Saturday, April 12, 2014

ಸ್ವತಂತ್ರದ ಹೆಜ್ಜೆಗಳು 9 - ಭಾರತದ ಮಹಾಚುನಾವಣ ಸಂಗ್ರಾಮ (1989)

ಸ್ವತಂತ್ರದ ಹೆಜ್ಜೆಗಳು 9 -  ಭಾರತದ ಮಹಾಚುನಾವಣ ಸಂಗ್ರಾಮ (1989)

9 ನೇ ಚುನಾವಣೆ ಭಾರತದ ರಾಜಕಾರಣದಲ್ಲಿ ಸಂಧಿಕಾಲವಾಗಿತ್ತು.

8ನೇ ಲೋಕಸಭೆಯಲ್ಲಿ ರಾಜೀವಗಾಂದಿಯವರು ಅತಿ ಸುಲುಭವಾಗಿ ಪ್ರಚಂಡ ವಿಜಯ ದಾಖಲಿಸಿ ಪ್ರಧಾನಿಯಾದರು.

1984 ರ ಇಂದಿರಾಗಾಂದಿಯವರ ಹತ್ಯೆಯ ನಂತರ ರಾಜೀವಗಾಂದಿಯವರು ಪ್ರಚಂಡ ಬಹುಮತದೊಂದಿಗೆ ಎಂಟನೇ ಲೋಕಸಭೆಯಲ್ಲಿ ಏಕಸಾಮ್ಯ ಸಾಧಿಸಿದ್ದರು.  ಆದರೆ 9ನೇ ರಾಷ್ಟ್ರೀಯ ಚುನಾವಣೆ ವೇಳೆಗೆ ರಾಜೀವ ಜನರೆದುರು ತಮ್ಮ ವಿಶ್ವಾಸಾರ್ಹತೆ ಕಳೆದುಕೊಂಡಿದ್ದರು.  ಅವರು ಪಕ್ಷದೊಳಗಿನ ಹಾಗು ಹೊರಗಿನ ಬಿಕ್ಕಟ್ಟುಗಳಲ್ಲಿ ಸಿಲುಕಿದ್ದರು.
ಭೋಪರ್ಸ್ ಹಗರಣ, ಪಂಜಾಬಿನ ಭಯೋತ್ಪಾದನೆ, ಎಲ್ ಟಿ ಟಿ ಈ ಮತ್ತು ಶ್ರೀಲಂಕಾ, ತಮಿಳುನಾಡಿನ ರಾಜಕೀಯದಲ್ಲಿ ನಡೆಯುತ್ತಿದ್ದ ಅಂತರ್ಯುದ್ದ ಇವೆಲ್ಲ ರಾಜೀವರವರನ್ನು ಕಾಡಿತ್ತು.
ಅದೇ ಡಿಸೆಂಬರ್ 31 ರಂದು ಭೂಪಾಲಿನ ಯೂನಿಯನ್ ಕಾರ್ಭೈಡ್ ಕಾರ್ಖಾನೆಯ ದುರಂತ ನಡೆದು ಸಾವಿರ ಸಾವಿರ ಜನ ಮೃತಪಟ್ಟರು,

1985 ರಲ್ಲಿ ವಿವಾದಾತ್ಮಕ ಟಾಡ ಕಾನೂನು ಜಾರಿಗೆ ಬಂದಿತು.
1986 ಎಪ್ರಿಲ್ 1 ರಂದು ವಿಎಸ್ ಎನ್ ಎಲ್ ಪ್ರಾರಂಭ , ಎಪ್ರಿಲ್ 30  ‘ಬ್ಲಾಕ್ ಥಂಡರ್ ಆಪರೇಶನ್ ‘ ಗೋಲ್ಡನ್ ಟೆಂಪಲ್ ನಿಂದ ಸಿಕ್ ಭಯೋತ್ಪಾದಕರನ್ನು ಹೊರಗೆ ಹಾಕಲಾಯಿತು,
1987 ಮೇ 30 ಗೋವಕ್ಕೆ ರಾಜ್ಯದ ಸ್ಥಾನಮಾನ. ಜೂಲೈ 25 ವೆಂಕಟರಾಮನ್ ರಾಷ್ಟ್ರಪತಿಯಾಗಿ ಪ್ರಮಾಣವಚನ
ಇವೆಲ್ಲ ಮುಖ್ಯ ಘಟನೆಗಳು

