Thursday, April 10, 2014

ಸ್ವತಂತ್ರದ ಹೆಜ್ಜೆಗಳು 7 - ಭಾರತದ ಮಹಾಚುನಾವಣ ಸಂಗ್ರಾಮ (1980)




ಸ್ವತಂತ್ರದ ಹೆಜ್ಜೆಗಳು 7 - ಭಾರತದ ಮಹಾಚುನಾವಣ ಸಂಗ್ರಾಮ (1980)

ಕಾಂಗ್ರೆಸ್ ಮತ್ತು ಇಂದಿರಾ ವಿರೋದದ ಅಲೆ, ತುರ್ತುಪರಿಸ್ಥಿತಿಯ ಅತಿರೇಕಗಳನ್ನು ಚುನಾವಣ ವಿಷಯವಾಗಿಟ್ಟು  1977 ರ ಚುನಾವಣೆಯನ್ನು ಗೆದ್ದ ಜನತಾಪಕ್ಷ ಒಕ್ಕೂಟ ನಂತರದಲ್ಲಿ ಆ ಒಗ್ಗಟ್ಟನ್ನು ಕಾಪಾಡಿಕೊಳ್ಳಲು ವಿಫಲವಾಯಿತು. ಭಾರತೀಯ ಲೋಕದಳದ ಚರಣಸಿಂಗ್ , ಕಾಂಗ್ರೆಸ್ ತ್ಯಜಿಸಿ ಜನತಾ ಸೇರಿದ್ದ ಜಗಜೀವನರಾಮ್ ,ಪ್ರಧಾನಿಯಾಗಿದ್ದ ಮೊರಾರ್ಜಿ ದೇಸಾಯಿ ಇವರ ನಡುವೆ ಯಾವ ಸಮನ್ವಯವೂ ಇರಲಿಲ್ಲ.
1978 ನವೆಂಬರ್ 7 ರಂದು ನಡೆದ ಮರುಚುನಾವಣೆಯಲ್ಲಿ ಇಂದಿರಾಗಾಂಧಿಯವರು ಕರ್ನಾಟಕದ ಚಿಕ್ಕಮಂಗಳೂರಿನಿಂದ  ಸಂಸತ್ತಿಗೆ ಪುನಃ  ಆರಿಸಿಬಂದರು.  ಆಗ ಅವರ ವಿರುದ್ದ ನಿಂತಿದ್ದು ಸ್ಪರ್ಧಿಸಿದ್ದು,  ವಿರೇಂದ್ರಪಾಟೀಲ್ !  ನಂತರ ಇವರೇ ಕಾಂಗ್ರೆಸ್(I) ಸೇರಿದರು ಅನ್ನುವುದು ಇತಿಹಾಸ.




