Wednesday, August 14, 2013

ಪ್ರಕೃತಿಯ ವಿಜ್ಞಾನ ತತ್ವಗಳೆಲ್ಲ ನಿಗೂಢ(7)

ಪ್ರಕೃತಿಯ ವಿಜ್ಞಾನ ತತ್ವಗಳೆಲ್ಲ  ನಿಗೂಢ(7)


ಬಿಸಿಲನಲ್ಲಿ ಬೀದಿ  ಅಲೆದಲೆದು
ಹಾದಿ ಬೀದಿಯಲಿ ತಿರುದು ತಿಂದು
ಬಯಲಿನಲ್ಲಿ ರಾತ್ರಿ ಮಲಗಿದರೂ
ಒಲಿದು  ಅಪ್ಪುವ  ಸುಖ ನಿದ್ರೆ

ವಾತಾನುಕೂಲಿಯಲ್ಲಿ  ತಲೆಯನಿಟ್ಟು
ಮಧುರವಾದುದನೆ  ಸವಿದು ತಿಂದು
ನವಿಲುಗರಿಯ ಮೆತ್ತೆಯಲ್ಲಿ ಮಲಗಿದವನಿಗೆ
ಹತ್ತಿರ ಸುಳಿಯದಲ್ಲ ಅದೆ  ನಿದ್ರೆ

ಪ್ರಕೃತಿಯ ವಿಜ್ಞಾನ ತತ್ವಗಳೆಲ್ಲ ನಿಗೂಢ
ಪ್ರಕೃತಿ ಒಳ್ಳೆಯ ವ್ಯಾಪಾರಿ
ಅದು ಒಂದನ್ನು ‘ಕೊ’ ಎಂದು ಕೊಟ್ಟರೆ
ಮತ್ತೊಂದನ್ನು ತಾ ಎಂದು ಪಡೆದುಬಿಡುವುದು

2 comments:

  1. ಶ್ರಮವೇ ತಲೆ ದಿಂಬಿನ ಒರಗುವಿಕೆ ನೆಮ್ಮದಿಗೆ ಕಾರಣ.

    ReplyDelete
  2. ಹೌದು ದಿನ ಪ್ರತಿ ನಾವು ಊಟಮಾಡುವಾಗ ನಾವು ಅದಕ್ಕೆ ತಕ್ಕದಾಗಿ ಕೆಲಸಮಾಡಿದ್ದೇವೆ ಎಂದು ನೆನೆಯಬೇಕು ! ಅನ್ನುತ್ತಿದ್ದರು ಹಿಂದೆ ಹಿರಿಯರು

    ReplyDelete

enter your comments please