ಭೂಪಾಲ್ ನ ಯೂನಿಯನ್ ಕಾರ್ಭೈಡ್ ಫ್ಯಾಕ್ಟರಿ


ಯೂನಿಯನ್ ಕಾರ್ಬೈಡ್ ಪರಿಣಾಮಗಳು


ಯೂನಿಯನ್ ಕಾರ್ಬೈಡ್ ಪರಿಣಾಮಗಳು


ವಿಶ್ವನಾಥ ಪ್ರತಾಪ ಸಿಂಗ್ ಭಾರತದ ಹತ್ತನೇ ಪ್ರಧಾನಿ 


ಬೋಪರ್ಸ್ ಹಗರಣದ ಕೇಂದ್ರಬಿಂದು ಪಿರಂಗಿರಾಜೀವರನ್ನು ಕಾಡಿದ ಭೋಪರ್ಸ್ ಹಗರಣ

ರಾಜೀವರು ಎಲೆಕ್ಟ್ರಾನಿಕ್ ಯುಗಕ್ಕೆ ಭಾರತದಲ್ಲಿ ಚಾಲನೆ ಕೊಟ್ಟರು,  ಪ್ರತಿ ಜಿಲ್ಲೆ ಜಿಲ್ಲೆಗೂ ದೂರದರ್ಶನ ತಲುಪುವಂತೆ ನೋಡಿಕೊಂಡರು, ಹಾಗೆ ಕಂಪ್ಯೂಟರ್ ಹಾಗು ಟೆಲಿಕಮ್ಯೂನಿಕೇಶನ್ ಕ್ಷೇತ್ರಕ್ಕೆ ಪ್ರಾಮುಖ್ಯತೆ ಕೊಟ್ಟರು, ಹಾಗು ಸ್ವದೇಶಿ ತಂತ್ರಜ್ಞಾನ ಬೆಳೆಯಲು ಸ್ಯಾಮ್ ಪೆಟ್ರೋಡರಂತಹವರ ಸಲಹೆ ಶ್ರಮ ತೆಗೆದುಕೊಂಡರು.

