ನಮನ
ಎಲ್ಲವೂ ಪರಿಪೂರ್ಣ
ಹೊರಗಿನ ದೃಷ್ಯಗಳನ್ನು ನೋಡಲು ಕಣ್ಣಿನ ವ್ಯವಸ್ಥೆ
ಹೊರಗಿನ ಶಬ್ದಗಳನ್ನು ಕೇಳಲು ಕಿವಿಯ ವ್ಯವಸ್ಥೆ
ಮಾತುಗಳನ್ನಾಡಲು ನಾಲಿಗೆ ಶ್ವಾಸ ದ್ವನಿಪೆಟ್ಟಿಗೆ...
ನಡೆದಾಡಲು ಅನುಕೂಲಕ್ಕೆ ತಕ್ಕಂತೆ ಕೈ ಕಾಲುಗಳು
ಸ್ವಯ ಶಕ್ತಿ ಉತ್ಪಾದಿಸಲು ಬೇಕಾದ ಜೀರ್ಣಾಂಗ ರಕ್ತಪರಿಚಲನೆ
ಎಲ್ಲವನ್ನು ಅರ್ಥಮಾಡಿಕೊಳ್ಲಲು ಅನುವಾಗುವಂತೆ ಮೆದುಳು
ಹುಟ್ಟಿನಿಂದ ಸಾವಿನವರೆಗೂ ಒಂದೇ ಕ್ಷಣ ನಿಲ್ಲದಂತೆ ಹೃದಯಮಿಡಿತ
ಇಷ್ಟೆಲ್ಲ ಶಿಸ್ತುಬದ್ಧವ್ಯವಸ್ಥೆಯ ಒಳಗೆ 'ಜೀವ' ಎಂಬ ಅಗೋಚರ ಶಕ್ತಿ,
ಅಂತಹ 'ನಾನು' ಹೊರಗೆ ಹೋದೊಡನೆ ಕುಸಿಯುವ ವ್ಯವಸ್ತ್ಯೆ..
ಅತ್ಯಂತ ತರ್ಕಬದ್ದ, ನೀಲನಕ್ಷೆಯೊಡನೆ ರಚಿತ ಎನ್ನಿಸುವ
ಒಂದು ಅಪೂರ್ವ ವ್ಯವಸ್ಥೆ ಯಾವುದೇ ಸಂಕಲ್ಪವಿಲ್ಲದೆ ಸ್ವಯಂಭೂವಾಗಿ
ತನ್ನಿಂದ ತಾನೆ ಸೃಷ್ಟಿಯಾಯಿತು ಅನ್ನುವದಾದರು ಹೇಗೆ.
ಇಂತಹ ಒಂದು ಅಪೂರ್ವ ಸೃಷ್ಟಿಗೆ ಕಾರಣನಾಗಿರುವ
ಅವನೋ/ಅವಳೋ/ ಅದೋ
ಅಂತಹ ದಿವ್ಯ ಶಕ್ತಿಗೆ ನನ್ನ ನಮನ
ಭಗವಂತನ ಸೃಷ್ಟಿ ಮತ್ತು ಪರಿಪೂರ್ಣತೆ ಅವನ ನಿಜವಾದ ಕೃಪೆ.
ReplyDeleteಮನುಜನ ಅಹಂ ಮತ್ತು ವಿವೇಚನಾರಹಿತ ಬದುಕಿನ ಶೈಲಿಯಿಂದ ಹಾಳುಗೆಡವಿಗೊಳ್ಳುತ್ತಾನೆ ಈ ಪರಿಪೂರ್ಣತೆಯ.
ಮಾರ್ಮಿಕ ಕವನ.