ಸ್ವತಂತ್ರದ ಹೆಜ್ಜೆಗಳು 14 - ಭಾರತದ ಮಹಾಚುನಾವಣ ಸಂಗ್ರಾಮ (2004)
1999 ರಿಂದ 2004 ರವರೆಗು ಬಿಜೇಪಿ ಆಡಳಿತದ ಕಾಲದಲ್ಲಿ ಸ್ಥಿರ ಆರ್ಥಿಕ ಬೆಳವಣಿಗೆ ಇತ್ತು, ಸಾರ್ವಜನಿಕ ವಲಯದ ಘಟಕಗಳಲ್ಲಿನ/ PSU ಗಳುಬಂಡವಾಳ ಹಿಂತೆಗೆತವು ಸರಿಯಾದ ಹಾದಿಯಲ್ಲಿ ನಡೆದಿತ್ತು, ವಿದೇಶಿ ವಿನಿಮಯದ ಮೀಸಲುಗಳು 100 ಶತಕೋಟಿ ರೂಪಾಯಿಗಳ ದಾಖಲೆ ಮಟ್ಟದಲ್ಲಿತ್ತು, ಸೇವಾ ವಲಯಗಳಲ್ಲಿ ಉಗ್ಯೋಗ ಸೃಷ್ಟಿ ಅತಿ ಉತ್ತಮ ಎನಿಸಿತ್ತು . ಅಭಿವೃದ್ದಿಯ ಕಾರ್ಯಗಳು ಉತ್ತಮವಾಗಿಯೆ ಸಾಗಿದ್ದವು.
ವಾಜಪೇಯಿ ಸರ್ಕಾರದ ಅವದಿಯಲ್ಲಿ ಕೆಲವು ಸಂಗತಿಗಳನ್ನು ಗಮನಿಸಬಹುದು
30 ನವೆಂಬರ್ ಒರಿಸ್ಸಾದಲ್ಲಿ ಸೈಕ್ಲೋನ್ ಗೆ ಸುಮಾರು 10,000 ಜನ ಬಲಿಯಾದರು
30 ನವೆಂಬರ್ ಒರಿಸ್ಸಾದಲ್ಲಿ ಸೈಕ್ಲೋನ್ ಗೆ ಸುಮಾರು 10,000 ಜನ ಬಲಿಯಾದರು
24 ಡಿಸೆಂಬರ್ 1999 ರಂದು 189 ಜನರಿದ್ದ ಭಾರತದ ಏರ್ ಲೈನ್ಸ್ ವಿಮಾನವನ್ನು ಕಟ್ಮಂಡುವಿನಿಂದ , ಅರಬ್ ದೇಶ ಕಂದಹಾರ್ ಗೆ ಅಪಹರಣ ಮಾಡಿ ಒಯ್ಯಲಾಗಿತ್ತು, ನಂತರ ಕಾಶ್ಮೀರದ ಮೂವರು ಉಗ್ರರನ್ನು ಸೆರೆಯಿಂದ ಬಿಟ್ಟು ವಿಮಾನದಲ್ಲಿದ್ದ ಪ್ರಯಾಣಿಕರನ್ನು ಬಿಡಿಸಲಾಯಿತು. ಪಾಕಿಸ್ತಾನ ಈ ಕೃತ್ಯದ ಹಿಂದೆ ಇದೆಯೆಂದು ಪ್ರಧಾನಿ ವಾಜಪೇಯಿ ತಿಳಿಸಿದರು.
30 ಜೂಲೈ 2000 ದಲ್ಲಿ ಕರ್ನಾಟಕದಲ್ಲಿ ರಾಜಕುಮಾರ್ ರವರನ್ನು ವಿರಪ್ಪನ್ ಎಂಬ ಕಾಡುಗಳ ಅಪಹರಿಸಿದನು.
