ಮುಗಿಸಿಯೇ ಬರುವೆವು
ಮುಗಿಸಿಯೇ ಬರುವೆವು
==============
ಕತ್ತಲಾಯಿತು ಬಾ
ಎನ್ನುವ ಅಮ್ಮನ ಕಾಡಿ|
ನೇಸರನಿಗೆ ಮುಳುಗಲು ಕಷ್ಟ
ಹಾಗಿದೆ ನಮ್ಮ ಆಟದ ಮೋಡಿ||
ಗಾಳಿಪಟಕೆ ಸದಾ
ಮೇಲೆ ಕೆಳಗೆ ಓಡಾಟ|
ನಮ್ಮ ಸಂಭ್ರಮಕೆ ಸದಾ
ಇಳಿತವಿಲ್ಲದ ಮೇಲಾಟ||
ಎಲ್ಲ ಬೇಧವ ಮರೆತ
ನಮ್ಮ ಭಾವ ನೋಡಿ|
ಪ್ರಕೃತಿ ಕೂಗುತಿದೆ
ಮನುಜರೆ ಇದೇ
ಬದುಕು ನೋಡಿ||
ಹೊಸೆದು ಎಸೆಯಲಿ ಕವನ
ಕಕಕದ ಕವಿಗಳು|
ಉಸಿರು ಹಿಡಿದು ಕೂಗಲಿ
ಅಪ್ಪ ಅಮ್ಮ|
ಮುಗಿಸಿಯೇ ಬರುವೆವು
ನಮ್ಮ ಆಟದ ಸಂಭ್ರಮವ||
ಉತ್ತಮ ಚಿತ್ರ ಕವಿತೆ.
ReplyDeleteಉತ್ತಮ ಶಿಶು ಕವಿತೆ.