Saturday, August 16, 2014
ಬಿಟ್ಟು ಬಿಡಿ ಸಾರ್ ನೂರು ರುಪಾಯಿ ಅಷ್ಟೇ ಇರೋದು
ಹೀಗೆ ಒಂದು ಪುಟ್ಟ ಸಮಾರಂಭಕ್ಕೆ ಹೋಗಿದ್ದೆ, ಇಬ್ಬರು ಮಕ್ಕಳು 6-7 ವರ್ಷದವರು ಆಟವಾಡಿಕೊಳ್ಳುತ್ತಿದ್ದರು. ಸೈಕಲ್ ಹೊಡೆಯುತ್ತಿದ್ದ ಹುಡುಗ , ಕೆಳಗಿದ್ದವನಿಗೆ ಹೇಳಿದ, ನೀನು ಪೋಲಿಸು ಈಗ
ಸರಿ ಸೈಕಲ್ ಹೊಡೆಯುತ್ತ ಬಂದ ಹುಡುಗನನ್ನು ನಿಲ್ಲಿಸಿದ, ಪೋಲಿಸ್
'ಎಲ್ಲಿ ನಿನ್ನ ಹೆಲ್ಮೆಟ್ , ಏಕೆ ಹಾಕಿಲ್ಲ '
'ಇಲ್ಲ ಸಾರ್ ಮರೆತುಬಿಟ್ಟೆ'
'ಸರಿ ಸರಿ ಇನ್ನೂರು ರೂಪಾಯಿ fine ಕೊಡು'
'ಸಾರ್ ಸಾರ್ ಬಿಟ್ಟು ಬಿಡಿ ಸಾರ್ ನೂರು ರುಪಾಯಿ ಅಷ್ಟೇ ಇರೋದು'
'ಸರಿ ಅದನ್ನೆ ಕೊಡು'
ಅವನು ಕೊಟ್ಟ ಹಾಗೆ ಇವನು ತೆಗೆದುಕೊಂಡ ಹಾಗೆ ಮಾಡಿದ,
'ಸರಿ ಹೋಗು ಇನ್ನು ಮೇಲೆ ಹಾಗೆ ಮಾಡಬೇಡ'
ಪೋಲಿಸಪ್ಪ, ಸೈಕಲ್ ಸವಾರನನ್ನ !!!! ಕಳಿಸಿದ
Subscribe to:
Post Comments (Atom)
ಲಂಚಾವತಾರವು ಬಾಲ್ಯದಲ್ಲೇ ಮನಸಿನಾಳಕೆ ಇಳಿಯುತ್ತಿರುವ ಖೇದದ ವಿಚಾರವಿದು!
ReplyDelete