ಸ್ವತಂತ್ರದ ಹೆಜ್ಜೆಗಳು 6 - ಭಾರತದ ಮಹಾಚುನಾವಣ ಸಂಗ್ರಾಮ (1977)
1971 ರಿಂದ 1977 ರವರೆಗೂ ಭಾರತದ ವಿದೇಶಿನೀತಿ ಹಾಗು ರಾಜಕೀಯ ಸ್ಥಿತಿ ಎರಡರಲ್ಲಿಯೂ ಬದಲಾವಣೆ ತರುವಂತಹ ಘಟನೆಗಳು ನಡೆದವು. ದೇಶ ಮತ್ತೊಮ್ಮೆ ಪಾಕಿಸ್ಥಾನದ ಸೈನ್ಯದ ಜೊತೆ ಸೆಣಸಬೇಕಾಗಿತ್ತು. ಈ ಬಾರಿ ಸ್ವಷ್ಟವಾಗಿ ಭಾರತದ ಮೇಲುಗೈ ಇತ್ತು.
1971 ರಲ್ಲಿ ನಡೆದ ಬಾಂಗ್ಲವಿಮೋಚನ ಎನ್ನುವ ಈ ಕದನವನ್ನು ಭಾರತ ಪಾಕಿಸ್ಥಾನದ ಯುದ್ದ ಎಂದೇ ಕರೆಯುತ್ತಾರೆ. ಭಾರತದ ಎರಡು ಬದಿಯಲ್ಲಿ ಇದ್ದ ಪೂರ್ವ ಹಾಗು ಪಶ್ಚಿಮ ಪಾಕಿಸ್ತಾನವು ಈ ಯುದ್ದದ ನಂತರ ಬಾಂಗ್ಲಾದೇಶ ಎನ್ನುವ ಹೊಸ ರಾಷ್ಟ್ರದ ಉಗಮಕ್ಕೆ ಕಾರಣವಾಯಿತು. ಬಾಂಗ್ಲದಲ್ಲಿ ಎರಡರಿಂದ ಮೂರು ಲಕ್ಷದಷ್ಟು ಜನ ಹಿಂದುಗಳು ಪಾಕಿಸ್ಥಾನ ಸೈನ್ಯದಿಂದ ಕೊಲ್ಲಲ್ಪಟ್ಟರು. ಭಾರತ ತನ್ನ ಸೈನ್ಯದ ಮೇಲೆ ಪಾಕಿಸ್ಥಾನ ದಾಳಿ ನಡೆಸುತ್ತಲೆ ತಾನು ಸಹ ಉತ್ತರಿಸಲು ಪ್ರಾರಂಭಿಸಿತು, ಕಡೆಗೊಮ್ಮೆ ಪಾಕಿಸ್ಥಾನ ಸೋಲೊಪ್ಪಿ ಶರಣಾಯಿತು. 16- ಡಿಸೆಂಬರ್- 1971 ಹೊಸ ಬಾಂಗ್ಲಾದೇಶ ಉದಯವಾಯಿುತು.
ಭಾರತ ಸ್ವಷ್ಟ ಗೆಲುವು ಸಾದಿಸಿತ್ತು.
ಚೀನ ಮತ್ತು ಅಮೇರಿಕದ ವಿರೋಧ ಹಾಗು ಸೋವಿಯತ್ ರಷಿಯ ಹೊರತುಪಡಿಸಿ ಬೇರಾವುದೇ ದೇಶದ ಬೆಂಬಲವಿಲ್ಲದ ಸ್ಥಿಥಿಯಲ್ಲಿಯೂ ಸಹ ಇಂದಿರಗಾಂದಿಯವರು ಕೈಗೊಂಡ ಸ್ವಷ್ಟ ನಿರ್ಧಾರದಿಂದ ಪಾಕಿಸ್ತಾನವನ್ನು ಭಾರತ ಎದುರಿಸಿತು.
ಯುದ್ದದ ಗೆಲುವು ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರತ ಹಾಗು ಇಂದಿರಾರವರಿಗೆ ಹೆಸರು ತಂದುಕೊಟ್ಟಿತ್ತು ಆದರೆ ಭಾರತ-ಪಾಕ್ ಯುದ್ಧದ ಅಗಾಧವಾದ ಆರ್ಥಿಕ ವೆಚ್ಚ, ವಿಶ್ವದ ತೈಲ ಬೆಲೆಗಳಲ್ಲಿನ ಹೆಚ್ಚಳ, ಮತ್ತು ಕೈಗಾರಿಕಾ ಉತ್ಪಾದನೆಯಲ್ಲಿ ಕಂಡುಬಂದ ಕುಸಿತ ಇವುಗಳಿಂದಾಗಿ ಆರ್ಥಿಕ ದಾರಿದ್ರ್ಯಗಳು ಮತ್ತಷ್ಟು ಹೆಚ್ಚಾದವು.