ರಾಜೀವ್‌ ಗಾಂಧಿಯವರ ಸರ್ಕಾರದಲ್ಲಿ ಹಣಕಾಸು ಖಾತೆ ಮತ್ತು ರಕ್ಷಣಾ ಖಾತೆಗಳನ್ನು ಹೊಂದಿದ್ದ ವಿಶ್ವನಾಥ್‌ ಪ್ರತಾಪ್‌ ಸಿಂಗ್, ರಾಜೀವ್‌ರವರ ಅತಿದೊಡ್ಡ ಟೀಕಾಕಾರರಾಗಿದ್ದರು. ಕೆಲವೇ ದಿನಗಳಲ್ಲಿ ಸಿಂಗ್‌ರವರನ್ನು ಸಂಪುಟದಿಂದ ತೆಗೆದುಹಾಕಲಾಯಿತು; ಕಾಂಗ್ರೆಸ್‌ ಪಕ್ಷ ಮತ್ತು ಲೋಕಸಭೆಯಲ್ಲಿನ ತಮ್ಮ ಸದಸ್ಯತ್ವಗಳಿಗೆ ಆಮೇಲೆ ಅವರು ರಾಜೀನಾಮೆ ನೀಡಿದರು. ಅರುಣ್‌ ನೆಹರೂ ಮತ್ತು ಅರಿಫ್‌ ಮೊಹಮ್ಮದ್‌ ಖಾನ್‌ರವರ ಜೊತೆಗೆ ಸೇರಿಕೊಂಡು ಅವರು ಜನಮೋರ್ಚಾವನ್ನು ರೂಪಿಸಿದರು ಹಾಗೂ ಅಲಹಾಬಾದ್ ಕ್ಷೇತ್ರದಿಂದ ಲೋಕಸಭೆಯನ್ನು ಮರು-ಪ್ರವೇಶಿಸಿದರು.
ನಂತರದಲ್ಲಿ  ಜನಮೋರ್ಚಾ, ಜನತಾಪಕ್ಷ, ಲೋಕದಳ ಮತ್ತು ಕಾಂಗ್ರೆಸ್‌ (S) ಪಕ್ಷಗಳನ್ನು ವಿಲೀನಗೊಳಿಸಿ, 1988ರ ಅಕ್ಟೋಬರ್‌ 11ರಂದು ಜನತಾದಳವನ್ನು ರೂಪಿಸಲಾಯಿತು. ಕೆಲವೇ ದಿನಗಳಲ್ಲಿ  ಡಿ ಎಮ್ ಕೆ, ಟಿಡಿ ಪಿ  ಮತ್ತು  ಅಸ್ಸಾಂ ಗಣ ಪರಿಷತ್  ಗಳನ್ನು ಒಳಗೊಂಡಂತೆ ಜನತಾದಳದ ಸುತ್ತ ಅನೇಕ ಪ್ರಾದೇಶಿಕ ಪಕ್ಷಗಳು ಒಟ್ಟುಗೂಡಿಸಲ್ಪಟ್ಟವು ಹಾಗೂ ಈ ರೀತಿಯಲ್ಲಿ ರಾಷ್ಟ್ರೀಯರಂಗವು (National Front)  ರೂಪುಗೊಂಡಿತು. ಎರಡು ಕಮ್ಯುನಿಸ್ಟ್‌ ಪಕ್ಷಗಳಾದ ಭಾರತದ ಕಮ್ಯುನಿಸ್ಟ್‌ ಪಕ್ಷ-ಮಾರ್ಕ್ಸ್‌ವಾದಿ (CPI-M) ಹಾಗೂ ಭಾರತದ ಕಮ್ಯುನಿಸ್ಟ್‌ ಪಕ್ಷ (CPI), ಮತ್ತು ಭಾರತೀಯ ಜನತಾಪಕ್ಷ (BJP) ಇವುಗಳೊಂದಿಗೆ ಕೈಜೋಡಿಸಿದರು.  

