುದೇನೊ

ಈಚಿನ ವರ್ಷಗಳಲ್ಲಿ ಪದೆ ಪದೆ ಕೇಳಿ ಬರುವ ಪದ 'ಕ್ಲೌಡ್ ಬರ್ಷ್ಟ್' ಬಹುಷ ಕಳೆದ ವರ್ಷ ದಿಸೆಂಬರ್-೨೦೧೨ ನಲ್ಲಿ ಇದೆ ಮಳೆ ಬಂದಿದ್ದಲ್ಲಿ ಅದು ಮಹಾಪ್ರಳಯದ ಬಾಗವಾಗುತ್ತಿತ್ತು.

ತೀರ ಅನಿರೀಕ್ಷಿತವಾಗಿ, ಕೆಲವೆ ನಿಮಿಷಗಳಲ್ಲಿ ಬೀಳುವ ಇಂತಹ ದೊಡ್ಡ ಮಳೆಗಳೆ ಕ್ಲೌಡ್ ಬರ್ಷ್ಟ್ . ಇದನ್ನು ಮೊದಲೆ ಉಹಿಸುವುದು ಬಹಳ ಕಷ್ಟ.

ಈಗ ಒಂದೆರಡು ದಿನಗಳಿಂದ ಸುದ್ದಿಯಾಗಿರುವ ಉತ್ತರ ಭಾರತದ ಮಳೆ , ಹಿಮಾಲಯದ ತಪ್ಪಲಿನಲ್ಲಿ ಸುರಿಯುತ್ತ, ಗಂಗೆ ಯಮುನೆಯರು ಉಕ್ಕಿ ಹರಿದು, ನೂರಾರು ಜನ ತಮ್ಮ ಜೀವವನ್ನೆ ಕಳೆದುಕೊಂಡು, ಸಾವಿರ ಸಾವಿರ ಮಂದಿ ಸ್ಥಳಿಯರು ಹಾಗು ಯಾತ್ರಾರ್ಥಿಗಳು ಅಸಹಾಯಕರಾಗಿ ಕಣ್ಣೀರು ಸುರಿಸುವಂತೆ ಮಾಡಿದೆ ಈ ಮಳೆಯ ಸುನಾಮಿ. ಇದೆ ಜೂನ್ ೧೭ , ೧೮ ರ ಮಳೆಯ ಪ್ರತಾಪ ಉಹಿಸಲು ಆಗದಷ್ಟು.






ಕೇದಾರನಾಥ, ರುದ್ರಪ್ರಯಾಗ, ಹೃಷಿಕೇಶದಿಮ್ದ ಕೆಳಗಿನ ಯಮುನೆಯ ದಡ ದೆಹಲಿಯವರೆಗು ಉತ್ತರ ಭಾರತ ಮಳೆಯಿಂದ ತತ್ತರಿಸಿದೆ, ಗಂಗೆ ಯಮುನೆಯರು ದಡದ ಉದ್ದಕ್ಕು ಸಾವಿರಾರು ಮನೆಗಳನ್ನು ಕೆಡವುತ್ತ, ಜನ ಪ್ರಾಣಿಗಳ ಜೀವಹರಣ ಮಾಡುತ್ತ ತನ್ನ ರುದ್ರನರ್ತನ ನಡೆಸಿದ್ದರೆ. ಅವರ ತಾಂಡವ ನರ್ತನಕ್ಕೆ ದಡಲ್ಲಿರುವ ಹಲವಾರು ದೇವಾಲಯಗಳು ನಾಶವಾಗಿವೆ, ಪವಿತ್ರ ಕೇದಾರನಾಥ ಕ್ಷೇತ್ರವೆ ಕೊಚ್ಚಿಹೋಗಿದೆ. ಹಲವು ಕ್ಷೇತ್ರಗಳು ಕೆಸರಿನಲ್ಲಿ ಹೂತುಹೋಗಿವೆ, ಆ ಕೆಸರಿನಲ್ಲಿ ನೂರಾರು ಮನುಷ್ಯ ದೇಹಗಳು ಸೇರಿವೆ. ಸಂಪರ್ಕ ಕಲ್ಪಿಸುವ ರಸ್ತೆಗಳೆಲ್ಲ ತಮ್ಮ ರೂಪ ಕಳೆದುಕೊಂಡಿವೆ. ಎಲ್ಲವು ಸಹಜ ಸ್ಥಿಥಿಗೆ ಬರುವಾಗ ಕೆಲವಾರು ವರ್ಷಗಳೆ ಆಗಬಹುದೇನೊ ಅನ್ನಿಸುತ್ತವೆ.