ಅದೇ ಸಮಯಕ್ಕೆ ಭಾರತದ ಒಳಗೆ ಇಂದಿರಾರವರಿಗೆ ವಿರುದ್ದವಾದ ವಿದ್ಯಮಾನಗಳು ಜರುಗುತ್ತಿದ್ದವು. ಅಲಹಾಬಾದ್ ಕೋರ್ಟಿನಲ್ಲಿ ಇಂದಿರಾ ವಿರುದ್ದ ಕೇಸೊಂದು ದಾಖಲಾಗಿತ್ತು. ರಾಯ್ ಬರೇಲಿಯಲ್ಲಿ ಅವರು ೧೯೭೧ ರ ಚುನಾವಣೆಯಲ್ಲಿ ಗಳಿಸಿದ ಗೆಲುವು ಅಕ್ರಮವೆಂದು ರಾಜನಾರಯಣ್ ಎಂಬುವರು ವಾದ ಹೂಡಿದ್ದರು. ಹೈಕೋರ್ಟ್ ಅವರ ವಾದವನ್ನು ಎತ್ತಿ ಹಿಡಿದು ಇಂದಿರಾರವರ ಗೆಲುವು ಅಕ್ರಮವೆಂದು ಅವರು ರಾಜಿನಾಮೆ ಕೊಡಬೇಕೆಂದು 1975ರ ಜೂನ್ 12ರಂದು ಅಲಹಾಬಾದ್ ಉಚ್ಚ ನ್ಯಾಯಾಲಯವು ತೀರ್ಪು ಕೊಟ್ಟಿತ್ತು. ಇಂದಿರಾರವರು ತುರ್ತುಪರಿಸ್ಥಿಥಿ ಘೋಷಿಸಿದರು. ವಿರೋದಿ ನಾಯಕರನ್ನೆಲ್ಲ ಸೆರೆಗೆ ಕಳುಹಿಸಿದರು. ಚುನಾವಣೆ ಸಹ ಮುಂದೂಡಲ್ಪಟ್ಟಿತ್ತು.
ಕಡೆಗೆ 1977 ರಲ್ಲಿ ಇಂದಿರಾರವರು ಚುನಾವಣೇ ಘೋಷಿಸಿದರು.
ಬಾಂಗ್ಲ ಯುದ್ದದ ಪರಿಣಾಮಗಳು, ತುರ್ತುಪರಿಸ್ಥಿತಿಯ ನಿರ್ಧಾರ , ಈ ಎಲ್ಲ ಹಿನ್ನಲೆಗಳು ಚುನಾವಣೆಯ ಮೇಲೆ ಸಾಕಷ್ಟು ಪರಿಣಾಮ ಬೀರಿದವು. ಸ್ವಂತಂತ್ರ ಬಂದ ನಂತರ ಕಾಂಗ್ರೆಸ್ ಚುನಾವಣೆಯಲ್ಲಿ ಪ್ರಥಮ ಬಾರಿ ಸೋಲೊಪ್ಪಿಕೊಂಡಿತು. ತುರ್ತು ಪರಿಸ್ಥಿತಿಯ ಅವಧಿಯಲ್ಲಿ ನಡೆಸಲಾದ ಕಡ್ಡಾಯ ಸಂತಾನಶಕ್ತಿಹರಣ ಚಿಕಿತ್ಸೆ ಮತ್ತು ರಾಜಕೀಯ ನಾಯಕರ ಸೆರೆವಾಸದಂಥ ದೌರ್ಜನ್ಯಗಳು ಮತ್ತು ಮಾನವ ಹಕ್ಕುಗಳ ಉಲ್ಲಂಘನೆಗಳನ್ನು ಜನತಾಪಕ್ಷವು ಮತದಾರರಿಗೆ ನೆನಪಿಸಿತು.
