Sunday, January 22, 2012

ನನ್ನ ಬಾಲ್ಯದ ನೆನೆಪುಗಳು : ತಾಯಿ ಹೃದಯ


ನನ್ನ ಬಾಲ್ಯದ ನೆನೆಪುಗಳು ತಾಯಿ ಹೃದಯ
ನಾನು ತುಮಕೂರಿನ ಸರ್ಕಾರಿ ಕಾಲೇಜಿನಲ್ಲಿ ಪದವಿ ಮುಗಿಸಿ ಕೆಲಸಕ್ಕೆ ಸೇರಿದ ಹೊಸದು ಬೆಂಗಳೂರಿನ ಸಮೀಪದ ಕನಕಪುರದಲ್ಲಿ ನನ್ನ ವಾಸಬೆಳಗ್ಗೆ ಮದ್ಯಾನ ರಾತ್ರಿಯಂತೆ ಬೇರೆ ಬೇರೆ ಪಾಳಿಗಳಲ್ಲಿ ಕೆಲಸಮೆಸ್ಸಿನಲ್ಲಿ ಊಟ ಮಾಡುತ್ತಿದ್ದೆ ಹಾಗಾಗಿ ರೂಮಿನಲ್ಲಿ ಸ್ನಾನ ನಿದ್ದೆ ಬಿಟ್ಟರೆ ಬೇರೆ ಕೆಲಸವಿಲ್ಲಆಗ ಪುರುಸೊತ್ತಿನಲ್ಲಿ ಮಾಡುತ್ತಿದ್ದ ಕೆಲಸಗಳೆಂದರೆ ಅಲ್ಲಿನ ಟೆಂಟ್ ಗಳಿಗೆ ಬರುತ್ತಿದ್ದ ಹಳೆಯ ಕನ್ನಡ ಸಿನಿಮಾಗಳನ್ನು ಅದು ಎಷ್ಟೇ ಕೆಟ್ಟದಾಗಿರಲಿ ನೋಡುವುದುಮತ್ತು ಸಾಯಂಕಾಲ ದೊಡ್ಡ ದೊಡ್ಡ ವಾಕಿಂಗ್ ಗಳುನನ್ನ ಜೊತೆ ನನ್ನದೆ  ವಯಸ್ಸಿನ ಸಹೋದ್ಯೋಗಿಯೊಬ್ಬರಿದ್ದರು , ಭದ್ರಾವತಿಯವರು  ಹೆಸರು ಬಸವರಾಜು ,ನಮ್ಮಿಬ್ಬರಿಗು ಸಂಜೆಯ ವಾಕಿಂಗ್ ಎಂದರೆ ಅಚ್ಚುಮೆಚ್ಚುಕನಕಪುರದ ಸುತ್ತಮುತ್ತ ನಾವು ಹೋಗದ ಜಾಗವಿಲ್ಲ ಅಲ್ಲಿಯ ತೋಟಗಳುಸಣ್ಣಪುಟ್ಟ ಬೆಟ್ಟಗುಡ್ಡಗಳು ಯಾವುದನ್ನು ಬಿಡದೆ ಸುತ್ತುತ್ತಿದ್ದೆವುಕೆಲವೊಮ್ಮೆ ಗುಡ್ಡದ ಮೇಲಿನ ಗುಹೆಯಂತ ಜಾಗಗಳಲ್ಲಿ ಸಣ್ಣಪುಟ್ಟ ಪ್ರಾಣಿಗಳನ್ನು ನೋಡುತ್ತಿದ್ದೆವು.ಒಮ್ಮೆಯಂತು ಕಲ್ಲಿನ ಕೆಳಗಿನ ಗುಹೆಯಂತ ಜಾಗದಲ್ಲಿ ಕವೆಕೋಲಿನಂತ ಅದಾರಕೊಟ್ಟು ಕೂಡಿಸಿದ್ದ ಮನುಷ್ಯನ ಶವವನ್ನು ನೋಡಿದ್ದೆವುನಾನು ವಾಸಮಾಡುತ್ತಿದ ರೂಮಿನ ಯಜಮಾನ ಹೇಳಿದಂತೆ ಕೆಲವರು'ಬಿಮ್ಮನಿಸಿನಾಕೆ' [ ಅಂದರೆ ಗರ್ಬಿಣಿಸತ್ತಾಗ ಹೆಣವನ್ನು ನೆಲದಲ್ಲಿ ಹೂಣದೆ ಆ ರೀತಿ ಕೂಡಿಸಿ ಬರುತ್ತಾರಂತೆ.ನಿಜವಿದ್ದೀತು.
ಒಂದು ಸಾರಿ ನನಗೆ ಹಾಗು ಬಸವರಾಜು ಇಬ್ಬರಿಗು ಬೆಳಗಿನ ಸರದಿ ಬಂದು ನಮ್ಮ ಡ್ಯೂಟಿ ಮುಗಿಯಿತುಹಾಗಾಗಿ ಸಾಯಂಕಾಲ ಕನಕಪುರದ ಹತ್ತಿರ ಮಳಗಾಲದ ಕೆರೆ ಹಾಗು ದೇವಾಲಯ (ಕ್ಷಮಿಸಿ ಹಳ್ಳಿಯ ಹೆಸರು ಸರಿಯಾಗಿ ನೆನಪಿಲ್ಲಇರುವ ಜಾಗಕ್ಕೆ ಹೋಗಬೇಕೆಂದು ನಿರ್ದರಿಸಿದೆವು ಸುಮಾರು ಆರು ಏಳು ಕಿ.ಮಿ ನಷ್ಟು ದೂರ ಸ್ವಲ್ಪ ಮುಂಚೆ ಹೊರಟು ನಡೆಯುತ್ತ ಹೊರಟೆವು.