ಸ್ವತಂತ್ರದ ಹೆಜ್ಜೆಗಳು 10 - ಭಾರತದ ಮಹಾಚುನಾವಣ ಸಂಗ್ರಾಮ (1991)
1989 ರಲ್ಲಿ ಹತ್ತನೇ ಪ್ರಧಾನಿಯಾಗಿ ಆಯ್ಕೆಯಾದ ವಿ ಪಿ ಸಿಂಗ್ 1989ರ ಡಿಸೆಂಬರ್ 2ರಿಂದ 1990ರ ನವೆಂಬರ್ 10ರವರೆಗೆ ಅಧಿಕಾರದಲ್ಲಿದ್ದರು.
25 DEC 1990, ರಾಮಜನ್ಮಭೂಮಿ-ಬಾಬ್ರಿ ಮಸೀದಿ ವಿವಾದದ ಕುರಿತಾಗಿ ಭಾರತೀಯ ಜನತಾಪಕ್ಷದ ನಾಯಕ ಅಡ್ವಾನಿಯವರು ರಥಯಾತ್ರೆಯನ್ನು ಸೋಮನಾಥದಿಂದ ಆರಂಭಿಸಿ, ಬಿಹಾರದಲ್ಲಿ ಆ ರಾಜ್ಯದ ಮುಖ್ಯಮಂತ್ರಿ ಲಾಲು ಯಾದವ್‌ರಿಂದ ಬಂಧಿಸಲ್ಪಟ್ಟ ನಂತರ, ವಿಶ್ವನಾಥ್ ಪ್ರತಾಪ್ ಸಿಂಗ್ ಸರ್ಕಾರಕ್ಕೆ ನೀಡಿದ್ದ ಬೆಂಬಲವನ್ನು ಆ ಪಕ್ಷವು ಹಿಂತೆಗೆದುಕೊಂಡಿತು.
ವಿಶ್ವಾಸಮತ ಯಾಚನೆಯಲ್ಲಿ ಸೋಲನುಭವಿಸಿದ ನಂತರ ವಿಶ್ವನಾಥ ಪ್ರತಾಪ್ ಸಿಂಗ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದರು.
ನಂತರದಲ್ಲಿ ಚಂದ್ರಶೇಖರ್ ಜನತಾದಳದಿಂದ ಬೇರ್ಪಟ್ಟರು ಮತ್ತು ಸಮಾಜವಾದಿ ಜನತಾಪಕ್ಷವನ್ನು ರೂಪಿಸಿದರು. ಕೇವಲ ೬೪ ಎಂ ಪಿ ಗಳೊಡನೆ ಇದ್ದ ಅವರಿಗೆ ಕಾಂಗ್ರೆಸ್‌ನಿಂದ ಬೆಂಬಲ ಸಿಕ್ಕಿತು ಮತ್ತು ಅವರು ಭಾರತದ 11ನೇ ಪ್ರಧಾನಮಂತ್ರಿಯಾದರು.
ಆದರೆ ಮುಂದೆ ಚಂದ್ರಶೇಖರ್ ಸರ್ಕಾರವು ರಾಜೀವ್ ಗಾಂಧಿಯವರ ಮೇಲೆ ಗೂಢಚಾರಿಕೆ ನಡೆಸುತ್ತಿದೆ ಎಂಬುದಾಗಿ ಕಾಂಗ್ರೆಸ್ ಆಪಾದಿಸಿದ ನಂತರ, 1991ರ ಮಾರ್ಚ್ 6ರಂದು ಅವರು ಅಂತಿಮವಾಗಿ ರಾಜೀನಾಮೆ ನೀಡಿದರು.
