Thursday, July 4, 2013
ಬದುಕಿಗು ಸಾವಿಗೂ ಹೆಚ್ಚು ಅಂತರವೇನು ಇಲ್ಲ
ಹೆದರಿಕೆ ಏಕೆ ಮನವೆ ಬದುಕಿಗೊ ಸಾವಿಗೋ?
ಬದುಕಿಗು ಸಾವಿಗೂ ಹೆಚ್ಚು ಅಂತರವೇನು ಇಲ್ಲ
ಬದುಕು ನೂರೆಂಟು ತಿರುವಿನ ಒಳಸುಳಿಗಳ ಕಂತೆ
ಅರ್ಥವಾಗಿಯು ಅರ್ಥವಾಗದ ಕಗ್ಗಗಳ ಸಂತೆ
ಎಲ್ಲ ಸಂಬಂಧಗಳು ಒಮ್ಮೊಮ್ಮೆ ಹೊರಲಾರದ ಬಾರ
ಬಿಡಿಸಲು ಹೋದಷ್ಟು ಹೆಚ್ಚುವ ಗೋಜಲುಗಳ ದಾರ
ಸಾವೆಂಬುದರ ಅರ್ಥ ತಿಳಿಯಲು ಹೆಚ್ಚು ಕಷ್ಟವೇನಿಲ್ಲ
ಬದುಕಿನ ಕೊನೆ ಎಂದು ಅರಿತರಾಯ್ತಲ್ಲ
ಬದುಕೋ ಸಾವೊ ಆಯ್ಕೆಗೆ ಸ್ವತಂತ್ರವೂ ಇಲ್ಲ
ಆದರು ಸಾವಿನ ನಂತರ ನಿಗೂಡವು ಎಲ್ಲ
ಬದುಕಿನ ಬಾರ ಹೊರಲಾರದೆ ಸಾವನ್ನು ಹಂಬಲಿಸುವರು ಒಮ್ಮೊಮ್ಮೆ
ಸಾವಿನ ಹೊಸ್ತಿಲಲ್ಲಿ ನಿಂತು ಬದುಕಿಗಾಗಿ ಹಾತೊರೆಯುವರು ಮತ್ತೊಮ್ಮೆ
ಬದುಕಿಯು ಸತ್ತಂತೆ ಇರುವರು ಕೆಲವರು
ಸತ್ತ ನಂತರವು ಬದುಕಿರುವರು ಮತ್ತೆ ಹಲವರು
ಹೆದರಿಕೆ ಏಕೆ ಮನವೆ ಬದುಕಿಗೊ ಸಾವಿಗೋ?
ಬದುಕಿಗು ಸಾವಿಗೂ ಹೆಚ್ಚು ಅಂತರವೇನು ಇಲ್ಲ
ಚಿತ್ರ ಮೂಲ : ಲೈಫ್ ಅಂಡ್ ಡೆತ್
Labels:
ಕವನ-2013
Subscribe to:
Post Comments (Atom)
No comments:
Post a Comment
enter your comments please