ಬದಲಾದ ನನ್ನೊಳಗಿನವ
-----------------------------
ಬೆಳಗ್ಗೆ ಎದ್ದು ಹೊರಬರುವಾಗ
ಅದೇ ಹಳೆಯ ಸೂರ್ಯ ಇಣುಕುತ್ತಿದ್ದ
ಮನೆಯ ಮುಂದಿನ ನಂಜಬಟ್ಟಲ ಗಿಡದಲ್ಲಿ
ದಿನವು ಬರುತ್ತಿದ್ದ ಅದೆ ಎರಡು ಪಕ್ಷಿಗಳು
ಮನೆಯ ಹಿಂದೆ ಕಾಗೆಗಳ ಕಲವರ
ರಸ್ತೆಯಲ್ಲಿ ನಡೆದಂತೆ ಅದೆ ಅದೆ ದೃಷ್ಯ
ಮನೆಯ ಮುಂದು ರಂಗೋಲಿ
ಹಾಕುತ್ತಿರುವ ವಯಸ್ಸಾದ ಮಹಿಳೆಯರು
ಶಾಲು ಹೊದ್ದು ಬದುಕುವ ಉತ್ಸಾಹದಿಂದ
ವಾಕಿಂಗ್ ಹೊರಟಿರುವ ವಯಸ್ಕರು
ಅದೆ ಗಾಳಿ ಅದೆ ಭೂಮಿ ಅದೆ ನೀರು
ಎಂದಿಗೂ ಬದಲಾಗದ ಅವುಗಳು
ಆದರೆ ನನ್ನೊಳೆಗೇನೆ ಬೇರೆ
ನಿನ್ನೆಯವರೆಗೂ ಇದ್ದವ ಇಂದು ಕಾಣುತ್ತಿಲ್ಲ
ಎಲ್ಲಕ್ಕು ನಾನು ನಾನು ಎನ್ನುತ್ತಿದ್ದವ
ಇಂದೇಕೊ ಎಲ್ಲಕ್ಕು ನಾನೆ? ಎನ್ನುತ್ತಿರುವ
ಎಲ್ಲವನ್ನು ಕಡಿದು ಹಾಕಬಲ್ಲೆ ಎಂದು ಕೂಗಿದವ
ಇಂದು ಕೊಡಲಿ ಎಸೆದು ಕುಳಿತಿರುವ
No comments:
Post a Comment
enter your comments please