Thursday, April 17, 2014

ಸ್ವತಂತ್ರದ ಹೆಜ್ಜೆಗಳು 15 - ಭಾರತದ ಮಹಾಚುನಾವಣ ಸಂಗ್ರಾಮ (2009)

ಸ್ವತಂತ್ರದ ಹೆಜ್ಜೆಗಳು 15 -  ಭಾರತದ ಮಹಾಚುನಾವಣ ಸಂಗ್ರಾಮ (2009)



2004 - 2009 ರ ಅವಧಿಯು ಮನಮೋಹನ್ ಸಿಂಗ್ ನೇತೃತ್ವದ ಕಾಂಗ್ರೆಸ್ ಪಕ್ಷಕ್ಕೆ ಹಲವು ಸಮಸ್ಯೆಗಳನ್ನು ಎದುರಿಸುತ್ತ  ಆಡಳಿತ ನಡೆಸುವಂತಾಯಿತು.  ನರಸಿಂಹರಾವ್ ಪ್ರಧಾನಿಯಾಗಿದ್ದಾಗ  ಅರ್ಥಿಕಬೆಳವಣಿಗೆಯ ಹರಿಕಾರರು ಎಂದು ಹೆಸರು ಪಡೆದಿದ್ದ  ಮನಮೋಹನಸಿಂಗರವರು ಪ್ರಧಾನಿಯಾಗಿ ಅದೇ ಪ್ರಗತಿಯನ್ನು ಸಾಧಿಸಲಾಗಲಿಲ್ಲ.


ಆದರೂ ಟೆಲಿಕಾಂ ಕ್ಷೇತ್ರದಲ್ಲಿ ಹೆಚ್ಚು ಪ್ರಗತಿ ಕಂಡಿತು. ಟ್ರಾಯ್ ಸ್ಥಾಪನೆಯಿಂದಾಗಿ ಮೊಬೈಲ್ ಕಾಲ್ ಗಳಲ್ಲಿ ಹಾಗು ಅಂತರ್ದೇಶಿಕ ಕಾಲಗಳಲ್ಲಿ  ದರದ ಕುಸಿತ ದಾಖಲಿಸಿತು
೨-೫ ಮಾರ್ಚಿ ೨೦೦೫ ರಲ್ಲಿ ಅಮೇರಿಕ ಅಧ್ಯಕ್ಷ ಜಾರ್ಜ್ ಬುಷ್ ರವರು ಭಾರತಕ್ಕೆ ಬೇಟಿ ಕೊಟ್ಟರು. ಆ ಸಮಯದಲ್ಲಿ ಭಾರತದ ಪಾರ್ಲಿಮೆಂಟ್ ಅವರೊಂದಿಗೆ ಅಣುಒಪ್ಪಂದಕ್ಕೆ ಸಹಿ ಹಾಕಿತು, ಅದಕ್ಕೆ ಸಾಕಷ್ಟು ವಿರೋಧ ವ್ಯಕ್ತವಾಯಿತು.


೧೯ ಜುಲೈ ೨೦೦೭ ಪ್ರತಿಭಾಪಾಟೀಲ್ ರವರು ರಾಷ್ಟ್ರದ ಅಧ್ಯಕ್ಷರಾಗಿ ಚುನಾಯಿತರಾದರು.


೨೨-ಜೂಲೈ - ೨೦೦೮  ಮನಮೋಹನಸಿಂಗರ ಸರ್ಕಾರ ಅಣುಒಪ್ಪಂದಕ್ಕೆ ಸಂಬಂಧಿಸಿದಂತೆ ಪಾರ್ಲಿಮೆಂಟಿನಲ್ಲಿ  ‘ಓಟ್ ಆಫ್ ಕಾನ್ಫಿಡೆನ್ಸ್’ ನಲ್ಲಿ ಅತಿ ಕಡಿಮೆ ಅಂತರದಲ್ಲಿ ಪಾರಾಯಿತು.


















