Saturday, June 4, 2011

ಮಹಾತ್ಮ ಹಾಗು ಪ್ರೇತಾತ್ಮ

ಅಪ್ಪನ ಜೇಬಿನ ಹಣ ಕದ್ದ
ಕದ್ದ ಹಣದಲ್ಲಿ ಸಿಗರೇಟ್ ಸೇದಿದ
ಅಪ್ಪನಲ್ಲಿ ತಪ್ಪೋಪ್ಪಿಕೊಂಡ
ಸತ್ಯವನ್ನೆ ಜೀವನ ದೀಕ್ಷೆಯನ್ನಾಗಿ ಮಾಡಿಕೊಂಡು
ಮಕ್ಕಳೆ ಹೀಗೆ ಮಾಡಬೇಡಿ ಅಂದ
ಗಾಂದೀಜಿ ಮಹಾತ್ಮನಾದ

ರಕ್ತ ಹರಿಸುವುದೆ ಜೀವನವೆಂದ
ಅಮಾಯಕರ ಮರಣವೆ ತನಗೆ ದೈವಾಜ್ಞೆಯೆಂದ
ಸೈತಾನ ಸಾಮ್ರಾಜ್ಯದ ಚಕ್ರವರ್ತಿ ತಾನೆಂದ
ಸುಳ್ಳು ಜೀವನವೆ ಪರಮ ಆಪ್ತವೆಂದ (ತನ್ನ)
ಮಕ್ಕಳಿಗೆ ತನ್ನಂತೆ ಹಿಂಸಾಪಶುವಾಗಬೇಡಿ ಎಂದ
ಒಸಾಮ ಬಿನ್ ಲಾಡನ್ ಪ್ರೇತಾತ್ಮನಾದ

2 comments:

  1. ನಿಮ್ಮ ಕವನ ಓದಿದ ಮೇಲೆ ನನಗೆ ನೆನಪಾದದ್ದು ಈ ಜೋಕ್:
    ಅಪ್ಪನೊಬ್ಬ ತನ್ನ ಮಗನ ಬಗ್ಗೆ ಬೊಗಳೆ ಬಿಡುತ್ತಿದ್ದ. "ನಮ್ಮ ಹುಡುಗ ಥೇಟ್ ಗಾಂಧೀ ತರ! ಗಾಂಧೀಜಿ ಕಳ್ಳತನ ಮಾಡಿದ ನಮ್ಮ ಹುಡುಗ ಕೂಡ ಮಾಡಿದ, ಗಾಂಧೀಜಿ ಬೀಡಿ ಸೇದಿದ್ರು ನಮ್ಮವನೂ ಬೀಡಿ ಸೇದಿದ, ಗಾಂಧೀಜಿ ಶರಾಬು ಕುಡಿದ್ರು ನಮ್ಮವನೂ ಶರಾಬು ಕುಡಿದ, ಗಾಂಧೀಜಿ ಮಾಂಸ ತಿಂದ್ರು ನಮ್ಮವನೂ ಕೂಡ ಮಾಂಸ ತಿಂದ, ಗಾಂಧೀಜಿ ಸುಳ್ಳು ಹೇಳಿದ್ರು ನಮ್ಮವನೂ ಕೂಡ ಸುಳ್ಳು ಹೇಳಿದ. ಈಗ ಹೇಳಿ ನಮ್ಮವನು ಗಾಂಧೀ ತರಾ ಅಲ್ವಾ!?" "ಆದ್ರೇ!, ಒಂದೇ ವ್ಯತ್ಯಾಸ, ಗಾಂಧೀಜಿ ದೊಡ್ಡವರಾದ್ಮೇಲೆ ಅವನ್ನೆಲ್ಲಾ ಬಿಟ್-ಬಿಟ್ರು ಆದ್ರೆ ನಮ್ಮವನು ಬಿಟ್ಟಿಲ್ಲ ಅಷ್ಟೇ!"

    ReplyDelete

enter your comments please