Indira elected from chikkamagalore karnataka 


chaudhary charan singh prime minister after Morarji Desai


Indira regained public sympathy 


Morvi Dam Burst in Gujarat 



city under water Morvi Dam burst , Gujarat 



1978 ರ ಡಿಸೆಂಬರ್ 19 ರಂದು ಇಂದಿರಾರವರನ್ನು ಅರೆಸ್ಟ್ ಮಾಡಲಾಯಿತು ಹಾಗು ಒಂದುವಾರ ಕಾಲ ಜೈಲಿನಲ್ಲಿ ಇರಿಸಲಾಯಿತು
ತುರ್ತುಪರಿಸ್ಥಿತಿಯ ಅತಿರೇಕಗಳ ಬಗ್ಗೆ , ಮಾನವ ಹಕ್ಕುಗಳ ದುರುಪಯೋಗದ ಬಗ್ಗೆ ತನಿಖೆನಡೆಸಲು ಸರ್ಕಾರ ರಚಿಸಿದ್ದ ಆಯೋಗ ಪ್ರತೀಕಾರ ಸ್ವರೂಪದಂತೆ ಕಾಣಿಸಿ, ಇಂದಿರಾರವರು ತಮ್ಮನ್ನು ಕಿರುಕುಳಕ್ಕೆ ಒಳಗಾದ ಮಹಿಳೆಯಂತೆ ಪ್ರತಿಭಿಂಬಿಸಲು ಸಫಲರಾದರು. ಇಂದಿರಾರವರು ಸಾರ್ವಜನಿಕ ಸಹಾನುಭೂತಿಯನ್ನು ಗಳಿಸಿದರು. ಅದೇ ಸಮಯಕ್ಕೆ ಸರ್ಕಾರದ ಒಳಗಿರುವವರು ಜನರ ವಿಶ್ವಾಸ ಕಳೆದುಕೊಳ್ಳುತ್ತಾ ಹೋದರು. ಸಮಾಜವಾದಿಗಳು ಮತ್ತು ಹಿಂದೂ ರಾಷ್ಟ್ರೀಯತಾವಾದಿಗಳ ಒಂದು ಮಿಶ್ರಣವಾಗಿದ್ದ ಜನತಾಪಕ್ಷವು 1979ರಲ್ಲಿ ಒಡೆಯಿತು;  

 ಭಾರತೀಯ ಜನಸಂಘದ,BJS, ನಾಯಕರಾದ  ವಾಜಪೇಯಿ ಮತ್ತು  ಲಾಲ್ ಕೃಷ್ಣ ಅಡ್ವಾನಿಯವರು  ಜನತಾ ಒಕ್ಕೂಟವನ್ನು ತ್ಯಜಿಸಿದರು ಮತ್ತು ಸರ್ಕಾರಕ್ಕೆ ನೀಡಿದ್ದ ಬೆಂಬಲವನ್ನು ಹಿಂತೆಗೆದುಕೊಂಡರು.

ಸಂಸತ್ತಿನಲ್ಲಿ ವಿಶ್ವಾಸಮತವನ್ನು ಪಡೆಯುವಲ್ಲಿ ಸೋತ ಮೊರಾರ್ಜಿ ದೇಸಾಯಿಯವರು ರಾಜೀನಾಮೆ ನೀಡಿದರು.

ಜನತಾ ಒಕ್ಕೂಟದ ಒಂದಷ್ಟು ಪಾಲುದಾರರನ್ನು ಉಳಿಸಿಕೊಂಡಿದ್ದ ಚರಣ್‌ಸಿಂಗ್‌,  ಕಾಂಗ್ರೆಸ್ ಬೆಂಬಲದ ಭರವಸೆಯೊಡನೆ ಪ್ರಧಾನಮಂತ್ರಿಯಾಗಿ 1979ರ ಜೂನ್‌ನಲ್ಲಿ ಪ್ರಮಾಣವಚನ ಸ್ವೀಕರಿಸಿದರು.

ಸಂಸತ್ತಿನಲ್ಲಿ ಚರಣ ಸಿಂಗ್‌ರವರಿಗೆ ಬೆಂಬಲ ನೀಡುವ ಭರವಸೆಯನ್ನು ಕಾಂಗ್ರೆಸ್‌ ನೀಡಿತ್ತು, ಆದರೆ ನಂತರ ಹಿಂಜರಿಯಿತು.

1980ರ ಜನವರಿಯಲ್ಲಿ ಚುನಾವಣೆಗಳು ನಡೆಯುವುದರ ಕುರಿತು ಅವರು ಘೋಷಿಸಿದರು,
ಸಂಸತ್ತನ್ನು ಎದುರಿಸದ ಏಕೈಕ ಪ್ರಧಾನಮಂತ್ರಿ ಅವರಾದರು.  

