ಸ್ವತಂತ್ರದ ಹೆಜ್ಜೆಗಳು 16 - ಭಾರತದ ಮಹಾಚುನಾವಣ ಸಂಗ್ರಾಮ (2014)
2009-2014 ರ ಕಾಂಗ್ರೆಸ್ ನೇತೃತ್ವದ ಯುಪಿಏ , ಮನಮೋಹನಸಿಂಗ ರವರ ನಾಯಕತ್ವದ ಸರ್ಕಾರ ತನ್ನ ಐದು ವರ್ಷಗಳ ಅವಧಿಯನ್ನು ಪೂರೈಸಿತು. ಹತ್ತು ಹಲವು ಟೀಕೆಗಳು, ಭ್ರಷ್ಟಾಚಾರದ ತಾಂಡವದ ಅರೋಪಗಳು.ದೆಹಲಿಯ ರಸ್ತೆಗಳಲ್ಲಿ ದೇಶದ ಉದ್ದಗಲಕ್ಕು ಹೆಣ್ಣಿನ ಮೇಲೆ ನಡೆದ ಅತ್ಯಾಚಾರ ಪ್ರಸಂಗಗಳು, ಸಾಮಾನ್ಯನನ್ನು ಭಾದಿಸಿದ ಬೆಲೆ ಏರಿಕೆಯ ಬಾರ ಎಲ್ಲವನ್ನು ಪ್ರದಾನಿ ಮೌನವಾಗಿಯೆ ಎದುರಿಸಿದರು.
2009 ಜೂನ್ 3 ರಂದು ಪಾರ್ಲಿಮೆಂಟಿನಲ್ಲಿ ಮೀರಾ ಕುಮಾರರವರು ಸ್ಪೀಕರ್ ಆಗಿ ಪ್ರಥಮ ಬಾರಿ ಸ್ತ್ರೀಯರೊಬ್ಬರು ಆ ಜವಾಬ್ಧಾರಿ ನಿರ್ವಹಿಸಿದ ದಾಖಲೆ ಮಾಡಿದರು
24 ನವೆಂಬರ್ 2010 ರಲ್ಲಿ ಭಾರತದ ಪ್ರಧಾನಿ ಅಮೇರಿಕಾಗೆ ಬೇಟಿ ನೀಡಿ ಅಮೇರಿಕ ಅಧ್ಯಕ್ಷ ಒಭಾಮರ ಜೊತೆ ವ್ಯಾಪಾರ ಹಾಗು ಅಣು ಒಪ್ಪಂದಗಳಿಗೆ ಸಂಬಂದಿಸಿದಂತೆ ಮಾತುಕತೆ ನಡೆಸಿದರು
2010 ಮೇ 6 ರಂದು ಮುಂಬೈ ನಗರದ ಮೇಲೆ ಭಯೋತ್ಪಾದಕ ದಾಳಿಯಲ್ಲಿ ಸಿಕ್ಕಿಬಿದ್ದಿದ್ದ ಪಾಕಿಸ್ತಾನದ ಪ್ರಜೆ ಅಜ್ಮಲ್ ಕಸಾಭ್ ಗೆ ಭಾರತದ ಕೊರ್ಟ್ ಮರಣದಂಡನೆ ವಿಧಿಸಿತು.
2012 ರಲ್ಲಿ 2G ಲೈಸನ್ಸ್ ಹಗರಣದಲ್ಲಿ ಸರ್ಕಾರ ಕೊಡಮಾಡಿದ ಎಲ್ಲ 122 ಲೈಸನ್ಸ್ ಗಳನ್ನು ಕೋರ್ಟ್ ರದ್ದುಪಡಿಸಿತು. ಕೇಂದ್ರ ಮಂತ್ರಿ ರಾಜ ಜೈಲಿನಲ್ಲಿಯೆ ಉಳಿದರು.
ಪ್ರಣಭ್ ಮುಖರ್ಜಿ ರಾಷ್ಟ್ರಪತಿಯಾಗಿ ಅಧಿಕಾರ ಸ್ವೀಕರಿಸಿದರು
2012 ಡಿಸೆಂಬರ್ 16 ರಂದು ದೆಹಲಿಯ ಬಸ್ ನಲ್ಲಿ ಅರ್ಧರಾತ್ರಿಯಲ್ಲಿ ಹೆಣ್ಣೊಬ್ಬಳ ಮೇಲೆ ನಡೆದ ಅತ್ಯಾಚಾರ ದೇಶವ್ಯಾಪಿ ಸುದ್ದಿಯಾಯಿತು. ನಂತರ ಅದೇ ರೀತಿಯ ಘಟನೆಗಳು ಹಲವು ಭಾಗಗಳಲ್ಲಿ ನಡೆದು, ಮುಂಬಯಿಯಲ್ಲಿ ಪತ್ರಕೋದ್ಯಮಿಯ ಮೇಲೆ ನಡೆದ ಅತ್ಯಾಚಾರಿಗಳಿಗೆ ಕೋರ್ಟ್ ಮರಣದಂಡನೆ ವಿಧಿಸಿತು.