1989ರಲ್ಲಿ ನಡೆದ ಚುನಾವಣಾ ಕಣಕ್ಕೆ ಐದು-ಪಕ್ಷಗಳ ರಾಷ್ಟ್ರೀಯರಂಗವು ಧುಮುಕಿತು. ಕಾಂಗ್ರೆಸ್ ಗೆ ಚುನಾವಣೆಯಲ್ಲಿ ಉತ್ತಮ ಎನ್ನುವಂತ ಫೈಟ್ ಕೊಟ್ಟವು.1989ರ ನವೆಂಬರ್‌ 22 ಮತ್ತು ನವೆಂಬರ್‌ 26ರಂದು ಚುನಾವಣೆಗಳು ನಡೆದವು
ಲೋಕಸಭೆಯಲ್ಲಿನ 525 ಸ್ಥಾನಗಳಿಗಾಗಿ ಎರಡು ಹಂತಗಳಲ್ಲಿ ಚುನಾವಣೆಗಳನ್ನು ಆಯೋಜಿಸಲಾಯಿತು:. ಲೋಕಸಭೆಯಲ್ಲಿ ಒಂದು ಸರಳ ಬಹುಮತವನ್ನು ಗಳಿಸುವಲ್ಲಿ ರಾಷ್ಟ್ರೀಯರಂಗವು ಯಶಸ್ವಿಯಾಯಿತು ಹಾಗೂ ಎಡರಂಗ ಮತ್ತು BJPಯ ಬಾಹ್ಯ ಬೆಂಬಲದೊಂದಿಗೆ ಸರ್ಕಾರವನ್ನು ರಚಿಸಿತು. ರಾಷ್ಟ್ರೀಯರಂಗದ ಅತಿದೊಡ್ಡ ಘಟಕವಾಗಿದ್ದ ಜನತಾದಳವು 143 ಸ್ಥಾನಗಳನ್ನು ಗೆದ್ದರೆ, CPI-M ಮತ್ತು CPIಗಳು ಕ್ರಮವಾಗಿ 33 ಮತ್ತು 12 ಸ್ಥಾನಗಳನ್ನು ಗಳಿಸಿದವು. ಸ್ವತಂತ್ರ ಅಭ್ಯರ್ಥಿಗಳು ಮತ್ತು ಇತರ ಸಣ್ಣದಾದ ಪಕ್ಷಗಳಿಗೆ ಸೇರಿದವರು 59 ಸ್ಥಾನಗಳನ್ನು ಗೆಲ್ಲುವಲ್ಲಿ ಯಶಸ್ವಿಯಾದರು.
197 MPಗಳನ್ನು ಹೊಂದುವುದರೊಂದಿಗೆ ಕಾಂಗ್ರೆಸ್‌ ಪಕ್ಷವು ಆಗಲೂ ಸಹ ಲೋಕಸಭೆಯಲ್ಲಿನ ಏಕೈಕ ಅತಿದೊಡ್ಡ ಪಕ್ಷವೆನಿಸಿಕೊಂಡಿತ್ತು.
BJPಯು ಈ ಚುನಾವಣೆಗಳಲ್ಲಿ ಅತಿದೊಡ್ಡ ಪ್ರಯೋಜನ ಪಡೆದ ಪಕ್ಷ ಎನಿಸಿಕೊಂಡಿತು. ಏಕೆಂದರೆ, 1984ರ ಚುನಾವಣೆಗಳಲ್ಲಿ ಕೇವಲ ಎರಡು ಸ್ಥಾನವನ್ನಷ್ಟೇ ಗಳಿಸಿದ್ದ BJPಯು 1989 ರ ಈ ಚುನಾವಣೆಯಲ್ಲಿ ತನ್ನ ಒಟ್ಟು ಗೆಲ್ಲಂಕವನ್ನು 85  ಸ್ಥಾನಗಳಿಗೆ ಹೆಚ್ಚಿಸಿಕೊಂಡಿತ್ತು.
ವಿಶ್ವನಾಥ್‌ ಪ್ರತಾಪ್‌ ಸಿಂಗ್‌ ಭಾರತದ 10ನೇ ಪ್ರಧಾನಮಂತ್ರಿಯಾದರೆ, ದೇವಿಲಾಲ್‌ ಉಪ-ಪ್ರಧಾನಮಂತ್ರಿಯಾದರು.  ರಾಜೀವಗಾಂದಿ ಎರಡನೇ ದೊಡ್ದ ಪಕ್ಷದ ನಾಯಕರಾದರು.
Lok Sabha elections 1989
Electoral participation: 61,95%

%
Won
(total 545)
BJP
11,36
85
CPI
2,57
12
CPI(M)
6,55
33
IC(S)
0,33
1
INC
39,53
197
JD
17,79
143
JP
1,01
0
LD(B)
0,2
0
AIADMK
1,5
11
AIFB
0,42
3
DMK
2,39
0
ICJ(TG)
0,0
0
MUL
0,32
2
NC
0,2
3
JPP
0,0
0
KC
0,02
0
NC
0,04
0
MGP
0,04
1
MPP
0,05
0
MNF
0,02
0
NPC
0,08
0
PPA
0,3
0
PWPI
0,21
0
RSP
0,62
4
SAD
0,03
0
SAD(B)
0,14
0
SSP
0,03
1
TDP
3,29
2
ABHS
0,07
1
AIMIM
0,21
1
BSP
2,07
3
GNLF
0,14
1
IPF
0,25
1
JMM
0,34
3
KC(M)
0,12
1
MCO
0,08
1
SAD(M)
0,77
6
SS
0,11
1
Independents
-
5,25
12
Nominated Anglo-Indians
-
-
2References

http://en.wikipedia.org/wiki/Bhopal_disaster

No comments:

Post a Comment

enter your comments please