ಬಹುತೇಕ ಗಂಗ ಯಮುನೆಯರ ಪ್ರತಾಪಕ್ಕೆ ನಲುಗಿರುವ ಜಾಗಗಳೆಲ್ಲ ಯಾತ್ರ ಸ್ಥಳಗಳೆ, ಹಾಗಾಗಿ ಭಾರತದ, ವಿದೇಶದ ಸಾವಿರಾರು ಯಾತ್ರಾರ್ಥಿಗಳು ನೀರು ಅಹಾರ, ಔಷದಗಳ ಕೊರತೆಯಿಂದ ಸಂಕಷ್ಟಕ್ಕೆ ಈಡಾಗಿದ್ದಾರೆ. ಕರ್ನಾಟಕದ ಹಲವಾರು ಯಾತ್ರಾರ್ಥಿಗಳು ಸಹ ಇವರಲ್ಲಿ ಸೇರಿರುವರು. ಹಾಗೆ ಕೇಳಿಬಂದ ಹೆಸರು, ಹಿಂದೊಮ್ಮೆ ಮಂತ್ರಾಲಯದಲ್ಲಿ ಪ್ರವಾಹಬಂದಾಗ ಸ್ವತಃ ಹೆಲಿಕಾಫ್ಟರ್ ನಲ್ಲಿ ಹೋಗಿ ಅಲ್ಲಿದ್ದ ಗುರುಗಳನ್ನು ರಕ್ಷಿಸಿದ ಕರ್ನಾಟಕದ ಹಿಂದನ ಸರ್ಕಾರದ ಸಚೀವೆ ಶೋಭ ಕರದ್ಲಾಜೆಯವರು .

ಇಂತಹ ಪರಿಣಾಮಕ್ಕೆ ಕಾರಣವಾಗಿರುವ ಕ್ಲೌಡ್ ಬರ್ಷ್ಟಗೆ ಭಾರತದಲ್ಲಿ ಪ್ರಪಂಚದಲ್ಲಿ ಸಾಕಷ್ಟು ಇತಿಹಾಸವಿದೆ, ಇದರ ವಿವರ ಪರಿಣಾಮಗಳನ್ನೆಲ್ಲ ಈ ಲಿಂಕ್ ನಲ್ಲಿ ನೋಡಬಹುದು
http://en.wikipedia.org/wiki/Cloudburst


ಚಿತ್ರಕೃಪೆ : ಇಂಟರ್ ನೆಟ್ ವಿವಿದ ಮೂಲಗಳಿಂದ ತೆಗೆದುಕೊಂಡಿರುವುದು

2 comments:

  1. ದುರಂತದ ಸಮಗ್ರ ಚಿತ್ರಣ ಚೆನ್ನಾಗಿ ಕಟ್ಟಿಕೊಟ್ಟಿದ್ದೀರಾ ಸಾರ್. ಸರ್ಕಾರಗಳೂ ಸಕಾಲಕ್ಕೆ ಸಹಕರಿಸಿದ್ದರೆ, ಮಾನವ ನದಿ ಮೂಲಗಳನ್ನು ಆಕ್ರಮಿಸಿಕೊಳ್ಳದೇ ಇದ್ದಿದ್ದರೆ ಮತ್ತು ಹವಾಮಾನ ಇಲಾಖೆ ಗಂಭೀರವಾದ ಎಚ್ಚರಿಕೆ ಕೊಟ್ಟಿದ್ದರೆ ಹಲವು ಜನರ ಸಾವು ಮತ್ತು ನಷ್ಟ ತಡೆಗಟ್ಟ ಬಹುದಿತ್ತೇನೋ! ಅಲ್ಲವೇ...

    ReplyDelete
  2. ಖಂಡೀತ ಹೌದು ಇದೆಲ್ಲ ಮನುಷ್ಯನ ಕೈವಾಡಕ್ಕೆ ಪ್ರಕೃತಿ ಕೊಡುವ ಉತ್ತರದ ರೀತಿಗಳು

    ReplyDelete

enter your comments please