ಸ್ವತಂತ್ರದ ಹೆಜ್ಜೆಗಳು 8 - ಭಾರತದ ಮಹಾಚುನಾವಣ ಸಂಗ್ರಾಮ (1984-85)
1980-1984 ರ ಅವದಿಯು ಭಾರತವು ಹಲವು ಐತಿಹಾಸಿಕ ಘಟನೆಗಳಿಗೆ, ಅನಿರೀಕ್ಷಿತ ರಾಜಕೀಯ ತಿರುವುಗಳಿಗೆ ಸಾಕ್ಷಿಯಾಯಿತು.
23-ಜೂನ್-1980 ರಂದು ಪ್ರಧಾನಿ ಇಂದಿರಾರವರ ಎರಡನೆ ಮಗ, ಎಮರ್ಜೆನ್ಸಿ ಸಂದರ್ಭದ ಹಲವು ಹಗರಣಗಳಿಗೆ ಕಾರಣವೆನಿಸಿದ್ದ ಸಂಜಯ್ ಗಾಂಧಿಯವರು ವಿಮಾನ ದುರಂತದಲ್ಲಿ ಮರಣಿಸಿದರು. ದೇಶದಲ್ಲಿ ಹಲವು ಸಂಚಲನಗಳಿಗೆ ಅದು ಕಾರಣವೆನಿಸಿತು. ಹಾಗೆ ಮೊದಲ ಮಗ ರಾಜೀವ್ ಗಾಂದಿ, ಪೈಲೆಟ್ ಆಗಿ ಇಂಡಿಯನ್ ಏರ್ ಲೈನ್ಸ್ ಸೇರಿದ್ದರು.
2-ಜುಲೈ - 1981 ರಂದು ಇನ್ ಪೋಸಿಸ್ ಪುಣೆಯಲ್ಲಿ ಪ್ರಾರಂಭವಾಯಿತು. ತೊಂಬತ್ತರ ದಶಕದ ನಂತರ ಐಟಿ ಕ್ಷೇತ್ರದಲ್ಲಿ ಭಾರತದ ಹೆಸರು ದಾಖಲಾಗಲು ಪ್ರೇರಣೆಯಾದ ಸಂಸ್ಥೆ
ಜುಲೈ 25 1982 ರಂದು ಜೈಲ್ ಸಿಂಗ್ ರಾಷ್ಟ್ರಪತಿಯಾಗಿ ಅಧಿಕಾರ ಸ್ವೀಕರಿಸಿದರು.
1983 ರ ಫೆಬ್ರುವರಿಯಲ್ಲಿ ಡಕಾಯಿತರ ರಾಣಿ ಎಂದು ಕರೆಯಲ್ಪಟ್ಟ ಪೂನಂದೇವಿ ಪೋಲಿಸರಿಗೆ ಶರಣಾದಳು.
2-04-1984 ರಂದು ರಾಕೇಶ್ ಶರ್ಮ ಪ್ರಥಮ ಭಾರತೀಯರಾಗಿ ಭೂಮಿಯ ಹೊರಗಿನ ‘ಸ್ಪೇಸ್ ‘ (ಆಕಾಶ) ನಿಂದ ಇಂದಿರಾಗಾಂದಿಯವರಿಗೆ ಮಾತನಾಡಿದ್ದು ರೇಡಿಯೋಗಳಲ್ಲಿ ಬಿತ್ತರವಾಯಿತು !
ರಾಕೇಶ ಶರ್ಮರು ಸ್ಪೇಸ್ ಶಟಲ್ ನಿಂದಲೇ ‘ಸಾರೆ ಜಹಾಸೆ ಅಚ್ಚ ಹಿಂದುಸ್ತಾನ್ ‘ ಅಂದಿದ್ದು ಎಲ್ಲರಲ್ಲಿ ಪುಳಕ ಮೂಡಿಸಿತ್ತು
ಮಾರ್ಚಿ 5 , 1984 ರಂದು ಇಂದಿರಾ ಸಹಿ ಮಾಡಿದ ಆಪರೇಶನ್ ಬ್ಲೂ ಸ್ಟಾರ್ , 5 ಜೂನ್ ರಂದು ಪ್ರಾರಂಭವಾಗಿ, ಭಾರತದ ಮಿಲಿಟರಿ , ಅಮೃತಸರದ ಸಿಖ್ಖರ ಪವಿತ್ರ ಗೋಲ್ಡನ್ ಟೆಂಪಲ್ ಒಳಗೆ ನುಗ್ಗಿತು, ಇದೇ ಕಾರಣವಾಗಿ, 31-ಅಕ್ಟೋಭರ್-1984
ರಂದು ಇಂದಿರಾಗಾಂದಿಯವರು ಅವರ ನಿವಾಸದಲ್ಲಿ ತಮ್ಮ ಅಂಗರಕ್ಷಕ ಸಿಖ್ಖರಿಂದಲೇ ಕಗ್ಗೊಲೆಯಾದರು.
