ದೇವರ ಸನ್ನಿದಾನದಲ್ಲಿ ಎಲ್ಲ ಅಹಂಕಾರ ಕೋಪ ದ್ವೇಷಗಳನ್ನು ಬಿಟ್ಟು ಶುದ್ದ ಭಕ್ತಿಭಾವದಲ್ಲಿರಬೇಕು ಅನ್ನುವರು. ಆದರೆ ದೇವಾಲಯಕ್ಕೆ ಹೊರಡುವಾಗ ನಾವು ಅಂತ ಶುದ್ದ ಅಂತಕರಣದಲ್ಲಿ ಇರುವೆವೆ. ಅಲ್ಲಿರುವರೆಲ್ಲ ಕೋಪವನ್ನು ಬಿಟ್ಟಿರುವರೆ ಅಸಹನೆಯನ್ನು ತೊರೆದು ಪ್ರೇಮ ಭಾವದಲ್ಲಿ ಇರುವರೆ. ನೋಡೋಣವೆಂದು ಒಬ್ಬ ನಿಗೆ ಮನಸಾಯ್ತು. ಸರಿ ಎಂದು ಬೆಳಗ್ಗೆ ಬೆಳಗ್ಗೆಯೆ ದೇವಾಲಯಕ್ಕೆ ಹೋದವನು ಒಳಗೆ ಕುಳಿತ.
ನಂತರ ಅಲ್ಲಿ ಬರುವರನ್ನೆಲ್ಲ ರೇಗಿಸ ತೊಡಗಿದ. ಒಬ್ಬನಿಗೆ 'ನಿನ್ನ ಕಾಲು ಸೊಟ್ಟ ಎನ್ನುವನು' ಮತ್ತೊಬ್ಬನಿಗೆ 'ಮೈಬಗ್ಗಿಸಿ ನಮಸ್ಕಾರ ಮಾಡು ಅದೇಕೆ ನಿಂತು ಕೈಮುಗಿಯುತ್ತಿ ಅನ್ನುವನು'
ಹುಡುಗರು ಬಂದರೆ "ದೇವರತ್ತ ನೋಡು, ಅದೇನು ನಿನ್ನ ಕಣ್ಣು ಹುಡುಗಿಯರತ್ತ" ಎಂದು ಕೂಗಿ ಹೇಳುತ್ತಿದ್ದನು.
ಹುಡುಗಿಯರಿಗೆ "ದೇವರ ಮುಂದೆಯು ಮೊಬೈಲ್ ಬೇಕ ಎಸೆ ಅದನ್ನು ನಮಸ್ಕಾರ ಹಾಕು" ಎನ್ನುವನು
ವಯಸ್ಕರು ಬಂದರೆ" ನಿನ್ನದೆಂತ ಡೋಗಿ ಭಕ್ತಿ ' ಎಂದು ರೇಗಿಸಿದನು.
ಎಲ್ಲರಿಗು ರೇಗುತ್ತಿತ್ತು. ಅವನೊಡನೆ ವಾದಕ್ಕೆ ನಿಂತು ಕೂಗಾಡುವರು. ನಾನು ಹೇಗಿದ್ದರೆ ನಿನಗೇನು ಬಾಯಿಮುಚ್ಚು ಎಂದೆಲ್ಲ ಅವನಿಗು ಬೈದರು. ಯಾರು ಅಂದರೆ ಅವನೇನು ತಲೆ ಕೆಡಸಿಕೊಳ್ಳಲಿಲ್ಲ. ತನ್ನ ಕೆಲಸ ಮುಂದುವರೆಸಿದ ಬಂದವರನ್ನೆಲ್ಲ ಅಂದು ಅವರ ಕೋಪ ಪರೀಕ್ಷಿಸುತ್ತಿದ್ದ. ಯಾರು ಇಲ್ಲ ಅನ್ನುವಾಗ ದೇವರ ಪೂಜಾರಿಯನ್ನು ಬಿಡಲಿಲ್ಲ
"ಸ್ನಾನ ಒಂದು ಮಾಡಿ ಬರುತ್ತಿ ನಿನ್ನ ಮನವೆ ಶುದ್ದವಿಲ್ಲ, ಸರಿಯಾಗಿ ಪೂಜೆ ಮಾಡು ಮನವಿಟ್ಟು " ಎಂದು ರೇಗಿಸುವನು
ಎಲ್ಲರು ಸಹನೆ ಕಳೆದುಕೊಂಡರು. ಕೆಲವರು ಅವನಿಗೆ ನಾಲಕ್ಕು ಹೊಡೆತವನ್ನು ಕೊಟ್ಟರು.
ಒಬ್ಬರಾದರು ಏಕೆ ಹೀಗೆ ಆಡುತ್ತಿದ್ದಿ ಎಂದು ಕೇಳಲು ಹೋಗಲಿಲ್ಲ.
ಇಲ್ಲಿ ಗಲಾಟೆಮಾಡಬೇಡ ಹೊರಗೆ ಹೋಗು ಎಂದರು
ಅದಕ್ಕವನು "ನಾನು ದೇವರನ್ನು ನೋಡಲು ಬಂದೆ ' ಎಂದ .
ಪೂಜಾರಿ ಎಂದ "ದೇವರು ಇಲ್ಲ ಎಂತದು ಇಲ್ಲ ಹೊರಗೆ ಹೋಗು"
"ಮತ್ತೆ ನೀನು ಯಾರಿಗೆ ದಿನ ಪೂಜೆ ಮಾಡೋದು"
ಪೂಜಾರಿ "ದೇವರ ವಿಗ್ರಹಕ್ಕೆ"
ಅವನು ಕೇಳಿದ "ದೇವರು ಇಲ್ಲವೆಂದರೆ ಎಲ್ಲಿ"
ಪುಜಾರಿ "ಇಲ್ಲ ಅಂದರೆ ಹೊರಗೆ ಹೋಗಿದ್ದಾನೆ"
ಅವನು "ಸರಿ ದೇವರು ಬರುವವರೆಗು ಕಾಯುತ್ತೇನೆ"
ಪೂಜಾರಿ ತಲೆಕೆಟ್ಟು ಹೇಳಿದ "ದೇವರು ಬರುವುದು ಇಲ್ಲ ಎಂತದೂ ಇಲ್ಲ ನೀನು ಹೊರಡು, ಇಲ್ಲಿ ಎಲ್ಲರು ಶಾಂತಿಯಿಂದ ಇರಲು ಬಿಡು"
ಆದರೆ ಅವನು ಹೋಗಲು ಒಪ್ಪಲಿಲ್ಲ
ಕಡೆಗೆ ಪೂಜಾರಿಯ ಜೊತೆ ಎಲ್ಲರು ಸೇರಿದರು, ಗಲಾಟೆ ಮಾಡುತ್ತಿದ್ದ ಅವನನ್ನು ಹೊತ್ತು ತಂದು ದೇವಾಲಯದಿಂದ ಹೊರಹಾಕಿ ತಲಾ ಒಬ್ಬರು ಒಂದು ಏಟಿನಂತೆ ಬಿಗಿದು ನೆಮ್ಮದಿಯಾಗಿ ಒಳಹೋದರು.
No comments:
Post a Comment
enter your comments please