ಈ ನಡುವೆ ರಾಜಕೀಯೇತರ ಘಟನೆಗಳು ಕೆಲವನ್ನು ಗಮನಿಸಿಬಹುದು,
01-ಜನವರಿ-1978 ರಂದು ಮುಂಬಯಿಯಲ್ಲಿ ಭೋಯಿಂಗ್ 747 ಪ್ಲೇನ್ ಅರಬ್ಬಿ ಸಮುದ್ರಕ್ಕೆ ಬಿದ್ದು 200 ಕ್ಕೂ ಅಧಿಕ ಮಂದಿ ಮರಣಹೊಂದಿದರು.
01-ಜನವರಿ-1979 ಮಂಡಲ ಅಯೋಗವನ್ನು ರಚಿಸಿಲಾಯಿತು, ರಾಷ್ಟ್ರಪತಿ ನೀಲಂ ಸಂಜೀವರೆಡ್ಡೆಯರು ಅದನ್ನು ಘೋಷಿಸಿದರು, ಮುಂದೆ ಅದು ರಾಜಕೀಯ ಹೋರಾಟಕ್ಕೆ ಕಾರಣವಾಯಿತು.
11-ಅಗಸ್ಟ್ -1979 ರಂದು ಗುಜರಾತಿನ ‘ಮೋರ್ವಿ ಡ್ಯಾಮ್’ ಒಡೆದು 1500 ಕ್ಕು ಅಧಿಕ ಜನ  ಸಾವಿಗೀಡಾದರು, ಇದೊಂದು ಭಾರತದ ದೊಡ್ಡ ದುರ್ಘಟನೆಯಾಯಿತು.



ಜನತಾಪಕ್ಷ ನಾಯಕರ ನಡುವೆ ಕಂಡುಬಂದ ಜಗಳ ಮತ್ತು ದೇಶದಲ್ಲಿನ ರಾಜಕೀಯ ಅಸ್ಥಿರತೆಯಂಥ ಅಂಶಗಳು  ಕಾಂಗ್ರೆಸ್‌ (I) ಪಕ್ಷಕ್ಕೆ ಅನುಕೂಲಕರವಾಗಿ ಕೆಲಸಮಾಡಿದವು;

ಇಂದಿರಾ ಗಾಂಧಿಯವರು ಸ್ಥಿರ ಸರ್ಕಾರದ ಭರವಸೆ ಮತದಾರರಿಗೆ ಇಷ್ಟವಾಯಿತು,
1980  ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ
351  ಸ್ಥಾನಗಳನ್ನು ಕಾಂಗ್ರೆಸ್‌ ಗೆದ್ದುಕೊಂಡರೆ, ಜನತಾಪಕ್ಷ  ಎಂದು ಏನು ಉಳಿದಿತ್ತೋ ಆ ಪಕ್ಷ    32 ಸ್ಥಾನಗಳನ್ನು ಗೆದ್ದುಕೊಂಡಿತು.

ಇಂದಿರಾಗಾಂದಿಯವರು ಪುನಃ ಪ್ರಧಾನಿಯಾದರು.  








Alliances
Party
Seats won
Change
Popular Votes %
Seats: 374
Seat Change: +286
Popular Vote %:
351
+271


16
+15


3
+1


3
+1


1
-1

Seats: 34
Seat Change: -194
Popular Vote %:
31
-172


2
-15


1
-7

Seats: 53
Seat Change: +17
Popular Vote %:
35
+13


11
+4


4


3


1

Others and Independents
Seats: 63
Seat Change: -120
41
-36


13
-43


6
-27


Others
3
-14











1 comment:

  1. 7ನೇ ಭಾಗಕ್ಕಾಗಿ ಧನ್ಯವಾದಗಳು.
    ಜನತಾ ಪಕ್ಷದ ಅಪಕ್ವ ಕಾಲದ ಗೆಲುವು ಮತ್ತು ಇನ್ನಿತರೇ ವಿವರಗಳನ್ನು ಅಧಿಕೃತವಾಗಿ ಕೊಟ್ಟಿದ್ದೀರ.

    ReplyDelete

enter your comments please