ಇಂದಿರಾ ಕೊಲೆಯ ಕಾರಣದಿಂದ ದೆಹಲಿಯಲ್ಲಿ ಪ್ರಾರಂಬವಾದ ದಂಗೆ 3 ನವೆಂಬರ್ ವರೆಗೂ ಮುಂದುವರೆದು ಸುಮಾರು 10 ಸಾವಿರಕ್ಕೂ ಅಧಿಕ ಸಿಖ್ ಜನಾಂಗದವರು ಕೊಲ್ಲಲ್ಪಟ್ಟರು
ನಂತರ ಆಗ ಇಂದಿರಾರವರ ಪುತ್ರರಾಗಿದ್ದ ರಾಜೀವಗಾಂಧಿಯವರು ಭಾರತದ ತಾತ್ಕಾಲಿಕ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡರು
Sanjay gandhi with Indiragandhi
Operation Blue Star Photo
Indira gandhi Murderd by her Securities
Indira Gandhi
Sikhs are targeted at Delhi
1984ರ ನವೆಂಬರ್‌ನಲ್ಲಿ ಚುನಾವಣೆಗಳು ನಡೆಯುತ್ತವೆಯೆಂದು ಪ್ರಕಟಿಸಲಾಯಿತು
ಡಿಸೆಂಬರ್ 24, 27 ಮತ್ತು 28, 1984 ರಂದು ಚುನಾವಣೆಗಳು ನಡೆದವು.
ಪ್ರಚಂಡ-ಬಹುಮತದ ವಿಜಯವೊಂದನ್ನು ಕಾಂಗ್ರೆಸ್ ದಾಖಲಿಸಿತು.
409 ಲೋಕಸಭೆ ಸ್ಥಾನಗಳನ್ನು ಮತ್ತು 50 ಪ್ರತಿಶತಕ್ಕಿಂತ ಹೆಚ್ಚಿನ ಜನಪ್ರಿಯ ಮತವನ್ನು ಇದು ಗೆದ್ದುಕೊಂಡಿತು; ಇದು ಪಕ್ಷದ ಅದುವರೆಗಿನ ಕಾರ್ಯಕ್ಷಮತೆಯಲ್ಲಿ ಅತ್ಯುತ್ತಮವೆನಿಸಿಕೊಂಡಿತು.
ಆಂದ್ರದ ಎನ್ ಟಿ ಆರ್ ರವರ ತೆಲುಗುದೇಶಂ ಪಕ್ಷವು 30 ಸ್ಥಾನಗಳನ್ನು ಗಳಿಸುವುದರೊಂದಿಗೆ ಸಂಸತ್ತಿನಲ್ಲಿನ ಎರಡನೇ ಅತಿದೊಡ್ಡ ಪಕ್ಷ ಎನಿಸಿಕೊಂಡಿತು.
ಒಂದು ಪ್ರಾದೇಶಿಕ ಪಕ್ಷವು ಮುಖ್ಯ ವಿರೋಧಪಕ್ಷವಾಗಿ ಹೊರಹೊಮ್ಮಿದ್ದು, ಭಾರತೀಯ ಸಂಸತ್ತಿನ ಇತಿಹಾಸದಲ್ಲಿನ ಅಪರೂಪ ದಾಖಲೆಗಳಲ್ಲಿ ಒಂದೆನಿಸಿದೆ.
Results
Party
|
Acronym
|
% of votes
|
Seats
|
Congress(I)
|
49.01%
|
404
| |
TDP
|
4.31%
|
30
| |
CPI(M)
|
5.87%
|
22
| |
AIADMK
|
1.69%
|
12
| |
JP
|
6.89%
|
10
| |
CPI
|
2.71%
|
6
| |
IC(S)
|
1.52%
|
4
| |
LD
|
5.97%
|
3
| |
RSP
|
0.5%
|
3
| |
NC
|
0.43%
|
3
| |
BJP
|
7.74%
|
2
| |
DMK
|
2.42%
|
2
| |
AIFB
|
0.45%
|
2
| |
MUL
|
0.28%
|
2
| |
KC(J)
|
0.25%
|
2
| |
ICJ
|
0.64%
|
1
| |
PWPI
|
0.2%
|
1
| |
PPA
|
0.3%
|
0
| |
KC(M)
|
0.11%
|
0
| |
AIML
|
0.1%
|
0
| |
MPP
|
0.06%
|
0
| |
NNDP
|
0.05%
|
0
| |
MGP
|
0.04%
|
0
| |
JKP
|
0%
|
0
| |
Independents
|
-
|
7.29%
|
5
|
Nominated Anglo-Indians
|
-
|
-
|
2
|
Total
|
100%
|
506
|
References :
80 - 85ರ ನಡುವಿನ ಹೆಜ್ಜೆಗಳನ್ನು ಸಮರ್ಥವಾಗಿ ಗುರುತಿಸಿದ್ದೀರ.
ReplyDelete