ವಿದೇಶಿ ಟೆಲಿಕಾಂಗಳು ಬಾರತದಲ್ಲಿ ಬಾಗವಹಿಸುವ ಸಲುವಾಗಿ ಭಾರತ ಸರ್ಕಾರದ ಅಧೀನದಲ್ಲಿದ್ದ ಟೆಲೆಕಾಂ ಇಲಾಖೆಯನ್ನು ಸಾರ್ವಜನಿಕ ಉಧ್ಯಮದ ಘಟಕವಾಗಿ ಪರಿವರ್ತಿಸಿ, ಪ್ರವೈಟ್ ಆಪರೇಟರಗಳು ಸಹ ಟೆಲಿಕಾಂ ಕಂಪನಿ ತೆರೆಯಲು ಅನುಕೂಲ ಮಾಡಿಕೊಡಲಾಯಿತು
ವೈಮಾನಿಕ ಕ್ಷೇತ್ರದಲ್ಲಿ ಪ್ರಗತಿ ಸಾಧಿಸಲಾಯಿತು
26 ಜನವರಿ 2000 ಗುಜರಾತ್ ನಲ್ಲಿ ಸಂಭವಿಸಿದ ಭೂಕಂಪದಲ್ಲಿ 30,000 ಕ್ಕೂ ಅಧಿಕ ಜನ ಮೃತಪಟ್ಟರು
ಮಾರ್ಚಿಯಲ್ಲಿ ಬಿಜೇಪಿಯ ಬಂಗಾರುಲಕ್ಷ್ಮಣ್ ಹಾಗು ಜಾರ್ಜ್ ಫರ್ನಾಂಡಿಸ್ ಲಂಚದ ಆರೋಪದಲ್ಲಿ ರಾಜಿನಾಮೆ ಕೊಡಬೇಕಾಯಿತು
4 ಜೂಲೈ 2000 ದೇಶದ ಪ್ರಥಮ ಪ್ರವೈಟ್ ರೇಡಿಯೋ ಸ್ಟೇಷನ್ ರೇಡಿಯೋ ಸಿಟಿ ಪ್ರಾರಂಭ
ಡಕಾಯಿತರ ರಾಣಿಯ ಪೂಲಂ ದೇವಿಯ ಕೊಲೆ
7 ಅಕ್ಟೋಬರ್ ನರೇಂಧ್ರಮೋದಿ ಗುಜರಾತಿಯ ಮುಖ್ಯಮಂತ್ರಿಯಾಗಿ ಆಯ್ಕೆ
ಡಿಸೆಂಬರ್ ಮಧ್ಯಭಾಗದಲ್ಲಿ ಭಾರತದ ಪಾರ್ಲಿಮೆಂಟ್ ಮೇಲೆ ಪಾಕಿಸ್ತಾನಿ ಪ್ರಚೋದಿತ ಉಗ್ರರ ದಾಳಿ
2002 ರ ಜನವರಿ ಫೆಬ್ರುವರಿಯಲ್ಲಿ ಗುಜರಾತಿನಲ್ಲಿ ಗಲಭೆ , ಗೋದ್ರ ಹಗರಣವೆಂದು ಮುಂದೆ ಪ್ರಸಿದ್ದವಾಯಿತು
2002 ಜೂನ್ ನಲ್ಲಿ ಪಾಕಿಸ್ತಾನದ ಪ್ರಧಾನಿ ಮುಷರಪ್ ಜೊತೆ ಮಾತುಕತೆ ವಿಫಲ
2002 ಜೂನ್ ನಲ್ಲಿ ಪಾಕಿಸ್ತಾನದ ಪ್ರಧಾನಿ ಮುಷರಪ್ ಜೊತೆ ಮಾತುಕತೆ ವಿಫಲ
ಅಲ್ಲದೆ ಪಾಕಿಸ್ತಾನದ ಜೊತೆಗಿನ ಇಷ್ಟು ಘರ್ಷಣೆಯ ಜೊತೆಗೂ ಸಂಬಂಧಗಳು ವೃದ್ದಿಸಲ್ಲಿ ಎನ್ನುವಂತೆ ಭಾರತದಿಂದ ಪಾಕಿಸ್ತಾನಗೆ ರೈಲು ಹಾಗು ಬಸ್ಸುಗಳ ಓಡಾಟ ಸಹ ಪ್ರಾರಂಭವಾಯಿತು
Kandhahaar Inidain Aircraft Hijacked
Rajkumar kinapped by Veerappan
Bus to Lahor from New Delhi
Prime minister Manamohan singh
ಅಟಲ್ ಬಿಹಾರಿ ವಾಜಪೇಯಿಯವರನ್ನು ಪ್ರಧಾನಮಂತ್ರಿಯಾಗಿ ಹೊಂದಿದ್ದ ಬೀಜೆಪಿ -ನೇತೃತ್ವದ NDA ಸರ್ಕಾರವು 2004ರಲ್ಲಿ ತನ್ನ ಐದು ವರ್ಷಗಳ ಆಡಳಿತಾವಧಿಯನ್ನು ಪೂರ್ಣಗೊಳಿಸಿತು
ಹಾಗೂ
2004ರ ಏಪ್ರಿಲ್ 20 ಮತ್ತು ಮೇ 10ರ ನಡುವೆ ನಾಲ್ಕು ಹಂತಗಳಲ್ಲಿ ಚುನಾವಣೆಗಳು ನಡೆದವು.
