==============================
ನಗುವು ಸದಾ ನೋವಿನ ಜೊತೆ ಜೊತೆಯಾಗಿಯೆ ಇರುತ್ತದೆ
ಗುಲಾಬಿಯು ತಾನು ಮುಳ್ಳಿನ ಜೊತೆಯಲ್ಲಿರುವ ಹಾಗೆ
ನಮಗೆ ಕಾಣಿಸದು
ಮದುವಣಗಿತ್ತಿಯ ನಗು ಸುತ್ತಲ ಸಂಭ್ರಮ ವರನ ವೈಭವ
ಎಲ್ಲವೂ ಮೆಟ್ಟಿ ನಿಂತಿರುತ್ತದೆ
ಛತ್ರದ ಹೊರಗೆ ಚಪ್ಪರದ ಕೆಳಗೆ ಕಣ್ಣಲ್ಲಿ ನೀರು ತುಂಬಿ ನಿಂತ
ಹುಡುಗಿಯ ಅಪ್ಪನ ದುಖಃವನ್ನು
ಮೂರು ಹೊತ್ತಿನ ಊಟ ಮುಗಿಸಿ ಸುಖದ ನಿದ್ರೆಯ
ಡೊಗರು ಹೊಟ್ಟೆಯ ಗೊರಕೆಯಲ್ಲಿ
ನಮಗೆ ಕಾಣಿಸುವದಿಲ್ಲ ಬೆಳೆದ ರೈತನ ಶ್ರಮದ ಬೆವರು
ಅಳುವ ಕೂಸಿನ ಹಸಿವಿನ ಆಕ್ರಂದನ
ಕ್ರಿಕೇಟ್ ಆಟದಲ್ಲಿ ಗೆದ್ದ ಸಂಭ್ರಮ ಗೆಲುವಿನ ಹೂಂಕಾರ
ಎಲ್ಲ ಮೆರೆತಗಳಲ್ಲಿ ಕೇಳುವದಿಲ್ಲ
ಸೋತ ದೇಶದ ಮೌನ ಅಪಮಾನಗಳ ತಿರಸ್ಕಾರಗಳ
ಮತ್ತೆ ಗೆಲ್ಲುವ ಛಲದ ದ್ವನಿ
ಯುದ್ದದಲ್ಲಿ ಗೆದ್ದ ಸಂತೋಷ ಉನ್ಮಾದಗಳ ಸಂಭ್ರಮಗಳು
ಕಾಲಿನಲ್ಲಿ ಮೆಟ್ಟಿ ನಿಲ್ಲುತ್ತವೆ
ಯುದ್ದದಲ್ಲಿ ಸೋತ ದೇಶದ ಅಪಮಾನ ನೋವು ಮೌನಗಳ
ಸಾವಿನ ನಿಟ್ಟುಸಿರುಗಳನ್ನು
ಪ್ರಪಂಚದ ಎಲ್ಲ ಸಂತೋಷ ಸಂಭ್ರಮ ಸುಖಗಳು ಒಲವಿನ ದ್ವನಿಗಳು
ಹಾಗೆ
ಒಳಗೊಂಡಿರುತ್ತವೆ
ಯಾವುದೋ ಯಾರದೋ ನೋವು ದುಖಃ ದುಮ್ಮಾನಗಳ
ಬಡತನದ ಕರ್ಕಶ ದ್ವನಿಗಳ.
ನಗುವು ಸದಾ ನೋವಿನ ಜೊತೆ ಜೊತೆಯಾಗಿಯೆ ಇರುತ್ತದೆ
ಗುಲಾಬಿಯು ತಾನು ಮುಳ್ಳಿನ ಜೊತೆಯಲ್ಲಿರುವ ಹಾಗೆ
ನಮಗೆ ಕಾಣಿಸದು
ಕ್ರಿಕೇಟ್ ಆಟದಲ್ಲಿ ಗೆದ್ದ ಸಂಭ್ರಮ ಗೆಲುವಿನ ಹೂಂಕಾರ
ReplyDeleteಎಲ್ಲ ಮೆರೆತಗಳಲ್ಲಿ ಕೇಳುವದಿಲ್ಲ
ಸೋತ ದೇಶದ ಮೌನ ಅಪಮಾನಗಳ ತಿರಸ್ಕಾರಗಳ
ಮತ್ತೆ ಗೆಲ್ಲುವ ಛಲದ ದ್ವನಿ
ಇಷ್ಟವಾದ ಸಾಲುಗಳು ...
ಬರೆಯುತ್ತಿರಿ :)..
ಕವನದ ಓಘ ಬಹಳ ಇಷ್ಟವಾಯ್ತು :) )
ವಂದನೆಗಳು ಚಿನ್ಮಯ ಭಟ್
Delete