Tuesday, July 23, 2013

ಪ್ರಕೃತಿಯ ವಿಜ್ಞಾನ ತತ್ವಗಳೆಲ್ಲ ನಿಗೂಡ(4)

ಪ್ರಕೃತಿಯ ವಿಜ್ಞಾನ ತತ್ವಗಳೆಲ್ಲ ನಿಗೂಡ(4)




ಮೇಲೆ ಹೋಗುವದೆಲ್ಲ ಕೆಳಗೆ ಬರಲೇ ಬೇಕು
ಎನ್ನುವುದು ಪ್ರಕೃತಿ ನಿಯಮ
ಮೇಲೇರುವ ಮನುಜ ಇದನ್ನು ಮರೆಯುವುದು ಸಹಜ
************
ನೆಲದ ನೀರು ಗಗನ ಸೇರಿ ಮೋಡವಾಗಿ
ಮಳೆಗೆರೆಯುವುದು  ಪ್ರಕೃತಿ ನಿಯಮ
ಮಳೆಗಾಗಿ ನೆಲ ನೋಡದೆ ನಭ ನೋಡಿ ಶಪಿಸುವ ಮನುಜ ಸಹಜ
************
ಬೇರುಬಿಟ್ಟ ಹಳೆಯ ಮರ ಬಿಳಲು ಬಿಟ್ಟು
ಹೆಚ್ಚಿಸುವುದು ತನ್ನ ಆಯಸ್ಸು
ಆಗ ತಾನೆ ಕೊನರಿದ ಚಿಗುರೊಂದು ಮರುಟುವುದು
ಬದುಕುವ ತನ್ನ ಆಸೆ ಬಿಟ್ಟು
ಪ್ರಕೃತಿಯ ಸಾವಿನ ಸರತಿಯ ನಿಯಮವೆ ಬೇರೆ
*********
ಪ್ರಕೃತಿಯ ವಿಜ್ಞಾನ ತತ್ವಗಳೆಲ್ಲ ನಿಗೂಡ
ಕಲಿತ ಮಂತ್ರಾಸ್ತ್ರಗಳ ಯುದ್ದದಲಿ ಮರೆತ ಕರ್ಣನಿಗೆ ಗುರುಶಾಪ
ಅರಿತ ಸತ್ಯವನೆಲ್ಲ ಮರೆತು ಮೆರೆಯುವುದು ಮನುಜನಿಗೆ ವಿದಿಶಾಪ

No comments:

Post a Comment

enter your comments please