ಮಂಡಲ್ ಆಯೋಗದ ವಿರುದ್ದರ ಪ್ರತಿಭಟನೆಯ ತೀವ್ರತೆ
ಮಂಡಲ್ ಆಯೋಗದ ವಿರುದ್ದ ಪ್ರತಿಭಟನೆ
ವಿ ಪಿ ಸಿಂಗ್
ರಥಯಾತ್ರಾ ಅಧ್ವಾನಿ
ರಾಜೀವ ಗಾಂಧಿ ತಮಿಳುನಾಡಿನಲ್ಲಿ
ಪಿ ವಿ ನರಸಿಂಹ ರಾವ್ ಪ್ರಧಾನಿ
ಹೀಗಾಗಿ ಕಾಂಗ್ರೆಸೇತರ ಸರ್ಕಾರವೊಂದು ಮತ್ತೆ ಆರಿಸಿಬಂದರು ಸಹ, ಎರಡು ವರ್ಷ ಸಹ ಬಾಳಲಾಗಲಿಲ್ಲ. ಜನ ಸುಭದ್ರ ಸರ್ಕಾರವೆಂದರೆ ಕಾಂಗ್ರೆಸ್ ಎಂದು ಭಾವಿಸುವಂತಾಯಿತು.
ಹಿಂದಿನ ಲೋಕಸಭೆಯು ಸರ್ಕಾರ ರಚನೆಯ ನಂತರ ಕೇವಲ 16 ತಿಂಗಳುಗಳಲ್ಲಿ ವಿಸರ್ಜಿಸಲ್ಪಟ್ಟಿತ್ತಾದ್ದರಿಂದ, 10ನೇ ಲೋಕಸಭಾ ಚುನಾವಣೆಗಳು ಒಂದು ಮಧ್ಯಾವಧಿ ಚುನಾವಣೆ ಎನಿಸಿಕೊಂಡಿದ್ದವು. ಒಂದು ಧ್ರುವೀಕರಣಗೊಂಡ ಪರಿಸರದಲ್ಲಿ ಈ ಚುನಾವಣೆಗಳು ನಡೆಸಲ್ಪಟ್ಟವು.
ಮಂಡಲ್ ಆಯೋಗದ ವರದಿಯ ಗಲಭೆ ಮತ್ತು ರಾಮಜನ್ಮಭೂಮಿ-ಬಾಬ್ರಿ ಮಸೀದಿ ವಿವಾದ , ಚುನಾವಣೆಯಲ್ಲಿ ಪ್ರಸ್ತಾವಿಸಲ್ಪಟ್ಟ ಎರಡು ಅತ್ಯಂತ ಪ್ರಮುಖ ವಿಷಯಗಳಿಂದಾಗಿ ಈ ಚುನಾವಣೆಗಳು 'ಮಂಡಲ್-ಮಂದಿರ್' ಚುನಾವಣೆಗಳು ಎಂದೂ ಕರೆಯಲ್ಪಟ್ಟವು
ವಿಶ್ವನಾಥ ಪ್ರತಾಪ್ ಸಿಂಗ್ ಸರ್ಕಾರದ ವತಿಯಿಂದ ಅನುಷ್ಠಾನಗೊಳಿಸಲ್ಪಟ್ಟ ಮಂಡಲ್ ಆಯೋಗದ ವರದಿಯು ಸರ್ಕಾರಿ ಉದ್ಯೋಗಗಳಲ್ಲಿ ಇತರ ಹಿಂದುಳಿದ ಜಾತಿಗಳಿಗೆ 27 ಪ್ರತಿಶತದಷ್ಟು ಮೀಸಲಾತಿಯನ್ನು ನೀಡಿ, ದೇಶಾದ್ಯಂತ ವ್ಯಾಪಕವಾಗಿ ಹಬ್ಬಿದ ಹಿಂಸಾಚಾರ ಮತ್ತು ಪ್ರತಿಭಟನೆಗಳಿಗೆ ಕಾರಣವಾಯಿತು, ಪ್ರತಿಭಟನೆ ಉಗ್ರರೂಪತಾಳಿ ರಸ್ತೆಯಲ್ಲಿ ಪ್ರತಿಭಟನಕಾರರು ಬೆಂಕಿಹಚ್ಚಿಕೊಂಡು ಪ್ರಾಣಾರ್ಪಣೆ ಮಾಡುವಾಗಲು ವಿ ಪಿ ಸಿಂಗ್ ಮೌನ ವಹಿಸಿದರು
ಭಾರತೀಯ ಜನತಾಪಕ್ಷವು ತನ್ನ ಪ್ರಮುಖ ಚುನಾವಣಾ ಉದ್ದೇಶವಾಗಿ ಬಳಸಿಕೊಳ್ಳುತ್ತಿದ್ದ, ಅಯೋಧ್ಯಾದಲ್ಲಿನ ವಿವಾದಿತ ಬಾಬ್ರಿ ಮಸೀದಿ ಎನ್ನುವ ರಾಮಮಂದಿರ ಕುರಿತಾದ ಗಲಭೆಯನ್ನು 'ಮಂದಿರ' ಎಂಬ ಶಬ್ದವು ಪ್ರತಿನಿಧಿಸಿತು.
