Sunday, January 13, 2013

ಪ್ರೇಮವೆಂಬ ಭಾವ ಹರಿದಿದೆ ಅಂತರ್ಗಂಗೆಯಂತೆ

ಪ್ರೇಮವೆಂಬ ಭಾವ ಹರಿದಿದೆ  ಅಂತರ್ಗಂಗೆಯಂತೆ     
-----------------------------------------------------
ಶಿವನ ಜಟೆಯಿಂದ ದುಮುಕಿ ಹರಿದ ದೇವಗಂಗೆಯು
ಒಲಿದು ಭರತನ ದಾಹ ತೀರಿಸಿ ನಡೆದಿಹಳು ಮುಂದು
ಒಲಿದ ಹೃದಯಗಳ ನಡುವೆ ಹರಿವ ಪ್ರೇಮಗಂಗೆಯು
ಮನುಜ  ಮನವ ತೋಯ್ಸಿ ಹರಿದಿಹಳು ಎಂದೆಂದು    ||೧||

ದೇವಗಂಗೆಯಲ್ಲಿ  ಮಿಂದವರಿಗೆ ಎಂದು ತಟ್ಟುವದಿಲ್ಲ ಪಾಪ
ಪ್ರೇಮಗಂಗೆಯಲ್ಲಿ ಮುಳುಗಿದವಗೆ ಬಾದಿಸದು ಪರಿತಾಪ
ಜಾತಿ ಮತ ದರ್ಮಗಳ ಎಲ್ಲೆ ಮೀರಿ ನಿಲ್ಲುವವರು ಅವರು
ಬಡವ ಬಲ್ಲಿದ ದೇಶ ಪ್ರಾಂತ್ಯಗಳ ಗಡಿಯ ಮೀರಿದವರು  ||೨||

ದೇವನಾದರು ಪ್ರೇಮಭಾವದಿ ಒಲಿದ ರಾದೆ ನಿನಗೆ  ಆ ಕೃಷ್ಣ
ಬಿಕ್ಷುವಾದರು  ರೋಮಿಯೋಗೆ ಒಲಿದಳು ರಾಣಿ ಜುಲಿಯೆಟ್
ವಿಷ ಕುಡಿಯಲು ಹೆದರದ ದೃಡ ಮನಸಿನ ಪರಿ ಆ  ಪ್ರೇಮ
ಗೋಡೆಯೊಳಗೆ ಗೋರಿಯಾದ ಅನರ್ಕಾಲಿ ಎಂಬ ಭಾವ  ||೩||

ಯುಗ ಯಗಗಳ ಕಾಲ ಹರಿಯುತಲಿದೆ ಈ ಪ್ರೇಮವೆಂಬ  ಗಾನ
ಹೃದಯದಿಂದ ಹೃದಯದೆಡೆಗೆ  ನಿರ್ಮಲ ಗಂಗೆಯೆಂಬ ಜಲದಾರ
ನೆಲದ  ಆಳದಲ್ಲಿ ಜೀವಜಲ  ಭೋರ್ಗರಿಯುತಲಿ ದುಮ್ಮುಕ್ಕಿ ಹರಿವಂತೆ
ಮನಮನಗಳಲಿ  ಹರಿದಿದೆ ಪ್ರೇಮವೆಂಬ ಭಾವ ಅಂತರ್ಗಂಗೆಯಂತೆ  ||೪||

No comments:

Post a Comment

enter your comments please