Saturday, April 5, 2014

ಸ್ವತಂತ್ರದ ಹೆಜ್ಜೆಗಳು 3 - ಭಾರತದ ಮಹಾಚುನಾವಣ ಸಂಗ್ರಾಮಗಳು (1962)

ಸ್ವತಂತ್ರದ ಹೆಜ್ಜೆಗಳು 3 - ಭಾರತದ ಮಹಾಚುನಾವಣ ಸಂಗ್ರಾಮಗಳು  (1962)1957  ರಲ್ಲಿ ನೆಹರೂರವರು ಕಾಂಗ್ರೆಸ್‌ನ್ನು ಒಂದು ಸುಸ್ಪಷ್ಟವಾದ ವಿಜಯದೆಡೆಗೆ ಒಯ್ದಿದ್ದರು. ನೆಹರು ತಮ್ಮ ಅಧಿಕಾರಾವಧಿಯ ಸಮಯದಲ್ಲಿ, ‘ ಅಭಿವೃದ್ಧಿ ಮತ್ತು ಬೆಳವಣಿಗೆಯ’  ಕ್ಷೇತ್ರಗಳಲ್ಲಿ ದೇಶಕ್ಕೆ ಸಂಬಂಧಿಸಿದ ಒಂದು ಹೊಸ ನೋಟವನ್ನೂ ಸಹ ಕಲ್ಪಿಸಿಕೊಂಡಿದ್ದರು. ಪಂಚವಾರ್ಷಿಕ ಯೋಜನೆಯ ಕಾರ್ಯಕ್ರಮವು ಈ ರೀತಿಯಲ್ಲಿ ಜಾರಿಗೆ ಬಂದಿತು.  


1951 ರಲ್ಲಿ ತಮ್ಮ ಕನಸಿನ  ‘ಪಂಚವಾರ್ಷಿಕಯೋಜನೆ ‘ ಪ್ರಾರಂಭಿಸಿ ಮೊದಲಿಗೆ ಕೃಷಿಗೆ ಪ್ರಾದಾನ್ಯತೆ ಕೊಟ್ಟಿದ್ದರು. ಪ್ರಧಾನಿಯವರನ್ನು ಅಧ್ಯಕ್ಷರನ್ನಾಗಿ ಉಳ್ಳ ‘ಪ್ಲಾನಿಂಗ್ ಕಮೀಷನ್ ‘ ಬಾಕ್ರನಂಗಲ್ , ಹಿರಾಕುಡ್ ನಂತಹ ಬೃಹುತ್ ಡ್ಯಾಮ್ ಗಳನ್ನು ಕಟ್ಟಲು ಯೋಜಿಸಿತು.   1956 ರಿಂದ 1961ರ ಅವದಿಯ ಎರಡನೇ ಪಂಚವಾರ್ಷಿಕ ಯೋಜನೆಯಲ್ಲಿ ನೆಹರುರವರು ಕೃಷಿಯ ಜೊತೆ ಜೊತೆಗೆ ಬೃಹುತ್ ಉಧ್ಯಮಗಳನ್ನು ಕಟ್ಟುವದರಲ್ಲಿ, ಜಲವಿಧ್ಯುತ್ ಸ್ಥಾವರಗಳ ಸ್ಥಾಪನೆ, ಬಿಲಾಯ್ - ದುರ್ಗಾಪುರ- ರೂರ್ಕೆಲ ನಂತಹ ಉಕ್ಕಿನ ಕಾರ್ಖಾನೆಗಳು ಹೊಸ ರೈಲ್ವೆ ಮಾರ್ಗಗಳು, ಟಾಟ ಇನ್ಸ್ ಟ್ಯೂಟ್ ಫಂಡಮೆಂಟಲ್ ರೀಸರ್ಚ್ ಮೂಲಕ ವಿಜ್ಞಾನದ ವಿಧ್ಯಾರ್ಥಿಗಳಿಗೆ ಪ್ರೋತ್ಸಾಹದಂತಹ ಕಾರ್ಯಕ್ರಮಗಳಿ ಚಾಲನೆ ಕೊಟ್ಟರು.


ನೈಸರ್ಗಿಕ ಸಂಪನ್ಮೂಲಗಳನ್ನು ವಿವೇಚನಾಯುಕ್ತವಾಗಿ ಬಳಸುವ ಮೂಲಕ ಜನರ ಜೀವನ ಮಟ್ಟಗಳನ್ನು ಸುಧಾರಿಸುವ ಕಡೆಗೆ ಈ ಕಾರ್ಯಕ್ರಮವು ಗುರಿಯಿಟ್ಟುಕೊಂಡಿತ್ತು. ದೇಶವು ಮುಂದಕ್ಕೆ ಜಿಗಿಯಬೇಕು ಎಂಬುದಾಗಿ ನೆಹರೂ ಬಯಸಿದ್ದ ನಾನಾಬಗೆಯ ವಲಯಗಳಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ, ಕೈಗಾರಿಕಾ ವಲಯ, ಸಂವಹನೆಗಳು ಸೇರಿದ್ದವು.   ಭಾರತದ ಪ್ರಧಾನಿಯು ‘ಉಕ್ಕಿನ ಕಾರ್ಖಾನೆಗಳು ಮತ್ತು ಅಣೆಕಟ್ಟುಗಳನ್ನು’  ಆಧುನಿಕ ಭಾರತದ ‘ದೇವಾಲಯಗಳು ‘ ಎಂದು ಕರೆದರು.  