ದಿನಬಳಕೆ ವಸ್ತುಗಳ ಬೆಲೆಯನ್ನು ಹಿಡಿತದಲ್ಲಿಡಲು ಮನಮೋಹನರ ಸರ್ಕಾರ ವಿಫಲವಾಯಿತು, ಬೆಲೆಗಳ ಹೆಚ್ಚಳ ಜನರನ್ನು ಸಾಕಷ್ಟು ಬಾದಿಸಿತು.
ಎಲ್ಲಕ್ಕಿಂತ ಹೆಚ್ಚಾಗಿ ಭಾರತದ ನಗರಗಳ ಮೇಲೆ, ಜನತೆಯ ಮೇಲೆ ಪಾಕ್ ಪ್ರಚೋದಿತ  ಭಯೋತ್ಪಾದನೆಯ ದಾಳಿಗಳು ಸತತವಾಗಿ   ಜನರನ್ನು ಕಂಗೆಡಿಸಿತು.
29-ಅಕ್ಟೋಬರ್-2005 ದೆಹಲಿಯ ಮೇಲೆ ದಾಳಿ , 60 ಜನರ ಮರಣ, 7-ಮಾರ್ಚ್-2006 ರಂದು ವಾರಣಸಿಯಲ್ಲಿ ದಾಳಿ 15  ಮರಣ,  22-ಜೂಲೈ -2006  ಮುಂಬೈ ಟ್ರೈನ್ ಗಳ ಮೇಲೆ ದಾಳಿ, 18-ಫೆಬ್ರುವರಿ -2007 ಸಂಜಾತ ಎಕ್ಸ್ ಪ್ರೆಸ್ ಮೇಲೆ ಬಾಂಬ್,  18-ಮೇ-2007 ಹೈದರಾಭಾದ್ ನಲ್ಲಿ ದಾಳಿ 9 ಜನರ ಮರಣ. 25-ಜೂಲೈ-2008 ಬೆಂಗಳೂರಿನಲ್ಲಿ ಬಾಂಬ್ ದಾಳಿ.
ಈ ಹತ್ತು ಹಲವು ಬಾಂಬ್ ದಾಳಿಗಳಿ ಕಳಸವಿಟ್ಟಂತೆ
26-29ನಡುವಿನ ನವೆಂಬರ್ 2008 ರಲ್ಲಿ ಪಾಕಿಸ್ತಾನಿ ಭಯೋತ್ಪಾದಕರು ಮುಂಬೈ ನಗರದ ಮೇಲೆ  ನೇರದಾಳಿ ಇಟ್ಟು 175 ಜನಕ್ಕು ಹೆಚ್ಚು ಜನರು ಮರಣಿಸಿ,  350 ಹೆಚ್ಚು ಜನರು ಗಾಯಗೊಂಡರು , ದಾಳಿಕೋರರಲ್ಲಿ ಒಬ್ಬಾತ ಸೆರೆಸಿಕ್ಕ, ಭಾರತದ ಕಾನೂನಿನ ಅನ್ವಯ ನೇಣುಶಿಕ್ಷೆಗೆ ಒಳಗಾದ.


ಈ ಎಲ್ಲ ಹಿನ್ನಲೆಯಲ್ಲಿಯೂ ,   2009ರ ಮೇ ತಿಂಗಳಿನಲ್ಲಿ, 15ನೇ ಲೋಕಸಭಾ ಚುನಾವಣೆಗಳು ನಡೆದವು. ಇದರಲ್ಲಿ ಕಾಂಗ್ರೆಸ್‌-ನೇತೃತ್ವದ ಸಂಯುಕ್ತ ಪ್ರಗತಿಪರ ಒಕ್ಕೂಟವು (UPA) ಲೋಕಸಭೆಯನ್ನು ನಡೆಸಿಕೊಂಡು ಹೋಗಲು ಅಗತ್ಯವಾಗಿದ್ದ ಜನಾದೇಶವನ್ನು ಗೆದ್ದುಕೊಂಡಿತ್ತು. ಶ್ರೀಮತಿ ಮೀರಾ ಕುಮಾರ್‌ ಸಭಾಪತಿಯಾಗಿ ಆಯ್ಕೆಯಾದರು. ಮನಮೋಹನಸಿಂಗ್ ಎರಡನೆ ಅವಧಿಗೆ ಪ್ರಧಾನಿಯಾಗಿ ಆಯ್ಕೆಯಾದರು


UPA - 262, NDA - 159



Reference
http://en.wikipedia.org/wiki/Indian_general_election,_2009

1 comment:

  1. UPA -2 ಆರಂಭದವರೆಗಿನ ಒಳ್ಳೆಯ ಲೇಖನ.

    ReplyDelete

enter your comments please