ಪುಸ್ತಕ ಬಿಡುಗಡೆ ಎಂದರೆ
==============
ಪುಸ್ತಕ ಬಿಡುಗಡೆ ಎಂದರೆ..
ಯಾರು ಯಾರು ಪರಿಚಿತ ಮುಖ ಎನ್ನುತ್ತ
ಒಳಹೋಗಿ ಹುಡುಕುವುದು..
ಕರೆದವರಿಗೊಂದು ಕರತಾಡನ
ಒಂದಿಷ್ಟು ರವೆಯ ಉಪ್ಪಿಟ್ಟು
ಒಂದು ಕಪ್ ಬೆಚ್ಚನೆಯ ಕಾಫಿ
ಒಂದಾಕಳೀಕೆಯ ಬಾಷಣ
ದಸರಾ ಬರುವಾಗ ದ್ವಿಚಕ್ರಿಯನ್ನು
ಸರ್ವೀಸ್‌ಗೆ ಕೊಡಲುಹೋಗುವಾಗ
ಡಿಕ್ಕಿಯನ್ನು ತೆಗೆದು
"ಅಯ್ಯೋ ಇಲ್ಯಾವುದೋ ಪುಸ್ತಕವಿದೆಯೆ!"
ಎಂದು ಉಲಿಯುವ ಪುಸ್ತಕ ಪ್ರೇಮಿಗಳ ಉದ್ಗಾರ.
ಪುಸ್ತಕಕ್ಕೂ ಓದಿಸಿಕೊಳ್ಳುವ ತಾಕತ್ತಿರಬೇಕಲ್ಲ!
ReplyDeleteಹೌದೂ ! ಇರಬೇಕಲ್ಲ !
ReplyDelete