Jawaharalal Neharu

                                                                    BaakraNangal

                                                  Tata Inisitute of Fundamental  Reasearchಈ ಎಲ್ಲ ಸಾಧನೆಗಳ ಹಿನ್ನಲೆಯಲ್ಲಿ ನಡೆದ ಭಾರತದ ಮೂರನೆ ಮಹಾಚುನಾವಣೆಯಲ್ಲಿ ನೆಹರು ಮತ್ತೆ ತಮ್ಮ ಪಕ್ಷ ಕಾಂಗ್ರೆಸನ್ನು ಅಧಿಕಾರಕ್ಕೆ ತರುವಲ್ಲಿ ಸಫಲರಾದರು. ಮೂರು ಬಾರಿ ಸತತ ಗೆಲುವು ದಾಖಲಿಸಿದ್ದರು.  


1962 ರ ಫೆಬ್ರುವರಿ ಮಾರ್ಚಿಯಲ್ಲಿ ನಡೆದ ಚುನಾವಣೆಯಲ್ಲಿ  ಒಟ್ಟು 494 ಸದಸ್ಯಬಲದ ಲೋಕಸಬೆಗೆ  361 ಸದಸ್ಯಬಲದ ಜೊತೆಗೆ ಪ್ರಧಾನಿಯಾಗಿ ಮತ್ತೆ ಅಧಿಕಾರ ಸ್ವೀಕರಿಸಿದರು. ದೇಶದ ಜನ ಕಾಂಗ್ರೆಸ್ ಹಾಗು ನೆಹರುರವರ ಮೇಲೆ ಮತ್ತೆ ನಂಭಿಕೆ ಇಟ್ಟು ಅವರನ್ನು ಚುನಾಯಿಸಿದ್ದರು. 2-apr-1962 ರಿಂದ 3-mar-1967 ರವರೆಗಿನ ಲೋಕಸಭಾ ಅವದಿಗೆ , ಸರ್ಧಾರ್ ಹುಕುಂ ಸಿಂಗ್ ಸ್ಪೀಕರ್ ಆಗಿ ಕೃಷ್ಣಮೂರ್ತಿರಾವ್ ರವರು ಉಪ ಸ್ಪೀಕರ್ ಆಗಿ ಕಾರ್ಯ ನಿರ್ವಹಿಸಿದರು
ಈ ಅವದಿ ಭಾರತಕ್ಕೆ ಹಾಗು ನೆಹರುರವರಿಗೆ ಶುಭದಾಯಕವಾಗಿರಲಿಲ್ಲ. ವಿವರ  ನಾಲ್ಕನೆ ಹೆಜ್ಜೆಯಲ್ಲಿ


Results[edit]

Results by Party[edit]

Lok Sabha elections 1962
Electoral participation: 55.42%

%
Won
(total 494)
BJS
6.44
14
CPI
9.94
29
INC
44.72
361
PSP
6.81
12
SSP
2.69
6
SP
7.89
18
AD
0.72
3
ABHM
0.65
1
RRP
0.6
2
AIFB
0.72
2
APHLC
0.08
1
CNSPJP
0.41
3
DMK
2.01
7
GP
0.3
4
IUML
0.36
2
PWPI
0.1
0
RPI
2.83
10
HLS
0.1
1
LSS
0.24
2
NMGJP
0.17
1
RSP
0.39
2
Independents
-
11.05
20
Nominated Anglo-Indians
-
-
2References:
election commission report -  third lokasabha election :
http://eci.nic.in/eci_main/statisticalreports/LS_1962/Vol_I_LS_62.pdf


third general election :


http://en.wikipedia.org/wiki/Indian_general_election,_1962

http://en.wikipedia.org/wiki/3rd_Lok_Sabha

1 comment:

  1. ಬಾಕ್ರನಂಗಲ್, ಹಿರಾಕುಡ್ ಮುಂತಾದ ದೊಡ್ಡ ಯೋಜನೆಗಳನ್ನು ಇಂದಿನ ಸರ್ಕಾರಗಳು ಕೈಗೆತ್ತಿಕೊಳ್ಳಲೂ ಮನಸು ಮಾಡುವುದೇ ಇಲ್ಲ.
    ಮೂರನೇ ಭಾಗವು ಮಾಹಿತಿಪೂರ್ಣವಾಗಿದೆ.

    ReplyDelete

enter your comments please