ಅರ್ಕಾವತಿ ನದಿಯನ್ನು ದಾಟಿ ನಡೆಯುತ್ತಿದ್ದೆವುಸಂಜೆಯ ಬಿಸಿಲಿನಲ್ಲಿ ಹಸುರಿನಲ್ಲಿ ನಡೆಯುವುದೆ ಒಂದು ಆನಂದಒಂದು ಗಂಟೆಗಿಂತ ಜಾಸ್ತಿ ನಡೆದಿರಬಹುದು ಮಾತಾನಾಡುತ್ತದಾರಿಯಲ್ಲಿ ಸಿಗುವ ಜನರನ್ನು ದಾರಿ ಕೇಳುತ್ತ ನಮ್ಮ ತಾಣದ ಹತ್ತಿರ ತಲುಪಿದೆವುಕಣ್ಣಿಗೆ ಕಾಣುವ ದೂರದಲ್ಲಿ ಕೆರೆಯ ಏರಿ ಅದರ ಮೇಲಿನ ದೇವಾಲಯ ಕಾಣುತ್ತಿತ್ತುಇಳಿಸೂರ್ಯನ ಕಿರಣಗಳು ನಿದಾನವಾಗಿ ಕಪ್ಪಾಗುತ್ತಿದ್ದವುಎದುರಿನಿಂದ ದನಗಳ ಗುಂಪೊಂದು ನಮ್ಮನ್ನು ಹಾದುಹೋದಂತೆ ದನಗಳ ಹಿಂದೆ ಬರುತ್ತಿದ್ದ ದನಗಾಯಿಗಳು ನಮ್ಮತ್ತ ನೋಡಿದರುನಾವು ಅವರಿಂದ ಮತ್ತೊಮ್ಮೆ ಅದೇ ಜಾಗ ಅಂತ ನಿಶ್ಚಿತಮಾಡಿಕೊಂಡು ಮುಂದೆ ನಡೆದೆವು.ಅವರನ್ನು ದಾಟಿ ಮುಂದೆ ನಡೆಯುತ್ತಿರುವಂತೆ ಅದೇ ದಾರಿಯಲ್ಲಿ ವಯಸ್ಸಾಗಿರುವ ಹಳ್ಳಿಯ ಮುದುಕಿಯೊಭ್ಭಳು ಕಂಡು ಬಂದಳು.ಸ್ವಲ್ಪ ಬೆನ್ನು ಬಗ್ಗಿದಂತೆ ಕಂಡುಬರುತ್ತಿದ್ದ ಆಕೆ ಮಾಸಿದ್ದ ಸೀರೆಯುಟ್ಟು ತಲೆಯಮೇಲೆ ಹೊರೆಯೊಂದು ಹೊತ್ತಿದ್ದಳುನಡೆಯಲು ಅದಾರಕ್ಕೆಂಬಂತೆ ಕೈಯಲ್ಲೊಂದು ಕೋಲುನಿದಾನವಾಗಿ ಬರುತ್ತಿದ್ದ ಆಕೆಯನ್ನು ದಾಟಿ ನಾವು ಮುಂದೆ ಹೋಗಲು ಬಯಸಿದೆವು.ಆದರೆ ನಮ್ಮ ಕಡೆಯೆ ನೋಡುತ್ತಿದ್ದ ಅವಳು 'ಯಾರಪ್ಪ ನೀವು ಎಲ್ಲಿಂದ ಬರುತ್ತಿದ್ದೀರಿ?ಎಂದು ಪ್ರಶ್ನಿಸಿದಳುನಾನು ಹೇಳಿದೆ'ನಾವು ಕನಕಪುರದಿಂದ ಬರುತ್ತಿದೇವಜ್ಜಿಇಲ್ಲಿಯ ಕೆರೆ ನೋಡಲು ಬಂದ್ವಿ' . ಸ್ವಲ್ಪ ಸುಮ್ಮನಿದ್ದ ಆಕೆ , " ಈ ಸಮಯದಲ್ಲ ?ಬೇಡಪ್ಪ ಆಗಲೆ ಕತ್ತಲೆಯಾಗುತ್ತ ಬರುತ್ತಿದೆಕೆರೆಯಮೇಲೆ ಹೋಗೋದು ಬೇಡ ಇನ್ನೊಂದು ದಿನ ಬೆಳಗ್ಗೆ ಬಿಸಲಿರುವಾಗಲೆ ಬಾಅಂದಳು.ನಮಗೆ ಆಶ್ಚರ್ಯ 'ಅಲ್ಲಮ್ಮ ನಾವು ಅಷ್ಟ್ ದೂರದಿಂದ ಬರ್ತೀದ್ದೀವಿ ಈಗ ಹಿಂದೆ ಹೋಗಿ ಪುನಃ ಅದಕ್ಕಾಗಿ ಬರಕಾಗುತ್ತ ' ಅಂದರು ಬಸವರಾಜುಆಕೆ ಹೊರೆಯನ್ನು ಕೆಳಗೆ ಇಳಿಸಿ ನಿಂತಳು ನಾನು ದೊಡ್ಡೋಳು ಎಳ್ತಾಯಿದೀನಿ ನೋಡಿ ಈಗ ಸೂರ್ಯಮುಳುಗಾಯ್ತು ಒಳ್ಳೆ ರಾವು ಬಡ್ಕಂಡಿರೋ ಕಾಲದಾಗೆ ಮೇಲೆ ಒಗ್ತೀನಿ ಅಂತೀರ ನನ್ನ ಮಾತು ಕೇಳಿ ಈ ಜಾಗ ಒಳ್ಳೇದಲ್ಲ ,ವಯಸ್ಸಿನ ಹುಡುಗರು ಕೆರೆ ಬಿಡ್ತಾದನಿಮ್ಮ ಮನೆಯಲ್ಲಿ ಬುದ್ದಿ ಹೇಳೊ ದೊಡ್ಡೋರು ಇಲ್ಲ ಅನ್ಸುತ್ತೆ'

