Sunday, November 11, 2012

ಅಯ್ಯೋ ನಿಮಗೆ ನಾಚಿಕೆಯಾಗದೆ


ಲೋಕಸಭೆ-ಪಾರ್ಲಿಮೆಂಟ್ ! ಪ್ರಪಂಚದಲ್ಲಿ ಅತಿ ದೊಡ್ಡ ಪ್ರಜಾಪಭುತ್ವದ ಶಕ್ತಿ ಕೇಂದ್ರ. ಅಲ್ಲಿರುವರು ಯಾರು ? ಅರವತ್ತಕ್ಕಿಂತ ಹೆಚ್ಚು ವರುಷಗಳು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ , ಅನುಭವ ಗಳಿಸಿರುವ ದೇಶದ ರಾಜಕೀಯ ನಾಯಕರು, ಮುತ್ಸದಿಗಳು. ಪ್ರತಿ ನಿಮಿಷಕ್ಕು ಲಕ್ಷ ಲಕ್ಷ ಹಣ ಖರ್ಚಾಗುವ ನಮ್ಮ ದುಭಾರಿ ವ್ಯವಸ್ಥೆ. ಅದರೇನು ಅಲ್ಲಿ ಕಾವೇರಿ ವಿವಾದದಂತ ಜ್ವಲಿಸುವ ಸಮಸ್ಯೆಗೆ ಪರಿಹಾರ ಸಿಗದು, ನಮ್ಮ ನಾಯಕರು ರಾಷ್ಟ್ರೀಯ ಜಲನೀತಿಯಂತ ವ್ಯವಸ್ಥೆ ರೂಪಿಸಲಾರರು. ಅವರ ಸುದೀರ್ಘ ಅನುಭವದಲ್ಲಿ ಅದು ಅಸಾದ್ಯ
 
ವಿಧಾನಸೌದ ವಿಕಾಸ ಸೌದ ಈಗ ಬೆಳಗಾವಿಯಲ್ಲಿ ಮತ್ತೊಂದು ಪ್ರಜಾಪ್ರಭುತ್ವ ಲಾಂಚನ. ಹಲವು ಲಕ್ಷ ಲಕ್ಷ ಕೋಟಿಗಳ ಸುಂದರ ವ್ಯವಸ್ಥೆ. ಅದರೇನು ಅಲ್ಲಿ ಕಾವೇರಿಯಂತ ಸಮಸ್ಯೆಯ ಬಗ್ಗೆ ಚರ್ಚಿಸಲು ಸಮಯವಿಲ್ಲ.
 
ಪ್ರಪಂಚದಲ್ಲಿ ಪ್ರಖ್ಯಾತ ನಮ್ಮ ಕಾನೂನು ವ್ಯವಸ್ಥೆ, ಹೈ ಕೋರ್ಟ್ ಸುಪ್ರೀಂಕೋರ್ಟ್ ಕಾನೂನನ್ನು ಅರೆದು ಕುಡಿದ ನ್ಯಾಯವಾದಿಗಳು. ಆದರೆ ನಮ್ಮ ಕಾವೇರಿ ನೀರಿನ ಸಮಸ್ಯೆಗೆ ಪರಿಹಾರವಿಲ್ಲ.
 
ರಸ್ತೆ ರಸ್ತೆಯಲ್ಲಿ ಕಾವೇರಿಗಾಗಿ ಹೋರಾಟಾ.... ರಕ್ತ ಕೊಟ್ಟೇವು ನೀರು ಬಿಡೆವು ಎಂಬ ಘೋಷಣೆ. ಎರಡು ರಾಜ್ಯದ ಜನರ ನಡುವೆ ದ್ವೇಷ ಹೋರಾಟ.  ಕಾವೇರಿ ನ್ಯಾಯ ತೀರ್ಮಾನವಾಗಬೇಕಿರುವುದು  ಪಾರ್ಲಿಮೆಂಟಿನಲ್ಲಿ ಅಲ್ಲ ವಿದಾನಸಬೆಗಳಲ್ಲಿ ಅಲ್ಲ ಕೋರ್ಟಿನಲ್ಲಿ ಅಲ್ಲ. 
 
ನಿಜ ಕಾವೇರಿ ನ್ಯಾಯ ತೀರ್ಮಾನವಾಗಬೇಕಿರುವುದು ರಸ್ತೆಯಲ್ಲಿ !
 

No comments:

Post a Comment

enter your comments please