ಕವನ : ಶಕಟರೇಫನೊ ಇವನು ಅನುಕರಣಾವ್ಯಯನೊ?
------------------------------ -----------------
ಸಮೋಸ ಎಂದು ತಿಂದರೆ ಎದೆಯಲ್ಲಿ ರಾತ್ರಿಯೆಲ್ಲ ತಿದಿ
ಸಿಹಿ ಎಂದು ಮೆಚ್ಚುತ್ತ ತಿಂದರೆ ಹಗಲು ತಲೆಯಲ್ಲಿ ಶೂಲೆ
ಅಂಗಾತ ಮಲಗಿದರೆ ಎದೆಯಲ್ಲಿ ಚಳುಕು ಚಳುಕು
ಎದ್ದು ಕುಳಿತರೆ ಉದರದಿ ಎಂತದೊ ಗುಳು ಗುಳು
ದೇಹದಲ್ಲಿ ನೋವಿನ ಹರಿದಾಟ ಎಡಗೈನಿಂದ ಬಲಗೈಗೆ
ಮತ್ತದೆ ನೋವಿನ ನಲಿದಾಟ ಕುಣಿದಾಟ ತಲೆಯಿಂದ ಕಾಲಿಗೆ
ನಿಷ್ಪಾಪಿ ಎಂದು ನಿರ್ಲಕ್ಷಿಸಸಿದಿರಿ ಇವನ ಶಕಟರೇಫನ
ತಿರ್ರನೆ ತಿರುವುವನು ಹೊಟ್ಟೆಯಲ್ಲಿ ಒಮ್ಮೆ
ಡರ್ರನೆ ಕೂಗುವನು ಊರ್ದ್ವಮುಖಿ ಇನ್ನೊಮ್ಮೆ
ಪುರ್ರನೆ ಶಬ್ದ ಮಾಡುವನು ಅಧೋಮುಖಿ ಮತ್ತೊಮ್ಮೆ
ಎಲ್ಲರೆದುರು ಮಾನ ಕಳೆಯುವನು ಇವನು
ಗ್ಯಾಸ್ಟ್ರಿಕ್ ಎಂಬ ತುಂಟನು
ಇವನು ಶಕಟರೇಫನೊ ಇಲ್ಲ ಅನುಕರಣಾವ್ಯಯನೊ
------------------------------
ಸಮೋಸ ಎಂದು ತಿಂದರೆ ಎದೆಯಲ್ಲಿ ರಾತ್ರಿಯೆಲ್ಲ ತಿದಿ
ಸಿಹಿ ಎಂದು ಮೆಚ್ಚುತ್ತ ತಿಂದರೆ ಹಗಲು ತಲೆಯಲ್ಲಿ ಶೂಲೆ
ಅಂಗಾತ ಮಲಗಿದರೆ ಎದೆಯಲ್ಲಿ ಚಳುಕು ಚಳುಕು
ಎದ್ದು ಕುಳಿತರೆ ಉದರದಿ ಎಂತದೊ ಗುಳು ಗುಳು
ದೇಹದಲ್ಲಿ ನೋವಿನ ಹರಿದಾಟ ಎಡಗೈನಿಂದ ಬಲಗೈಗೆ
ಮತ್ತದೆ ನೋವಿನ ನಲಿದಾಟ ಕುಣಿದಾಟ ತಲೆಯಿಂದ ಕಾಲಿಗೆ
ನಿಷ್ಪಾಪಿ ಎಂದು ನಿರ್ಲಕ್ಷಿಸಸಿದಿರಿ ಇವನ ಶಕಟರೇಫನ
ತಿರ್ರನೆ ತಿರುವುವನು ಹೊಟ್ಟೆಯಲ್ಲಿ ಒಮ್ಮೆ
ಡರ್ರನೆ ಕೂಗುವನು ಊರ್ದ್ವಮುಖಿ ಇನ್ನೊಮ್ಮೆ
ಪುರ್ರನೆ ಶಬ್ದ ಮಾಡುವನು ಅಧೋಮುಖಿ ಮತ್ತೊಮ್ಮೆ
ಎಲ್ಲರೆದುರು ಮಾನ ಕಳೆಯುವನು ಇವನು
ಗ್ಯಾಸ್ಟ್ರಿಕ್ ಎಂಬ ತುಂಟನು
ಇವನು ಶಕಟರೇಫನೊ ಇಲ್ಲ ಅನುಕರಣಾವ್ಯಯನೊ
ಚೆನ್ನಾಗಿದೆ , ಗಾಳಿಯ ಚೇಷ್ಟೇ
ReplyDeleteದಶಮೂಲಾರಿಷ್ಟ ಮನೆಯಲ್ಲಿಲ್ಲವೇ..?
ಆ ರೀತಿಯೆಲ್ಲ ಏನಿಲ್ಲ , ಕನ್ನಡಬ್ಲಾಗ್ ನಲ್ಲಿ ಶಕಟರೇಫ ಹಾಗು ಅನುಕರಣಾವ್ಯಯದ ಬಗ್ಗೆ ಚರ್ಚೆ ನಡೇಸಿದ್ದರು ( ರ ಗೆ ರ ಒತ್ತು ಕೊಡುವಾಗ ಆಗುವ ವ್ಯಾಕರಣ)
ReplyDeleteಅದನ್ನು ಅನುಕರಿಸಿ ಈ ಪದ್ಯ ಬರೆದೆ ರ್ರ್ ಡರ್ರ್ ಬರ್ರ್ ಪುರ್ರ್ ಎಂಬ ಪದಗಳೆಲ್ಲ ಬರುವುದು ಅಲ್ಲೆ ಅಲ್ಲವೆ