Monday, July 22, 2013

ಪ್ರಕೃತಿಯ ವಿಜ್ಞಾನ ತತ್ವಗಳೆಲ್ಲ ನಿಗೂಡ(3)


ದ್ವೇಷದ ಕತ್ತಿ  ಅದೇಕೊ  ಮೊಂಡು
ಮನದಲ್ಲಿ ಸದಾ ಹಪಹಪಿ
ನಿರ್ಲಕ್ಷಿಸಿದರೆ ತುಕ್ಕು ಹಿಡಿದು ಸೇರುವುದು ಮಣ್ಣು  

ಸ್ನೇಹದ ಕತ್ತಿ  ಚುರುಕು ಜಾಸ್ತಿ
ಸದಾ ತಿರುಗುವುದು ಸುತ್ತ ರಕ್ಷಣೆಗೆ    
ನಮ್ಮ ಬೆನ್ನ ಕಂಡರೆ ಇರಿದುಬಿಡುವುದು ಒಮ್ಮೊಮ್ಮೆ  

ಪ್ರೀತಿಯ ಕತ್ತಿ ಹರಿತ ಜಾಸ್ತಿ
ಇಳಿದು ಬಿಡುವುದು ಎದೆಯ ಒಳಗೆ
ತೊಟ್ಟು ರಕ್ತ ಸೋರುವ ಮುನ್ನ  ತರುವುದು ಮರಣ

ಪ್ರಕೃತಿಯ ವಿಜ್ಞಾನ ತತ್ವಗಳೆಲ್ಲ ನಿಗೂಡ
ಅದು ಪ್ರೀತಿಯ ಕತ್ತಿಯನ್ನೆ ಮಸೆಯುವುದು ಸತತ   
ಮುಟ್ಟಿ ನೋಡುತ್ತ ಅದರ ಹರಿತ


No comments:

Post a Comment

enter your comments please