Monday, December 2, 2013

ನನಗೆ ಅರ್ಥವಾಗುವದಿಲ್ಲ


ಬುದ್ದ ಗೌತಮರು ಎಂದೂ ನನಗರ್ಥವಾಗಲೆ ಇಲ್ಲ
ಗಾಂಧೀ ಜಯಪ್ರಕಾಶರ ತತ್ವಗಳು ಮೈಗೂಡಲಿಲ್ಲ
ಅಂಬೇಡ್ಕರ ಜಗಜೀವನರ ಕರೆಗಳು ನನಗೆ ಕೇಳಲಿಲ್ಲ
ಕಾರ್ಲ್ ಮಾರ್ಕ್ ಲೆನಿನ್ ಮಂಡೇಲ ಹೆಸರುಗಳೆಲ್ಲ
ಎಂದೂ ನನಗೆ ಪರಿಚಿತ ಎಂದು ಅನ್ನಿಸಲಿಲ್ಲ.
ಭಕ್ತಿ ವೈರಾಗ್ಯ ಶ್ರದ್ಧೆಗಳು ಹತ್ತಿರ ಸುಳಿಯಲಿಲ್ಲ
ಪ್ರಾಮಾಣಿಕನಾಗಿ ಹೇಳಿಬಿಡುವೆ ನನ್ನ ಮನದಲ್ಲಿರುವದನ್ನೆಲ್ಲ
ಬಡಭಾರತೀಯ ನಾನು 
ನನಗೆ ಅರ್ಥವಾದ ತತ್ವ ಒಂದೇ
ನನ್ನ ಹಾಗು ನನ್ನನ್ನು ನೆಚ್ಚಿಕೊಂಡ
ಹೊಟ್ಟೆಗಳನ್ನು ತುಂಬಿಸಬೇಕೆಂದರೆ
ದಿನಕ್ಕೆ ಕಡಿಮೇ ಎಂದರು ಎಂಟು ಹತ್ತು ಗಂಟೆಗಳ 
ಕಾಲ ದುಡಿಯದೇ ವಿದಿಯಿಲ್ಲ! 
ಉಳಿದ ಯಾವ ತತ್ವಗಳು ನನ್ನ ಹೊಟ್ಟೆ ತುಂಬಿಸುವುದಿಲ್ಲ!

1 comment:

  1. ಆದಕಾಗಿಯೇ ನಮ್ಮ ಬಸವಣ್ಣನವರು ಹೇಳಿಕೊಟ್ಟದ್ದು ಸಾರ್, 'ಕಾಯಕವೇ ಕೈಲಾಸ' ಅಂತ.
    ತುಂಬಾ ಇಷ್ಟವಾದ ರಚನೆ ಇದು.

    ReplyDelete

enter your comments please