ಥುಸ್ ಪಟಾಕಿ! (ಮಕ್ಕಳಿಗಾಗಿ ಕವನ)
ನಡೆದುಹೊರಟಿದ್ರು ಎದುರ್ ಮನೆ ತಾತ
ರಸ್ತೆ ಮಕ್ಳಿಗೆಲ್ಲ ತಾತ ಅಂದ್ರೆ ಏರ್ತಿತ್ತು ಪಿತ್ತ!
ಮೆತ್ತಗೆ ಹಿಂದ್ ಹೋಗಿ ಕಾಲತ್ರ ಪಟಾಕಿ ಇಟ್ರು
"ಢಾಂ" ಅನ್ನೋದ್ನೆ ಕಾಯುತ್ತ ಕಿವಿ ಮುಚ್ಚಿ ನಿಂತ್ರು !
ಪಟಾಕಿ ಮಾಡಿದ್ ಸದ್ದಿಗೆ ಹುಡುಗ್ರೆಲ್ಲ ಬೆಚ್ಚು ,
ತಾತ ಹಿಂದೇನೂ ನೋಡ್ದೆ ನಡೆದಾಗ ಹುಡುಗ್ರೆಲ್ಲ ಪೆಚ್ಚು!
ಹುಡುಗ್ರಿಗೆ ನಿಜ ವಿಷಯ ತಿಳಿದಿಲ್ಲ ಪಾಪ ,
ತಾತಂಗೆ ಶತಕಿವುಡು ಕಿವಿ ಕೇಳ್ಸಲ್ಲ ಪಾಪ
No comments:
Post a Comment
enter your comments please