ಆಂದ್ರವನ್ನು ವಿಭಾಗಿಸಿ ಹೊಸರಾಜ್ಯ ಸೀಮಾಂದ್ರದ ಸ್ಥಾಪನೆಯಾಯಿತು, ಅದಕ್ಕೆ ಸಾಕಷ್ಟು ತೆಲಂಗಾಣದ ಪರ ವಿರೋಧದ ಹೋರಾಟಗಳು ನಡೆದವು
ಈ ಘಟನೆಗಳಲ್ಲದೆ ರಾಜಕೀಯವಾಗಿ ಹಲವು ಬದಲಾವಣೆಗಳು ನಡೆದವು,
Manamohan singh and Obama president of america
ANNA HAZARE AND ARAVIND KEZRIWAL
ANNA WITH BABA RAMDEV
ANNA MOVEMENT
AZMA KASAB HANGED
TELANGANA PROTEST
STAR ICON OF LOKASABHA ELECTIONS -2014
NARENDRA MODI
RAHUL GANHDI CONGRESS LEADER
ಅಣ್ಣಾ ಹಜಾರೆಯವರು ಭ್ರಷ್ಟಾಚಾರದ ವಿರುದ್ಧ ದೊಡ್ಡ ದ್ವನಿಯಲ್ಲಿ ವಿರೋಧ ತೆಗೆದರು, ರಾಜದಾನಿ ದೆಹಲಿಯಲ್ಲಿ ಅಲ್ಲದೆ ದೇಶವ್ಯಾಪಿ ಮುಷ್ಕರಗಳು ನಡೆದವು ಲಕ್ಷ ಲಕ್ಷ ಸಂಖ್ಯೆಯಲ್ಲಿ ಜನ ಸೇರಿ ಅಣ್ಣಾ ಹಜಾರೆಯವರಿಗೆ ತಮ್ಮ ಬೆಂಬಲ ಸೂಚಿಸಿದರು. ನಂತರ ಬಾಬರಾಮದೇವ್, ಅರವಿಂದ ಕೇಜ್ರಿವಾಲರಂತ ಬಹಳಷ್ಟು ಜನ ಅಣ್ಣಾರವರ ದ್ವನಿಗೆ ತಮ್ಮ ದ್ವನಿ ಸೇರಿಸಿ ಅದಕ್ಕೆ ರಾಜಕೀಯ ಸ್ವರೂಪ ದೊರೆಯಿತು. ಕಪ್ಪು ಹಣದ ವಿರುದ್ದ, ವಿದೇಶಿ ಬ್ಯಾಂಕುಗಳಿರುವ ಭಾರತದ ಹಣವನ್ನು ಹಿಂದೆ ತರುವ ಮಾತುಗಳಾದವು. ಭ್ರಷ್ಟಾಚಾರದ ವಿರುದ್ದ ಕಾನೂನು ರಚಿಸಬೇಕೆಂದು ಅಣ್ಣಾ ಹಜಾರೆಯವರು ಹಟ ಹಿಡಿದರು.
ಕ್ರಮೇಣ ಅಣ್ಣಾ ಅವರ ಹೋರಾಟ ಬಿಸಿಕಳೆದುಕೊಂಡಿತು. ಬಾಬ ರಾಮದೇವ ಬದಿಗೆ ಸರಿದರು.
ಅಣ್ಣಾಹಜಾರೆಯವರ ಹೋರಾಟವನ್ನು ಅಸ್ತ್ರಮಾಡಿಕೊಂಡ ಅರವಿಂದ ಕೇಜ್ರಿವಾಲರವರು ಆಮ್ ಆದ್ಮೀ ಪಾರ್ಟಿ ಎಂಬ ರಾಜಕೀಯ ಪಕ್ಷ ಸ್ಥಾಪಿಸಿದರು.
