Saturday, July 20, 2013

ಪ್ರಕೃತಿಯ ವಿಜ್ಞಾನ ತತ್ವಗಳೆಲ್ಲ ನಿಗೂಡ (1)





ಪ್ರಕೃತಿಯ ವಿಜ್ಞಾನ ತತ್ವಗಳೆಲ್ಲ ನಿಗೂಡ (1)
========================


ನಾಗರ ಹಾವಿನ ಹೆಡೆಯ ನೋಡುತಿರೆ
ಸೌಂದರ್ಯ ಮಗ್ನ ಭಾವ !
ಭಾವದ ಒಳಗೆಲ್ಲೊ ಮತ್ತೊಂದು ಭೀಷಣತೆಯ ಭಾವ !


ಸುರಗಂಗೆ ದುಮುಕುವ ಪರಿಗೆ
ಮನದಲ್ಲೇನೊ ಉನ್ಮಾದ !
ಕೇದಾರದೆ  ಆಕೆಯ ನರ್ತನಕ್ಕೆ ದಿಘ್ಭ್ರಮೆಯ ಭಾವ!


ಪುನರ್ವಸು ಮಳೆಯ  ಸೊಭಗಿಗೆ
ಮನದಲ್ಲೇನೊ ಆಹ್ಲಾದ ಭಾವ!
ಮಳೆಯ ರೌದ್ರತೆ ಜೀವಗಳನ್ನು ಸೆಳೆದಾಗ ದುಗುಡ ಭಾವ!


ಮರದ ನೆರಳ ತಂಪು ಮನಸಿಗೆ
ಅದೇನೆಂದು ಅರಿವಾಗದ ಇಂಪು!
ಮರವು ಉರುಳಿ  ಜೀವ ತೆಗೆದಾಗ ದುಃಖೋದ್ಗಾರಗಳ ಗುಂಪು!


ತಂಪನೆಯ ಗಾಳಿ ಕದಪುಗಳ
ಸವಿರದಾಗ ಮನದಲ್ಲೇನು ಪುಲಕ!
ಚಂಡಿಯಾಗಿ ಜೀವ ತೆಗೆವಾಗ ಅದೆ ಗಾಳಿಗೆ ಶಾಪದ ಜಳಕ!


ಬೆಳಗಿನ ಸೂರ್ಯನಿಗೆ
ಜನರ ಭಕ್ತಿಯ ನಮಸ್ಕಾರ !
ನಡುನೆತ್ತಿಗೆ ಬಂದಾಗ ಬಿಸಿಲ ಅಹಾಕಾರ!


ಹೀಗೆಯೆ ಸಾಗುತ್ತದೆ ..
ಪ್ರಕೃತಿಯ ವಿಜ್ಞಾನ ತತ್ವಗಳೆಲ್ಲ ನಿಗೂಡ
ಒಂದು ಭಾವದೊಳಗೆ ಅಂತರ್ಗತ ಮತ್ತೊಂದು ಭಾವ!

No comments:

Post a Comment

enter your comments please