Tuesday, February 5, 2013

ಕೆಲವು ನಗುವೆ ಹಾಗೆ

ಕೆಲವು ನಗುವೆ ಹಾಗೆ
------------------------
ಕೆಲವು ನಗುವೆ ಹಾಗೆ ಕೋಲ್ಮಿಂಚಿನ ಹಾಗೆ
ಕಣ್ತುಂಬಿದ ಬೆಳಕಿನ ಹಾಗೆ ಕೋರೈಸಿ ಮಾಯವಾಗುತ್ತದೆ
ಕಣ್ಣಲ್ಲಿ ಬೆಳಕು ತುಂಬಿ ನಂತರ ಕತ್ತಲಾಗುತ್ತದೆ

ಕೆಲವು ನಗುವೆ ಹಾಗೆ ಬೆಳಗಿನ ಮಂಜಿನ ಹಾಗೆ
ಕಣ್ಣಲಿ ತುಂಬಿ ನಿದಾನವಾಗಿ ಕರಗುತ್ತದೆ
ಕಣ್ಣಲ್ಲಿ ಕರಗಿದ ನಗು ಹಾಗೆ ನಮ್ಮ ಮನದಲ್ಲಿ ಉಳಿಯುತ್ತದೆ

ಕೆಲವು ನಗುವೆ ಹಾಗೆ ಮಂದಾರ ಕುಸುಮದ ಹಾಗೆ
ಮನ ಮುಟ್ಟಿ ಹೃದಯ ತಟ್ಟಿ ಮುಖವೆಲ್ಲ ಹರಡುತ್ತದೆ
ಕಣ್ಣಲ್ಲಿ ತುಂಬಿವ ನಗು ಮನದಲ್ಲಿ ಸ್ಥಿರವಾಗಿ ನೆಲಸುತ್ತದೆ

ಕೆಲವು ನಗುವೆ ಹಾಗೆ ಮುಂಗಾರಿನ ಗುಡುಗಿನ ಹಾಗೆ
ಉರುಳು ಉರುಳು ಶಬ್ದ ಕಿವಿಯೆಲ್ಲ ದ್ವನಿಸುತ್ತದೆ
ಒಮೊಮ್ಮೆ ಗಂಡುಹುಡುಗರ ಗುಂಡಿಗೆ ಕೂಡ ನಡುಗುತ್ತದೆ

No comments:

Post a Comment

enter your comments please