ಕೇಂದ್ರ ಚುನಾವಣೆಗೆ ಮುಂಚೆಯೆ ನಡೆದ ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಆರಿಸಿಬಂದ ಆಮ ಆದ್ಮೀ ಪಕ್ಷ ಕಾಂಗ್ರೆಸ್ ಸಹಯೋಗದೊಂದಿಗೆ ದೆಹಲಿಯ ಸರ್ಕಾರದ ನೇತೃತ್ವ ವಹಿಸಿತು. ಕೇಜ್ರಿವಾಲ್ ಮುಖ್ಯಮಂತ್ರಿಯಾದರು ಆದರೆ ಅತಿ ಕಡಿಮೆ ಅವಧಿಯ ಆಡಳಿತ ನಡೇಸಿದ ಕೇಜ್ರಿವಾಲ ತಮ್ಮ ಮುಖ್ಯಮಂತ್ರಿಪದವಿಗೆ ರಾಜಿನಾಮೆ ನೀಡಿ , ಲೋಕಸಭಾ ಚುನಾವಣೆಗೆ ತಮ್ಮ ಪಕ್ಷ ಸ್ಪರ್ದಿಸುವದಾಗಿ ತಿಳಿಸಿದರು.
ಲೋಕಸಭಾ 2014 ರ ಚುನಾವಣೆಗೆ ಕಣ ಸಜ್ಜಾಗಿತ್ತು. ಭಾರತೀಯ ಜನತಾಪಕ್ಷ ಸುದಾರಣೆಯನ್ನು ಮಂತ್ರವಾಗಿಸಿ, ಅದಕ್ಕೆ ಗುಜರಾತನ್ನು ಮಾದರಿಯಾಗಿಸಿ, ಗುಜರಾತಿನ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿಯವರನ್ನು ಪ್ರಧಾನಿ ಅಭ್ಯರ್ಥಿಯಾಗಿ ಬಿಂಬಿಸಿತು. ಕಾಂಗ್ರೆಸ್ ಅಧ್ಯಕ್ಷರಾಗಿದ್ದ ಸೋನಿಯಗಾಂದಿಯವರ ಮಗ ರಾಹುಲ್ ಗಾಂದಿಯ ನೇತೃತ್ವದೊಂದಿಗೆ ಲೋಕಸಭಾ ಚುನಾವಣೆ ಎದುರಿಸಿತು.
2014 ರ ಚುನಾವಣೆ ಮೋದಿಯ ಪ್ರಧಾನಿ ಅಭ್ಯರ್ಥಿಯ ಪರ ವಿರೋಧಗಳ ಚರ್ಚೆಯ ಜೊತೆ ಬಹುತೇಕ ಏಕವ್ಯಕ್ತಿಯ ಸುತ್ತ ನಡೆಯುತ್ತಿರುವ ಚುನಾವಣೆಯ ಪ್ರಕ್ರಿಯೆ ಎನ್ನುವಂತೆ ಬಿಂಬಿತವಾಯಿತು.
7 ಏಪ್ರಿಲ್ 2014 ರಂದು ಪ್ರಾರಂಭವಾದ ಚುನಾವಣೆ 9 ಹಂತಗಳಲ್ಲಿ ನಡೆಯಿತು
ಚುನಾವಣ ಪಲಿತಾಂಶ ಮೇ 16 2014 ರಂದು ಪ್ರಕಟವಾಯಿತು. ಮಾಧ್ಯಮಗಳೆಲ್ಲ ಪ್ರಕಟಿಸಿದ ಚುನಾವಣ ಪಲಿತಾಂಶದ ಸಮೀಕ್ಷೆಯನ್ನು ಮೀರಿ ಎನ್ ಡಿ ಎ ಗುಂಪಿಗೆ ಪ್ರಚಂಡ ಬಹುಮತ ಬಂದಿದ್ದು 336 ಸ್ಥಾನಗಳನ್ನು ಗಳಿಸಿದ್ದು, ಅದರಲ್ಲಿ ಭಾರತೀಯ ಜನತಾಪಕ್ಷ 183 ಸ್ಥಾನಗಳಲ್ಲಿ ಸ್ವಷ್ಟ ಬಹುಮತ ದಾಖಲಿಸಿತ್ತು. ಸುಮಾರು ಎರಡು ದಶಕಗಳನಂತರ ಭಾರತದ ಜನಗೆ ಒಂದೇ ಪಕ್ಷಕ್ಕೆ ತಮ್ಮ ಬಹುಮತ ನೀಡಿ ನಿರ್ಣಯ ನೀಡಿದ್ದರು. ಕಾಂಗ್ರೆಸ್ ಸೇರಿದಂತೆ ಹಲವು ಪಕ್ಷಗಳು ಅತಿ ಕಡಿಮೆ ಸ್ಥಾನಗಳನ್ನು ಗಳಿಸಿದವು.
