===============
ಕನ್ನಡದಲ್ಲಿ ಅಕ್ಷರಕ್ಕಿಂತ ಮೊದಲು ಏನಿತ್ತು ಎಂದೆ
ಅಕ್ಷರಗಳಿಲ್ಲದಾಗಲೂ ನಾನಿರಲಿಲ್ಲವೇ
ಎಂದವು ಕನ್ನಡ ಪದಗಳು
ಪದಗಳಿಗಿಂತ ಮೊದಲು ಏನಿತ್ತು ಹೇಳು ಎಂದೆ
'ಅಂಭಾ' ಎನ್ನುವ ದ್ವನಿ ಕೇಳಿಸಿತು
ಪದಗಳಿಲ್ಲದಾಗಲೂ ಭಾವವಿತ್ತು ಎಂದಿತು ದ್ವನಿ
ಮನ ಮತ್ತೆ ಕೇಳಿತು ಹಾಗಿದ್ದಲ್ಲಿ ಭಾವಕ್ಕಿಂತ ಮೊದಲು ?
ಭಾವವೇಕೊ ಕೆರಳಿತ್ತು
ಭಾವಕ್ಕಿಂತ ಮೊದಲು ಮೌನವಿತ್ತು ... ಮೌನ
ಎಂದು ನುಡಿದಿತ್ತು ಭಾವ
ಪ್ರಶ್ನೆಗೆ ಕೊನೆಯಿಲ್ಲಿ , ಅಹಂಗೆ ಮಿತಿಯೆಲ್ಲಿ
ಮತ್ತೆ ಕೇಳಿದೆ
ಹಾಗಿದ್ದಲ್ಲಿ ಮೌನ...ಕ್ಕೆ ಮೊದಲು ಏನಿತ್ತು
....
.......
ಏನು ಉತ್ತರ ಬರಲಿಲ್ಲ
ಮೌನ ಮಾತನಾಡುವದಿಲ್ಲ !
ಅಂತೆಯೇ ಈ ಕವನವೂ ಸಹ!
ReplyDeleteನಿಮ್ಮ ಆಳ ಆದ್ಯಯನಕ್ಕೆ ಕುರುಹು ಈ ಕವನ.
http://badari-poems.blogspot.in/
ಎಲ್ಲವು ತಮ್ಮಂತವರೆ ಕಲಿಸುವುದು ಅಲ್ಲವೆ ಸಾರ್
ReplyDelete