Friday, August 30, 2013

ಕವನಗಳು ಸ್ವಯಂಭುಗಳು

ಕವನಗಳು ಸ್ವಯಂಭುಗಳು
================

ಕವನಗಳೆಂದರೆ  ನನ್ನ ನಿಮ್ಮ ಸೃಷ್ಟಿಯಲ್ಲ
ಕವನಗಳು ಭಾವನೆಗಳ ಸ್ವಯಂಭುಗಳು

ಭಾವನೆಗಳಿಗು ಕವಿತೆಗಳಿಗು
ನಡುವೆ
ಮನುಜನೊಂದು ಮಾಧ್ಯಮ

ಭಾವನೆಗಳು ಆಲೋಚನೆಗಳು ಯಾರದೊ ಸ್ವತ್ತಲ್ಲ
ಅವು ಸರ್ವತಂತ್ರ ಸ್ವತಂತ್ರ ಸ್ವರೂಪಿಗಳು
ಸದಾ ಚಲನಶೀಲ
ಇಂದು ನನ್ನಲ್ಲಿ ನಾಳೆ ನಿಮ್ಮಲ್ಲಿ
ಮತ್ತೆ ಇನ್ನೆಲ್ಲೊ
ಮನಸಿನ ನಿಗೂಡ ತಾಣದಿ ನೆಲಸಿ ಮೆರೆಯುವುವು

ಭಾವನೆಗಳೆಂದರೆ ಎಲ್ಲರೂ
ಅಡಿಯಾಳುಗಳೆ
ಸಂಸಾರಿಯೊ ಸನ್ಯಾಸಿಯೋ
ಭಾವಶೂನ್ಯರನ್ನು ಎಲ್ಲಿಯೂ ಕಾಣಲಿಲ್ಲ

ಭಾವನೆಗಳ ಒತ್ತಡವೆ ಹಾಗೆ
ಕೆಲವರು ಕತೆ ಕವನ ರಚಿಸಿ ಪಾರಾಗುವರು
ಮತ್ತೆ ಕೆಲವರು ನಗರ ಬಸ್ ನಿಲ್ದಾಣಗಳಲ್ಲಿ
ಶೂನ್ಯದಲ್ಲಿ ದೃಷ್ಟಿಯಿಟ್ಟು ಮೈಮರೆತು ಕುಳಿತಿಹರು

2 comments:

  1. ಕವಿಯ ಭಾವ ಚಿಂತಾಮಣಿ ಸ್ವಯಂಭು ಕವಿತೆ. ಒಮ್ಮೆ ಅದು ಪ್ರಸವವಾಗಿ ಜನ ಮಾನಸದೊಳಗೆ ಬಂದ ಮೇಲೆ ಪರಿಸರಕ್ಕೆ ತಕ್ಕಂತೆ ಅದರ ಅರ್ಥ ವ್ಯಾಪ್ತಿ. ನಿಮ್ಮ ಮಾತಂತೂ ನಿಜ ಯೋಗಿಯಾಗಲಿ - ಭೋಗಿಯಾಗಲಿ ಭಾವಗಳ ಅಡಿಯಾಳೆ!

    'ಕವಿ ಪುಂಗವ' ಪಟಾಲಮಿನ ಪ್ರಾರ್ಥನಾ ಗೀತೆ ಇದು. ನಾನೂ ಬರೆದು ಇಟ್ಟುಕೊಂಡು ಪಾರಾಯಾಣ ಮಾಡುವೆ! :-D

    ReplyDelete
  2. ತಮ್ಮ ಸತತ ಪ್ರೋತ್ಸಾಹಕ್ಕೆ ನನ್ನ ನಮನ

    ReplyDelete

enter your comments please