ತನಗೆ ಹಿತಕರವಾದ ಪರಿಸ್ಥಿಥಿ ಹಾಗೂ ತನ್ನ ಚುನಾವಣಾ ಪ್ರಚಾರಾಂದೋಲನಲ್ಲಿ ಬಳಸಿಕೊಳ್ಳಲಾದ 'ಭಾರತ ಪ್ರಕಾಶಿಸುತ್ತಿದೆ' ಎಂಬ ಪದಗುಚ್ಛದ ಮೇಲೆ ಸವಾರಿಮಾಡುವ ಮೂಲಕ NDA -ವಿರೋಧಿ ಶಕ್ತಿಗಳನ್ನು ಬಗ್ಗುಬಡಿದು ನಿಚ್ಚಳ ಬಹುಮತವನ್ನು ಗೆಲ್ಲಲಿದೆ ಎಂಬುದಾಗಿ ಬಹುಪಾಲು ವಿಶ್ಲೇಷಕರು ನಂಬಿದರು.
ಚುನಾವಣೆಯು ಹೆಚ್ಚುಕಡಿಮೆ ವಾಜಪೇಯಿ ಹಾಗು ಸೋನಿಯರ ನಡುವಿನ ನೇರ ಸಂಘರ್ಷದಂತೆ ಇತ್ತು
ಪ್ರಥಮ ಬಾರಿಗೆ ಕಾಂಗ್ರೆಸ್ ಉಳಿದ ಇತರ ಪಕ್ಷಗಳ ನಡುವೆ ರಾಜ್ಯಮಟ್ಟದಲ್ಲಿ ಸಂಭಂದ ಏರ್ಪಟ್ಟುವು.
ಎಲ್ಲ ಊಹೆಗಳನ್ನು ಮೀರಿ ಬಡಜನತೆಯ ವರ್ಗ ಗ್ರಾಮೀಣ ಪ್ರದೇಶದ, ಕೆಳ-ಜಾತಿಯ ಮತ್ತು ಅಲ್ಪಸಂಖ್ಯಾತ ಮತದಾರರು ಬಹುತೇಕವಾಗಿ ಕಾಂಗ್ರೆಸ್ ಗೆ ಬೆಂಬಲ ನೀಡಿದರು;ಈ ಎಲ್ಲ ಲೆಕ್ಕಾಚಾರಗಳ ಹಿನ್ನೆಲೆಯಲ್ಲಿ ಕಾಂಗ್ರೆಸ್ ತನ್ನ ಪ್ರಚಂಡ ವಿಜಯವನ್ನು ದಾಖಲಿಸಿತು.