ದೇಶದ ಅನೇಕ ಭಾಗಗಳಲ್ಲಿ ದೊಂಬಿಗಳು ನಡೆಯುವುದಕ್ಕೆ ,ಮಸೀದಿ- ಮಂದಿರ ವಿವಾದವು ಕಾರಣವಾಯಿತು ಹಾಗೂ ಜಾತಿ ಮತ್ತು ಧಾರ್ಮಿಕ ಧೋರಣೆಗಳ ಮೇಲೆ ಮತದಾರ ಸಮುದಾಯವು ವಿಭಾಗವಾಗಿತ್ತು. ರಾಷ್ಟ್ರೀಯರಂಗವು ಅವ್ಯವಸ್ಥೆಯ ಹಾದಿಯನ್ನು ತುಳಿಯುವುದರೊಂದಿಗೆ, ಕಾಂಗ್ರೆಸ್ ತನ್ನ ಪುನರಾಗಮನವನ್ನು ಖಾತರಿಪಡಿಸಿಕೊಳ್ಳುತ್ತಿತ್ತು .
1991ರ ಮೇ 20, ಜೂನ್ 12 ಮತ್ತು ಜೂನ್ 15ರಂದು ಮೂರು ಹಂತಗಳಲ್ಲಿ ಚುನಾವಣೆಗಳು ನಡೆದವು. ಇದು ಕಾಂಗ್ರೆಸ್, BJP ಮತ್ತು ರಾಷ್ಟ್ರೀಯರಂಗ-ಜನತಾದಳ (S)-ಎಡರಂಗ ಒಕ್ಕೂಟದ ನಡುವಿನ ಒಂದು ತ್ರಿಕೋನೀಯ ಹೋರಾಟವಾಗಿತ್ತು.
ಚುನಾವಣೆ ಅನೀರಿಕ್ಷಿತ ತಿರುವು ತೆಗೆದುಕೊಂಡಿತು.
ಮೇ 20ರಂದು ನಡೆದ ಮೊದಲ ಸುತ್ತಿನ ಮತದಾನದ ಒಂದು ದಿನದ ನಂತರ, ಹಿಂದಿನ ಪ್ರಧಾನಮಂತ್ರಿ ರಾಜೀವ್ ಗಾಂಧಿಯವರು ತಮಿಳುನಾಡಿನ ಶ್ರೀಪೆರಂಬುದೂರ್ ಎಂಬಲ್ಲಿ ಚುನಾವಣಾ ಪ್ರಚಾರವನ್ನು ನಡೆಸುತ್ತಿದ್ದ ಸಂದರ್ಭದಲ್ಲಿ, ಎಲ್ ಟಿಟಿಇ ಗುಂಪಿಗೆ ಸೇರಿದವರಿಂದ ಹತರಾದರು.