ಭಾರತವು ಹೊಂದಲಿರುವುದು "ಪ್ರಜಾಪ್ರಭುತ್ವವನ್ನೋ ಅಥವಾ ಸರ್ವಾಧಿಕಾರವನ್ನೋ" ಎಂಬುದನ್ನು ಚುನಾವಣೆಗಳು ನಿರ್ಧರಿಸಲಿವೆ ಎಂಬುದಾಗಿ ಜನತಾಪಕ್ಷದ ಪ್ರಚಾರಾಂದೋಲನವು ಹೇಳಿಕೊಂಡಿತು.
ಕೃಷಿ ಮತ್ತು ನೀರಾವರಿ ಸಚಿವರಾಗಿದ್ದ ಬಾಬು ಜಗಜೀವನ್ ರಾಂ ಕಾಂಗ್ರೆಸ್ ಪಕ್ಷವನ್ನು ತ್ಯಜಿಸಿದರು.
ಜನತಾಪಕ್ಷ ಎನ್ನುವ ಹೆಸರಿನೊಡನೆ, ಜನತಾದಳ ಒಕ್ಕೂಟ ಸ್ವಷ್ಟ ಬಹುಮತ ಸಾದಿಸಿತ್ತು. 345 ಸ್ಥಾನಗಳನ್ನು ಗಳಿಸಿದ್ದರು, ಕಾಂಗ್ರೆಸ್ 189 ಸ್ಥಾನಗಳ ಗೆಲುವಿನೊಡನೆ ಎರಡನೇ ಸ್ಥಾನ ಗಳಿಸಿತ್ತು.
ಪ್ರಥಮ ಬಾರಿಗೆ ಕಾಂಗ್ರೇಸೇತರರೊಬ್ಬರು ಭಾರತದ ಪ್ರಧಾನಿಯಾದರು. ಮೊರಾರ್ಜಿದೇಸಾಯಿರವರು ಪ್ರಧಾನಿಯಾಗಿ ಘೋಷಿಸಲ್ಪಟ್ಟರು.
Alliances
|
Party
|
Seats won
|
Change
|
Popular Votes %
|
Seats: 345
Seat Change: +233
Popular Vote %: 51.89
|
298
|
+245
|
43.17
| |
22
|
-3
|
4.30
| ||
9
|
+8
|
1.26
| ||
5
|
—
|
0.55
| ||
3
|
+2
|
n/a
| ||
3
|
+2
|
0.34
| ||
2
|
+1
|
0.51
| ||
1
|
-22
|
1.76
| ||
2
|
—
|
—
| ||
Seats: 189
Seat Change: -217
Popular Vote %: 40.98
|
153
|
−197
|
34.52
| |
19
|
—
|
2.9
| ||
7
|
-16
|
2.82
| ||
2
|
—
|
0.26
| ||
2
|
-2
|
0.3
| ||
2
|
-1
|
0.18
| ||
Revolutionary Socialist Party (breakaway)
|
1
|
-1
|
—
| |
2
|
—
|
—
| ||
Others
Seats: 19
|
Others
|
19
|
—
|
References :
http://en.wikipedia.org/wiki/Indo-Pakistani_War_of_1971
http://en.wikipedia.org/wiki/Indian_general_election,_1977
http://en.wikipedia.org/wiki/Indian_general_election,_1977
http://en.wikipedia.org/wiki/The_Emergency_(India)
http://eci.nic.in/eci_main/statisticalreports/LS_1977/Vol_I_LS_77.pdf
"ಪ್ರಜಾಪ್ರಭುತ್ವವನ್ನೋ ಅಥವಾ ಸರ್ವಾಧಿಕಾರವನ್ನೋ" ಇದು ಈಗಿನ ಚುನಾವಣೆಗೂ ಅನ್ವಯ ಅಲ್ಲವೇ?
ReplyDelete"ಪ್ರಜಾಪ್ರಭುತ್ವವನ್ನೋ ಅಥವಾ ಸರ್ವಾಧಿಕಾರವನ್ನೋ" ಇದು ಈಗಿನ ಚುನಾವಣೆಗೂ ಅನ್ವಯ ಅಲ್ಲವೇ?
ReplyDelete...
ಇದು ಎಲ್ಲ ಕಾಲಕ್ಕು ಅನ್ವಯವಾಗುತ್ತಲೆ ಇರುತ್ತದೆ, ಅಂತಹ ವ್ಯಕ್ತಿತ್ವದವರು ಸದಾ ಇದ್ದೇ ಇರುತ್ತಾರೆ, ಹಾಗೆ ಅವರ ಹಿಂಬಾಲಕರು ಇರುತ್ತಾರೆ