ಮೇ 13ರಂದು BJPಯು ಸೋಲನ್ನು ಒಪ್ಪಿಕೊಂಡಿತು ಮತ್ತು 543 ಸದಸ್ಯರ ಪೈಕಿ 335ಕ್ಕೂ ಹೆಚ್ಚಿನ ಸದಸ್ಯರನ್ನೊಳಗೊಂಡ (BSP, SP, MDMK ಮತ್ತು ಎಡರಂಗ ಇವೇ ಮೊದಲಾದವುಗಳಿಂದ ಸಿಕ್ಕ ಬಾಹ್ಯ ಬೆಂಬಲವನ್ನು ಒಳಗೊಂಡಂತೆ) ಒಂದು ಅನುಕೂಲಕರ ಬಹುಮತವನ್ನು ಒಗ್ಗೂಡಿಸುವಲ್ಲಿ ಕಾಂಗ್ರೆಸ್ ಯಶಸ್ವಿಯಾಯಿತು. ಈ ನಿಟ್ಟಿನಲ್ಲಿ ಪಕ್ಷಕ್ಕೆ ಅದರ ಮಿತ್ರಪಕ್ಷಗಳ ನೆರವು ಹಾಗೂ ಸೋನಿಯಾ ಗಾಂಧಿಯವರ ನಿರ್ದೇಶನ ದೊರೆಯಿತು. ಚುನಾವಣಾ-ನಂತರದ ಈ ಒಕ್ಕೂಟವನ್ನು ಸಂಯುಕ್ತ ಪ್ರಗತಿಪರ ಒಕ್ಕೂಟ (ಯುನೈಟೆಡ್ ಪ್ರೋಗ್ರೆಸಿವ್ ಅಲಯೆನ್ಸ್-UPA)ಎಂದು ಕರೆಯಲಾಯಿತು.
ದೇಶದ ಹೊಸ ಪ್ರಧಾನಮಂತ್ರಿಯಾಗುವುದಕ್ಕೆ ದೊರೆತ ಅವಕಾಶವನ್ನು ನಿರಾಕರಿಸುವ ಮೂಲಕ, ಬಹುಮಟ್ಟಿಗೆ ಎಲ್ಲರನ್ನು ಸೋನಿಯಾ ಗಾಂಧಿಯವರು ಅಚ್ಚರಿಗೊಳಿಸಿದರು. ಅಧಿಕಾರವನ್ನು ವಹಿಸಿಕೊಳ್ಳುವಂತೆ ಹಿಂದಿನ ಹಣಕಾಸು ಮಂತ್ರಿ ಡಾ. ಮನಮೋಹನ್ ಸಿಂಗ್‌ರವರಿಗೆ ಆಕೆ ಕೇಳಿಕೊಂಡರು. 1990ರ ದಶಕದ ಆರಂಭದಲ್ಲಿ ಕಾಂಗ್ರೆಸ್ ಪ್ರಧಾನಮಂತ್ರಿ ನರಸಿಂಹ ರಾವ್‌ರವರ ಅಡಿಯಲ್ಲಿ ಡಾ. ಸಿಂಗ್ ವಿತ್ತಸಚೀವವರಾಗಿ ಕಾರ್ಯನಿರ್ವಹಿಸಿದ್ದರು;
ಸನ್ನಿಹಿತವಾಗಿದ್ದ ರಾಷ್ಟ್ರೀಯ ಹಣಕಾಸಿನ ಬಿಕ್ಕಟ್ಟೊಂದನ್ನು ನಿವಾರಿಸಿದ್ದ, ಭಾರತದ ಮೊದಲ ಆರ್ಥಿಕ ಉದಾರೀಕರಣ ಯೋಜನೆಯ ಶಿಲ್ಪಿಗಳ ಪೈಕಿ ಅವರೂ ಒಬ್ಬರು ಎಂಬುದಾಗಿ ಈ ಅವಧಿಯಲ್ಲಿ ಪರಿಗಣಿಸಲಾಗಿತ್ತು.
ಮನಮೋಹನಸಿಂಗ್ ಭಾರತದ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದರು.
kandahar indian flight hijack
RAJKUMAR KIDNAPPED
http://en.wikipedia.org/wiki/Kidnapping_of_Rajkumar
gujarath earthquake
delhi lahore bus
http://en.wikipedia.org/wiki/Delhi%E2%80%93Lahore_Bus
ತುಂಬಾ ಉಪಯುಕ್ತ ಮೈಲುಗಲ್ಲುಗಳನ್ನು ಚೆನ್ನಾಗಿ ದಾಖಲಿಸಿದ್ದೀರ.
ReplyDelete