26 ನೇ ಮೇ 2014 ರಂದು, ಚುನಾವಣೆಗೆ ಮುನ್ನವೆ ಘೋಷಿಸಿದಂತೆ ನರೇಂದ್ರಮೋದಿಯವರು ಭಾರತದ ಹದಿನೈದನೆ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದರು. ಸ್ವತಂತ್ರಾನಂತರ ಪ್ರಥಮ ಬಾರಿಗೆ ಭಾರತದಲ್ಲಿ ಹೊಸ ಸರ್ಕಾರವೊಂದು ಅಧಿಕಾರಕ್ಕೆ ಬರುವ ಪದಗ್ರಹಣ ಸಮಾರಂಭಕ್ಕೆ ಸಾರ್ಕ್ ದೇಶಗಳ ನಾಯಕರು ಸಾಕ್ಷಿಯಾಗಲು ಬಂದರು. ವಿವಾದಗಳ ನಡುವೆ ಬಂದ ಪಾಕಿಸ್ತಾನದ ನಾಯಕ ನವಾಜ್ ಷರೀಫ್ ಭಾರತದೊಂದಿಗೆ ಹೊಸಶಕೆಯೊಂದನ್ನು ಪ್ರಾರಂಭಿಸುವ ಆಸೆ ಮೂಡಿಸಿದರು. ಹಾಗೆ ಶ್ರೀಲಂಕಾ ಅದ್ಯಕ್ಷ ರಾಜಪಕ್ಷರವರ ಆಗಮನ ಭಾರತದ ತಮಿಳುನಾಡಿನ ಮುಖ್ಯಮಂತ್ರಿ ಜಯಲಲಿತರವರು ವಿರೋದಿಸಿ , ಸಮಾರಂಭದಿಂದ ದೂರ ಉಳಿಯುವದಕ್ಕೆ ಕಾರಣವಾಯಿತು
26 ನೇ ಮೇ 2014 ರಂದು, ಚುನಾವಣೆಗೆ ಮುನ್ನವೆ ಘೋಷಿಸಿದಂತೆ ನರೇಂದ್ರಮೋದಿಯವರು ಭಾರತದ ಹದಿನೈದನೆ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದರು. ಸ್ವತಂತ್ರಾನಂತರ ಪ್ರಥಮ ಬಾರಿಗೆ ಭಾರತದಲ್ಲಿ ಹೊಸ ಸರ್ಕಾರವೊಂದು ಅಧಿಕಾರಕ್ಕೆ ಬರುವ ಪದಗ್ರಹಣ ಸಮಾರಂಭಕ್ಕೆ ಸಾರ್ಕ್ ದೇಶಗಳ ನಾಯಕರು ಸಾಕ್ಷಿಯಾಗಲು ಬಂದರು. ವಿವಾದಗಳ ನಡುವೆ ಬಂದ ಪಾಕಿಸ್ತಾನದ ನಾಯಕ ನವಾಜ್ ಷರೀಫ್ ಭಾರತದೊಂದಿಗೆ ಹೊಸಶಕೆಯೊಂದನ್ನು ಪ್ರಾರಂಭಿಸುವ ಆಸೆ ಮೂಡಿಸಿದರು. ಹಾಗೆ ಶ್ರೀಲಂಕಾ ಅದ್ಯಕ್ಷ ರಾಜಪಕ್ಷರವರ ಆಗಮನ ಭಾರತದ ತಮಿಳುನಾಡಿನ ಮುಖ್ಯಮಂತ್ರಿ ಜಯಲಲಿತರವರು ವಿರೋದಿಸಿ , ಸಮಾರಂಭದಿಂದ ದೂರ ಉಳಿಯುವದಕ್ಕೆ ಕಾರಣವಾಯಿತು
ಯು ಪಿ ಏ 60
ಇತರೆ 147
References
http://en.wikipedia.org/wiki/Ajmal_Kasab
UPA -2 ರಿಂದ ಇಂದಿನ ಚುನಾವಣಾ ಮಹಾಯುದ್ದದವರೆಗೂ ಸಮರ್ಥವಾಗಿ ಚಿತ್ರಿಸಿಕೊಟ್ಟಿದ್ದೀರ.
ReplyDelete