( ಮುಂದೆ ಆ ಗುಂಪಿಗೆ ಸೇರಿದ ಶಿವರಸನ್ ಬೆಂಗಳೂರಿನ ಕೋಣನಕುಂಟೆಯಲ್ಲಿ ಪತ್ತೆಯಾಗಿ ಪೋಲಿಸರು ಸುತ್ತುವರೆದಾಗ ತನ್ನ ಗುಂಪಿನೊಡನೆ ಆತ್ಮಹತ್ಯೆಮಾಡಿಕೊಂಡ.)
ಜೂನ್-ಮಧ್ಯಭಾಗದವರೆಗೆ ಉಳಿದ ಚುನಾವಣಾ ದಿನಗಳು ಮುಂದೂಡಲ್ಪಟ್ಟವು. ಜೂನ್ 12 ಮತ್ತು 15ರಂದು ಅಂತಿಮವಾಗಿ ಮತದಾನವು ನಡೆಯಿತು. ಸಂಸತ್ತಿನ ಚುನಾವಣೆಗಳ ಇತಿಹಾಸದಲ್ಲಿಯೇ ಅತಿ ಕಡಿಮೆ ಪ್ರಮಾಣದಲ್ಲಿ ಮತದಾನ ನಡೆಯಿತು; ಕೇವಲ 53 ಪ್ರತಿಶತದಷ್ಟು ಮತದಾರರು ತಮ್ಮ ವಿಶೇಷಾಧಿಕಾರವನ್ನು ಚಲಾಯಿಸಿದರು.
ಕಾಂಗ್ರೆಸ್ ಪಕ್ಷವು 232 ಸ್ಥಾನಗಳನ್ನು ಪಡೆಯುವುದರೊಂದಿಗೆ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದರೆ, 120 ಸ್ಥಾನಗಳನ್ನು ಪಡೆದ BJP ಎರಡನೇ ಸ್ಥಾನದಲ್ಲಿ ನಿಂತಿತು. ಹೀಗಾಗಿ ಸದರಿ ಫಲಿತಾಂಶಗಳು ಒಂದು ಅಸ್ಥಿರವಾದ ಸಂಸತ್ತಿಗೆ ಕಾರಣವಾದವು. ಕೇವಲ 59 ಸ್ಥಾನಗಳನ್ನು ಗಳಿಸಿದ ಜನತಾದಳ ದೂರದ ಒಂದು ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳಬೇಕಾಯಿತು.
ಜೂನ್ 21ರಂದು, ಕಾಂಗ್ರೆಸ್‌ನ ಪಿ.ವಿ. ನರಸಿಂಹ ರಾವ್ ಪ್ರಧಾನಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರು. ನೆಹರೂ-ಗಾಂಧಿ ಕುಟುಂಬಕ್ಕೆ ಸೇರಿದವರಾಗಿರದೆ ಪ್ರಧಾನಮಂತ್ರಿಯಾದ ಕಾಂಗ್ರೆಸ್ಸಿಗರಲ್ಲಿ ,ಲಾಲ್ ಬಹುದ್ದೂರ್ ಶಾಸ್ತ್ರಿಯವರ ನಂತರ, ನರಸಿಂಹ ರಾವ್ ಕೇವಲ ಎರಡನೆಯವರಾಗಿದ್ದರು.
Reference :
http://eci.nic.in/eci_main/statisticalreports/LS_1991/VOL_I_91.pdf
Rajiv gandhi murdered :
http://www.thesundayindian.com/article_print.php?article_id=15033
ರಥಯಾತ್ರಾ :
mandal
http://en.wikipedia.org/wiki/Mandal_Commission
ಮಂಡಲ್ ಆಯೋಗ ಮತ್ತು ರಾಜೀವ್ ಹತ್ಯಾ ಕಾಲದ ಒಳ್ಳೆಯ ವಿಶ್ಲೇಷಣೆ.
ReplyDeleteNice info !
ReplyDelete