ಪ್ರಕೃತಿಯ ವಿಜ್ಞಾನ ತತ್ವಗಳೆಲ್ಲ ನಿಗೂಢ(9)
=========================
ಕೋಳಿ ಮೊದಲೊ ಮೊಟ್ಟೆ ಮೊದಲೊ
ಗೆಳೆಯನೊಡನೆ ವಾದ ಹೂಡಿ
ತಾನು ಗೆದ್ದಂತೆ ಬೀಗಿದ ಸಾಮಾನ್ಯ
ಬೀಜ ವೃಕ್ಷದ ತರ್ಕವೇನು
ಬೀಜ ಮೊದಲೊ ವೃಕ್ಷ ಮೊದಲೊ
ಮುಂದೆ ಬಾಗಿ ಕೇಳಿದ ಪ್ರತಿವಾದಿಯನ್ನು
ತರ್ಕದಲ್ಲಿ ಗೆದ್ದಂತೆ ಸಂಭ್ರಮಿಸಿದ ಪಂಡಿತ
ವಿಶಾಲ ಬೃಹುತ್ ವೃಕ್ಷವನ್ನು
ಸೂಕ್ಷ್ಮ ರೂಪದಿ ಬಿಂದುವಾಗಿಸಿ ಬೀಜದಲ್ಲಿಟ್ಟ
ತನ್ನ ಆಟವನ್ನು ನೆನೆದು ನಕ್ಕಿತು
ಪ್ರಕೃತಿ ಮುದದಿಂದ
ಇವರಿಬ್ಬರ ತರ್ಕವ ಕಂಡು
ಪ್ರಕೃತಿಯ ವಿಜ್ಞಾನ ತತ್ವಗಳೆಲ್ಲ ನಿಗೂಢ
ಹತ್ತು ಹಲವು ವರ್ಷ ಹೊರಗೆ ಇದ್ದರೂ
ಸುಮ್ಮನಿದ್ದ ಬೀಜ
ಮಣ್ಣು ತಾಕಿದೊಡನೆ ಚಿಗುರುವ
ಪರಿಯ ಮರ್ಮವೇನು
ಎಂದಿಗೂ ಗ್ರಹಿಸಲಾಗದ
ಈ ಕ್ರಿಯಗೆ ತರ್ಕವೇನು
ನನಗೂ ಇದು ಕೌತುಕವೇ, ಸರಿಯಾದ ವಾತಾವರಣ ದೊರೆಯುವವರೆಗೀ ಬೀಜವೂ ಮೌನ!
ReplyDeleteವಿಸ್ಮಯ ಈ ಜಗತ್ತು, ಒಳ ಹೊರ ಎಲ್ಲವೂ ಅಯೋಮಯ.
ReplyDelete