ನಮ್ಮ ಯಾವ ಮಾತಿಗು ಬೆಲೆ ಕೊಡದ ಮುದುಕಿ ನಮಗೆ ಅಡ್ಡ ನಿಂತಂತೆ ಕೋಲು ಹಿಡಿದು ನಿಂತಳು. ನನ್ನ ಮನಸಿಗೆ ಏನೊ ಕಸಿವಿಸಿಯಾಯಿತುಕೆರೆಯ ಏರಿಯ ಮೇಲೆ ಹೋಗಲು ನಮಗೆ ಯಾವ ಭಯವು ಇಲ್ಲ ಆದರು ಈ ವಯೋವೃದ್ದೆಯ ಮಾತಿಗೆ ಬೆಲೆ ಕೊಡಬೇಕೆನಿಸಿತುನನ್ನ ಜೊತೆಯಿದ್ದ ಬಸವರಾಜ್ ಸಹ ಹಾಗೆ ಅಂದುಕೊಂಡರೇನೊ ನಾನು 'ಸರಿಯಮ್ಮ ನೀನು ಹೇಳಿದಂತೆ ನಾವು ವಾಪಸು ಹೋಗ್ತೀವಿ ಅಂದೆ' , ಮುದುಕಿಗೆ ಏನೋ ಸಂತೋಷ 'ಸರಿ ಮತ್ತೆ ನೀವೇನು ಚಿಕ್ಕ ಮಕ್ಳ ಹಟ ಮಾಡಾಕ್ಕೆ ಬುದ್ದಿ ಇರೋ ಹೈಕಳು ಇದನ್ನು ನನ್ನ ತಲೆ ಮೇಲಿಡಿ ಅಂತ ಹೊರೆಯನ್ನು ತೋರಿದಳುನಾವು ಆಕೆಗೆ ಸಹಾಯ ಮಾಡಿಕೆರೆಯ ಕಡೆಗೊಮ್ಮೆ ನೋಡಿ ಪುನಃ ಕನಕಪುರದಡೆ ನಡೆಯುತ್ತ ಹೊರಟೆವು.ಮನದಲ್ಲಿ ಯಾವುದೋ ಅರ್ಥವಾಗದ ಭಾವನೆ.
----------------------------------------------------------------------------------------------------
ಯಾರ ಮಕ್ಕಳಾದರು ಸರಿ ಸುಖವಾಗಿರಲೆಂದು ಸದಾ ಬಯಸುವ ತಾಯ ಹೃದಯವೇ ನಿನಗೆ ನನ್ನ ನಮನ
-----------------------------------------------------------------------------------------------------

No comments:

Post a Comment

enter your comments please